Site icon Vistara News

Uddhav Thackeray: ಎನ್‌ಸಿಪಿ ಬಂಡಾಯ ನಾಯಕ, ಡಿಸಿಎಂ ಅಜಿತ್ ಪವಾರ್ ಜತೆ ಉದ್ಧವ್ ಠಾಕ್ರೆ ಮಾತುಕತೆ!

Uddhav Thackeray meets NCP leader and DCM AJit Pawar

ಮುಂಬೈ, ಮಹಾರಾಷ್ಟ್ರ: ರಾಷ್ಟ್ರವಾದಿ ಕಾಂಗ್ರೆಸ್ ಪಾರ್ಟಿ ( NCP)ಯಲ್ಲಿ ಬಂಡೆದ್ದು ಶಿಂಧೆ- ಬಿಜೆಪಿ (Shinde-BJP) ಸರ್ಕಾರದಲ್ಲಿ ಪಾಲುದಾರ ಆದ ಬಳಿಕ ಮೊದಲ ಬಾರಿಗೆ ಮಾಜಿ ಸಿಎಂ ಉದ್ಧವ್ ಠಾಕ್ರೆ (Former CM Uddhav Thackeray) ಅವರು, ಡಿಸಿಎಂ ಅಜಿತ್ ಪವಾರ್ (DCM Ajit Pawar) ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು.

ರಾಜ್ಯ ವಿಧಾನ ಪರಿಷತ್ತಿನ ಸದಸ್ಯರಾದ ಠಾಕ್ರೆ ಅವರು ಸದನದ ಕಲಾಪಕ್ಕೆ ಹಾಜರಾಗಿದ್ದರು. ಈ ವೇಳೆ, ಮಾಜಿ ಸಿಎಂ ಠಾಕ್ರೆ ಹಾಗೂ ಹಾಲಿ ಡಿಸಿಎಂ ಅಜಿತ್ ಪವಾರ್ ಮಾತುಕತೆ ನಡೆಸಿದರು. ವಿಶೇಷ ಎಂದರೆ, ಬೆಂಗಳೂರಲ್ಲಿ ನಡೆದ ಪ್ರತಿಪಕ್ಷಗಳ ಎರಡನೇ ಸಭೆಯಲ್ಲಿ ಪಾಲ್ಗೊಂಡ ಬಳಿಕ ಠಾಕ್ರೆ ಅವರು ಅಜಿತ್ ಪವಾರ್ ಅವರನ್ನು ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ.

ನಾನು ಅಜಿತ್ ಪವಾರ್ ಅವರನ್ನು ಭೇಟಿ ಮಾಡಿ, ಅವರಿಗೆ ಶುಭಾಶಯ ಕೋರಿದ್ದೇನೆ. ಅವರು ಜನರಿಗೆ ಒಳ್ಳೆಯ ಕೆಲಸ ಮಾಡುತ್ತಾರೆಂದು ನಾನು ಭಾವಿಸುತ್ತೇನೆ. ನಾನು ಅವರೊಂದಿಗೆ 2019ರಿಂದ ಕೆಲಸ ಮಾಡಿದ್ದೇನೆ. ಅವರ ಕೆಲಸದ ಶೈಲಿ ನನಗೆ ಗೊತ್ತು ಎಂದು ಉದ್ದವ್ ಠಾಕ್ರೆ ಹೇಳಿದ್ದರು. ಇದೊಂದು ಔಪಚಾರಿಕ ಸಭೆಯಾಗಿತ್ತು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Uddhav Thackeray: ಭಾರತೀಯ ರಾಜಕಾರಣ ಐಪಿಎಲ್ ರೀತಿಯಾಗಿದೆ! ಬಿಜೆಪಿ ವಿರುದ್ದ ಉದ್ಧವ್ ಠಾಕ್ರೆ ಟೀಕೆ

ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿಯಾಗಿದ್ದಾಗ ಅಜಿತ್ ಪವಾರ್ ಅವರು ಡಿಸಿಎಂ ಆಗಿ ಕೆಲಸ ಮಾಡಿದ್ದರು. ಆದರೆ, ಶಿಂಧೆ ಅವರು ಬಂಡೆದ್ದು, ಬಿಜೆಪಿಗೆ ಬೆಂಬಲ ನೀಡಿದ ಬೆನ್ನಲ್ಲೇ ಠಾಕ್ರೆ ಸರ್ಕಾರ ಪತನವಾಗಿತ್ತು. ಹಣಕಾಸು ಸಚಿವರೂ ಆಗಿರುವ ಡಿಸಿಎಂ ಅಜಿತ್ ಪವಾರ್ ಅವರು ಜನರಿಗೆ ಒಳ್ಳೆಯದಾಗುವ ಕೆಲಸಗಳನ್ನು ಮಾಡಲಿ ಎಂದು ನಾನು ಆಶಿಸುತ್ತೇನೆ. ಮಹಾರಾಷ್ಟ್ರದ ಜನರಿಗೆ ಅವರಿಗೆ ನೆರವು ಸಿಗಲಿದೆ. ಯಾಕೆಂದರೆ, ಹಣಕಾಸು ಖಾತೆಯಂಥ ಪ್ರಮುಖ ಖಾತೆಗಳನ್ನು ಹೊಂದಿದ್ದಾರೆ ಎಂದು ಠಾಕ್ರೆ ಅವರು ಹೇಳಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version