Site icon Vistara News

Reliance Industries: ರಿಲಯನ್ಸ್ ಕಂಪನಿ ಆಡಳಿತ ಮಂಡಳಿಗೆ ಅಂಬಾನಿ ಪುತ್ರ ನೇಮಕ ಆಗೋದು ಡೌಟಾ?

Two firms differ on Anant Ambani appointment on RIL board and Check Details

ಮುಂಬೈ: ದೇಶದ ಬಹುದೊಡ್ಡ ಕಂಪನಿಯಾದ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಆಡಳಿತ ಮಂಡಳಿಗೆ ಅನಂತ್ ಅಂಬಾನಿ (Anant Ambani) ನೇಮಕ ಕುರಿತು ಅಪಸ್ವರಗಳು ಎದ್ದಿವೆ. ಅನಂತ್ ಅವರು ವಯಸ್ಸಿನಲ್ಲಿ ಕಿರಿಯರಾಗಿದ್ದೇ ಇದಕ್ಕೆ ಕಾರಣವಾಗಿದೆ. ಅನಂತ್ ನೇಮಕ ಕುರಿತು ಎರಡು ಪ್ರಾಕ್ಸಿ ಸಲಹಾ ಸಂಸ್ಥೆಗಳು (Proxy advisory firms) ವಿಭಿನ್ನ ಅಭಿಪ್ರಾಯಗಳನ್ನು ಹೊಂದಿವೆ. ಸಾಂಸ್ಥಿಕ ಹೂಡಿಕೆದಾರರ ಸಲಹಾ ಸೇವೆಗಳು ಇಂಡಿಯಾ (IiAS)ಸಂಸ್ಥೆಯು, ರಿಲಯನ್ಸ್ ಇಂಡಸ್ಟ್ರೀಸ್‌ ಕಂಪನಿಯ ಮಂಡಳಿಗೆ ಇಶಾ (Isha Ambani) ಮತ್ತು ಆಕಾಶ್ ಅಂಬಾನಿ (Akash Ambani) ನೇಮಕಕ್ಕೆ ಯಾವುದೇ ಅಪಸ್ವರ ಎತ್ತಿಲ್ಲ. ಆದರೆ, ಅನಂತ್ ನೇಮಕದ ವಿರುದ್ಧ ಮತ ಚಲಾಯಿಸುವಂತೆ ಕಂಪನಿಯ ಷೇರುದಾರರನ್ನು ಕೇಳಿದೆ. ಮತ್ತೊಂದೆಡೆ, ಇನ್‌ಗವರ್ನ್ ರಿಸರ್ಚ್ ಸರ್ವಿಸಸ್ ಸಂಸ್ಥೆಯ ಮೂವರ ನೇಮಕಕ್ಕೆ ಹಸಿರು ನಿಶಾನೆ ತೋರಿಸಿದೆ.

ಆರ್‌ಐಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಅವರ ಮೂವರು ಮಕ್ಕಳಾದ ಇಶಾ, ಆಕಾಶ್ ಮತ್ತು ಅನಂತ್ ಅವರನ್ನು ಕಂಪನಿಯ ಕಾರ್ಯನಿರ್ವಾಹಕರಲ್ಲದ, ಸ್ವತಂತ್ರೇತರ ನಿರ್ದೇಶಕರನ್ನಾಗಿ ನೇಮಿಸಲಾಗುತ್ತಿದೆ. ಈ ಮೂವರು ಕಂಪನಿಯ ಪ್ರಮುಖ ವ್ಯವಹಾರಗಳು ಆಗಿರುವ ಚಿಲ್ಲರೆ ವ್ಯಾಪಾರ, ಡಿಜಿಟಲ್ ಸೇವೆಗಳು, ಇಂಧನ ಮತ್ತು ವಸ್ತುಗಳ ವ್ಯವಹಾರಗಳು ಸೇರಿದಂತೆ ಇತರ ವಲಯಗಳೊಂದಿಗೆ ನಿಕಟವಾಗಿ ತೊಡಗಿಸಿಕೊಂಡಿದ್ದಾರೆ ಮತ್ತು ಮುನ್ನಡೆಸುತ್ತಿದ್ದಾರೆ ಮತ್ತು ನಿರ್ವಹಿಸುತ್ತಿದ್ದಾರೆ. ಹಾಗಾಗಿ ಅವರನ್ನು ಆರ್‌ಐಎಲ್‌ನ ಆಡಳಿತ ಮಂಡಳಿಗೆ ನೇಮಕ ಮಾಡಲಾಗುತ್ತಿದೆ.

