Twitter Down In India |‌ ಭಾರತದಲ್ಲಿ ಟ್ವಿಟರ್‌ ಡೌನ್‌, ಬಳಕೆದಾರರಿಗೆ ಪೇಚಾಟ, ನಿಮ್ಮ ಅಕೌಂಟ್‌ ಚೆಕ್‌ ಮಾಡಿಕೊಳ್ಳಿ - Vistara News

ದೇಶ

Twitter Down In India |‌ ಭಾರತದಲ್ಲಿ ಟ್ವಿಟರ್‌ ಡೌನ್‌, ಬಳಕೆದಾರರಿಗೆ ಪೇಚಾಟ, ನಿಮ್ಮ ಅಕೌಂಟ್‌ ಚೆಕ್‌ ಮಾಡಿಕೊಳ್ಳಿ

ಶನಿವಾರವಷ್ಟೇ (ಡಿಸೆಂಬರ್‌ 10) ಭಾರತ ಸೇರಿ ಜಗತ್ತಿನಾದ್ಯಂತ ಜಿಮೇಲ್‌ ಡೌನ್‌ ಆಗಿತ್ತು. ಇದರ ಬೆನ್ನಲ್ಲೇ ಈಗ ಟ್ವಿಟರ್‌ ಡೌನ್‌ (Twitter Down In India) ಆಗಿದೆ. ಇದರಿಂದ ಟ್ವಿಟರ್‌ ಬಳಕೆದಾರರಿಗೆ ಕಸಿವಿಸಿ ಉಂಟಾಗಿದೆ.

VISTARANEWS.COM


on

Twitter Down In india
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಜಿಮೇಲ್‌ ಸರ್ವರ್‌ ಡೌನ್‌ ಆದ ಬೆನ್ನಲ್ಲೇ ಭಾರತದಲ್ಲಿ ಭಾನುವಾರ ಸಂಜೆ ಟ್ವಿಟರ್‌ ಸರ್ವರ್‌ ಕೂಡ ಡೌನ್‌ (Twitter Down In India) ಆಗಿದ್ದು, ಇದರಿಂದ ಲಕ್ಷಾಂತರ ಜನ ಪೇಚಾಟ ಅನುಭವಿಸಿದ್ದಾರೆ. ಭಾರತದಲ್ಲಿ ಮಾತ್ರ ಲಕ್ಷಾಂತರ ಟ್ವಿಟರ್‌ ಬಳಕೆದಾರರಿಗೆ ಟ್ವೀಟ್‌ ಮಾಡಲು, ಫಿಡ್‌ಅನ್ನು ರಿಫ್ರೆಶ್‌ ಮಾಡಲು ಆಗದ ಕಾರಣ, ಬಳಕೆದಾರರು ಇನ್ನಿತರ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಭಾನುವಾರ ಸಂಜೆ ಏಳು ಗಂಟೆಯಿಂದಲೇ ಟ್ವಿಟರ್‌ ಬಳಕೆದಾರರಿಗೆ ಸಮಸ್ಯೆ ಆಗಿದೆ. ಟ್ವೀಟ್‌ ಮಾಡಲು, ಹೊಸ ಟ್ವೀಟ್‌ಗಳನ್ನು ವೀಕ್ಷಿಸಲು, ರಿಫ್ರೆಶ್‌ ಮಾಡಲು ಆಗುತ್ತಿಲ್ಲ ಎಂದು ಹೆಚ್ಚಿನ ಜನ ದೂರಿದ್ದಾರೆ. ಇದುವರೆಗೆ ಮೂರು ಸಾವಿರ ಜನ ಸಮಸ್ಯೆ ಬಗ್ಗೆ ದೂರಿದ್ದಾರೆ ಎಂದು ತಿಳಿದುಬಂದಿದೆ.

ಟ್ವಿಟರ್‌ ಸಮಸ್ಯೆ ಕುರಿತು ದೂರಿದವರ ಪೈಕಿ ಶೇ.೬೩ರಷ್ಟು ಜನ ಆ್ಯಪ್‌ನಲ್ಲಿ ಹೊಸ ಟ್ವೀಟ್‌ಗಳನ್ನು ನೋಡಲು ಆಗುತ್ತಿಲ್ಲ ಎಂದಿದ್ದಾರೆ. ಹಾಗೆಯೇ, ಇವರಲ್ಲಿಯೇ ಶೇ.೩೬ರಷ್ಟು ಜನ ಆ್ಯಪ್ ಜತೆಗೆ ವೆಬ್‌ಸೈಟ್‌ನಲ್ಲಿ ಕೂಡ ಟ್ವೀಟ್‌ ನೋಡಲು ಆಗುತ್ತಿಲ್ಲ ಎಂದಿದ್ದಾರೆ. ಶೇ.೧ರಷ್ಟು ಮಂದಿಗೆ ಮಾತ್ರ ಎರಡೂ ಸಮಸ್ಯೆ ಎದುರಾಗಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಸಮಸ್ಯೆ ಬಗೆಹರಿಸುವ ಕುರಿತು ಟ್ವಿಟರ್‌ನಿಂದ ಇದುವರೆಗೆ ಮಾಹಿತಿ ಬಂದಿಲ್ಲ.

