Site icon Vistara News

Panchayat Election: ಬಂಗಾಳದ ಎಲೆಕ್ಷನ್‌ ಹಿಂಸಾಚಾರಕ್ಕೆ ಇಬ್ಬರು ಬಲಿ; ಸಂತ್ರಸ್ತ ಪ್ರದೇಶಗಳಿಗೆ ರಾಜ್ಯಪಾಲರ ಭೇಟಿ

C V Ananda Visit

#image_title

ಕೋಲ್ಕೊತಾ, ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದಲ್ಲಿ (West Bengal) ಚುನಾವಣೆಗಳೆಂದರೆ (Election) ಹಿಂಸಾಚಾರಕ್ಕೆ ಎಡೆ ಮಾಡಿಕೊಡುವ ದಾರಿಗಳು ಎನಿಸಿಕೊಳ್ಳುತ್ತೇವೆ. ಪಂಚಾಯ್ತಿ ಎಲೆಕ್ಷನ್ ಹಿನ್ನೆಲೆಯಲ್ಲಿ ಇಡೀ ಪಶ್ಚಿಮ ಬಂಗಾಳವೇ ರಣರಂಗವಾಗಿ ಮಾರ್ಪಟ್ಟಿದೆ. ಹಿಂಸಾಚಾರದಲ್ಲಿ (Violence) ಗುರುವಾರ ಇಬ್ಬರು ಮೃತಪಟ್ಟಿದ್ದಾರೆ. ಜುಲೈ 8ರಂದು ಪಂಚಾಯ್ತಿ ಎಲೆಕ್ಷನ್ (Panchayat Election) ನಡೆಯಲಿದ್ದು, ಗುರುವಾರ ನಾಮಿನೇಷನ್‌ಗೆ ಕೊನೆಯ ದಿನವಾಗಿತ್ತು. ಈ ಹಿನ್ನೆಲೆಯಲ್ಲಿ ಭಾರೀ ಹಿಂಸಾಚಾರ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ ವಿ ಆನಂದ ಬೋಸ್ (West Bengal Governor C V Ananda Bose) ಅವರು ಹಿಂಸಾಚಾರ ನಡೆದ 24 ಪರಗಣ ಜಿಲ್ಲೆಗೆ ಭೇಟಿ ನೀಡಿ, ಸಂತ್ರಸ್ತರೊಂದಿಗೆ ಸಂವಾದ ನಡೆಸಿದರು.

ನಾನು ಸಂತ್ರಸ್ತರು ಮತ್ತು ಸ್ಥಳೀಯರೊಂದಿಗೆ ಸಂವಾದ ನಡೆಸಿದ್ದೇನೆ. ಈ ಚುನಾವಣೆಯಲ್ಲಿ ಹಿಂಸಾಚಾರವೇ ಮೊದಲ ಬಲಿಯಾಗಲಿದೆ ಎಂದು ನಾನು ಬಂಗಾಳದ ಜನರಿಗೆ ಭರವಸೆ ನೀಡಬಲ್ಲೆ. ಹಿಂಸಾಚಾರದ ಅಪರಾಧಿಗಳನ್ನು ಸಂವಿಧಾನ ಮತ್ತು ದೇಶದ ಕಾನೂನಿನ ಅಡಿಯಲ್ಲಿ ಶಿಕ್ಷಿಸಲಾಗುವುದು. ಇದರಿಂದ ಶಾಂತಿಪ್ರಿಯ ಜನರು ತಮ್ಮ ಹಕ್ಕಲು ಚಲಾಯಿಸಲು ಸಾಧ್ಯವಾಗಲಿದೆ ಎಂದು ಪಶ್ಚಿಮ ಬಂಗಾಳ ಗೌರ್ನರ್ ಸಿ ವಿ ಆನಂದ ಬೋಸ್ ಅವರು ಹೇಳಿದರು.

ಭಾಂಗಾರ್ ಮತ್ತು ಇತರ ಸ್ಥಳಗಳಲ್ಲಿ ಚುನಾವಣೆ ಸಂಬಂಧಿತ ಹಿಂಸಾಚಾರದ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಮಾತನಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜ್ಯಪಾಲ ಸಿ ವಿ ಆನಂದ ಬೋಸ್ ಅವರು, ಮುಖ್ಯಮಂತ್ರಿಗಳು ನನ್ನ ಸಾಂವಿಧಾನಿಕ ಸಹೋದ್ಯೋಗಿ. ನಮ್ಮಿಬ್ಬರ ನಡುವೆ ಏನು ಮಾತುಕತೆಯಾಗಿದೆಯೋ ಅದನ್ನು ಬಹಿರಂಗವಾಗಿ ಹೇಳಲಾಗುವುದಿಲ್ಲ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮುಂದುವರಿದ ಹಿಂಸಾಚಾರ; ಹೂಗ್ಲಿಯಲ್ಲಿ ಕಲ್ಲು ತೂರಾಟ, ವಿಳಂಬವಾದ ರೈಲುಗಳ ಸಂಚಾರ

ಶುಕ್ರವಾರ ಬೆಳಗ್ಗೆ ಹತ್ತೊವರೆಗೆ ಹಿಂಸಾಪೀಡಿತ ಬಿಜೋಯ್‌ಗಂಡ್ ಬಜಾರ್‌ಗೆ ತೆರಳಿದ ರಾಜ್ಯಪಾಲರು ಅಲ್ಲಿಯ ಕೆಲವು ಸಮಯ ಕಳೆದರು. ಐಎಸ್‌ಎಫ್ ಕಾರ್ಯಕರ್ತರೊಂದಿಗೆ ಮಾತನಾಡಿದರು. ನಾಮಪತ್ರ ಸಲ್ಲಿಸಲು ತಮಗೆ ನಿರ್ಬಂಧಿಸಲಾಯಿತು ಎಂದು ಅವರು ಈ ವೇಳೆ ರಾಜ್ಯಪಾಲರ ಎದುರು ತಮ್ಮ ದೂರು ನಿವೇದಿಸಿಕೊಂಡರು. ಈ ವೇಳೆ, ಎಲ್ಲ ದೂರು ದುಮ್ಮಾನಗಳನ್ನು ಇಮೇಲ್ ಮೂಲಕ ತಿಳಿಸುವಂತೆ ರಾಜ್ಯಪಾಲರು ಇದೇ ವೇಳೆ ತಿಳಿಸಿದರು.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version