ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ 2024-25ನೇ ಸಾಲಿನ ಮಧ್ಯಂತರ ಬಜೆಟ್ (Budget 2024) ಪ್ರಮುಖವಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯಾವ ಬಂಪರ್ ಘೋಷಣೆ ಮಾಡಿದ್ದಾರೆ? ಯಾವ ಕ್ಷೇತ್ರಕ್ಕೆ ಎಷ್ಟು ಬಜೆಟ್ ಸಿಕ್ಕಿದೆ? ರೈತರು, ಸಾಮಾನ್ಯ ಜನ, ಮಧ್ಯಮ ವರ್ಗದವರು, ಮಹಿಳೆಯರಿಗೆ ಬಜೆಟ್ ಹೇಗೆ ವರದಾನ ಎಂಬುದರ ಕುರಿತ ಕ್ಷಣಕ್ಷಣದ (Budget 2024 Live Updates) ಮಾಹಿತಿ ಇಲ್ಲಿದೆ.
ನಿರ್ಮಲಾ ಸೀತಾರಾಮನ್ ಭಾಷಣ…
ಸಾಮಾಜಿಕ ನ್ಯಾಯದ ತತ್ವದಲ್ಲಿ ಕೇಂದ್ರ ಸರ್ಕಾರವು ಆಡಳಿತ, ಸೇವೆ, ಅಭಿವೃದ್ಧಿಗೆ ಆದ್ಯತೆ ನೀಡಿದೆ.
2047ರ ವೇಳೆಗೆ ಭಾರತ ವಿಕಸಿತವಾಗಲಿದೆ, ಜಗತ್ತಿನಲ್ಲೇ ಬಲಿಷ್ಠವಾಗಿದೆ
ಕೇಂದ್ರ ಸರ್ಕಾರವು ಸ್ವಜನ ಪಕ್ಷಪಾತ, ವಂಶಾಡಳಿತಕ್ಕೆ ಇತಿಶ್ರೀ ಹಾಡಿದೆ
ಭ್ರಷ್ಟಾಚಾರ ನಿಗ್ರಹ ಮಾಡಿದ ಪರಿಣಾಮ ದೇಶವು ಸಾಮಾಜಿಕ ಆರ್ಥಿಕ ಏಳಿಗೆ ಸಾಕಾರವಾಗಿದೆ
ಬಡವರು, ಮಹಿಳೆಯರು, ಯುವಕರು ಹಾಗೂ ಅನ್ನದಾತರೇ ನಮ್ಮ ಪ್ರಮುಖ ಜಾತಿಗಳು
ಮೋದಿ ನಾಯಕತ್ವದಲ್ಲಿ ಸಕಲ ಕ್ಷೇತ್ರಗಳ ಏಳಿಗೆ
ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಆರ್ಥಿಕವಾಗಿ ಬಲಿಷ್ಠವಾಗುತ್ತಿದೆ. ಕೊರೊನಾದಂತಹ ಶತಮಾನದ ಬಿಕ್ಕಟ್ಟಿನ ಮಧ್ಯೆಯೂ ಭಾರತವು ಸಕಲ ಕ್ಷೇತ್ರಗಳಲ್ಲಿ ಏಳಿಗೆ ಹೊಂದುತ್ತಿದೆ. ಉಜ್ವಲ ಭವಿಷ್ಯದತ್ತ ಭಾರತ ಹೆಜ್ಜೆ ಹಾಕುತ್ತಿದೆ. ಸುಭದ್ರ ಸರ್ಕಾರಕ್ಕೆ ಜನ ಬಹುಮತ ನೀಡಿದ್ದರಿಂದ ಇದೆಲ್ಲ ಸಾಕಾರವಾಗುತ್ತಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬ ಮಂತ್ರವು ಕೇಂದ್ರ ಸರ್ಕಾರದ ಗುರಿಯಾಗಿದೆ.
ಬಜೆಟ್‌ಗೆ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ
ನಿರ್ಮಲಾ ಸೀತಾರಾಮನ್ ಅವರು ಮಂಡಿಸುವ ಬಜೆಟ್‌ಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮತಿ ನೀಡಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಿದ್ದಾರೆ.
ಬಜೆಟ್ ಮಂಡನೆಗೆ ಕ್ಷಣಗಣನೆ
Union Minister of Finance and Corporate Affairs Smt Nirmala Sitharaman along with Ministers of State Dr Bhagwat Kishanrao Karad and Shri Pankaj Chaudhary and senior officials of the Ministry of Finance called on President Droupadi Murmu at Rashtrapati Bhavan before presenting the… pic.twitter.com/miwSv8r4dE
— President of India (@rashtrapatibhvn) February 1, 2024
ಬಜೆಟ್ ಮಂಡನೆಗೆ ನಿರ್ಮಲಾ ಸೀತಾರಾಮನ್ ಸಜ್ಜು
#watch | Finance Minister Nirmala Sitharaman along with her team before the presentation of the country's interim Budget pic.twitter.com/hohpB7qtZi
— ANI (@ANI) February 1, 2024