ಇದನ್ನೂ ಓದಿ | GMail Server Down | ಭಾರತ ಸೇರಿ ವಿಶ್ವಾದ್ಯಂತ ಜಿಮೇಲ್‌ ಸರ್ವರ್‌ ಡೌನ್‌, ಕೋಟ್ಯಂತರ ಜನಕ್ಕೆ ತೊಂದರೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Assam Tour: ಅಸ್ಸಾಂನ ಪೆಲ್ಲಿಂಗ್‌ನಲ್ಲಿ ಮೋಡಿ ಮಾಡುವ 8 ಆಕರ್ಷಕ ಸಂಗತಿಗಳಿವು

Assam Tour: ಪ್ರಕೃತಿ, ಸಂಸ್ಕೃತಿ ಮತ್ತು ಸಾಹಸವು ಪರಸ್ಪರ ಸಾಮರಸ್ಯದಿಂದ ಹೇಗೆ ಸಹಬಾಳ್ವೆ ನಡೆಸಬಹುದು ಎಂಬುದರ ಸಂಕೇತವೇ ಪೆಲ್ಲಿಂಗ್. ವಿಸ್ಮಯ-ಸ್ಫೂರ್ತಿದಾಯಕ ಹಲವು ತಾಣಗಳು, ಆಳವಾಗಿ ಬೇರೂರಿರುವ ಸಂಪ್ರದಾಯ ಮತ್ತು ಸ್ನೇಹಪರ ದಾರಿಗಳು ಪೆಲ್ಲಿಂಗ್‌ ಪ್ರವಾಸವನ್ನು (Pelling Tour) ಶಾಶ್ವತವಾಗಿ ನನಪಿನಲ್ಲಿ ಉಳಿಯುವಂತೆ ಮಾಡುತ್ತದೆ.

VISTARANEWS.COM


on

By

Assam Tour
Koo

ಆಕರ್ಷಕ ಪರಿಸರ, ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು (Assam Tour) ಹೊಂದಿರುವ ಪುಟ್ಟ ಗ್ರಾಮ ಪೆಲ್ಲಿಂಗ್ (Pelling Tour) ಹಿಮಾಲಯದ (himalaya) ಇಳಿಜಾರಿನಲ್ಲಿದೆ. ತನ್ನ ಸೌಂದರ್ಯದಿಂದಲೇ ಸಿಕ್ಕಿಂಗೆ (sikkim) ಬರುವ ಪ್ರವಾಸಿಗರನ್ನು (tourist) ತನ್ನತ್ತ ಸೆಳೆಯುತ್ತದೆ. ಪ್ರಕೃತಿಯ ಮಡಿಲಲ್ಲಿ ಮನ ಶಾಂತಿಯನ್ನು ಹುಡುಕುವವರಿಗೆ ಇದು ಸೂಕ್ತ ಸ್ಥಳವಾಗಿದೆ. ಪೆಲ್ಲಿಂಗ್ನಲ್ಲಿ ಅತ್ಯಂತ ಆಸಕ್ತಿದಾಯಕ ಹಲವಾರು ತಾಣಗಳಿವೆ. ಈ ತಾಣಗಳು ನಿಮ್ಮ ಪ್ರವಾಸದ ಅನುಭವ1ವನ್ನು ರೋಮಾಂಚಕಗೊಳಿಸುವುದು ಮಾತ್ರವಲ್ಲ ಸ್ಮರಣೀಯಗೊಳಿಸುತ್ತದೆ.

ಕಾಂಚನಜುಂಗಾ

ಪ್ರಪಂಚದ ಮೂರನೇ ಅತೀ ಎತ್ತರದ ಶಿಖರವಾದ ಕಾಂಚನಜುಂಗಾವನ್ನು ಪೆಲ್ಲಿಂಗ್‌ನಿಂದ ಅತ್ಯಂತ ಹತ್ತಿರದಿಂದ ನೋಡಬಹುದು. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಪರ್ವತವು ಗುಲಾಬಿ ಬಣ್ಣಕ್ಕೆ ತಿರುಗುವುದು ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ. ಹಚ್ಚ ಹಸಿರಿನ ಕಾಡುಗಳ ನಡುವೆ ಹರಿಯುವ ಜಲಪಾತಗಳು ತನ್ನ ಸೌಂದರ್ಯದಿಂದ ಮೋಡಿಮಾಡುವುದು ಮಾತ್ರವಲ್ಲ ಎಲ್ಲರನ್ನೂ ಬೆರಗುಗೊಳಿಸುತ್ತದೆ.

ಸಾಂಸ್ಕೃತಿಕ ವೈಭವ

ಲೆಪ್ಚಾಗಳು, ಭುಟಿಯಾಗಳು ಮತ್ತು ನೇಪಾಳಿಗಳು ಸೇರಿದಂತೆ ವಿವಿಧ ಸಮುದಾಯಗಳ ಜನರು ಪೆಲ್ಲಿಂಗ್‌ನಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಇಲ್ಲಿ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯ ಸಂಗಮವಾಗಿದೆ. ಇಲ್ಲಿನ ಜನರು ತಮ್ಮ ಧಾರ್ಮಿಕತೆ ಮತ್ತು ಅವರಲ್ಲಿ ಐಕ್ಯತೆಯನ್ನು ತೋರಿಸಲು ಆಚರಿಸುವ ಬುಮ್ಚು ಹಬ್ಬದ ಸಂದರ್ಭದಲ್ಲಿ ಪಾಂಗ್ಟೋಡ್ ಚಾಮ್ ನೃತ್ಯ ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ. ಈ ವೇಳೆ ಸಿಕ್ಕಿಮರ ಆತಿಥ್ಯವನ್ನು ಅನುಭವಿಸಬಹುದು.


