ಬೆಂಗಳೂರು: ಈ ಬಾರಿ ಕೇಂದ್ರ ಬಜೆಟ್(Union Budget 2024)ನಲ್ಲಿ ಕರ್ನಾಟಕಕ್ಕೆ ಚೊಂಬು ಕೊಟ್ಟಿದ್ದಾರೆ. ರಾಜ್ಯವನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರ(Union Government) ನಿರ್ಲಕ್ಷಿಸಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪದ ಬೆನ್ನಲ್ಲೇ ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ಸಚಿವಾಲಯ(Railway Ministry)ಕ್ಕೆ ದೊರೆತ 2.62 ಲಕ್ಷ ಕೋಟಿ ರೂ.ಗಳಲ್ಲಿ ಕರ್ನಾಟಕಕ್ಕೆ 7,559 ಕೋಟಿ ರೂ. ಒದಗಿಸಲಾಗಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್(Ashwini Vaishnav) ಹೇಳಿದ್ದಾರೆ.
ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕಕ್ಕೆ 2024-25ರ ಅವಧಿಯಲ್ಲಿ ಬರೋಬ್ಬರಿ 7,559 ಕೋಟಿ ರೂ. ರೈಲ್ವೇ ಅಭಿವೃದ್ಧಿಗಾಗಿ ಅನುದಾನ ನೀಡಲಾಗಿದೆ. ಸೌತ್ ವೆಸ್ಟರ್ನ್ ರೈಲ್ವೇ (SWR) ಪ್ರಕಾರ, 31 ಯೋಜನೆಗಳು 3,840 ಕಿಲೋಮೀಟರ್‌ಗಳಲ್ಲಿ ಹರಡಿಕೊಂಡಿವೆ ಮತ್ತು 47,016 ಕೋಟಿ ಮೌಲ್ಯದ ಮೌಲ್ಯದ ಯೋಜನೆ ಪ್ರಸ್ತುತ ಕರ್ನಾಟಕದಲ್ಲಿ ನಡೆಯುತ್ತಿದೆ. 2023-24ರ ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ಯೋಜನೆಗಳಿಗೆ 7,561 ಕೋಟಿ ರೂ. ನೀಡಲಾಗಿತ್ತು ಎಂದು ಹೇಳಿದ್ದಾರೆ.
“ಪ್ರಸಕ್ತ ಬಜೆಟ್‌ನಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳಿಗೆ 7,559 ಕೋಟಿ ರೂ. ಮೀಸಲಿಡಲಾಗಿದೆ. ಈ ಅನುದಾನವು ಯುಪಿಎ ಅವಧಿಯಲ್ಲಿ ನೀಡಿದ್ದಕ್ಕಿಂತ 9 ಪಟ್ಟು ಹೆಚ್ಚು ಇದೆ. ಮೂಲ ಸೌಕರ್ಯಕ್ಕೆ ಆದ್ಯತೆ ನೀಡಲಾಗುವುದು. 59 ನಿಲ್ದಾಣಗಳನ್ನು ಅಮೃತ ಭಾರತ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುತ್ತಿದೆ. 638 ಅಂಡರ್ ಪಾಸ್‌ಗಳನ್ನು ನಿರ್ಮಿಸಲಾಗಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ 2,500 ಬೋಗಿಗಳನ್ನು ಹೆಚ್ಚುವರಿಯಾಗಿ ಜೋಡಿಸಲಾಗಿದೆ,
ಲೋಕೋ ಪೈಲಟ್‌ಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಲೋಕೋ ಪೈಲಟ್‌ಗಳ ಮೇಲಿನ ಒತ್ತಡ ತಗ್ಗಿಸಲು ವಾರದ ಒಟ್ಟು ಕರ್ತವ್ಯದ ಅವಧಿಯನ್ನು 54 ಗಂಟೆಗಳಿಂದ 52ಕ್ಕೆ ಇಳಿಸಲಾಗಿದೆ. ಹಾಗೂ ರನ್ನಿಂಗ್ ರೂಂಗಳನ್ನು ಸಹ ಹೆಚ್ಚಿಸಲಾಗಿದೆ. ಇದರಿಂದ ಪೈಲಟ್‌ಗಳಿಗೆ ಹೆಚ್ಚು ಅನುಕೂಲವಾಗಿದೆ,” ಎಂದು ಸಚಿವರು ಹೇಳಿದರು.
In FY 2024-25 budget, Karnataka has been allocated an astounding outlay of ₹ 7,559 Cr. for numerous Rail infra and safety projects: Hon'ble MR Shri @AshwiniVaishnaw #Budget2024 #BudgetForViksitBharat #UnionBudget2024Live pic.twitter.com/t33Xr1pADp
— Ministry of Railways (@RailMinIndia) July 24, 2024
ಪ್ರಸ್ತುತ, ನೈರುತ್ಯ ರೈಲ್ವೇ ವಿಭಾಗದಲ್ಲಿ 88% ನೆಟ್ವರ್ಕ್ ವಿದ್ಯುದ್ದೀಕರಿಸಲ್ಪಟ್ಟಿದೆ. ವಲಯವು ಮಾರ್ಚ್ 2025 ರ ವೇಳೆಗೆ 100% ವಿದ್ಯುದ್ದೀಕರಣವನ್ನು ಹೊಂದಿದೆ. 2014 ರಿಂದ 2024 ರವರೆಗೆ, ಕರ್ನಾಟಕದಲ್ಲಿ 638 ರಸ್ತೆ ಮೇಲ್ಸೇತುವೆಗಳು / ಕೆಳಸೇತುವೆಗಳನ್ನು ನಿರ್ಮಿಸಲಾಗಿದೆ, ಪ್ರತಿ ವರ್ಷ 163 ಕಿಮೀ ಹೊಸ ಮಾರ್ಗಗಳನ್ನು ಸೇರಿಸಲಾಯಿತು ಮತ್ತು ವಾರ್ಷಿಕವಾಗಿ 317 ಕಿಮೀ ಮಾರ್ಗಗಳನ್ನು ವಿದ್ಯುದ್ದೀಕರಿಸಲಾಗಿದೆ. ಒಟ್ಟಾರೆ ರೈಲ್ವೆಗೆ 2.62 ಲಕ್ಷ ಕೋಟಿ ರೂ. ಈ ಪೈಕಿ 1,08,795 ಕೋಟಿ ರೂ.ಗಳನ್ನು ಟ್ರ್ಯಾಕ್ ರಿಪ್ಲೇಸ್ಮೆಂಟ್, ಸಿಗ್ನಲಿಂಗ್ ಮತ್ತು ಟೆಲಿಕಾಂನಲ್ಲಿ ಸುಧಾರಣೆ ಸೇರಿದಂತೆ ಸುರಕ್ಷತೆಗೆ ಸಂಬಂಧಿಸಿದ ಯೋಜನೆಗಳಿಗೆ ಖರ್ಚು ಮಾಡಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: Union Budget 2024: ಕೇಂದ್ರ ಬಜೆಟ್‌ನಲ್ಲಿ ರೈಲ್ವೇ ವಲಯದ 9 ಪ್ರಮುಖ ನಿರೀಕ್ಷೆಗಳಿವು