ನವ ದೆಹಲಿ: ಬುಧವಾರ ಬೆಳಗ್ಗೆ ೧೧ ಗಂಟೆಗೆ ಮಂಡನೆಯಾಗಲಿರುವ ಕೇಂದ್ರ ಬಜೆಟ್ (Union Budget 2023) ಮೇಲೆ ಷೇರು ಮಾರ್ಕೆಟ್ ವಿಶ್ವಾಸವನ್ನು ವ್ಯಕ್ತಪಡಿಸಿದ್ದು, ಸೆನ್ಸೆಕ್ಸ್ ಬೆಳಗ್ಗೆಯೇ 520 ಅಂಕಗಳಷ್ಟು ಏರಿಕೆ ಕಂಡಿದೆ. ಕಳೆದ ಕೆಲವು ದಿನಗಳಿಂದ ಕುಸಿತದ ಹಾದಿಯಲ್ಲಿದ್ದ ಷೇರು ಮಾರ್ಕೆಟ್‌ಗೆ ಬಜೆಟ್ ಆಶಾವಾದದ ಬೆಳಕು ಚೆಲ್ಲಿದೆ. ಗುರುವಾರ ಬೆಳಗ್ಗೆ ಏರಿಕೆಯಾದ ಸೆನ್ಸೆಕ್ಸ್ 60,070ಕ್ಕೆ ಏರಿದೆ. ಇದರ ಜತೆ ನಿಫ್ಟಿ ಕೂಡಾ 146 ಅಂಕಗಳ ಹೆಚ್ಚಳದೊಂದಿಗೆ ೧೭,೮೦೦ರ ಗಡಿಯನ್ನು ದಾಟಿ ಮುನ್ನಡೆದಿದೆ.
ಐಸಿಐಸಿಐ ಬ್ಯಾಂಕ್, ಯುಪಿಎಲ್, ಬ್ರಿಟಾನಿಯಾ, ಹಿಂಡಾಲ್ಕೋ, ದಿವಿಸ್ ಲ್ಯಾಬ್ಸ್, ಜೆಎಸ್‌ಡಬ್ಲ್ಯೂ ಮತ್ತು ಟಾಟಾ ಗ್ರಾಹಕ ವಸ್ತುಗಳು ನಿಫ್ಟಿ ಸೂಚ್ಯಂಕದಲ್ಲಿ ಹೆಚ್ಚು ಲಾಭವನ್ನು ಪಡೆದಿವೆ. ಇವುಗಳು ಸುಮಾರು ಶೇಕಡಾ ೨ರಷ್ಟು ಲಾಭ ಪಡೆದಿದೆ. ಅದೇ ಹೊತ್ತಿಗೆ ಅದಾನಿ ಎಂಟರ್‌ಪ್ರೈಸಸ್, ಬಿಪಿಸಿಎಲ್, ಕೋಲ್ ಇಂಡಿಯಾ, ಐಟಿಸಿ, ಸಿಪ್ಲಾ ಮತ್ತು ಸನ್ ಫಾರ್ಮಾಗಳು ಸ್ವಲ್ಪ ಮಟ್ಟಿಗೆ ಹಿನ್ನಡೆ ಅನುಭವಿಸಿವೆ.
ಇದನ್ನೂ ಓದಿ | Union Budget 2023: ಕೆಲವೇ ಹೊತ್ತಲ್ಲಿ ಬಜೆಟ್ ಮಂಡಿಸಲಿದ್ದಾರೆ ಸಚಿವೆ ನಿರ್ಮಲಾ ಸೀತಾರಾಮನ್; ಉದ್ಯೋಗ ಸೃಷ್ಟಿ ನಿರೀಕ್ಷೆ