Site icon Vistara News

Fake Universities | ದೇಶದ ನಕಲಿ ವಿವಿಗಳ ಪಟ್ಟಿ ಪ್ರಕಟಿಸಿದ ಯುಜಿಸಿ, ಕರ್ನಾಟಕದ ಒಂದು ವಿವಿಯೂ ಇದೆ!

UGC

ನವದೆಹಲಿ: ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯುಜಿಸಿ) ದೇಶದಲ್ಲಿರುವ ನಕಲಿ ವಿಶ್ವವಿದ್ಯಾಲಯಗಳ (Fake Universities) ಪಟ್ಟಿ ಬಿಡುಗಡೆ ಮಾಡಿದ್ದು, ಕರ್ನಾಟಕದ ಒಂದು ವಿವಿಯೂ ಪಟ್ಟಿಯಲ್ಲಿದೆ. ಬೆಳಗಾವಿ ಜಿಲ್ಲೆ ಗೋಕಾಕ್‌ನಲ್ಲಿರುವ ಬಡಗಣವಿ ವಿಶ್ವವಿದ್ಯಾಲಯವೂ ನಕಲಿ ವಿವಿ ಎಂದು ಯುಜಿಸಿ ಘೋಷಿಸಿದೆ.

“ಯುಜಿಸಿ ಕಾಯಿದೆ ಪ್ರಕಾರ ದೇಶದಲ್ಲಿ ಸ್ವಯಂಘೋಷಿತ ಆದರೆ, ಅಮಾನ್ಯವಾಗಿರುವ ೨೧ ವಿಶ್ವವಿದ್ಯಾಲಯಗಳು ನಕಲಿ ಎಂದು ಘೋಷಿಸಲಾಗಿದೆ. ಇವುಗಳು ಯಾವುದೇ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡುವ ಅಧಿಕಾರ ಹೊಂದಿಲ್ಲ” ಎಂದು ಯುಜಿಸಿ ಕಾರ್ಯದರ್ಶಿ ರಜನೀಶ್‌ ಜೈನ್‌ ತಿಳಿಸಿದ್ದಾರೆ.

ಯುಜಿಸಿ ಪಟ್ಟಿ ಪ್ರಕಾರ ದಿಲ್ಲಿಯು ಅತಿ ಹೆಚ್ಚು ಅಂದರೆ ಎಂಟು ನಕಲಿ ವಿವಿಗಳನ್ನು ಹೊಂದಿದೆ. ಉತ್ತರ ಪ್ರದೇಶ ನಾಲ್ಕು, ಪಶ್ಚಿಮ ಬಂಗಾಳ, ಒಡಿಶಾ ತಲಾ ಎರಡು, ಪುದುಚೇರಿ, ಆಂಧ್ರಪ್ರದೇಶ, ಕರ್ನಾಟಕ, ಕೇರಳ ಹಾಗೂ ಮಹಾರಾಷ್ಟ್ರವು ತಲಾ ಒಂದು ನಕಲಿ ವಿವಿಗಳನ್ನು ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ | ಇನ್ನು ಸ್ನಾತಕೋತ್ತರ ಕೋರ್ಸ್‌ಗಳಿಗೂ ಪ್ರವೇಶ ಪರೀಕ್ಷೆ ನಡೆಸಲಿದೆ ಯುಜಿಸಿ

Exit mobile version