Budget 2024: ಇದು 'ನಿರ್ಮಲ' ಬಜೆಟ್! ತೆರಿಗೆ ಬದಲಾವಣೆಯೂ ಇಲ್ಲ, ಪುಕ್ಕಟೆ ಯೋಜನೆಯೂ ಇಲ್ಲ! - Vistara News

ದೇಶ

Budget 2024: ಇದು ‘ನಿರ್ಮಲ’ ಬಜೆಟ್! ತೆರಿಗೆ ಬದಲಾವಣೆಯೂ ಇಲ್ಲ, ಪುಕ್ಕಟೆ ಯೋಜನೆಯೂ ಇಲ್ಲ!

Budget 2024: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯಾವುದೇ ಹೊಸ ಘೋಷಣೆ ಮಾಡದೆಯೂ ಅರ್ಥಪೂರ್ಣ ಮಧ್ಯಂತರ ಬಜೆಟ್ ಮಂಡಿಸಿ ಸೈ ಎನಿಸಿಕೊಂಡಿದ್ದಾರೆ.

VISTARANEWS.COM


on

Vistara Editorial, Balanced budget by Central Government
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯ (Lok sabha Election 2024) ಹಿನ್ನೆಲೆಯಲ್ಲಿ ವಿತ್ತ ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Seetharaman) ಇಂದು ಮಧ್ಯಂತರ ಬಜೆಟ್ 2024 (Budget 2024) ಅನ್ನು ಮಂಡಿಸಿದ್ದಾರೆ. ಇದು ನಿರ್ಮಲಾ ಸೀತಾರಾಮನ್ ಅವರ ಸತತ ಆರನೇ ಬಜೆಟ್ ಮಂಡನೆ. ಅವರು ಮಾಜಿ ಹಣಕಾಸು ಸಚಿವ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಬಜೆಟ್‌ನಲ್ಲಿ ಹಣಕಾಸು ಸಚಿವರು ಯಾವುದೇ ಜನಪ್ರಿಯ ಘೋಷಣೆಗಳನ್ನು ಮಾಡಿಲ್ಲ. ನೇರ ಮತ್ತು ಪರೋಕ್ಷ ತೆರಿಗೆಗಳ ತೆರಿಗೆ ದರಗಳನ್ನು ಬದಲಾಯಿಸಿಲ್ಲ.

ಮುಂದಿನ ಹಣಕಾಸು ವರ್ಷದಲ್ಲಿ ಸರ್ಕಾರವು 11.1 ಲಕ್ಷ ಕೋಟಿ ರೂಪಾಯಿಗಳನ್ನು ಬಂಡವಾಳ ವೆಚ್ಚವಾಗಿ ಖರ್ಚು ಮಾಡಲಿದೆ ಎಂದು ನಿರ್ಮಲಾ ಬಜೆಟ್‌ನಲ್ಲಿ (budget 2024) ಘೋಷಿಸಿದ್ದಾರೆ. ಇದು ಪ್ರಸಕ್ತ ಹಣಕಾಸು ವರ್ಷದ ಹಂಚಿಕೆಗಳಿಗೆ ಹೋಲಿಸಿದರೆ ಸುಮಾರು 11% ಹೆಚ್ಚು. ಸರ್ಕಾರವು ಮುಂದಿನ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆ ಗುರಿಯನ್ನು GDPಯ 5.1 ಪ್ರತಿಶತಕ್ಕೆ ಇಳಿಸಿದೆ. ಮತ್ತು 2026ರಲ್ಲಿ ಅದನ್ನು 4.5 ಪ್ರತಿಶತಕ್ಕೆ ಇಳಿಸಲು ಯೋಜಿಸಿದೆ.