ಸಾಹಸ ಪ್ರಿಯರಿಗಾಗಿ ಸಾಕಷ್ಟು ಅವಕಾಶ

ಜೀವನದಲ್ಲಿ ರೋಮಾಂಚನವನ್ನು ಬಯಸುವವರಿಗೆ ಪೆಲ್ಲಿಂಗ್‌ನಲ್ಲಿ ಸಾಕಷ್ಟು ಉತ್ಸಾಹ ತುಂಬುವ ತಾಣಗಳಿವೆ. ಯುಕ್ಸೋಮ್ ಅಥವಾ ಖೆಚಿಯೋಪಾಲ್ರಿ ಸರೋವರವಿರುವ ಹತ್ತಿರದ ಹಳ್ಳಿಗಳಿಗೆ ಪಾದಯಾತ್ರೆ ಮಾಡುವಾಗ ವಿವಿಧ ಜಾತಿಯ ಪ್ರಾಣಿಗಳನ್ನು ಕಣ್ತುಂಬಿಕೊಳ್ಳಬಹುದು. ಸಾಹಸ ಪ್ರಿಯ ಪ್ರವಾಸಿಗರು ಪ್ಯಾರಾಗ್ಲೈಡಿಂಗ್, ರಿವರ್ ರಾಫ್ಟಿಂಗ್ ಅಥವಾ ಮೌಂಟೇನ್ ಬೈಕಿಂಗ್‌ನಂತಹ ಚಟುವಟಿಕೆಗಳನ್ನು ನಡೆಸಬಹುದು.

ಆಧ್ಯಾತ್ಮಿಕ ಧಾಮ

ಪೆಲ್ಲಿಂಗ್ ಸುತ್ತಮುತ್ತ ಇರುವ ಅನೇಕ ಹಳೆಯ ಮಠಗಳಲ್ಲಿ ಪೆಮಯಾಂಗಟ್ಸ್ ಮಠವು ಒಂದಾಗಿದೆ. ಸಂಕೀರ್ಣವಾದ ಧಾರ್ಮಿಕ ಕಲಾಕೃತಿಗಳು ಮತ್ತು ಶಿಲ್ಪಗಳನ್ನು ಹೊಂದಿರುವ ಇದು ಸಂದರ್ಶಕರನ್ನು ಮೋಡಿ ಮಾಡುತ್ತದೆ. ಮನ ಶಾಂತಿ ಬಯಸುವವರು ಇಲ್ಲಿ ಸನ್ಯಾಸಿಗಳಂತೆ ಜೀವನ ನಡೆಸಬಹುದು.

ಸುಸ್ಥಿರ ಪ್ರವಾಸೋದ್ಯಮ

ಪೆಲ್ಲಿಂಗ್ ಸುಸ್ಥಿರ ಪ್ರವಾಸೋದ್ಯಮಕ್ಕೆ ಮೀಸಲಾಗಿದೆ. ಪರಿಸರ ಸ್ನೇಹಿ ಯೋಜನೆಗಳಿಗೆ ಇದು ಒತ್ತು ನೀಡುತ್ತದೆ. ಸ್ಥಳೀಯ ಜನರ ಜೀವನೋಪಾಯವನ್ನು ಬೆಂಬಲಿಸುವ ಜೊತೆಗೆ ಜವಾಬ್ದಾರಿಯುತ ಪ್ರಯಾಣವನ್ನು ಪ್ರೋತ್ಸಾಹಿಸುವ ಹಲವಾರು ಸಮುದಾಯ ಆಧಾರಿತ ಪ್ರವಾಸೋದ್ಯಮಗಳಿಗೆ ಇಲ್ಲಿ ಅವಕಾಶ ನೀಡಲಾಗಿದೆ.


ಸ್ಥಳೀಯ ಖಾದ್ಯಗಳನ್ನು ಸವಿಯಬಹುದು

ಸಿಕ್ಕಿಮೀಸ್ ಪಾಕಪದ್ಧತಿ ಬಾಯಲ್ಲಿ ನೀರುಣಿಸುತ್ತದೆ. ವಿಶಿಷ್ಟವಾದ ರುಚಿ ಮತ್ತು ಪದಾರ್ಥಗಳನ್ನು ಇದು ಒಳಗೊಂಡಿದೆ. ಸ್ಥಳೀಯ ಆಹಾರಗಳಾದ ಮೊಮೊಸ್, ತುಕ್ಪಾ ಮತ್ತು ಗುಂಡ್ರುಕ್ ಹಾಗೂ ಟಿಬೆಟಿಯನ್ನರು ಮತ್ತು ನೇಪಾಳಿಗಳ ಭಕ್ಷ್ಯಗಳನ್ನು ಸವಿಯಬಹುದು. ಸಾವಯವ ಹಣ್ಣು, ತರಕಾರಿಗಳ ಅಧಿಕೃತ ಪಾಕವಿಧಾನಗಳನ್ನು ಆನಂದಿಸಬಹುದು.

ಇದನ್ನೂ ಓದಿ: Baby Moon: ಹನಿಮೂನ್‌ನಂತೆ ಬೇಬಿಮೂನ್; ಜನಪ್ರಿಯವಾಗುತ್ತಿರುವ ಹೊಸ ಟ್ರೆಂಡ್!

ಹಕ್ಕಿಗಳ ಕಲರವ

ಪೆಲ್ಲಿಂಗ್ ಸುತ್ತಮುತ್ತ ನಿತ್ಯಹರಿದ್ವರ್ಣ ಪರಿಸರದ ನಡುವೆ ಹಲವಾರು ಪಿಕ್ನಿಕ್ ತಾಣಗಳಿವೆ. ಮೋಡಿ ಮಾಡುವ ಚಿಲಿಪಿಲಿ ಹಕ್ಕಿಗಳ ಕಲರವವನ್ನು ಕೇಳಿ ಆನಂದಿಸುತ್ತಾ ಆಧುನಿಕ ಒತ್ತಡದ ಬದುಕಿನಿಂದ ದೂರವಾಗಿ ಮನಃಶಾಂತಿಯನ್ನು ಆನಂದಿಸಬಹುದು.

