ನವದೆಹಲಿ: ಭಾರತವು ಸೇರಿದಂತೆ ವಿದೇಶಿ ವಿದ್ಯಾರ್ಥಿಗಳ ವಲಸೆಗೆ ಸಂಬಂಧಿಸಿದಂತೆ ಇಂಗ್ಲೆಂಡ್ ಕಠಿಣ ಕ್ರಮಗಳನ್ನು ಘೋಷಿಸಿದೆ. ಭಾರತವು (India) ಸೇರಿದಂತೆ ಇತರ ರಾಷ್ಟ್ರಗಳ ವಿದ್ಯಾರ್ಥಿಗಳು (International Students) ಶಿಕ್ಷಣಕ್ಕಾಗಿ ತಮ್ಮ ಕುಟುಂಬದ ಅವಲಂಬಿತರನ್ನು ಕರೆ ತರುವಂತಿಲ್ಲ. ಈ ಬಗ್ಗೆ ಹೊಸ ನಿಯಮನ್ನು ಬ್ರಿಟನ್ ಸರರ್ಕಾರ (United Kingdom) ರೂಪಿಸಿದೆ.
ಹೌಸ್ ಆಫ್ ಕಾಮನ್ಸ್‌ಗೆ ಲಿಖಿತ ಹೇಳಿಕೆಯಲ್ಲಿ ಉತ್ತರ ನೀಡಿರುವ ಇಂಗ್ಲೆಂಡ್‌ನ ಗೃಹ ಸಚಿವೆ ಸುಯೆಲ್ಲಾ (Suella Braverman) ಬ್ರಾವರ್‌ಮನ್ ಅವರು, ”ಪ್ರಸ್ತುತ ಸಂಶೋಧನಾ ಕಾರ್ಯಕ್ರಮಗಳಾಗಿ ಗೊತ್ತುಪಡಿಸಿದ ಸ್ನಾತಕೋತ್ತರ ಕೋರ್ಸ್ ಓದುತ್ತಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಮಾತ್ರ ಮಕ್ಕಳು ಮತ್ತು ವಯಸ್ಸಾದ ಪೋಷಕರು ಸೇರಿದಂತೆ ಅವರ ಕುಟುಂಬ ಸದಸ್ಯರನ್ನು ಅವರ ಅವಲಂಬಿತರಾಗಿ ಕರೆತರಲು ಅನುಮತಿಸಲಾಗುವುದು” ಎಂದು ತಿಳಿಸಿದ್ದಾರೆ.
ಡಿಸೆಂಬರ್ 2022 ಕ್ಕೆ ಕೊನೆಗೊಳ್ಳುವ ವರ್ಷದಲ್ಲಿ ಪ್ರಾಯೋಜಿತ ವಿದ್ಯಾರ್ಥಿಗಳ ಅವಲಂಬಿತರಿಗೆ ಸುಮಾರು 136,000 ವೀಸಾಗಳನ್ನು ನೀಡಲಾಗಿದೆ ಎಂಬ ಮಾಹಿತಿ ಹೊರ ಬಿದ್ದ ಬೆನಲ್ಲೇ ಭಾರತೀಯ ಮೂಲದ ಬ್ರಿಟನ್ ಸಂಜಾತೆಯೂ ಆಗಿರುವ ಸಚಿವೆ ಸುಯೆಲ್ಲಾ ಬ್ರಾವರ್‌ಮನ್ ಈ ಹೇಳಿಕೆ ನೀಡಿದ್ದಾರೆ. 2019ಕ್ಕೆ ಹೋಲಿಸಿದರೆ, ಈ ವೀಸಾ ನೀಡಿಕೆಯ ಪ್ರಮಾಣವು 8 ಪಟ್ಟು ಹೆಚ್ಚಾಗಿದೆ. 2019ರಲ್ಲಿ 16 ಸಾವಿರ ನೀಡಲಾಗಿತ್ತು.
ಹೊಸ ನಿಯಮಗಳ ಪ್ರಕಾರ, ಪ್ರಸ್ತುತ ಸಂಶೋಧನಾ ಕಾರ್ಯಕ್ರಮಗಳಾಗಿ ಗೊತ್ತುಪಡಿಸಿದ ಸ್ನಾತಕೋತ್ತರ ಕೋರ್ಸ್‌ಗಳಲ್ಲಿರದಿದ್ದರೆ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಅವಲಂಬಿತರನ್ನು ಕರೆತರುವ ಹಕ್ಕನ್ನು ತೆಗೆದುಹಾಕುವುದು ಎಂದು ಬ್ರಾವರ್‌ಮನ್ ಹೇಳಿದ್ದಾರೆ.
ಇದನ್ನೂ ಓದಿ: Indian Students In Canada: ಕೆನಡಾದಲ್ಲಿ ಭಾರತದ 700 ವಿದ್ಯಾರ್ಥಿಗಳಿಗೆ ಗಡಿಪಾರು ಭೀತಿ, ಪಂಜಾಬ್ ವೀಸಾ ದಂಧೆ ಕಾರಣ?
ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳು ಪೂರ್ಣಗೊಳ್ಳುವ ಮೊದಲು ಕೆಲಸದ ಮಾರ್ಗಗಳಿಗೆ ಹೋಗುತ್ತಿದ್ದಾರೆ. ಈ ನಿಯಮವನ್ನು ಪರಿಷ್ಕರಿಸಲಾಗುವುದು. ವಿದ್ಯಾರ್ಥಿಗಳು ಮತ್ತು ಅವಲಂಬಿತರಿಗೆ ನಿರ್ವಹಣೆ ಅಗತ್ಯತೆಗಳನ್ನು ಪರಿಶೀಲಿಸುವುದು ಇತರ ಹೊಸ ಕ್ರಮಗಳಲ್ಲಿ ಒಂದಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.