ನೇರ ಮತ್ತು ಪರೋಕ್ಷ ತೆರಿಗೆ

  • ನೇರ ಮತ್ತು ಪರೋಕ್ಷ ತೆರಿಗೆ ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಹಳೆಯ ದರಗಳನ್ನೇ ಉಳಿಸಿಕೊಳ್ಳಲಾಗಿದೆ.
  • ತೆರಿಗೆ ವಿರಾಮವನ್ನು ಮಾರ್ಚ್ 31, 2025ರವರೆಗೆ ವಿಸ್ತರಿಸಲಾಗಿದೆ.
  • ತೆರಿಗೆ ಪಾವತಿದಾರರ ಸೇವೆಯನ್ನು ಸುಧಾರಿಸುವತ್ತ ಗಮನಹರಿಸಲಾಗಿದೆ.
  • ತೆರಿಗೆ ಸುಧಾರಣೆಗಳು ತೆರಿಗೆ ಮೂಲವನ್ನು ವಿಸ್ತರಿಸಿವೆ ಮತ್ತು ತೆರಿಗೆ ಸಂಗ್ರಹವನ್ನು ಹೆಚ್ಚಿಸಿವೆ.
  • ಹಳೆಯ ವಿವಾದಿತ ನೇರ ತೆರಿಗೆ ಬಾಕಿಗಳ ನೋಟೀಸ್‌ ಹಿಂಪಡೆಯಲು ನಿರ್ಧಾರ. FY2009ರವರೆಗೆ 25,000 ರೂ.ವರೆಗಿನ ಮತ್ತು 2010-11ರಿಂದ 2014-15ರವರೆಗೆ 10,000 ರೂ.ವರೆಗೆ. ಇದು 1 ಕೋಟಿ ತೆರಿಗೆದಾರರಿಗೆ ಪ್ರಯೋಜನವಾಗಲಿದೆ.
  • ಪಿಂಚಣಿ ನಿಧಿಗಳಿಗೆ ಕೆಲವು ತೆರಿಗೆ ಪ್ರಯೋಜನಗಳಿವೆ.
  • ತೆರಿಗೆ ರಿಟರ್ನ್ಸ್ ಪ್ರಕ್ರಿಯೆಯ ಸಮಯ FY14ರಲ್ಲಿ 93 ದಿನ ಇದ್ದದ್ದು ಈಗ 10 ದಿನಗಳಿಗೆ ಕಡಿಮೆ ಮಾಡಲಾಗಿದೆ.
  • ಜಿಎಸ್‌ಟಿಯ ತೆರಿಗೆ ಮೂಲವು ದುಪ್ಪಟ್ಟಾಗಿದೆ.
  • 2014ರಿಂದ ತೆರಿಗೆ ಸಲ್ಲಿಸುವವರ ಸಂಖ್ಯೆ 2.4 ಪಟ್ಟು ಹೆಚ್ಚಾಗಿದೆ. ನೇರ ತೆರಿಗೆ ಸಂಗ್ರಹವು ಮೂರು ಪಟ್ಟು ಹೆಚ್ಚಾಗಿದೆ.
  • 2024-25ರ ತೆರಿಗೆ ಸ್ವೀಕೃತಿಗಳು 26.02 ಲಕ್ಷ ಕೋಟಿ ರೂ.

ಪ್ರವಾಸೋದ್ಯಮ

  • ಪ್ರವಾಸೋದ್ಯಮವನ್ನು ಉತ್ತೇಜಿಸಲು ರಾಜ್ಯಗಳಿಗೆ ಬಡ್ಡಿ ರಹಿತ ಸಾಲ
  • ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹಣಕಾಸು
  • ಉಡಾನ್ ಯೋಜನೆಯಡಿಯಲ್ಲಿ 517 ಹೊಸ ಮಾರ್ಗಗಳನ್ನು ಪ್ರಾರಂಭಿಸಲಾಗುವುದು.
  • ಹಣಕಾಸಿನ ಪ್ರಕಟಣೆಗಳು

ಹೂಡಿಕೆ ವೆಚ್ಚ 11.11 ಲಕ್ಷ ಕೋಟಿ ರೂ

  • GDPಯ 3.4 ಪ್ರತಿಶತ ಹೂಡಿಕೆ ವೆಚ್ಚ
  • FY24 ವಿತ್ತೀಯ ಕೊರತೆ ಗುರಿಯನ್ನು GDPಯ 5.9 ಶೇಕಡಾದಿಂದ 5.8 ಶೇಕಡಾಕ್ಕೆ ಪರಿಷ್ಕರಿಸಲಾಗಿದೆ.
  • FY25ಕ್ಕೆ 5.1% ವಿತ್ತೀಯ ಕೊರತೆ ಗುರಿ
  • 2025-26ರಲ್ಲಿ ವಿತ್ತೀಯ ಕೊರತೆಯನ್ನು ಶೇಕಡಾ 4.5ಕ್ಕೆ ತಗ್ಗಿಸಲು ಚಿಂತನೆ.
  • FY25ರ ಒಟ್ಟು ಮಾರುಕಟ್ಟೆ ಸಾಲದ ಗುರಿ ರೂ 14.13 ಲಕ್ಷ ಕೋಟಿ
  • ನಿವ್ವಳ ಮಾರುಕಟ್ಟೆ ಸಾಲ 11.75 ಲಕ್ಷ ಕೋಟಿ ರೂ.
  • FY24ರ ಪರಿಷ್ಕೃತ ವೆಚ್ಚ 44.90 ಲಕ್ಷ ಕೋಟಿ
  • 2024/25ರಲ್ಲಿ ಒಟ್ಟು ಆದಾಯ ಸ್ವೀಕೃತಿಗಳು 30 ಲಕ್ಷ ಕೋಟಿ ರೂ.
  • GDP ಬೆಳವಣಿಗೆ 10.5%ದಲ್ಲಿ ಕಂಡುಬಂದಿದೆ
  • ಆಹಾರ ಸಬ್ಸಿಡಿ 2.12 ಲಕ್ಷ ಕೋಟಿ
  • FY24 ಬಂಡವಾಳ ಹಿಂತೆಗೆತ ಗುರಿ 30,000 ಕೋಟಿಗೆ ಕಡಿತಗೊಳಿಸಲಾಗಿದೆ.
  • FY25ರಲ್ಲಿ 50,000 ಕೋಟಿ ರೂ.ಗೆ ಬಂಡವಾಳ ಹಿಂತೆಗೆತದ ಗುರಿ.