ವರ್ಷ ಪೂರ್ತಿ ವಿಶಿಷ್ಟ ಅನುಭವ

ಪೆಲ್ಲಿಂಗ್ ನಲ್ಲಿ ವರ್ಷ ಪೂರ್ತಿ ವಿಭಿನ್ನ ಋತುಗಳನ್ನು ಇಲ್ಲಿ ಆನಂದಿಸಬಹುದು. ವಸಂತಕಾಲದಲ್ಲಿ ಆಕಾಶವು ಸ್ಪಷ್ಟವಾಗಿರುವಾಗ ಪ್ರವಾಸಿಗರು ಪ್ರಕೃತಿಯ ನಡುವೆ ಹೆಜ್ಜೆ ಹಾಕಬಹುದು. ಆಕರ್ಷಕ ಛಾಯಾಚಿತ್ರಗಳನ್ನು ತೆಗೆದುಕೊಳ್ಳಬಹುದು. ಮಳೆಗಾಲದಲ್ಲಿ ಪ್ರಕೃತಿ ಪ್ರಿಯರು ಇಲ್ಲಿ ಅದ್ಭುತ ನೋಟಗಳನ್ನು ಕಣ್ತುಂಬಿಕೊಳ್ಳಬಹುದು. ಶರತ್ಕಾಲ ಮತ್ತು ಚಳಿಗಾಲದಲ್ಲಿ ಪ್ರವಾಸಿಗರು ಹಿಮಾಲಯದ ಸೌಂದರ್ಯವನ್ನು ಕಣ್ಮನದಲ್ಲಿ ತುಂಬಿಕೊಳ್ಳಬಹುದು.

Continue Reading

ದೇಶ

Rahul Gandhi: ರಾಹುಲ್‌ ಗಾಂಧಿ ಈಗ ಪ್ರತಿಪಕ್ಷ ನಾಯಕ; ಅವರಿಗಿರುವ ಅಧಿಕಾರ ಯಾವವು? ಸಂಬಳ ಎಷ್ಟು?

Rahul Gandhi: 10 ವರ್ಷಗಳ ಬಳಿಕ ಲೋಕಸಭೆಯಲ್ಲಿ ಪ್ರತಿಪಕ್ಷ ಸ್ಥಾನವು ಕಾಂಗ್ರೆಸ್‌ಗೆ ಲಭಿಸಿದ್ದು, ರಾಹುಲ್‌ ಗಾಂಧಿ ಅವರು ಪ್ರತಿಪಕ್ಷ ನಾಯಕರಾಗಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆಯಲು ರಾಹುಲ್‌ ಗಾಂಧಿ ಅವರು ಸಜ್ಜಾಗಿದ್ದಾರೆ. ಇನ್ನು ಪ್ರತಿಪಕ್ಷ ನಾಯಕನಾಗಿರುವ ರಾಹುಲ್‌ ಗಾಂಧಿ ಅವರಿಗೆ ಸಿಗುವ ಸಂಬಳ ಎಷ್ಟು? ಅವರಿಗೆ ಇರುವ ವಿಶೇಷ ಅಧಿಕಾರಗಳು ಯಾವವು? ಸವಲತ್ತುಗಳು ಏನೇನು ಎಂಬುದರ ಮಾಹಿತಿ ಇಲ್ಲಿದೆ.

VISTARANEWS.COM


on

Rahul Gandhi
Koo

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿ (Leader Of The Opposition) ಆಯ್ಕೆಯಾಗಿದ್ದಾರೆ. ಕಳೆದ ಎರಡು (2014, 2019) ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷವೂ ಪ್ರತಿಪಕ್ಷವಾಗುವಷ್ಟು ಸೀಟುಗಳನ್ನು ಗೆದ್ದಿರದ ಕಾರಣ ಪ್ರತಿಪಕ್ಷ ನಾಯಕರೇ ಇರಲಿಲ್ಲ. ಆದರೆ, ಕಳೆದ ಚುನಾವಣೆಯಲ್ಲಿ (Lok Sabha Election 2024) ಕಾಂಗ್ರೆಸ್‌ 99 ಕ್ಷೇತ್ರಗಳನ್ನು ಗೆದ್ದಿದ್ದು, ಈಗ ರಾಹುಲ್‌ ಗಾಂಧಿ ಅವರು ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇವರು ಆಡಳಿತಾರೂಢ ಪಕ್ಷಕ್ಕೆ ಸೆಡ್ಡು ಹೊಡೆಯುವ ಜತೆಗೆ ಹಲವು ಅಧಿಕಾರಗಳು ಹಾಗೂ ಸವಲತ್ತುಗಳನ್ನು ಪಡೆಯಲಿದ್ದಾರೆ. ಅವುಗಳ ಕುರಿತ ಮಾಹಿತಿ ಹೀಗಿದೆ…

ರಾಹುಲ್‌ ಗಾಂಧಿ ಸಂಬಳ ಎಷ್ಟು?

