Site icon Vistara News

Viral Video: ಇದೆಂಥಾ ಅವಘಡ; ರಸ್ತೆಯನ್ನೇ ಸೀಳಿ ರಭಸದಿಂದ ಹೊರನುಗ್ಗಿತು ಮಣ್ಣು ಮಿಶ್ರಿತ ನೀರು!

Underground Pipeline Burst in Maharashtra Video Viral

#image_title

ಮಹಾರಾಷ್ಟ್ರದ ಯಾವತ್ಮಾಲ್​​ನಲ್ಲೊಂದು ಭಯಂಕರ ಸ್ಫೋಟವಾಗಿ, ಭೂಮಿಯೇ ಸಿಡಿದು ನೀರು ಚಿಮ್ಮಿದೆ. ಈ ದೃಶ್ಯದ ವಿಡಿಯೊ ವೈರಲ್ ಆಗುತ್ತಿದೆ. ಆ ಸಿಮೆಂಟ್ ರಸ್ತೆಯಲ್ಲಿ ಅಂಡರ್​ಗ್ರೌಂಡ್​​ನಲ್ಲಿ ಹಾಕಲಾಗಿದ್ದ ಪೈಪ್​ಲೈನ್​ ಒಡೆದು, ರಸ್ತೆಯನ್ನು ಸೀಳಿಕೊಂಡು ನೀರು ಹೊರಬಂದಿದೆ. ಅಲ್ಲೊಬ್ಬಳು ಯುವತಿ ಸ್ಕೂಟರ್​ನಲ್ಲಿ ಅತ್ತ ಪಾಸ್ ಆಗುತ್ತಿದ್ದಂತೆ, ಇತ್ತ ಭೂಮಿಯಾಳದಿಂದ ಮೊದಲು ಹೊಗೆ ಬರಲು ಶುರುವಾಗಿ, ನೆಲವೆಲ್ಲ ಛಿದ್ರವಾಗಿ ನಂತರ ಪೈಪ್​​ನಿಂದ ರಭಸವಾಗಿ ಮಣ್ಣು ಮಿಶ್ರಿತ ನೀರು ಹೊರಬರಲು ಪ್ರಾರಂಭವಾಗಿದೆ. ಆ ಯುವತಿ ಬಿದ್ದು ಗಾಯಗೊಂಡಿದ್ದಾಗಿ ವರದಿಯಾಗಿದೆ.

ಪೈಪ್​ಲೈನ್​ ಒಡೆದು ನೀರು ಚಿಮ್ಮಿದ ದೃಶ್ಯ:

2020ರಲ್ಲಿ ಉತ್ತರ ಪ್ರದೇಶದ ಬರೇಲಿಯಲ್ಲಿ ಕೂಡ ಇಂಥದ್ದೇ ಒಂದು ಘಟನೆ ನಡೆದಿತ್ತು. ಅಲ್ಲಿನ ಕೊರೊನಾ ವೈರಸ್​ ರೋಗಿಗಳು ಇರುವ ವಾರ್ಡ್​​ನ ಸೀಲಿಂಗ್​​ನಲ್ಲಿ ಹಾಕಲಾಗಿದ್ದ ಪೈಪ್​ಲೈನ್​ ಒಡೆದು, ಇಡೀ ವಾರ್ಡ್​ ನೀರಿನಿಂದ ತುಂಬಿ ಹೋಗಿತ್ತು. ಜೋರಾದ ಮಳೆಗಾಲದಲ್ಲೇ ಈ ಘಟನೆ ಆಗಿತ್ತು. ಪೈಪ್​ನಿಂದ ನೀರು ವಾರ್ಡ್​ನಲ್ಲಿ ಒಳ್ಳೆ ಜಲಪಾತದ ರೀತಿಯಲ್ಲಿ ಸುರಿಯುತ್ತಿರುವ ಮತ್ತು ಹಲವು ರೋಗಿಗಳು ಅಲ್ಲೇ ಕುಳಿತಿದ್ದ ವಿಡಿಯೊ ವೈರಲ್ ಆಗಿತ್ತು.

Exit mobile version