ಕೃಷಿ ಕ್ಷೇತ್ರ

  • ಸುಗ್ಗಿಯ ನಂತರದ ಚಟುವಟಿಕೆಯಲ್ಲಿ ಖಾಸಗಿ ಮತ್ತು ಸರ್ಕಾರಿ ಹೂಡಿಕೆಗೆ ಉತ್ತೇಜನ
  • ಹೈನುಗಾರರಿಗೆ ಹೆಚ್ಚಿನ ಉತ್ತೇಜನ
  • ಕಾಲು ಬಾಯಿ ರೋಗವನ್ನು ನಿಯಂತ್ರಿಸಲು ಹೆಚ್ಚಿನ ಪ್ರಯತ್ನ
  • ಪಿಎಂ ಫಸಲ್ ಬಿಮಾ ಅಡಿಯಲ್ಲಿ 4 ಕೋಟಿ ರೈತರಿಗೆ ಬೆಳೆ ವಿಮೆ ನೀಡಲಾಗಿದೆ
  • ಐದು ಇಂಟಿಗ್ರೇಟೆಡ್ ಆಕ್ವಾ ಪಾರ್ಕ್ ಸ್ಥಾಪಿಸಲಾಗುವುದು
  • ಜಲಕೃಷಿಯನ್ನು ಉತ್ತೇಜಿಸಲು ಬ್ಲೂ ಎಕಾನಮಿ 2.0 ಅನ್ನು ಪ್ರಾರಂಭಿಸಲು ನಿರ್ಧಾರ

ಆರೋಗ್ಯ ರಕ್ಷಣೆ

  • ಆಯುಷ್ಮಾನ್ ಭಾರತ್ ಅಡಿಯಲ್ಲಿ ಆರೋಗ್ಯ ಸೌಲಭ್ಯಗಳನ್ನು ಎಲ್ಲಾ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರಿಗೆ ವಿಸ್ತರಣೆ
  • ಎಲ್ಲಾ ಜಿಲ್ಲೆಗಳಲ್ಲಿ ಆಸ್ಪತ್ರೆಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ
  • 9-14 ವರ್ಷ ವಯಸ್ಸಿನ ಹುಡುಗಿಯರಿಗೆ ಗರ್ಭಕಂಠದ ಕ್ಯಾನ್ಸರ್‌ಗೆ ಲಸಿಕೆ.
  • ಸಕ್ಷಮ್ ಅಂಗನವಾಡಿ ಮತ್ತು ಪೋಶನ್ 2.0 ಕಾರ್ಯಕ್ರಮ ಸುಧಾರಣೆ ಮೂಲಕ ಪೌಷ್ಟಿಕಾಂಶ, ಬಾಲ್ಯದ ಆರೈಕೆ ವೃದ್ಧಿ

ವಸತಿ ವಲಯ

  • ಮಧ್ಯಮ ವರ್ಗದವರಿಗೆ ಹೊಸ ವಸತಿ ಯೋಜನೆಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 2 ಕೋಟಿ ಮನೆಗಳನ್ನು ನಿರ್ಮಿಸಲಾಗುವುದು
  • ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) 3 ಕೋಟಿ ಗುರಿ ಸಾಧಿಸುವ ಸಮೀಪದಲ್ಲಿದೆ
  • ಮುಂದಿನ 5 ವರ್ಷಗಳಲ್ಲಿ ಹೆಚ್ಚುವರಿ 2 ಕೋಟಿ ಮನೆ ಸ್ಥಾಪನೆ ಗುರಿ
  • ನವೀಕರಿಸಬಹುದಾದ ಇಂಧನ

