Site icon Vistara News

Union Cabinet Meeting: 2 ಏರ್‌ಪೋರ್ಟ್‌ ಅಭಿವೃದ್ಧಿ, 3 ಮೆಟ್ರೋ ರೈಲು ಯೋಜನೆಗಳಿಗೆ ಕೇಂದ್ರ ಅಸ್ತು

Union Cabinet meeting

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ(Union Cabinet Meeting) ಸಭೆಯಲ್ಲಿ ಇಂದು ಭಾರತದಾದ್ಯಂತ ಮೂರು ಪ್ರಮುಖ ಮೆಟ್ರೋ ರೈಲು ಯೋಜನೆಗಳು ಮತ್ತು ಎರಡು ಹೊಸ ವಿಮಾನ ನಿಲ್ದಾಣ ಸೌಲಭ್ಯಗಳಿಗೆ ಅನುಮೋದನೆ ನೀಡಿದೆ. ಬಿಹಾರ ಮತ್ತು ಪಶ್ಚಿಮಬಂಗಾಳದ ಎರಡು ವಿಮಾನ ನಿಲ್ದಾಣಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಕೇಂದ್ರ ಮುಂದಾಗಿದೆ.

ಪಾಟ್ನಾದ ಬಿಹ್ತಾದಲ್ಲಿ ₹ 1,413 ಕೋಟಿ ಅಂದಾಜು ವೆಚ್ಚದೊಂದಿಗೆ, ಹೊಸ ಸಮಗ್ರ ಟರ್ಮಿನಲ್ ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಅಸ್ತು ಅಂದಿದೆ. 66,000 ಚದರ ಮೀಟರ್ ವಿಸ್ತೀರ್ಣದಲ್ಲಿ, ಟರ್ಮಿನಲ್ ಅನ್ನು 3,000 ಪೀಕ್ ಅವರ್ ಪ್ರಯಾಣಿಕರನ್ನು (PHP) ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಈ ಟರ್ಮಿನಲ್‌ನಲ್ಲಿ ವಾರ್ಷಿಕವಾಗಿ 50 ಲಕ್ಷ ಪ್ರಯಾಣಿಕರನ್ನು ಹೊಂದುವ ಸಾಮರ್ಥ್ಯ ಇರಲಿದೆ. ಭವಿಷ್ಯದಲ್ಲಿ ವಾರ್ಷಿಕವಾಗಿ ಒಂದು ಕೋಟಿ ಪ್ರಯಾಣಿಕರಿಗೆ ಸಾಮರ್ಥ್ಯವನ್ನು ವಿಸ್ತರಿಸಲು ಅವಕಾಶವಿದೆ. ಯೋಜನೆಯು A-321/B-737-800/A-320 ಮಾದರಿಯ ವಿಮಾನಗಳಿಗೆ 10 ಪಾರ್ಕಿಂಗ್ ಬೇಗಳನ್ನು ಈ ಟರ್ಮಿನಲ್‌ ಹೊಂದಲಿದೆ.

ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿರುವ ಬಾಗ್ಡೋಗ್ರಾ ವಿಮಾನ ನಿಲ್ದಾಣದಲ್ಲಿ 70,390 ಚದರ ಮೀಟರ್‌ನ ಹೊಸ ಟರ್ಮಿನಲ್ ಕಟ್ಟಡವು 3,000 ಪೀಕ್ ಅವರ್ ಪ್ರಯಾಣಿಕರಿಗೆ (PHP) ಅವಕಾಶ ಕಲ್ಪಿಸಲು ಮತ್ತು ವಾರ್ಷಿಕವಾಗಿ 10 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಇಲ್ಲಿ ₹1,549 ಕೋಟಿ ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸಂಪುಟ ಸಭೆಯಲ್ಲಿ ತಿಳಿಸಿದ್ದಾರೆ.

3 ಮೆಟ್ರೋ ಯೋಜನೆಗಳು

ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮೂರು ಮೆಟ್ರೋ ಯೋಜನೆಗಳಿಗೆ ಹಸಿರು ನಿಶಾನೆ ದೊರೆತಿದೆ. ಬೆಂಗಳೂರು ಮೆಟ್ರೊ ರೈಲು 3ನೇ ಹಂತದ ಯೋಜನೆಗೆ ಸಂಪುಟ ಅಸ್ತು ಎಂದಿದೆ. ಈ ಯೋಜನೆ ಒಟ್ಟು 44.65 ಕಿಮೀ ಉದ್ದದ ಎರಡು ಎಲಿವೇಟೆಡ್ ಕಾರಿಡಾರ್‌ಗಳ ಅಭಿವೃದ್ಧಿ ಮತ್ತು 31 ನಿಲ್ದಾಣಗಳನ್ನು ಒಳಗೊಂಡಿದೆ.

ಕ್ಯಾಬಿನೆಟ್ ಥಾಣೆ ಇಂಟಿಗ್ರಲ್ ರಿಂಗ್ ಮೆಟ್ರೋ ರೈಲ್ ಪ್ರಾಜೆಕ್ಟ್‌ಗೂ ಅನುಮೋದನೆ ಸಿಕ್ಕಿದೆ. ಥಾಣೆ ನಗರದ ಪಶ್ಚಿಮ ಭಾಗದ ಪರಿಧಿಯಲ್ಲಿ 22 ನಿಲ್ದಾಣಗಳನ್ನು ಒಳಗೊಂಡಿರುವ 29-ಕಿಮೀ ಕಾರಿಡಾರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಮೆಟ್ರೋ ಮಾರ್ಗವು 2029 ರ ವೇಳೆಗೆ ನಿತ್ಯ 6.47 ಲಕ್ಷ ಪ್ರಯಾಣಿಕರನ್ನು ಹೊಂದುವ ನಿರೀಕ್ಷೆ ಇದೆ. 2045 ರ ವೇಳೆಗೆ ಮೆಟ್ರೋ ಪ್ರಯಾಣಿಕರ ಸಂಖ್ಯೆ 8.72 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಈ ಯೋಜನೆಯ ವೆಚ್ಚ ₹ 12,200.10 ಅಂದಾಜಿಸಲಾಗಿದೆ.

ಪುಣೆಯ ಸ್ವರ್ಗೇಟ್ ಟು ಕಟ್ರಾಜ್ ಅಂಡರ್ಗ್ರೌಂಡ್ ಲೈನ್ ವಿಸ್ತರಣೆ ಕ್ಯಾಬಿನೆಟ್ ಅನುಮೋದಿಸಿದ ಮೂರನೇ ಮೆಟ್ರೋ ಯೋಜನೆ. ಲೈನ್-1B ಎಂದು ಕರೆಯಲ್ಪಡುವ ಈ ಹೊಸ ವಿಸ್ತರಣೆಯು 5.46 ಕಿಮೀ ವ್ಯಾಪಿಸುತ್ತದೆ. ₹ 2,954.53 ಕೋಟಿ ಅಂದಾಜು ವೆಚ್ಚದ ಈ ಯೋಜನೆಯು ಫೆಬ್ರವರಿ 2029 ರೊಳಗೆ ಪೂರ್ಣಗೊಳ್ಳಲಿದೆ.

ಇದನ್ನೂ ಓದಿ: PM Narendra Modi: ಕೆಂಪುಕೋಟೆಯ ಕಾರ್ಯಕ್ರಮಕ್ಕೆ ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ

Exit mobile version