ರಾಹುಲ್‌ ಗಾಂಧಿ ಅವರು ಸಂಸದನಾಗಿ ಪಡೆಯುವ ಸಂಬಳದ ಜತೆಗೆ ಪ್ರತಿಪಕ್ಷ ನಾಯಕರೂ ಆಗಿರುವ ಕಾರಣ ಅವರಿಗೆ ಮಾಸಿಕ 3.3 ಲಕ್ಷ ರೂ. ಸಂಬಳ ಸಿಗಲಿದೆ. ಅಲ್ಲದೆ, ಕ್ಯಾಬಿನೆಟ್‌ ದರ್ಜೆಯ ಸಚಿವರಿಗೆ ಸಿಗುವ ಸವಲತ್ತುಗಳು, ಭದ್ರತೆ (ಝಡ್‌ ಪ್ಲಸ್‌) ಸಿಗಲಿದೆ. ಕ್ಯಾಬಿನೆಟ್‌ ಸಚಿವರೊಬ್ಬರಿಗೆ ಸಿಗುವ ಬಂಗಲೆಯೇ ರಾಹುಲ್‌ ಗಾಂಧಿ ಅವರಿಗೂ ನೀಡಲಾಗುತ್ತದೆ. ಇದರ ಜತೆಗೆ ಹಲವು ಭತ್ಯೆಗಳು ಕೂಡ ರಾಹುಲ್‌ ಗಾಂಧಿ ಅವರಿಗೆ ಸಿಗಲಿವೆ.

Rahul Gandhi

ಅವರ ಅಧಿಕಾರ ವ್ಯಾಪ್ತಿ ಹೇಗಿರಲಿದೆ?

ರಾಹುಲ್‌ ಗಾಂಧಿ ಅವರು ಪ್ರತಿಪಕ್ಷ ನಾಯಕನಾಗಿ ಹಲವು ಸಂಸದೀಯ ಸಮಿತಿಗಳ ಸದಸ್ಯರೂ ಆಗಿರುತ್ತಾರೆ. ಜಂಟಿ ಸಂಸದೀಯ ಸಮಿತಿಗಳು, ಪಬ್ಲಿಕ್‌ ಅಕೌಂಟ್ಸ್‌ ಸಮಿತಿ ಸದಸ್ಯರಾಗಿರುತ್ತಾರೆ. ಹಾಗೆಯೇ, ಸಿಬಿಐ ನಿರ್ದೇಶಕ, ಮುಖ್ಯ ಚುನಾವಣಾ ಆಯುಕ್ತರು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ, ಚೀಫ್‌ ವಿಜಿಲನ್ಸ್‌ ಕಮಿಷನರ್‌, ಕೇಂದ್ರೀಯ ಮಾಹಿತಿ ಆಯೋಗದ ಅಧ್ಯಕ್ಷರನ್ನು ನೇಮಕ ಮಾಡುವಾಗ ರಾಹುಲ್‌ ಗಾಂಧಿ ಅವರು ಕೂಡ ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ.

ರಾಹುಲ್‌ ಗಾಂಧಿ ಅವರು ಪ್ರತಿಪಕ್ಷ ನಾಯಕನಾಗಿ ಸದನದ ಮುಂದಿನ ಸಾಲಿನಲ್ಲಿರುವ ಆಸನದಲ್ಲಿ ಕುಳಿತುಕೊಳ್ಳಲಿದ್ದಾರೆ. ಹಾಗೆಯೇ, ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿಯವರು ಮಾತನಾಡುವಾಗ ಕೂಡ ಅವರಿಗೆ ಮುಂದಿನ ಸಾಲಿನಲ್ಲಿಯೇ ಆಸನದ ವ್ಯವಸ್ಥೆ ಮಾಡಲಾಗುತ್ತದೆ.

ಲೋಕಸಭೆಯ ಒಟ್ಟು ಕ್ಷೇತ್ರಗಳ ಶೇ.10ರಷ್ಟು ಅಂದರೆ 55 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಪಕ್ಷವು ಅಧಿಕೃತ ಪ್ರತಿಪಕ್ಷ ಸ್ಥಾನವನ್ನು ಪಡೆಯುತ್ತದೆ. ಆ ಪಕ್ಷದ ನಾಯಕ ಪ್ರತಿಪಕ್ಷ ನಾಯಕರಾಗುತ್ತಾರೆ. ಆದರೆ, 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 44 ಹಾಗೂ 2019ರ ಲೋಕಸಭೆ ಚುನಾವಣೆಯಲ್ಲಿ 52 ಕ್ಷೇತ್ರ ಗೆದ್ದ ಕಾರಣ ಪ್ರತಿಪಕ್ಷ ನಾಯಕನ ಸ್ಥಾನ ಖಾಲಿ ಇತ್ತು. ಈ ಬಾರಿ 99 ಕ್ಷೇತ್ರಗಳನ್ನು ಗೆದ್ದಿರುವ ಕಾರಣ ಪ್ರತಿಪಕ್ಷ ನಾಯಕನ ಸ್ಥಾನ ನೀಡಲಾಗಿದೆ.

ಇದನ್ನೂ ಓದಿ: Rahul Gandhi: ಸಂಸತ್ತಲ್ಲಿ ನೀಟ್‌ ಕುರಿತು ರಾಹುಲ್‌ ಗಾಂಧಿ ಮಾತಾಡುವಾಗ ಮೈಕ್‌ ಆಫ್;‌ ಸ್ಪೀಕರ್‌ ಮಾಡಿದ್ರಾ?

Continue Reading

ದೇಶ

Bridge Collapse: ಬಿಹಾರದಲ್ಲಿ ಮತ್ತೊಂದು ನಿರ್ಮಾಣ ಹಂತದ ಸೇತುವೆ ಕುಸಿತ; 9 ದಿನದಲ್ಲಿ 5ನೇ ಪ್ರಕರಣ!