ಪವನ ಶಕ್ತಿಗಾಗಿ ಕಾರ್ಯಸಾಧ್ಯತೆಯ ಅಂತರ ನಿಧಿ

  • ಕಲ್ಲಿದ್ದಲು ಅನಿಲೀಕರಣ ಮತ್ತು ದ್ರವೀಕರಣ ಸಾಮರ್ಥ್ಯವನ್ನು ಹೆಚ್ಚಿಸುವುದು
  • CNG, PNG ಮತ್ತು ಜೈವಿಕ ಅನಿಲದ ಹಂತಹಂತದ ಕಡ್ಡಾಯ ಮಿಶ್ರಣ
  • ಬಯೋಮಾಸ್ ಒಗ್ಗೂಡಿಸುವ ಯಂತ್ರೋಪಕರಣಗಳ ಖರೀದಿಗೆ ಹಣಕಾಸಿನ ನೆರವು
  • ತಿಂಗಳಿಗೆ 1 ಕೋಟಿ ಕುಟುಂಬಗಳು 300 ಯೂನಿಟ್‌ಗಳವರೆಗೆ ಉಚಿತವಾಗಿ ವಿದ್ಯುತ್‌ ಪಡೆಯುವಂತೆ ಕ್ರಮ

ಭಾರತದ ಬೆಳವಣಿಗೆ

  • ಮುಂದಿನ ಪೀಳಿಗೆಯ ಸುಧಾರಣೆಗಳನ್ನು ರಾಜ್ಯಗಳೊಂದಿಗೆ ಸಮಾಲೋಚಿಸಿ ತೆಗೆದುಕೊಳ್ಳಲಾಗುವುದು
  • ಪೂರ್ವ ಪ್ರದೇಶಗಳನ್ನು ಭಾರತದ ಬೆಳವಣಿಗೆಯ ಚಾಲಕರನ್ನಾಗಿ ಮಾಡಲು ಚಿಂತನೆ
  • ಹೊಸ ಸೌರಶಕ್ತಿ ನೀತಿಯ ಅಡಿಯಲ್ಲಿ 1 ಕೋಟಿಗೂ ಹೆಚ್ಚು ಮನೆಗಳಿಗೆ 300 ಯೂನಿಟ್‌ಗಳ ಉಚಿತ ವಿದ್ಯುತ್
  • ಉನ್ನತ ಶಿಕ್ಷಣದಲ್ಲಿ ಕಳೆದ 10 ವರ್ಷಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಶೇ.28ಕ್ಕೆ ಏರಿಕೆಯಾಗಿದೆ
  • ʼಲಖ್ಪತಿ ದೀದಿʼಯ ಗುರಿಯನ್ನು 2 ಕೋಟಿಯಿಂದ 3 ಕೋಟಿಗೆ ಹೆಚ್ಚಿಸುವುದು
  • PM-SVANidhi ಅಡಿಯಲ್ಲಿ 78 ಲಕ್ಷ ಬೀದಿ ವ್ಯಾಪಾರಿಗಳಿಗೆ ಸಾಲದ ನೆರವು
  • ಕಳೆದ 10 ವರ್ಷಗಳಲ್ಲಿ 22 ಕೋಟಿಗೂ ಹೆಚ್ಚು ಮುದ್ರಾ ಸಾಲಗಳನ್ನು ವಿತರಿಸಲಾಗಿದೆ
  • ಜನ್ ಧನ್ ಖಾತೆಗಳು ಸರ್ಕಾರಕ್ಕೆ 2 ಲಕ್ಷ ಕೋಟಿ ರೂಪಾಯಿಗಳನ್ನು ಉಳಿಸಲು ಸಹಾಯ ಮಾಡಿದೆ
  • ತ್ರಿವಳಿ ತಲಾಖ್ ರದ್ದತಿ, ಸಂಸತ್ತಿನಲ್ಲಿ ಮೂರನೇ ಒಂದು ಭಾಗ ಮೀಸಲು ಇತ್ಯಾದಿಗಳು ಭಾರತದಲ್ಲಿ ಮಹಿಳೆಯರ ಘನತೆಯನ್ನು ಹೆಚ್ಚಿಸಿವೆ
  • ಮಹಿಳಾ ಉದ್ಯಮಿಗಳಿಗೆ ರೂ 30 ಕೋಟಿ ಮುದ್ರಾ ಯೋಜನೆ ನೆರವು ನೀಡಲಾಗಿದೆ.
  • ಸ್ಕಿಲ್ ಇಂಡಿಯಾ ಮಿಷನ್ 1.4 ಕೋಟಿ ಯುವಕರಿಗೆ ಉದ್ಯೋಗವನ್ನು ಪಡೆಯಲು ತರಬೇತಿ ನೀಡಿದೆ.
  • ಏಷ್ಯನ್ ಗೇಮ್ಸ್‌ನಲ್ಲಿ ಅತ್ಯಧಿಕ ಪದಕಗಳ ಸಂಖ್ಯೆಯು ಹೆಚ್ಚಿನ ಆತ್ಮವಿಶ್ವಾಸ ತುಂಬಿದೆ.
  • ಫಲಾನುಭವಿಗಳಿಗೆ 34 ಲಕ್ಷ ಕೋಟಿ ರೂಪಾಯಿಗಳ ನೇರ ವರ್ಗಾವಣೆ ದೊಡ್ಡ ಉಳಿತಾಯಕ್ಕೆ ಕಾರಣವಾಗಿದೆ.
  • ಕಳೆದ 10 ವರ್ಷಗಳಲ್ಲಿ ಸರ್ಕಾರ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದೆ
  • ಬಡವರು, ಯುವಜನತೆ, ಮಹಿಳೆಯರು ಮತ್ತು ಅನ್ನದಾತರು ಹೆಚ್ಚಿನ ಆದ್ಯತೆ. ಅವರ ಕಲ್ಯಾಣ, ದೇಶದ ಕಲ್ಯಾಣ.