ಸೆಪ್ಟೆಂಬರ್ 27 ರಂದು ಪ್ರಾರಂಭವಾದ ಎಲ್ಲಾ ನಿರ್ಣಯಗಳ ಇ-ಮತದಾನವು ಅಕ್ಟೋಬರ್ 26 ರಂದು ಸಂಜೆ 5 ಗಂಟೆಗೆ ಕೊನೆಗೊಳ್ಳಲಿದೆ. ಅಕ್ಟೋಬರ್ 30 ರಂದು ಅಥವಾ ಅದಕ್ಕೂ ಮೊದಲು ಫಲಿತಾಂಶಗಳು ಹೊರಬೀಳುವ ನಿರೀಕ್ಷೆಯಿದೆ. ಅನುಮೋದನೆಯಾದರೆ, ಎಲ್ಲಾ ನೇಮಕಾತಿಗಳು ಡಿಸೆಂಬರ್ 31ರ ಮೊದಲು ಜಾರಿಗೆ ಬರುತ್ತವೆ.

ಕಂಪನಿಯ ಕಾರ್ಯನಿರ್ವಾಹಕವಲ್ಲದ, ಸ್ವತಂತ್ರವಲ್ಲದ ನಿರ್ದೇಶಕರಾಗಿ 28 ವರ್ಷದ ಅನಂತ್ ಅವರ ನೇಮಕವು ನಮ್ಮ ಮತದಾನದ ಮಾರ್ಗಸೂಚಿಗಳೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ಐಐಎಎಸ್ ಹೇಳಿದೆ. ಹಾಗಾಗಿ, ಆರ್‌ಐಎಲ್ ಆಡಳಿತ ಮಂಡಳಿಗೆ ಅನಂತ್ ಅಂಬಾನಿಯವರ ನೇಮಕಾತಿಯನ್ನು ವಿರೋಧಿಸಲು ಕಾರಣವೆಂದು ತಿಳಿಸಿದೆ.

ಈ ಸುದ್ದಿಯನ್ನೂ ಓದಿ: ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ಅದಾನಿಯನ್ನು ಹಿಂದಿಕ್ಕಿದ ಮುಕೇಶ್ ಅಂಬಾನಿ!

ಐಐಎಸ್ ಮತದಾನದ ಮಾರ್ಗಸೂಚಿಗಳ ಪ್ರಕಾರ, 10 ವರ್ಷಗಳ ಸಂಬಂಧಿತ ಕೆಲಸದ ಅನುಭವದ ಕೊರತೆ ಅಥವಾ 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಯು ನಿರ್ದೇಶಕರಾಗುವುದನ್ನು ವಿರೋಧಿಸುತ್ತದೆ. ಒಂದೊಮ್ಮೆ, ನಿರ್ದೇಶಕರು ಮೊದಲ ತಲೆಮಾರಿನ ಪ್ರವರ್ತಕರು ಅಥವಾ ಸಂಸ್ಥಾಪಕರಾಗಿದ್ದರೆ ಈ ನಿಯಮವು ಅನ್ವಯವಾಗುವುದಿಲ್ಲ.

ಹೀಗಿದ್ದಾಗ್ಯೂ, ಅನಂತ್ ಅವರನ್ನು ಹೊರತುಪಡಿಸಿ, ಅಂಬಾನಿಯ ಇಶಾ ಮತ್ತು ಆಕಾಶ್ ಅವರ ನೇಮಕಕ್ಕೆ ಮತ ಹಾಕುವಂತೆ ಐಐಎಎಸ್‌ ಕಂಪನಿಯ ಶೇರುದಾರರಿಗೆ ಶಿಫಾರಸು ಮಾಡಿದೆ. ಇಶಾ ಕಾರ್ಯನಿರ್ವಾಹಕ ನಾಯಕತ್ವದ ತಂಡಗಳ ಭಾಗವಾಗಿದ್ದಾರೆ ಮತ್ತು ರಿಲಯನ್ಸ್ ರಿಟೇಲ್ ವೆಂಚರ್ಸ್, ರಿಲಯನ್ಸ್ ಜಿಯೋ ಇನ್ಫೋಕಾಮ್, ರಿಲಯನ್ಸ್ ಫೌಂಡೇಶನ್ ಮತ್ತು ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆಕಾಶ್ ಜೂನ್ 2022ರಿಂದ ರಿಲಯನ್ಸ್ ಜಿಯೋ ಇನ್ಫೋಕಾಮ್‌ನ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.

ವಾಣಿಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version