Site icon Vistara News

Union Budget 2023: ಯಾವುದು ತುಟ್ಟಿ, ಯಾವುದು ಅಗ್ಗ?

Union Budget 2023

ನವ ದೆಹಲಿ: ನಿರ್ಮಲಾ ಸೀತಾರಾಮನ್‌ ಅವರು ಮಂಡಿಸುತ್ತಿರುವ ಕೇಂದ್ರ ಬಜೆಟ್‌ನಲ್ಲಿ ಹಲವು ಸೆಸ್‌ಗಳ ಪ್ರಸ್ತಾವ ಮಾಡಿದ್ದಾರೆ. ಹಲವು ತೆರಿಗೆಗಳನ್ನು ಸಡಲಿಸಿದ್ದಾರೆ. ಕೆಲವು ಕಡೆ ಆಮದು ಸುಂಕ ಏರಿಸಲಾಗಿದೆ. ಹೀಗಾಗಿ ಕೆಲವು ವಸ್ತುಗಳು ಅಗ್ಗವಾಗಲಿದ್ದು, ಇನ್ನು ಕೆಲವು ತುಟ್ಟಿಯಾಗಲಿವೆ.

ಕ್ಯಾಮೆರಾ, ಲೆನ್ಸ್‌, ಮೊಬೈಲ್‌ ಫೋನ್‌ಗಳು, ಫೋನ್‌ ಚಾರ್ಜರ್‌, ಟಿವಿ ಪ್ಯಾನೆಲ್‌ಗಳ ಬಿಡಿಭಾಗಗಳು, ಈಥೈಲ್‌ ಆಲ್ಕೋಹಾಲ್‌, ಸಿಗಡಿ ಉತ್ಪನ್ನ, ವಜ್ರ ತಯಾರಿಕೆಯಲ್ಲಿ ಬಳಸುವ ವಸ್ತುಗಳು, ಇಂಗು, ಕೋಕೋ ಬೀಜಗಳು ಅಗ್ಗವಾಗುತ್ತಿವೆ. ಇವುಗಳ ಮೇಲಿನ ಸೆಸ್‌ ಅಥವಾ ಆಮದು ಸುಂಕವನ್ನು ನಿರ್ಮಲಾ ಇಳಿಸಿದ್ದಾರೆ.

ಸಿಗರೇಟ್‌, ಎಲೆಕ್ಟ್ರಿಕ್‌ ಕಿಚನ್‌ ಚಿಮಣಿ, ಹೆಡ್‌ಫೋನ್‌, ಇಯರ್‌ಫೋನ್‌, ಕೊಡೆ, ಚಿನ್ನ ಹಾಗೂ ಬೆಳ್ಳಿಯ ಬೆಳ್ಳಿಯ ಉಪಕರಣಗಳು, ರಬ್ಬರ್‌ ಉತ್ಪನ್ನ, ಆಭರಣ, ಸ್ಮಾರ್ಟ್‌ ಮೀಟರ್‌, ಸೋಲಾರ್‌ ಸೆಲ್‌, ಸೋಲಾರ್‌ ಮೋಡೆಲ್‌ಗಳು, ಎಕ್ಸ್‌ರೇ ಯಂತ್ರ, ಎಲೆಕ್ಟ್ರಾನಿಕ್‌ ಉಪಕರಣಗಳು ತುಟ್ಟಿಯಾಗಲಿವೆ. ಇವುಗಳ ಮೇಲಿನ ಆಮದು ಸುಂಕ, ಸೆಸ್‌ ಏರಿಸಲಾಗಿದೆ.

ಇದನ್ನೂ ಓದಿ: Union Budget 2023: ಮಧ್ಯಮ ವರ್ಗಕ್ಕೆ ಬಂಪರ್‌, ವಾರ್ಷಿಕ 7 ಲಕ್ಷ ರೂ. ತನಕ ಆದಾಯ ತೆರಿಗೆ ಇಲ್ಲ

Exit mobile version