Site icon Vistara News

PM Modi UAE Visit: ಯುಎಇ ತಲುಪಿದ ಪ್ರಧಾನಿ; ಬುರ್ಜ್‌ ಖಲೀಫಾ ಮೇಲೆ ರಾರಾಜಿಸಿದ ತಿರಂಗಾ, ಮೋದಿ

UAE Welcomes Modi

UAE Welcomes Modi, Burj Khalifa illuminates with Indian Tricolour

ಅಬುಧಾಬಿ: ಎರಡು ದಿನಗಳ ಫ್ರಾನ್ಸ್‌ ಪ್ರವಾಸದಲ್ಲಿ ಹಲವು ಮಹತ್ವದ ಒಪ್ಪಂದ ಮಾಡಿಕೊಂಡು, ಅನಿವಾಸಿ ಭಾರತೀಯರ ಜತೆ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಯುಎಇ (PM Modi UAE Visit) ತಲುಪಿದ್ದು, ಅದ್ಧೂರಿ ಸ್ವಾಗತ ದೊರೆತಿದೆ. ಯುಎಇ ಅಧ್ಯಕ್ಷ ಶೇಖ್‌ ಮೊಹಮ್ಮದ್‌ ಬಿನ್‌ ಜಯೇದ್‌ ಅಲ್‌ ನಹ್ಯಾನ್‌ ಅವರು (Sheikh Mohamed bin Zayed Al Nahyan) ವಿಮಾನ ನಿಲ್ದಾಣಕ್ಕೆ ಆಗಮಿಸಿ ಮೋದಿ ಅವರನ್ನು ಸ್ವಾಗತಿಸಿದ್ದಾರೆ.

ಬುರ್ಜ್‌ ಖಲೀಫಾ ಮೇಲೆ ತಿರಂಗಾ, ಮೋದಿ

ಜಗತ್ತಿನ ಅತಿ ಎತ್ತರದ ಕಟ್ಟಡ ಎಂದು ಖ್ಯಾತಿಯಾದ ಬುರ್ಜ್‌ ಖಲೀಫಾ ಮೇಲೆ ಭಾರತದ ತ್ರಿವರ್ಣ ಧ್ವಜ ಹಾಗೂ ನರೇಂದ್ರ ಮೋದಿ ಭಾವಚಿತ್ರ ರಾರಾಜಿಸಿದೆ. ಮೋದಿ ಅವರು ಶನಿವಾರ (July 15) ಯುಎಇಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಬುರ್ಜ್‌ ಖಲೀಫಾ ಮೇಲೆ ತಿರಂಗಾ ಹಾಗೂ ಮೋದಿ ಅವರ ಭಾವಚಿತ್ರಗಳ ಚಿತ್ತಾರವನ್ನು ಬೆಳಕಿನ ಮೂಲಕ ಬಿಡಿಸಲಾಗಿದೆ. ಆ ಮೂಲಕ ಭಾರತಕ್ಕೆ ಗೌರವ ಸಲ್ಲಿಸುವ ಜತೆಗೆ ಮೋದಿ ಅವರನ್ನು ಯುಎಇ ಅದ್ಧೂರಿಯಾಗಿ ಸ್ವಾಗತಿಸಿದೆ.

ಯುಎಇ ವಿಮಾನ ನಿಲ್ದಾಣದಲ್ಲಿ ಸ್ವಾಗತದ ಬಳಿಕ ಮೋದಿ ಅವರು ಯುಎಇ ದೊರೆ ಎಚ್‌.ಎಚ್.‌ ಶೇಖ್‌ ಖಲೇದ್‌ ಬಿನ್‌ ಮೊಹಮ್ಮದ್‌ ಅವರನ್ನು ಭೇಟಿಯಾದರು. ಪ್ರಧಾನಿ ಮೋದಿ ಭೇಟಿ ವೇಳೆ ಇಂಧನ, ಆಹಾರ ಭದ್ರತೆ ಮತ್ತು ರಕ್ಷಣಾ ಕ್ಷೇತ್ರವನ್ನು ಕೇಂದ್ರೀಕರಿಸಿ ಎರಡೂ ದೇಶಗಳ ನಡುವೆ ಪರಿಶೀಲನಾ ಸಭೆ ನಡೆಯಲಿದೆ. ಅದಾದ ಬಳಿಕ ಎರಡೂ ರಾಷ್ಟ್ರಗಳ ದಿಗ್ಗಜರು ಪ್ರಮುಖ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎನ್ನಲಾಗಿದೆ.

ಮೋದಿಯನ್ನು ಸ್ವಾಗತಿಸಿದ ಯುಎಇ ಅಧ್ಯಕ್ಷ

ಇದನ್ನೂ ಓದಿ: PM Modi France Visit: ಮ್ಯಾಕ್ರನ್‌ಗೆ ಶ್ರೀಗಂಧ ಸಿತಾರ, ಪತ್ನಿಗೆ ರೇಷ್ಮೆ ಸೀರೆ ಗಿಫ್ಟ್‌ ನೀಡಿದ ಮೋದಿ; ಪಡೆದಿದ್ದೇನು?

ಮೋದಿ ಅವರು ಪ್ರಧಾನಿಯಾದ ಬಳಿಕ ಹಲವು ಬಾರಿ ಯುಎಇಗೆ ಭೇಟಿ ನೀಡಿದ್ದಾರೆ. 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದ ನಂತರ 2015ರ ಆಗಸ್ಟ್​​ನಲ್ಲಿ, ಬಳಿಕ 2018ರ ಫೆಬ್ರವರಿ, 2019ರ ಆಗಸ್ಟ್​ ಮತ್ತು 2022ರ ಜೂನ್​​ನಲ್ಲಿ ಅವರು ಯುಎಇಗೆ ಭೇಟಿ ಕೊಟ್ಟಿದ್ದರು. ಇದೀಗ ಮತ್ತೊಮ್ಮೆ ಯುಎಇಗೆ ತೆರಳಿದ್ದಾರೆ.

Exit mobile version