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ವಿನಾಯಿತಿ

ಹಲವು ವರ್ಷಗಳಿಂದ ಬಾಕಿ ಉಳಿದುಕೊಂಡಿರುವ ವಿವಾದಿತ ನೇರ ತೆರಿಗೆ ಪ್ರಕರಣಗಳಿಗೆ (disputed direct tax demand) ಗಣನೀಯ ವಿನಾಯಿತಿಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Seetharaman) ಅವರು ಮಧ್ಯಂತರ ಬಜೆಟ್‌ನಲ್ಲಿ (Budget 2024) ಒದಗಿಸಿದ್ದಾರೆ.

ಸಂಪ್ರದಾಯಕ್ಕೆ ಅನುಗುಣವಾಗಿ ತೆರಿಗೆ ಸ್ಲ್ಯಾಬ್‌ಗಳಲ್ಲಿ ಸಚಿವರು ಯಾವುದೇ ಬದಲಾವಣೆಗಳನ್ನು ಮಾಡದಿದ್ದರೂ, ಬಾಕಿ ಉಳಿದಿರುವ ತೆರಿಗೆ ವಿವಾದಗಳಿಗೆ ಪರಿಹಾರವನ್ನು ನೀಡಿದರು. 2010ರವರೆಗೆ 25,000 ರೂ. ಮತ್ತು 2011- 2015ರ ಅವಧಿಯಲ್ಲಿ 10,000 ರೂ. ವರೆಗೆ ನೇರ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ನೀಡಲಾದ ನೋಟೀಸ್‌ಗಳನ್ನು ಸರ್ಕಾರ ಹಿಂಪಡೆಯಲಿದೆ ಎಂದು ಹಣಕಾಸು ಸಚಿವರು ತಮ್ಮ ಬಜೆಟ್- 2024 (Budget 2024) ಭಾಷಣದಲ್ಲಿ ಹೇಳಿದರು. ಸುಮಾರು 1 ಕೋಟಿ ತೆರಿಗೆ ಗ್ರಾಹಕರು ಈ ವಿನಾಯಿತಿಯ ಲಾಭ ಪಡೆಯಲಿದ್ದಾರೆ ಎಂದು ನಿರ್ಮಲಾ ತಿಳಿಸಿದರು. ಕಳೆದೆರಡು ವರ್ಷಗಳ ಹಿಂದೆ ಈ ವಿವಾದಿತ ತೆರಿಗೆ ಪ್ರಕರಣಗಳ ಇತ್ಯರ್ಥಕ್ಕಾಗಿ ಕೇಂದ್ರ ಸರ್ಕಾರ ʼವಿವಾದ್‌ ಸೆ ವಿಶ್ವಾಸ್‌ʼ ಎಂಬ ಉಪಕ್ರಮವನ್ನು ಜಾರಿಗೆ ತಂದಿತ್ತು. ಇದು ರಾಜಿಸಂಧಾನದ ಮೂಲಕ ತೆರಿಗೆ ವಿವಾದಗಳನ್ನು ಪರಿಹರಿಸುವ ಉಪಕ್ರಮ ಆಗಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, 2023ರ ಮಾರ್ಚ್ 31ರವರೆಗೆ ಬಾಕಿ ಉಳಿದಿರುವ ತೆರಿಗೆ ಮೇಲ್ಮನವಿಗಳ ಸಂಖ್ಯೆ 5.16 ಲಕ್ಷಕ್ಕೂ ಅಧಿಕವಾಗಿದೆ.

