Site icon Vistara News

Union Budget 2024: ಬಜೆಟ್‌ ಮಂಡನೆಗೂ ಮುನ್ನ ನಿರ್ಮಲಾ ಸೀತಾರಾಮನ್‌ಗೆ ಮೊಸರು ಸಕ್ಕರೆ ತಿನ್ನಿಸಿದ ರಾಷ್ಟ್ರಪತಿ

union budget 2024

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮೂರನೇ ಬಾರಿ ಅಧಿಕಾರಕ್ಕೆ ಬಂದ ನಂತರ ಮೊದಲ ಕೇಂದ್ರ ಬಜೆಟ್‌ ಮಂಡನೆ(Union Budget 2024) ಆಗುತ್ತಿದೆ. ಏಳನೇ ಬಾರಿ ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌(Nirmala Sitharaman) ಸಂಸತ್‌ ಪ್ರವೇಶಕ್ಕೂ ಮುನ್ನ ರಾಷ್ಟ್ರಪತಿ ಭವನಕ್ಕೆ ಭೇಟಿ ಕೊಟ್ಟರು. ಅಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಅವರು ಸಾಂಪ್ರದಾಯದಂತೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮೊಸರು ಮತ್ತು ಸಕ್ಕರೆ ತಿನ್ನಿಸಿ ಶುಭ ಹಾರೈಸಿದರು.

ಪ್ರತಿ ಬಾರಿ ಬಜೆಟ್‌ ಮಂಡಿಸುವಾಗ ನಿರ್ಮಲಾ ಸೀತಾರಾಮನ್‌ ತೊಡುವ ಸೀರೆ ಬಗ್ಗೆ ಸಾಕಷ್ಟು ಕುತೂಹಲ ಇರುತ್ತೆ. ಈ ಬಾರಿಯೂ ಬಿಳಿ ರೇಷ್ಮೆ ಸೀರೆ ತೊಟ್ಟು ವಿತ್ತ ಸಚಿವೆ ಬಜೆಟ್‌ ಮಂಡಿಸೋಕೆ ಬಂದಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಕೇಂದ್ರ ಬಜೆಟ್ 2024-25 ಅನ್ನು ಸಂಸತ್ತಿನಲ್ಲಿ ಮಂಡಿಸುವ ಮೊದಲು ಕೆಂಪು ಸ್ಲೀವ್ಸ್‌ ಜೊತೆ ಬಿಳಿ ರೇಷ್ಮೆ ಸೀರೆ ತೊಟ್ಟು ಕ್ಯಾಮರಾಗೆ ಪೋಸ್‌ ಕೊಟ್ಟಿದ್ದಾರೆ. ಮೆಜೆಂಟಾ ಬಾರ್ಡರ್‌ನೊಂದಿಗೆ ಬಿಳಿ ರೇಷ್ಮೆ ಸೀರೆಯನ್ನು ಧರಿಸಿದ ಹಣಕಾಸು ಸಚಿವರು ಅಧ್ಯಕ್ಷರನ್ನು ಭೇಟಿ ಮಾಡುವ ಮೊದಲು ತಮ್ಮ ಅಧಿಕಾರಿಗಳ ತಂಡದೊಂದಿಗೆ ತಮ್ಮ ಕಚೇರಿಯ ಹೊರಗೆ ಫೊಟೋಗೆ ಪೋಸ್‌ ಕೊಟ್ಟರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ದಾಖಲೆಯ 7ನೇ ಬಾರಿಗೆ ಬಜೆಟ್‌ ಮಂಡನೆ (Union Budget 2024 Live) ಮಂಡಿಸುತ್ತದ್ದಾರೆ. ದೇಶದ ಜನರಿಗೆ ಬಜೆಟ್‌ ಕುರಿತು ನಿರೀಕ್ಷೆಗಳು ಹೆಚ್ಚಾಗಿದ್ದು, ಬಡವರು ಹಾಗೂ ಮಧ್ಯಮ ವರ್ಗದವರಿಗೆ ಬಂಪರ್‌ ಘೋಷಣೆ ಮಾಡುವ ನಿರೀಕ್ಷೆ ಇದೆ.

ಇದನ್ನೂ ಓದಿ: Union Budget 2024 Live: ಬಜೆಟ್‌ ಮಂಡನೆ ಆರಂಭಿಸಿದ ನಿರ್ಮಲಾ ಸೀತಾರಾಮನ್;‌ ಬಡ-ಮಧ್ಯಮ ವರ್ಗದವರಿಗೆ ಏನೆಲ್ಲ ಕೊಡುಗೆ? ಇಲ್ಲಿದೆ ಪ್ರತಿಕ್ಷಣದ ಮಾಹಿತಿ

Exit mobile version