ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ 2024-25ನೇ ಸಾಲಿನ ಮಧ್ಯಂತರ ಬಜೆಟ್ (Budget 2024) ಪ್ರಮುಖವಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯಾವ ಬಂಪರ್ ಘೋಷಣೆ ಮಾಡಿದ್ದಾರೆ? ಯಾವ ಕ್ಷೇತ್ರಕ್ಕೆ ಎಷ್ಟು ಬಜೆಟ್ ಸಿಕ್ಕಿದೆ? ರೈತರು, ಸಾಮಾನ್ಯ ಜನ, ಮಧ್ಯಮ ವರ್ಗದವರು, ಮಹಿಳೆಯರಿಗೆ ಬಜೆಟ್ ಹೇಗೆ ವರದಾನ ಎಂಬುದರ ಕುರಿತ ಕ್ಷಣಕ್ಷಣದ (Budget 2024 Live Updates) ಮಾಹಿತಿ ಇಲ್ಲಿದೆ.
ಮೋದಿ ಸರ್ಕಾರದ ಪ್ರಮುಖ ಘೋಷಣೆಗಳು
– 1 ಕೋಟಿ ಮನೆಗಳಿಗೆ ಸೋಲಾರ್ ಪ್ಯಾನೆಲ್ ಅಳವಡಿಕೆ, 300 ಯುನಿಟ್ ವಿದ್ಯುತ್ ಉತ್ಪಾದನೆ
– ಗರ್ಭಕೋಶ ಕ್ಯಾನ್ಸರ್ ತಡೆಗೆ ಕೇಂದ್ರ ಸರ್ಕಾರದಿಂದ ಉಚಿತ ಲಸಿಕೆ
– ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ
ಆಯುಷ್ಮಾನ್ ಭಾರತ್
ಆಯುಷ್ಮಾನ್ ಭಾರತ್ ಯೋಜನೆಯನ್ನು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರಿಗೆ ವಿಸ್ತರಣೆ.
2 ಕೋಟಿ ಮನೆ ನಿರ್ಮಾಣ ಗುರಿ: ನಿರ್ಮಲಾ ಸೀತಾರಾಮನ್
ಪಿಎಂ ಆವಾಸ್ ಯೋಜನೆಯಲ್ಲಿ 3 ಕೋಟಿ ಜನರಿಗೆ ಮನೆ. ಇನ್ನೂ 2 ಕೋಟಿ ಮನೆ ನಿರ್ಮಾಣ ಮಾಡುವ ಗುರಿ ಹೊಂದಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
ನಿರ್ಮಲಾ ಸೀತಾರಾಮನ್ ಭಾಷಣದ ಪ್ರಮುಖಾಂಶ…
ಭಾರತವು ಯಶಸ್ವಿಯಾಗಿ ಜಿ-20 ಶೃಂಗಸಭೆ ಆಯೋಜಿಸಿದೆ. ಜಾಗತಿಕ ಬಿಕ್ಕಟ್ಟಿನ ಮಧ್ಯೆಯೂ ಭಾರತವು ಸಭೆಯನ್ನು ಆಯೋಜಿಸಿದೆ. ಜಾಗತಿಕ ಸಮಸ್ಯೆಗಳಿಗೆ ಭಾರತದಲ್ಲಿ ನಡೆದ ಸಭೆಯ ವೇಳೆ ಒಮ್ಮತ ಮೂಡಿದೆ.
ನಿರ್ಮಲಾ ಸೀತಾರಾಮನ್ ಭಾಷಣ…
– ಕೇಂದ್ರ ಸರ್ಕಾರದ ಸಮರ್ಥ ಆಡಳಿತದಿಂದ 25 ಕೋಟಿ ಜನ ಬಡತನದಿಂದ ಹೊರಗೆ
– ಜನಧನ್ ಯೋಜನೆಯಿಂದ 2.7 ಲಕ್ಷ ಕೋಟಿ ರೂ. ಉಳಿತಾಯ ಖಾತೆಗೆ ಜಮೆ
– ಪಿಎಂ ಸ್ವನಿಧಿ ಯೋಜನೆಯಿಂದ ಬೀದಿ ಬದಿ ವ್ಯಾಪಾರಿಗಳಿಗೆ ಸಹಾಯಧನ
– ಪಿಎಂ ಜನಮನ ಯೋಜನೆಯಿಂದ ಬುಡಕಟ್ಟು ಸಮುದಾಯಗಳಿಗೆ ನೆರವು
– ಪಿಎಂ ವಿಶ್ವಕರ್ಮ ಯೋಜನೆಯಿಂದ ಸಮುದಾಯಗಳ ಏಳಿಗೆ
– ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಿಂದ 11.8 ಕೋಟಿ ರೈತರಿಗೆ ವಾರ್ಷಿಕ 6 ಸಾವಿರ ರೂ. ಸಹಾಯಧನ