Bridge Collapse: ಮಧುಬನಿ ಜಿಲ್ಲೆಯ ಭೇಜಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಭೂತಾಹಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದ ಸೇತುವೆಯು ಕುಸಿದಿದೆ. ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. 2021ರಿಂದಲೂ ಕೇವಲ 75 ಮೀಟರ್‌ ಉದ್ದದ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಲೇ ಇದೆ.

VISTARANEWS.COM


on

Bridge Collapse
Koo

ಪಟನಾ: ಬಿಹಾರದಲ್ಲಿ (Bihar) ಕಳಪೆ ಕಾಮಗಾರಿಗಳು, ಸರ್ಕಾರದ ಕಾಮಗಾರಿಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ ಕೇಳಿಬರುತ್ತಲೇ ಇವೆ. ಅದರಲ್ಲೂ, ಕಳೆದ ಕೆಲ ದಿನಗಳಲ್ಲಿ ಸಾಲು ಸಾಲು ನಿರ್ಮಾಣ ಹಂತದ ಸೇತುವೆಗಳು ಕುಸಿಯುತ್ತಿರುವುದು (Bridge Collapse) ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಾಗಿದೆ. ಇದರ ಬೆನ್ನಲ್ಲೇ, ಶುಕ್ರವಾರ (ಜೂನ್‌ 28) ಬಿಹಾರದ ಮಧುಬನಿ (Madhubani Region) ಪ್ರದೇಶದಲ್ಲಿ ನಿರ್ಮಾಣ ಹಂತದ ಸೇತುವೆಯೊಂದು ಕುಸಿದಿದೆ. ಆ ಮೂಲಕ ಕಳೆದ 9 ದಿನದಲ್ಲಿ ಬಿಹಾರದಲ್ಲಿಯೇ 5 ಸೇತುವೆಗಳು ಕುಸಿದಂತಾಗಿದೆ.

ಮಧುಬನಿ ಜಿಲ್ಲೆಯ ಭೇಜಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಭೂತಾಹಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದ ಸೇತುವೆಯು ಕುಸಿದಿದೆ. ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. 2021ರಿಂದಲೂ ಕೇವಲ 75 ಮೀಟರ್‌ ಉದ್ದದ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಲೇ ಇದೆ. ಸೇತುವೆ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ, ಇದಕ್ಕಾಗಿಯೇ ವಿಳಂಬವಾಗುತ್ತಿದೆ ಎಂಬುದಾಗಿ ಸ್ಥಳೀಯರು ಆರೋಪಿಸುತ್ತಿದ್ದರೂ ಅಧಿಕಾರಿಗಳು ಗಮನ ಹರಿಸಿಲ್ಲ. ಈಗ ಸೇತುವೆಯು ನಿರ್ಮಾಣ ಹಂತದಲ್ಲಿಯೇ ಕುಸಿದಿರುವುದು ಜನರ ಆಕ್ರೋಶವನ್ನು ಕೆರಳಿಸಿದೆ.

ಬಿಹಾರ ರಾಜ್ಯದಲ್ಲಿ ಒಂದರ ಹಿಂದೆ ಒಂದರಂತೆ ಸೇತುವೆಗಳು ಕುಸಿಯುತ್ತಿರುವುದಕ್ಕೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬಿಹಾರದಲ್ಲಿ ಸೇತುವೆ ಕುಸಿತದ ಪ್ರಕರಣಗಳು ಸುದ್ದಿಯಾಗುತ್ತಲೇ ಇವೆ. ಕಳೆದ 9 ದಿನಗಳಲ್ಲಿಯೇ ಇಂತಹ 5 ಪ್ರಕರಣಗಳು ಬೆಳಕಿಗೆ ಬಂದಿವೆ. ನಿತೀಶ್‌ ಕುಮಾರ್‌ ನೇತೃತ್ವದ ಸರ್ಕಾರವು ಸೇತುವೆ ನಿರ್ಮಾಣದಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಹಾಗೂ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ. ಜನರ ದುಡ್ಡು ಹೀಗೆ ನೀರು ಪಾಲಾಗುತ್ತಿದ್ದರೂ ಮುಖ್ಯಮಂತ್ರಿಯು ಗಾಢ ನಿದ್ದೆಯಲ್ಲಿದ್ದಾರೆ” ಎಂಬುದಾಗಿ ಟೀಕಿಸಿದ್ದಾರೆ.

ಬಿಹಾರದಲ್ಲಿ ಕಳೆದ ಕೆಲ ದಿನಗಳಿಂದ ಸೇತುವೆ ಕುಸಿತದ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಗುರುವಾರವಷ್ಟೇ (ಜೂನ್‌ 27) ಕಿಶನ್‌ಗಂಜ್‌ ಜಿಲ್ಲೆಯಲ್ಲಿ ಸೇತುವೆಯೊಂದು ಕುಸಿದಿತ್ತು. ಜೂನ್‌ 23ರಂದು ಪೂರ್ವ ಚಂಪಾರಣ್‌ ಜಿಲ್ಲೆಯಲ್ಲಿ ಸಣ್ಣ ಸೇತುವೆಯೊಂದು ಕುಸಿದು ಅಧಿಕಾರಿಗಳು ಜನರ ಆಕ್ರೋಶಕ್ಕೆ ಗುರಿಯಾಗಿದ್ದರು. ಜೂನ್‌ 22ರಂದು ಕೂಡ ಸಿವಾನ್‌ ಜಿಲ್ಲೆಯಲ್ಲಿ ಸೇತುವೆ ಕುಸಿದಿತ್ತು. ಜೂನ್‌ 19ರಂದೂ ಅರಾತಿಯಾ ಪ್ರದೇಶದಲ್ಲಿ ನಿರ್ಮಾಣ ಹಂತದ ಸೇತುವೆ ಧರೆಗುರುಳಿತ್ತು.  