ಬಜೆಟ್‌ನಲ್ಲಿ ಬಾಲಕಿಯರಿಗೆ ಲಸಿಕೆ ಕೊಡುಗೆ

ಗರ್ಭಕಂಠ ಕ್ಯಾನ್ಸರ್‌ ತಡೆಗಾಗಿ ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಮಹತ್ವದ ಘೋಷಣೆ ಮಾಡಿದೆ. ಗರ್ಭಕಂಠ ಕ್ಯಾನ್ಸರ್‌ ತಡೆಗಾಗಿ ದೇಶಾದ್ಯಂತ 9-14 ವರ್ಷದೊಳಗಿನ ಬಾಲಕಿಯರಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು (Cervical Cancer Vaccine) ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಬಜೆಟ್‌ (Budget 2024) ಮಂಡಿಸುವ ವೇಳೆ ಘೋಷಣೆ ಮಾಡಿದ್ದಾರೆ.

ಈಗ ಗರ್ಭಕಂಠ ಕ್ಯಾನ್ಸರ್‌ ನಿರೋಧಕ ವ್ಯಾಕ್ಸಿನ್‌ಗೆ 3 ಸಾವಿರ ರೂ. ಇದೆ. ಇನ್ನುಮುಂದೆ ಶಾಲೆಗಳ ಮೂಲಕವೇ ಬಾಲಕಿಯರಿಗೆ ಉಚಿತವಾಗಿ ಕ್ಯಾನ್ಸರ್‌ ನಿರೋಧಕ ಲಸಿಕೆ ನೀಡಲಾಗುತ್ತದೆ ಎಂದು ಸರ್ಕಾರ ಘೋಷಿಸಿದೆ. ಕೇಂದ್ರ ಸರ್ಕಾರ ನೀಡುವ ಲಸಿಕೆಯು ಶೇ.70ರಷ್ಟು ಪರಿಣಾಮಕಾರಿಯಾಗಿದ್ದು, ಹೆಣ್ಣುಮಕ್ಕಳು ಗರ್ಭಕಂಠ ಕ್ಯಾನ್ಸರ್‌ಗೆ ತುತ್ತಾಗುವುದರಿಂದ ತಡೆಗಟ್ಟುತ್ತದೆ.

ಇವಿ ವಾಹನ ಕ್ಷೇತ್ರಕ್ಕೂ ಬಜೆಟ್​ನಲ್ಲಿ ಒತ್ತು

ನಿರ್ಮಲಾ ಸೀತಾರಾಮನ್ ಅವರು ಘೋಷಿಸಿರುವ ಮಧ್ಯಂತರ ಬಜೆಟ್​ನಲ್ಲಿ ಇವಿ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ. ಇವಿ ಪರಿಸರ ವ್ಯವಸ್ಥೆಯನ್ನು ವಿಸ್ತರಣೆ ಮಾಡುವ ಜತೆಗೆ ಚಾರ್ಜಿಂಗ್ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್​ ಅವರು ಹೇಳಿದ್ದಾರೆ. ಸರ್ಕಾರವು ಎಲೆಕ್ಟ್ರಿಕ್ ವಾಹನ ಪರಿಸರ ವ್ಯವಸ್ಥೆಯನ್ನು ವಿಸ್ತರಿಸಲಿದೆ ಎಂದು ಹಣಕಾಸು ಸಚಿವರು ಗುರುವಾರ ಮಧ್ಯಂತರ ಬಜೆಟ್ ಘೋಷಿಸುವಾಗ ಹೇಳಿದ್ದಾರೆ. ಸಾರ್ವಜನಿಕ ಸಂಪರ್ಕ ಸಾರಿಗೆಯಲ್ಲಿ ಇ- ಬಸ್​​ಗಳ ಹೆಚ್ಚಳಕ್ಕೆ ಪ್ರೋತ್ಸಾಹಿಸಲಾಗುವುದು ಎಂದು ಸೀತಾರಾಮನ್ ಹೇಳಿದ್ದಾರೆ.

ಉತ್ಪಾದನೆ ಮತ್ತು ಚಾರ್ಜಿಂಗ್ ಮೂಲಸೌಕರ್ಯವನ್ನು ಬೆಂಬಲಿಸುವ ಮೂಲಕ ನಮ್ಮ ಸರ್ಕಾರ ಇ-ವಾಹನ ಪರಿಸರ ವ್ಯವಸ್ಥೆ ವಿಸ್ತರಿಸುತ್ತದೆ. ಪೇಮೆಂಟ್ ಸೆಕ್ಯುರಿಟಿ ಮೆಕಾನಿಸಮ್​ ಮೂಲಕ ಸಾರ್ವಜನಿಕ ಸಾರಿಗೆ ಸಂಸ್ಥೆಗಳಿ ಇ-ಬಸ್​ಗಳ ಹೆಚ್ಚಿನ ಅಳವಡಿಕೆಯನ್ನು ಪ್ರೋತ್ಸಾಹಿಸಲಾಗುವುದು” ಎಂದು ಸೀತಾರಾಮನ್ ಬಜೆಟ್ ಮಂಡನೆ ವೇಳೆ ಹೇಳಿದರು.

