ನವದೆಹಲಿ: ಸಾಮಾಜಿಕ ಜಾಲತಾಣವಾದ ಟ್ವಿಟರ್‌ಅನ್ನು ಎಲಾನ್ ಮಸ್ಕ್ ಖರೀದಿಸಿದ ಬಳಿಕ ಅಲ್ಲಿನ ಉದ್ಯೋಗಿಗಳ ವಜಾ ಪರ್ವ ಆರಂಭವಾಗಿದೆ. ಸಿಇಒ ಪರಾಗ್ ಅಗ್ರವಾಲ್‌ರಿಂದ ಹಿಡಿದು ಸಣ್ಣ ಉದ್ಯೋಗಿಗಳವರೆಗೆ ಸಾವಿರಾರು ಜನರನ್ನು ಮಸ್ಕ್ ವಜಾಗೊಳಿಸುತ್ತಿದ್ದಾರೆ. ಅಮೆರಿಕದಲ್ಲಿ ಮಾತ್ರವಲ್ಲ ಭಾರತದ ಉದ್ಯೋಗಿಗಳನ್ನೂ (Twitter India Employees) ವಜಾಗೊಳಿಸಲಾಗಿದೆ. ಅದರಲ್ಲೂ, ಮಾರ್ಕೆಟಿಂಗ್ ವಿಭಾಗದ ಎಲ್ಲ ನೌಕರರನ್ನು ಮನೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಟ್ವಿಟರ್‌ನಲ್ಲಿ ಉದ್ಯೋಗಿಗಳು ಕೆಲಸ ಮಾಡುವ ಕಾರ್ಯವಿಧಾನದ ಜತೆಗೆ ಉದ್ಯೋಗಿಗಳನ್ನೇ ಬದಲಿಸುವುದು ಎಲಾನ್ ಮಸ್ಕ್ ಉದ್ದೇಶವಾಗಿದೆ. ಹಾಗಾಗಿ, ಭಾರತದಲ್ಲಿ ಎಂಜಿನಿಯರ್‌ಗಳು, ಮಾರ್ಕೆಟಿಂಗ್, ಕಮ್ಯುನಿಕೇಷನ್, ಸೇಲ್ಸ್ ಸೇರಿ ಹಲವು ವಿಭಾಗಗಳ ನೌಕರರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಮಾರ್ಕೆಟಿಂಗ್‌ನಲ್ಲಂತೂ ಎಲ್ಲರನ್ನೂ ಮನೆಗೆ ಕಳುಹಿಸಲಾಗಿದೆ. ಸದ್ಯಕ್ಕೆ ಎಷ್ಟು ಉದ್ಯೋಗಿಗಳನ್ನು ವಜಾ ಮಾಡಲಾಗಿದೆ ಎಂಬುದರ ಕುರಿತು ಮಾಹಿತಿ ಲಭ್ಯವಾಗಿಲ್ಲ.
ನವೆಂಬರ್ 4ರಿಂದ ಉದ್ಯೋಗಿಗಳ ವಜಾ ಪರ್ವ ಆರಂಭವಾಗಿದೆ. ನೀವು ಕಚೇರಿಗೆ ಹೊರಟಿದ್ದರೆ, ಅಲ್ಲಿಂದಲೇ ವಾಪಸ್ ಮನೆಗೆ ಹೋಗಿಬಿಡಿ ಎಂಬುದಾಗಿ ಟ್ವಿಟರ್ ಮೇಲ್ ಮಾಡಿದೆ. ಹಾಗಾಗಿ, ಟ್ವಿಟರ್‌ನ ಎಲ್ಲ ಉದ್ಯೋಗಿಗಳು ಅನಿಶ್ಚಿತತೆಯಲ್ಲಿಯೇ ಕಾಲ ಕಳೆಯುವಂತಾಗಿದೆ.
ಇದನ್ನೂ ಓದಿ | Twitter | ನೀವು ಕಚೇರಿಯ ದಾರಿಯಲ್ಲಿದ್ದರೆ, ದಯವಿಟ್ಟು ಮನೆಗೆ ಹೋಗಿ, ಸಿಬ್ಬಂದಿಗೆ ಟ್ವಿಟರ್ ಸೂಚನೆ!