ಇದನ್ನೂ ಓದಿ: ಬಾಲ್ಟಿಮೋರ್‌ ಸೇತುವೆ ಕುಸಿತ ಪ್ರಕರಣ; ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಯ ಸಮಯಪ್ರಜ್ಞೆಗೆ ಅಮೆರಿಕ ಅಧ್ಯಕ್ಷ ಬೈಡನ್ ಮೆಚ್ಚುಗೆ

Continue Reading

ದೇಶ

UGC NET Exam: ರದ್ದಾಗಿದ್ದ ಯುಜಿಸಿ ನೆಟ್‌ ಪರೀಕ್ಷೆಗೆ ಹೊಸ ದಿನಾಂಕ ಘೋಷಣೆ; ಪರೀಕ್ಷೆಗೆ ಹೊಸ ವಿಧಾನ, ಇಲ್ಲಿದೆ ವಿವರ‌

UGC NET Exam: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ-ನೆಟ್‌ 2024 ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಕಾರಣಕ್ಕಾಗಿ ಕೇಂದ್ರ ಶಿಕ್ಷಣ ಸಚಿವಾಲಯವು ಪರೀಕ್ಷೆಯನ್ನು ರದ್ದುಗೊಳಿಸಿದೆ. ಜೂನ್‌ 18ರಂದು ಕರ್ನಾಟಕ ಸೇರಿ ದೇಶಾದ್ಯಂತ ಸುಮಾರು 11 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ನೆಟ್‌ ಬರೆದಿದ್ದರು. ಇದನ್ನು ಬಳಿಕ ರದ್ದುಗೊಳಿಸಲಾಗಿತ್ತು. ಈಗ ಹೊಸ ದಿನಾಂಕ ಘೋಷಣೆ ಮಾಡಲಾಗಿದೆ.

VISTARANEWS.COM


on

UGC NET Exam
Koo

ನವದೆಹಲಿ: ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ರದ್ದಾಗಿದ್ದ ಯುಜಿಸಿ ನೆಟ್‌ (ಯುಜಿಸಿ-ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಪರೀಕ್ಷೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಹೊಸ ದಿನಾಂಕವನ್ನು ಘೋಷಣೆ ಮಾಡಿದೆ. ಯುಜಿಸಿ ನೆಟ್‌ ಪರೀಕ್ಷೆಯು ಆಗಸ್ಟ್‌ 21 ಹಾಗೂ ಸೆಪ್ಟೆಂಬರ್‌ 4ರಂದು ನಡೆಸಲಿದೆ. ಅದರಲ್ಲೂ, ಪರೀಕ್ಷೆಯಲ್ಲಿ ಅಕ್ರಮ ತಡೆಯುವ ದಿಸೆಯಲ್ಲಿ ಪೆನ್‌ ಹಾಗೂ ಪೇಪರ್‌ ಪದ್ಧತಿ ಬದಲಾಗಿ, ಕಂಪ್ಯೂಟರ್‌ ಆಧಾರಿತವಾಗಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಇದರ ಬೆನ್ನಲ್ಲೇ, ಆಲ್‌ ಇಂಡಿಯಾ ಆಉಷ್‌ ಪೋಸ್ಟ್‌ ಗ್ರ್ಯಾಜುಯೇಟ್‌ ಪ್ರವೇಶ ಪರೀಕ್ಷೆಯು (AIAPGET) ಜುಲೈ 6ರಂದು ನಡೆಸಲು ತೀರ್ಮಾನಿಸಲಾಗಿದೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ-ನೆಟ್‌ 2024 ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಕಾರಣಕ್ಕಾಗಿ ಕೇಂದ್ರ ಶಿಕ್ಷಣ ಸಚಿವಾಲಯವು ಪರೀಕ್ಷೆಯನ್ನು ರದ್ದುಗೊಳಿಸಿತ್ತು. ನ್ಯಾಷನಲ್ ಸೈಬರ್‌ ಕ್ರೈಮ್‌ ಥ್ರೆಟ್‌ ಅನಾಲಿಟಿಕ್ಸ್‌ ಯುನಿಟ್‌ ಆಫ್‌ ಇಂಡಿಯನ್‌ ಸೈಬರ್‌ ಕ್ರೈಮ್‌ ಕೋ-ಆರ್ಡಿನೇಷನ್‌ ಸೆಂಟರ್‌ನಿಂದ ಯುಜಿಸಿಗೆ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು.

ಜೂನ್‌ 18ರಂದು ಕರ್ನಾಟಕ ಸೇರಿ ದೇಶಾದ್ಯಂತ 317 ನಗರಗಳ 1,205 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಸುಮಾರು 11 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೆಟ್‌ಗೆ ಹಾಜರಾಗಿದ್ದರು. ಈಗ ಪರೀಕ್ಷೆಯನ್ನು ರದ್ದುಗೊಳಿಸಿರುವ ಕಾರಣ ಶೀಘ್ರದಲ್ಲೇ ಹೊಸ ದಿನಾಂಕ ಘೋಷಿಸಲಾಗುತ್ತದೆ ಎಂದು ತಿಳಿದುಬಂದಿತ್ತು. ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪಿಎಚ್‌.ಡಿ ಪ್ರವೇಶಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯ (CET) ಬದಲು ಅಭ್ಯರ್ಥಿಯು ನೆಟ್‌ನಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಲು ಯುಜಿಸಿಯು ಈಗಾಗಲೇ ಅನುಮೋದನೆ ನೀಡಿದೆ. ಹಾಗಾಗಿ, ಅಭ್ಯರ್ಥಿಗಳಿಗೆ ನೆಟ್‌ ಪ್ರಮುಖ ಸಂಗತಿಯಾಗಿದೆ.