ರೈಲ್ವೆಗೆ 2.4 ಲಕ್ಷ ಕೋಟಿ ರೂ.!

ಮೆಟ್ರೋ ರೈಲು (Metro Rail) ಮತ್ತು ನಮೋ ಭಾರತ್ ರೈಲು (Namo Bharat Rail) ಸೇವೆಯನ್ನು ಇತರ ಎಲ್ಲ ನಗರಗಳಿಗೂ ವಿಸ್ತರಿಸುವ ಬಗ್ಗೆ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ (Niramla Sitharaman) ಅವರು ಘೋಷಣೆ ಮಾಡಿದ್ದಾರೆ. ಹಾಗೆಯೇ, ವಂದೇ ಭಾರತ್ ಹಂತಕ್ಕೆ 40 ಸಾವಿರ ಬೋಗಿಗಳನ್ನು ಮೇಲ್ದರ್ಜೆಗೇರಿಸುವ ಬಗ್ಗೆಯೂ ವಾಗ್ದಾನ ಮಾಡಲಾಗಿದೆ. ಇದರ ಜೊತೆಗೆ, ಮೂರು ಪ್ರಮುಖ ಆರ್ಥಿಕ ರೈಲ್ವೇ ಕಾರಿಡಾರ್ ಕಾರ್ಯಕ್ರಮಗಳನ್ನು ಘೋಷಣೆ ಮಾಡಲಾಗಿದೆ. ಅನುಷ್ಠಾನ-ಶಕ್ತಿ, ಬಂದರು ಸಂಪರ್ಕ, ಹೆಚ್ಚಿನ ಸಂಚಾರ ಸಾಂದ್ರತೆ ಮತ್ತು ಖನಿಜ ಮತ್ತು ಸಿಮೆಂಟ್ ಕಾರಿಡಾರ್ ಬಗ್ಗೆ ಪ್ರಕಟಿಸಲಾಗಿದೆ(budget 2024).

ದಾಖಲೆಯ ಮಟ್ಟದಲ್ಲಿ ಈ ಬಾರಿ ರೈಲ್ವೆಗೆ ಅನುದಾನವನ್ನು ಒದಗಿಸಲಾಗಿದೆ. 2024-25ನೇ ಸಾಲಿಗೆ ಕೇಂದ್ರ ಸರ್ಕಾರವು ರೈಲ್ವೆ ಇಲಾಖೆಗೆ 2.4 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಈ ವರ್ಷ ರೈಲ್ವೆ ಇಲಾಖೆಯಿಂದ ಸಾಕಷ್ಟು ನಿರೀಕ್ಷೆ ಕೂಡ ಇಟ್ಟುಕೊಳ್ಳಲಾಗಿದೆ.

ಈ ಸುದ್ದಿಯನ್ನೂ ಓದಿ: Budget 2024: ಡಿ.ಕೆ. ಸುರೇಶ್ ‘ಭಾರತ ವಿಭಜನೆ’‌ ಹೇಳಿಕೆ; ಸಿಎಂ ಸಿದ್ದರಾಮಯ್ಯ ವಿರೋಧ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Ghuspaithiya Hindi Movie: ರಮೇಶ್ ರೆಡ್ಡಿ ನಿರ್ಮಾಣದ ʼಘುಸ್ಪೈಥಿಯಾʼ ಹಿಂದಿ ಸಿನಿಮಾ ಆ. 9ರಂದು ತೆರೆಗೆ

Ghuspaithia Hindi movie: ಕನ್ನಡ ಚಿತ್ರರಂಗದಲ್ಲಿ ‘ಉಪ್ಪು ಹುಳಿ ಖಾರʼ, ‘ನಾತಿಚರಾಮಿʼ, ‘ಪಡ್ಡೆಹುಲಿʼ, ‘100’, ‘ಗಾಳಿಪಟ 2’ ಚಿತ್ರಗಳನ್ನು ನಿರ್ಮಿಸಿರುವ ಹಾಗೂ ಪ್ರಸ್ತುತ ಬಹು ನಿರೀಕ್ಷಿತ “45” ಚಿತ್ರವನ್ನು ನಿರ್ಮಿಸುತ್ತಿರುವ ನಿರ್ಮಾಪಕ ರಮೇಶ್ ರೆಡ್ಡಿ ಅವರು ಬಾಲಿವುಡ್ ನಲ್ಲಿ “ಘುಸ್ಪೈಥಿಯಾ” ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸೈಬರ್ ಕ್ರೈಮ್ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಮುಂಬೈನಲ್ಲಿ ಅದ್ಧೂರಿಯಾಗಿ ನೆರವೇರಿತು.

