Site icon Vistara News

Rishi Sunak: ಜೈ ಸಿಯಾ ರಾಮ್‌ ಎಂದು ಭಾಷಣ ಆರಂಭಿಸಿದ ರಿಷಿ ಸುನಕ್;‌ ವಿಡಿಯೊ ವೈರಲ್, ಏನಿದರ ಅರ್ಥ?

UK Prime Minister Rishi Sunak

ಲಂಡನ್‌: ‌ಬ್ರಿಟನ್‌ನಲ್ಲಿಯೇ ನೆಲೆಸಿ, ಅಲ್ಲಿನ ಪ್ರಧಾನಿಯಾದರೂ ಇಂದಿಗೂ ರಿಷಿ ಸುನಕ್‌ (Rishi Sunak) ಅವರು ಹಿಂದು ಧರ್ಮದ ಆಚರಣೆಗಳನ್ನು ಪಾಲಿಸುತ್ತಾರೆ. ದೈವ ಭಕ್ತರೂ ಆಗಿರುವ ಅವರು ರಾಯರ ಆರಾಧಕರಾಗಿದ್ದಾರೆ. ಇತ್ತೀಚೆಗೆ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ನಡೆದ ʼರಾಮ್ ಕಥಾʼದಲ್ಲಿ ಭಾಗವಹಿಸಿದ ರಿಷಿ ಸುನಕ್ ಅವರು ‘ನಾನು ಪ್ರಧಾನಿಯಾಗಿ ಇಲ್ಲಿಗೆ ಬಂದಿಲ್ಲ, ಹಿಂದುವಾಗಿ ಇಲ್ಲಿಗೆ ಬಂದಿದ್ದೇನೆ’ ಎಂದು ಹೇಳಿದ್ದಾರೆ. ಹಾಗೆಯೇ, ಅವರು ಜೈ ಸಿಯಾ ರಾಮ್‌ ಎಂದು ಭಾಷಣ ಆರಂಭಿಸಿದ್ದಾರೆ. ಈ ವಿಡಿಯೊ ವೈರಲ್‌ ಆಗಿದೆ.

ರಿಷಿ ಸುನಕ್‌ ಅವರು ಭಾಷಣ ಆರಂಭಿಸುವ ಮೊದಲು ಜೈ ಸಿಯಾ ರಾಮ್‌ ಎಂದು ಘೋಷಣೆ ಕೂಗಿದರು. ಆಗ, ಅಲ್ಲಿ ನೆರೆದಿದ್ದವರೆಲ್ಲರೂ ಜೈ ಸಿಯಾ ರಾಮ್‌ ಎಂದು ಘೋಷಣೆ ಕೂಗುವ ಮೂಲಕ ರಿಷಿ ಸುನಕ್‌ ಅವರನ್ನು ಅನುಮೋದಿಸಿದರು. ಸಾಮಾನ್ಯವಾಗಿ ಹಿಂದುಗಳು ಜೈ ಶ್ರೀರಾಮ್‌ ಎಂದು ಘೋಷಣೆ ಕೂಗುತ್ತಾರೆ. ರಾಮನಿಗೆ ಜಯವಾಗಲಿ ಎಂಬುದು ಅದರ ಅರ್ಥ. ಆದರೆ, ಜೈ ಸಿಯಾ ರಾಮ್‌ ಎಂದರೆ, ರಾಮ ಹಾಗೂ ಆತನ ಪತ್ನಿ ಸೀತೆಗೆ ಜಯವಾಗಲಿ ಎಂಬ ಅರ್ಥವಾಗಿದೆ. ಹಾಗಾಗಿ, ರಿಷಿ ಸುನಕ್‌ ಅವರು ಜೈ ಸಿಯಾ ರಾಮ್‌ ಎಂಬುದಾಗಿ ಘೋಷಣೆ ಕೂಗಿದ್ದಾರೆ.

ಇದನ್ನೂ ಓದಿ: Rishi Sunak: ಪ್ರಧಾನಿಯಾಗಿ ಬಂದಿಲ್ಲ, ಹಿಂದೂ ಆಗಿ ಬಂದಿದ್ದೇನೆ: ರಿಷಿ ಸುನಕ್ ಹೀಗೆ ಹೇಳಿದ್ದೇಕೆ?

ಹಿಂದು ನಂಬಿಕೆಯು ತಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನ ನೀಡುತ್ತದೆ ಮತ್ತು ಬ್ರಿಟನ್ ಪ್ರಧಾನಿಯಾಗಿ ಅತ್ಯುತ್ತಮವಾದದ್ದನ್ನು ಮಾಡಲು ಧೈರ್ಯ ನೀಡುತ್ತದೆ ಎಂದು ಸುನಕ್ ಹೇಳಿದ್ದಾರೆ. “ನಂಬಿಕೆಯು ತುಂಬ ವೈಯಕ್ತಿಕವಾಗಿದೆ. ಇದು ನನ್ನ ಜೀವನದ ಪ್ರತಿಯೊಂದು ಅಂಶದಲ್ಲೂ ನನಗೆ ಮಾರ್ಗದರ್ಶನ ನೀಡುತ್ತದೆ. ಪ್ರಧಾನಿಯಾಗುವುದು ದೊಡ್ಡ ಗೌರವ. ಮಾಡಲು ಕಠಿಣ ನಿರ್ಧಾರಗಳಿವೆ, ಎದುರಿಸಲು ಕಠಿಣ ಆಯ್ಕೆಗಳಿವೆ. ಧೈರ್ಯವನ್ನು ನಮ್ಮ ನಂಬಿಕೆ ನೀಡುತ್ತದೆ” ಎಂದು ಅವರು ಹೇಳಿದರು.

ಬ್ರಿಟನ್‌ನ ಭಾರತೀಯ ಮೂಲದ ಮೊದಲ ಪ್ರಧಾನಿಯಾಗಿರುವ ರಿಷಿ, ಪಂಜಾಬಿ ಬೇರುಗಳನ್ನು ಹೊಂದಿದ್ದು, ಹಿಂದು ಧರ್ಮವನ್ನು ಅನುಸರಿಸುತ್ತಿದ್ದಾರೆ. ಸುನಕ್ ಸೌತಾಂಪ್ಟನ್‌ನಲ್ಲಿ ಹುಟ್ಟಿ ಬೆಳೆದವರು. ಆದರೆ ಭಾರತೀಯ ಮೂಲದ ವ್ಯಕ್ತಿ, ಭಾರತದ ಅಳಿಯ ಎಂದೇ ಕರೆದುಕೊಳ್ಳುತ್ತಾರೆ. ಸೌತಾಂಪ್ಟನ್‌ನಲ್ಲಿ ತಮ್ಮ ಬಾಲ್ಯವನ್ನು ಕಳೆದ ಅವರು ಕುಟುಂಬದೊಂದಿಗೆ ನೆರೆಹೊರೆಯ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದರು.

Exit mobile version