ಜಂಟಿ ಸಿಎಸ್‌ಐಆರ್‌ ಯುಜಿಸಿ ನೆಟ್‌ ಪರೀಕ್ಷೆಗೂ ದಿನಾಂಕ ಘೋಷಣೆ

ದೇಶದ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಜ್ಯೂನಿಯರ್‌ ರಿಸರ್ಚ್‌ ಫೆಲೋಶಿಪ್‌ (JRF) ಪಡೆಯಲು ಹಾಗೂ ಉಪನ್ಯಾಸಕರಾಗಿ ಅಥವಾ ಸಹಾಯ ಪ್ರಾಧ್ಯಾಪಕರಾಗಿ ಆಯ್ಕೆಯಾಗಲು ಅರ್ಹತೆ ಪಡೆಯಬೇಕಾದರೆ ಜಂಟಿ ಸಿಎಸ್‌ಐಆರ್‌ ಯುಜಿಸಿ ನೆಟ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕು. ಜೂನ್‌ 25 ಹಾಗೂ ಜೂನ್‌ 27ರಂದು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿತ್ತು. ಈ ಪರೀಕ್ಷೆಯನ್ನು ಜುಲೈ 25-27ರವರೆಗೆ ನಡೆಸಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ: Joint CSIR UGC NET: ನೆಟ್‌ ಪರೀಕ್ಷೆ ರದ್ದಾದ ಬೆನ್ನಲ್ಲೇ ಜಂಟಿ ಸಿಎಸ್‌ಐಆರ್‌ ಯುಜಿಸಿ ನೆಟ್‌ ಮುಂದೂಡಿಕೆ!

Continue Reading
Advertisement
BBMP Scam
ಬೆಂಗಳೂರು16 mins ago

BBMP Scam: ನಕಲಿ ಸೊಸೈಟಿಗಳಿಗೆ ಬಿಬಿಎಂಪಿ 102 ಕೋಟಿ ರೂ. ವರ್ಗಾವಣೆ; ಬಯಲಾಯ್ತು ಮತ್ತೊಂದು ಹಗರಣ!

Assam Tour
ಪ್ರವಾಸ28 mins ago

Assam Tour: ಅಸ್ಸಾಂನ ಪೆಲ್ಲಿಂಗ್‌ನಲ್ಲಿ ಮೋಡಿ ಮಾಡುವ 8 ಆಕರ್ಷಕ ಸಂಗತಿಗಳಿವು

Ashada Month
ಧಾರ್ಮಿಕ43 mins ago

Ashada Month: ಆಷಾಢವನ್ನು ಅಶುಭ ತಿಂಗಳು ಅನ್ನುವುದೇಕೆ? ಇದಕ್ಕಿದೆ ವೈಜ್ಞಾನಿಕ ಕಾರಣ!

Mango Storage
ಆಹಾರ/ಅಡುಗೆ43 mins ago

Mango Storage: ಮಾವಿನ ಹಣ್ಣಿನ ಸೀಸನ್‌ ಮುಗಿದರೇನಂತೆ? ತಿಂಗಳ ಕಾಲ ಇದನ್ನು ಶೇಖರಿಸಿ ಇಡುವ ವಿಧಾನ ಇಲ್ಲಿದೆ

Rahul Gandhi
ದೇಶ46 mins ago

Rahul Gandhi: ರಾಹುಲ್‌ ಗಾಂಧಿ ಈಗ ಪ್ರತಿಪಕ್ಷ ನಾಯಕ; ಅವರಿಗಿರುವ ಅಧಿಕಾರ ಯಾವವು? ಸಂಬಳ ಎಷ್ಟು?

karnataka weather Forecast
ಮಳೆ1 hour ago

Karnataka Weather : ಕರಾವಳಿಯಲ್ಲಿ ಮುಂಗಾರು ಪ್ರಬಲ; ಮುಂದುವರಿಯಲಿದೆ ಮಳೆ ಅಬ್ಬರ

Bridge Collapse
ದೇಶ1 hour ago

Bridge Collapse: ಬಿಹಾರದಲ್ಲಿ ಮತ್ತೊಂದು ನಿರ್ಮಾಣ ಹಂತದ ಸೇತುವೆ ಕುಸಿತ; 9 ದಿನದಲ್ಲಿ 5ನೇ ಪ್ರಕರಣ!

Muhammad Usman
ಪ್ರಮುಖ ಸುದ್ದಿ3 hours ago

Muhammad Usman : ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಯುಎಇ ಕ್ರಿಕೆಟಿಗ ಉಸ್ಮಾನ್​

Dina Bhavishya
ಭವಿಷ್ಯ3 hours ago

Dina Bhavishya : ಈ ದಿನ ಆತ್ಮೀಯರೊಂದಿಗೆ ಕಾಲ ಕಳೆಯುವಿರಿ

UGC NET Exam
ದೇಶ8 hours ago

UGC NET Exam: ರದ್ದಾಗಿದ್ದ ಯುಜಿಸಿ ನೆಟ್‌ ಪರೀಕ್ಷೆಗೆ ಹೊಸ ದಿನಾಂಕ ಘೋಷಣೆ; ಪರೀಕ್ಷೆಗೆ ಹೊಸ ವಿಧಾನ, ಇಲ್ಲಿದೆ ವಿವರ‌

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ13 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ20 hours ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು2 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ5 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

ಟ್ರೆಂಡಿಂಗ್‌