Site icon Vistara News

Economy | ಜಾಗತಿಕ ಆರ್ಥಿಕತೆಯಲ್ಲಿ ಬ್ರಿಟನ್‌ಅನ್ನೇ ಹಿಂದಿಕ್ಕಿದ ಭಾರತ, ಆರನೇ ಸ್ಥಾನಕ್ಕೆ ಕುಸಿದ ಲಂಡನ್‌

Economy

ನವದೆಹಲಿ/ಲಂಡನ್:‌ ಬ್ರಿಟನ್‌ನಲ್ಲಿ ನೂತನ ಪ್ರಧಾನಿ ಆಯ್ಕೆಗೆ ಸಕಲ ಸಿದ್ಧತೆ ನಡೆದಿರುವ ಬೆನ್ನಲ್ಲೇ ಆರ್ಥಿಕತೆಗೆ (Economy) ದೊಡ್ಡ ಪೆಟ್ಟು ಬಿದ್ದಿದೆ. ಜಗತ್ತಿನಲ್ಲೇ ಬೃಹತ್‌ ಆರ್ಥಿಕತೆ ಹೊಂದಿರುವ ರಾಷ್ಟ್ರಗಳಲ್ಲಿ ಬ್ರಿಟನ್‌ ಐದನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಕುಸಿದಿದೆ. ಆ ಮೂಲಕ ಭಾರತವು ಬ್ರಿಟನ್‌ಅನ್ನೇ ಹಿಂದಿಕ್ಕಿ ಐದನೇ ಸ್ಥಾನಕ್ಕೇರಿದೆ.

ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್‌) ಲೆಕ್ಕಾಚಾರದ ಪ್ರಕಾರ, ವಿತ್ತೀಯ ವರ್ಷದ ಮೊದಲ ತೃೈಮಾಸಿಕದಲ್ಲಿ ಬ್ರಿಟನ್‌ ಆರ್ಥಿಕ ಬೆಳವಣಿಗೆ ಪ್ರಮಾಣ ಕುಸಿದಿದೆ ಹಾಗೂ ಭಾರತದ ಆರ್ಥಿಕತೆ ಸುಧಾರಿಸಿದೆ. ಅದರಲ್ಲೂ, ಜೀವನ ವೆಚ್ಚ ನಿರ್ವಹಣೆಯಲ್ಲಿ ಹೆಣಗಾಡುತ್ತಿರುವ ಹಾಗೂ ಇತ್ತೀಚೆಗೆ ರಾಜಕೀಯ ಬಿಕ್ಕಟ್ಟಿಗೆ ಸಿಲುಕಿರುವ ಕಾರಣ ಬ್ರಿಟನ್‌ ಆರನೇ ಸ್ಥಾನಕ್ಕೆ ಕುಸಿದಿದೆ ಎಂದು ವಿಶ್ಲೇಷಿಸಲಾಗಿದೆ.

ಅಮೆರಿಕ ಡಾಲರ್‌ ಲೆಕ್ಕಾಚಾರದ ಪ್ರಕಾರ ಭಾರತದ ವಿತ್ತೀಯ ಮೌಲ್ಯ ೮೫೪ ಶತಕೋಟಿ ಡಾಲರ್‌ ಇದ್ದರೆ, ಬ್ರಿಟನ್‌ ಆರ್ಥಿಕತೆ ಮೌಲ್ಯ ೮೧೬ ಶತಕೋಟಿ ಡಾಲರ್‌ ಇದೆ. ಅಮೆರಿಕ, ಚೀನಾ, ಜಪಾನ್‌ ಹಾಗೂ ಜರ್ಮನಿ ಕ್ರಮವಾಗಿ ವಿಶ್ವದಲ್ಲೇ ಅಗ್ರ ಸ್ಥಾನಗಳನ್ನು ಪಡೆದಿವೆ. ಒಂದು ದಶಕದ ಹಿಂದೆ ಆರ್ಥಿಕತೆ ಲೆಕ್ಕಾಚಾರದಲ್ಲಿ ಭಾರತ ೧೧ನೇ ಸ್ಥಾನದಲ್ಲಿದ್ದರೆ ಬ್ರಿಟನ್‌ ೫ನೇ ಸ್ಥಾನದಲ್ಲಿತ್ತು.

ಇದನ್ನೂ ಓದಿ | RBI Governor| ದೇಶದ ಆರ್ಥಿಕತೆಯ ಬುನಾದಿ ಸುಭದ್ರ, ಹಣದುಬ್ಬರ ಇಳಿಕೆ ನಿರೀಕ್ಷಿತ

Exit mobile version