ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ 2024-25ನೇ ಸಾಲಿನ ಮಧ್ಯಂತರ ಬಜೆಟ್ (Budget 2024) ಪ್ರಮುಖವಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯಾವ ಬಂಪರ್ ಘೋಷಣೆ ಮಾಡಿದ್ದಾರೆ? ಯಾವ ಕ್ಷೇತ್ರಕ್ಕೆ ಎಷ್ಟು ಬಜೆಟ್ ಸಿಕ್ಕಿದೆ? ರೈತರು, ಸಾಮಾನ್ಯ ಜನ, ಮಧ್ಯಮ ವರ್ಗದವರು, ಮಹಿಳೆಯರಿಗೆ ಬಜೆಟ್ ಹೇಗೆ ವರದಾನ ಎಂಬುದರ ಕುರಿತ ಕ್ಷಣಕ್ಷಣದ (Budget 2024 Live Updates) ಮಾಹಿತಿ ಇಲ್ಲಿದೆ.
ಹೊಸ ತೆರಿಗೆ ಪದ್ಧತಿಯಲ್ಲಿ ಏನಿದೆ ನಿರೀಕ್ಷೆ?
ತೆರಿಗೆದಾರರು ಹೊಸ ತೆರಿಗೆ ಪದ್ಧತಿಯನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳಬೇಕು ಎಂಬ ದೃಷ್ಟಿಯಿಂದ ಕೇಂದ್ರ ಸರ್ಕಾರವು ಹೊಸ ತೆರಿಗೆ ಪದ್ಧತಿಯಲ್ಲಿ ಬದಲಾವಣೆ ತರುವ ನಿರೀಕ್ಷೆ ಇದೆ. ಮೂಲ ಸ್ಲ್ಯಾಬ್‌ಅನ್ನು 5 ಲಕ್ಷ ರೂ.ವರೆಗೆ ಏರಿಕೆ ಮಾಡುವುದು, ಹೊಸ ತೆರಿಗೆ ಪದ್ಧತಿಯಲ್ಲೂ ಸ್ಟಾಂಡರ್ಡ್ ಡಿಡಕ್ಷನ್ ಮೊತ್ತ ಅಳವಡಿಸಿಕೊಳ್ಳುವುದು ಸೇರಿ ಹಲವು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ.
ಹಳೇ ತರಿಗೆ ಪದ್ಧತಿಯಲ್ಲಿ ಏನು ಬದಲಾವಣೆ?
ಹಳೆಯ ತೆರಿಗೆ ಪದ್ಧತಿಯಲ್ಲಿ ಕೆಲ ತೆರಿಗೆ ವಿನಾಯಿತಿಗಳನ್ನು ಘೋಷಿಸುವ ನಿರೀಕ್ಷೆ ಇದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದರಲ್ಲೂ, ರೈತ ಮಹಿಳೆಯರಿಗೆ ವಿಶೇಷ ವಿನಾಯಿತಿ, ಸುಮಾರು 7 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ನೀಡುವುದು ಸೇರಿ ಹಲವು ಘೋಷಣೆ ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ. ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲೂ ಈ ಬಾರಿ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ತಿಳಿದಬಂದಿದೆ.
ಮಹಿಳಾ ಉದ್ಯಮಿಗಳಿಗೆ ಸಿಹಿ ಸುದ್ದಿ?
ವಿಶೇಷವಾಗಿ ಸಣ್ಣ ನಗರಗಳಲ್ಲಿನ ಮಹಿಳಾ ಉದ್ಯಮಿಗಳನ್ನು ಬೆಂಬಲಿಸುವ ಬಗ್ಗೆ ಬಜೆಟ್ ಗಮನಹರಿಸುವ ನಿರೀಕ್ಷೆಯಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆ ಮತ್ತು ಮಹಿಳಾ ಉದ್ಯಮಶೀಲತಾ ವೇದಿಕೆಗಳಂತಹ ಯೋಜನೆಗಳು ಈಗಾಗಲೇ ಸಹಾಯಕವಾಗಿವೆ. ಆದರೆ ಹೆಚ್ಚಿನ ಮಾರ್ಗದರ್ಶನ ಮತ್ತು ನೆಟ್‌ವರ್ಕಿಂಗ್ ಅವಕಾಶಗಳಿಗೆ ಬೇಡಿಕೆಯಿದೆ.
‘ನಿರ್ಮಲಾ’ ಬಜೆಟ್‌ನ ಪ್ರಮುಖ ನಿರೀಕ್ಷೆಗಳು
* ತೆರಿಗೆ ವಿನಾಯಿತಿ ಮೊತ್ತದ ಹೆಚ್ಚಳ
* ಕಿಸಾನ್ ಸಮ್ಮಾನ್ ನಿಧಿ ದ್ವಿಗುಣ
* ಸ್ಟಾಂಡರ್ಡ್ ಡಿಡಕ್ಷನ್ ಮೊತ್ತ ಹೆಚ್ಚಳ
* ಮೂಲ ಸೌಕರ್ಯ ಯೋಜನೆಗಳ ಘೋಷಣೆ
ಹಣಕಾಸು ಸಚಿವಾಲಯಕ್ಕೆ ಆಗಮಿಸಿದ ನಿರ್ಮಲಾ ಸೀತಾರಾಮನ್
#watch | Finance Minister Nirmala Sitharaman arrives at the Ministry of Finance as she is set to present the interim Budget today pic.twitter.com/46Ut7oHdzE
— ANI (@ANI) February 1, 2024