Site icon Vistara News

Ukraine Thanks India | ಮೋದಿ, ಜೆಲೆನ್‌ಸ್ಕಿ ಮಾತುಕತೆ, ನೆರವು ನೀಡಿದ ಕಾರಣ ಭಾರತಕ್ಕೆ ಧನ್ಯವಾದ ಹೇಳಿದ ಉಕ್ರೇನ್‌ ಅಧ್ಯಕ್ಷ

Narendra Modi and Volodymyr Zelensky

ನವದೆಹಲಿ: ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್‌ಸ್ಕಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ರಷ್ಯಾ ಆಕ್ರಮಣದ ಬಿಕ್ಕಟ್ಟಿನಲ್ಲಿ ತೋರಿದ ಮಾನವೀಯತೆ ತೋರಿದ, ನೆರವು ನೀಡಿದ ಹಿನ್ನೆಲೆಯಲ್ಲಿ ಜೆಲೆನ್‌ಸ್ಕಿ (Ukraine Thanks India) ಅವರು ಭಾರತಕ್ಕೆ ಧನ್ಯವಾದ ತಿಳಿಸಿದ್ದಾರೆ.

ಮೋದಿ ಅವರ ಜತೆ ಮಾತನಾಡಿರುವುದನ್ನು ಜೆಲೆನ್‌ಸ್ಕಿ ಅವರು ಟ್ವಿಟರ್‌ ಮೂಲಕ ತಿಳಿಸಿದ್ದಾರೆ. “ನರೇಂದ್ರ ಮೋದಿ ಅವರ ಜತೆ ದೂರವಾಣಿಯಲ್ಲಿ ಮಾತನಾಡಿದೆ. ಹಾಗೆಯೇ, ಭಾರತವು ಜಿ-20 ಶೃಂಗಸಭೆಯ ಅಧ್ಯಕ್ಷತೆ ಹೊಂದಿರುವುದರಿಂದ ಶುಭಾಶಯ ತಿಳಿಸಿದೆ. ಶಾಂತಿಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಕುರಿತು ಚರ್ಚಿಸಲಾಯಿತು. ಹಾಗೆಯೇ, ವಿಶ್ವಸಂಸ್ಥೆಯಲ್ಲಿ ನಮ್ಮ ಪರ ನಿಂತಿದ್ದಕ್ಕೂ ಭಾರತಕ್ಕೆ ಧನ್ಯವಾದ ತಿಳಿಸಿದೆ” ಎಂದು ಹೇಳಿದ್ದಾರೆ.

ಕಳೆದ ವರ್ಷದ ಫೆಬ್ರವರಿಯಿಂದಲೂ ರಷ್ಯಾ ಉಕ್ರೇನ್‌ ಮೇಲೆ ಆಕ್ರಮಣ ಮಾಡುತ್ತಿದೆ. ಹಾಗಾಗಿ, ಭಾರತವು ಹಲವು ರೀತಿಯಲ್ಲಿ ಸಮರಪೀಡಿತ ದೇಶಕ್ಕೆ ನೆರವು ನೀಡಿದೆ. ಹಾಗೆಯೇ, ಶಾಂತಿ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರಿಗೆ ಮನವಿ ಮಾಡಿದ್ದರು. ಜಾಗತಿಕ ವೇದಿಕೆಗಳಲ್ಲೂ ಮೋದಿ ಇದನ್ನೇ ಪ್ರತಿಪಾದಿಸಿದ್ದರು. ಇದಕ್ಕೂ ಮೊದಲು ಕೂಡ ಮೋದಿ-ಜೆಲೆನ್‌ಸ್ಕಿ ದೂರವಾಣಿಯಲ್ಲಿ ಮಾತನಾಡಿದ್ದರು.

ಇದನ್ನೂ ಓದಿ | Volodymyr Zelensky | ರಷ್ಯಾ ದಾಳಿಗೆ ಜಗ್ಗದೆ ದೇಶ ಮುನ್ನಡೆಸಿದ ಉಕ್ರೇನ್‌ ಅಧ್ಯಕ್ಷನಿಗೆ ಟೈಮ್‌ ಮ್ಯಾಗಜಿನ್‌ನ ‘ವರ್ಷದ ವ್ಯಕ್ತಿ’ ಗರಿ

Exit mobile version