Site icon Vistara News

Twitter Down In India |‌ ಭಾರತದಲ್ಲಿ ಟ್ವಿಟರ್‌ ಡೌನ್‌, ಬಳಕೆದಾರರಿಗೆ ಪೇಚಾಟ, ನಿಮ್ಮ ಅಕೌಂಟ್‌ ಚೆಕ್‌ ಮಾಡಿಕೊಳ್ಳಿ

Twitter Down In india

ನವದೆಹಲಿ: ಜಿಮೇಲ್‌ ಸರ್ವರ್‌ ಡೌನ್‌ ಆದ ಬೆನ್ನಲ್ಲೇ ಭಾರತದಲ್ಲಿ ಭಾನುವಾರ ಸಂಜೆ ಟ್ವಿಟರ್‌ ಸರ್ವರ್‌ ಕೂಡ ಡೌನ್‌ (Twitter Down In India) ಆಗಿದ್ದು, ಇದರಿಂದ ಲಕ್ಷಾಂತರ ಜನ ಪೇಚಾಟ ಅನುಭವಿಸಿದ್ದಾರೆ. ಭಾರತದಲ್ಲಿ ಮಾತ್ರ ಲಕ್ಷಾಂತರ ಟ್ವಿಟರ್‌ ಬಳಕೆದಾರರಿಗೆ ಟ್ವೀಟ್‌ ಮಾಡಲು, ಫಿಡ್‌ಅನ್ನು ರಿಫ್ರೆಶ್‌ ಮಾಡಲು ಆಗದ ಕಾರಣ, ಬಳಕೆದಾರರು ಇನ್ನಿತರ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಭಾನುವಾರ ಸಂಜೆ ಏಳು ಗಂಟೆಯಿಂದಲೇ ಟ್ವಿಟರ್‌ ಬಳಕೆದಾರರಿಗೆ ಸಮಸ್ಯೆ ಆಗಿದೆ. ಟ್ವೀಟ್‌ ಮಾಡಲು, ಹೊಸ ಟ್ವೀಟ್‌ಗಳನ್ನು ವೀಕ್ಷಿಸಲು, ರಿಫ್ರೆಶ್‌ ಮಾಡಲು ಆಗುತ್ತಿಲ್ಲ ಎಂದು ಹೆಚ್ಚಿನ ಜನ ದೂರಿದ್ದಾರೆ. ಇದುವರೆಗೆ ಮೂರು ಸಾವಿರ ಜನ ಸಮಸ್ಯೆ ಬಗ್ಗೆ ದೂರಿದ್ದಾರೆ ಎಂದು ತಿಳಿದುಬಂದಿದೆ.

ಟ್ವಿಟರ್‌ ಸಮಸ್ಯೆ ಕುರಿತು ದೂರಿದವರ ಪೈಕಿ ಶೇ.೬೩ರಷ್ಟು ಜನ ಆ್ಯಪ್‌ನಲ್ಲಿ ಹೊಸ ಟ್ವೀಟ್‌ಗಳನ್ನು ನೋಡಲು ಆಗುತ್ತಿಲ್ಲ ಎಂದಿದ್ದಾರೆ. ಹಾಗೆಯೇ, ಇವರಲ್ಲಿಯೇ ಶೇ.೩೬ರಷ್ಟು ಜನ ಆ್ಯಪ್ ಜತೆಗೆ ವೆಬ್‌ಸೈಟ್‌ನಲ್ಲಿ ಕೂಡ ಟ್ವೀಟ್‌ ನೋಡಲು ಆಗುತ್ತಿಲ್ಲ ಎಂದಿದ್ದಾರೆ. ಶೇ.೧ರಷ್ಟು ಮಂದಿಗೆ ಮಾತ್ರ ಎರಡೂ ಸಮಸ್ಯೆ ಎದುರಾಗಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಸಮಸ್ಯೆ ಬಗೆಹರಿಸುವ ಕುರಿತು ಟ್ವಿಟರ್‌ನಿಂದ ಇದುವರೆಗೆ ಮಾಹಿತಿ ಬಂದಿಲ್ಲ.

ಇದನ್ನೂ ಓದಿ | GMail Server Down | ಭಾರತ ಸೇರಿ ವಿಶ್ವಾದ್ಯಂತ ಜಿಮೇಲ್‌ ಸರ್ವರ್‌ ಡೌನ್‌, ಕೋಟ್ಯಂತರ ಜನಕ್ಕೆ ತೊಂದರೆ

Exit mobile version