Site icon Vistara News

UP Budget: ರಾಮನಿಗೆ ರಾಜ್ಯದ ಬಜೆಟ್ ಅರ್ಪಿಸಿದ‌ ಸಿಎಂ ಯೋಗಿ; ಅಯೋಧ್ಯೆಗೆ ಕೊಟ್ಟಿದೆಷ್ಟು?

Yogi Adityanath

UP govt unveils Rs 7.36 lakh crore budget for 2024-25: Rs 100 crore for Ayodhya

ಲಖನೌ: ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಹಣಕಾಸು ಸಚಿವ ಸುರೇಶ್‌ ಖನ್ನಾ (Suresh Khanna) ಅವರು 2024-25ನೇ ಸಾಲಿನ ಬಜೆಟ್‌ (UP Budget 2024-25) ಮಂಡಿಸಿದ್ದಾರೆ. ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ದಾಖಲೆ ಮೊತ್ತದ ಬಜೆಟ್‌ಅನ್ನು ಮಂಡಿಸಿದ್ದಾರೆ. ಸುರೇಶ್‌ ಖನ್ನಾ ಅವರು 7.36 ಲಕ್ಷ ಕೋಟಿ ರೂ. ಮೊತ್ತದ ಬಜೆಟ್‌ ಮಂಡಿಸಿದ್ದು, ಇದರಲ್ಲಿ ರಾಮನಗರಿ ಅಯೋಧ್ಯೆ (Ayodhya) ನಗರದ ಅಭಿವೃದ್ಧಿಗೆ 100 ಕೋಟಿ ರೂ. ಮೀಸಲಿಟ್ಟಿದ್ದಾರೆ. ಹಾಗೆಯೇ, ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 150 ಕೋಟಿ ರೂ. ಮೀಸಲಿಟ್ಟಿದ್ದಾರೆ.

ಬಜೆಟ್‌ ಭಾಷಣದ ವೇಳೆ ಅಯೋಧ್ಯೆ ರಾಮಮಂದಿರದ ಕುರಿತು ಸುರೇಶ್‌ ಖನ್ನಾ ಪ್ರಸ್ತಾಪಿಸಿದರು. “ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಿದ ಬಳಿಕ ಅಯೋಧ್ಯೆಯ ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಹರೆ ಬದಲಾಗಿದೆ. ಅಯೋಧ್ಯೆ ನಗರವೀಗ ಜಗತ್ತಿನ ಪ್ರಮುಖ ಪ್ರವಾಸೋದ್ಯಮ ತಾಣವಾಗಿದೆ. ಭಾರತ ಸೇರಿ ಬೇರೆ ಜಗತ್ತಿನಾದ್ಯಂತ ಪ್ರವಾಸಿಗರು ಅಯೋಧ್ಯೆಯತ್ತ ಆಗಮಿಸುತ್ತಿದ್ದಾರೆ” ಎಂದು ಹೇಳಿದರು.


ಮಹಾ ಕುಂಭ ಮೇಳಕ್ಕೆ 2,500 ಕೋಟಿ ರೂ.

ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ 2025ರಲ್ಲಿ ನಡೆಯುವ ಮಹಾ ಕುಂಭ ಮೇಳಕ್ಕೆ ಯೋಗಿ ಆದಿತ್ಯನಾಥ್‌ ನೇತೃತ್ವದ ರಾಜ್ಯ ಸರ್ಕಾರವು 2,500 ಕೋಟಿ ರೂ. ಮೀಸಲಿಟ್ಟಿದೆ. ಸುಸಜ್ಜಿತ ಹಾಗೂ ಅದ್ಧೂರಿಯಾಗಿ ಮಹಾ ಕುಂಭ ಮೇಳ ಆಯೋಜಿಸಲು ತೀರ್ಮಾನಿಸಲಾಗಿದ್ದು, ಇದರ ಸಿದ್ಧತೆಗಾಗಿ 2,500 ಕೋಟಿ ರೂ. ಮೀಸಲಿಟ್ಟಿದೆ. ಬಜೆಟ್‌ ಬಳಿಕ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “ಈ ಬಾರಿಯ ಬಜೆಟ್‌ಅನ್ನು ಭಗವಾನ್‌ ಶ್ರೀರಾಮನಿಗೆ ಅರ್ಪಿಸುತ್ತಿದ್ದೇವೆ” ಎಂದು ಹೇಳಿದರು.

ಇದನ್ನೂ ಓದಿ: Budget 2024: ಇದು ‘ನಿರ್ಮಲ’ ಬಜೆಟ್! ತೆರಿಗೆ ಬದಲಾವಣೆಯೂ ಇಲ್ಲ, ಪುಕ್ಕಟೆ ಯೋಜನೆಯೂ ಇಲ್ಲ!

ಉತ್ತರ ಪ್ರದೇಶ ಬಜೆಟ್‌ನ ಪ್ರಮುಖಾಂಶಗಳು

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version