VISTARANEWS.COM


on

Ghuspaithia Hindi movie release on August 9
Koo

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ‘ಉಪ್ಪು ಹುಳಿ ಖಾರʼ, ‘ನಾತಿಚರಾಮಿʼ, ‘ಪಡ್ಡೆಹುಲಿʼ, ‘100’, ‘ಗಾಳಿಪಟ 2’ ಚಿತ್ರಗಳನ್ನು ನಿರ್ಮಿಸಿರುವ ಹಾಗೂ ಪ್ರಸ್ತುತ ಬಹು ನಿರೀಕ್ಷಿತ “45” ಚಿತ್ರವನ್ನು ನಿರ್ಮಿಸುತ್ತಿರುವ ನಿರ್ಮಾಪಕ ರಮೇಶ್ ರೆಡ್ಡಿ ಅವರು ಬಾಲಿವುಡ್ ನಲ್ಲಿ “ಘುಸ್ಪೈಥಿಯಾ” ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಮೇಶ್ ರೆಡ್ಡಿ, ಜ್ಯೋತಿಕ ಶೆಣೈ ಹಾಗೂ ಮಂಜರಿ ಸುಸಿ ಗಣೇಶನ್ ನಿರ್ಮಿಸಿರುವ ಈ ಚಿತ್ರವನ್ನು ಸುಸಿ ಗಣೇಶನ್ ನಿರ್ದೇಶಿಸಿದ್ದಾರೆ.

ಸೈಬರ್ ಕ್ರೈಮ್ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಮುಂಬೈನಲ್ಲಿ ಅದ್ಧೂರಿಯಾಗಿ ನೆರವೇರಿತು.

ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ಮಾಪಕ ರಮೇಶ್ ರೆಡ್ಡಿ, ಈ ಚಿತ್ರಕ್ಕೆ ನಿಮ್ಮೆಲ್ಲರ ಸಹಕಾರವಿರಲಿ. ಮುಂದೆ ಕೂಡ ಹಿಂದಿ ಚಿತ್ರಗಳನ್ನು ನಿರ್ಮಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Paris Olympic: ರೋಯಿಂಗ್​ನಲ್ಲಿ ಶುಭ ಸುದ್ದಿ; ಶೂಟಿಂಗ್​ನಲ್ಲಿ ನಿರಾಸೆ ಮೂಡಿಸಿದ ಮಿಶ್ರ ತಂಡ

ಆಗಸ್ಟ್ 9ರಂದು AA ಫಿಲಂಸ್ ಮೂಲಕ ಬಿಡುಗಡೆಯಾಗಲಿರುವ ಈ ಚಿತ್ರದ ತಾರಾಬಳಗದಲ್ಲಿ ವಿನೀತ್ ಕುಮಾರ್ ಸಿಂಗ್, ಊರ್ವಶಿ ರೌಟೇಲ, ಅಕ್ಷಯ್ ಒಬೆರಾಯ್ ಮುಂತಾದವರಿದ್ದಾರೆ.

Continue Reading

ದೇಶ

Kanwar Yatra: ಕನ್ವರ್ ಯಾತ್ರೆ ಮಾರ್ಗದಲ್ಲಿನ ಮಸೀದಿ ಕಾಣದಂತೆ ಪರದೆ; ವ್ಯಾಪಕ ವಿರೋಧದ ಬಳಿಕ ತೆರವು

Kanwar Yatra: ಸಂಭಾವ್ಯ ಗಲಭೆಗಳನ್ನು ತಪ್ಪಿಸಲು ಉತ್ತರಾಖಂಡದ ಹರಿದ್ವಾರದ ಕನ್ವರ್ ಯಾತ್ರೆ ಮಾರ್ಗದಲ್ಲಿನ ಎರಡು ಮಸೀದಿಗಳು ಮತ್ತು ಮಝಾರ್​​ (ಸಮಾಧಿ)ಗಳ ಮುಂಭಾಗಗಳನ್ನು ಶುಕ್ರವಾರ ಬಿಳಿ ಬಟ್ಟೆಯ ದೊಡ್ಡ ಹಾಳೆಗಳಿಂದ ಮುಚ್ಚಲಾಗಿತ್ತು. ಆದಾಗ್ಯೂ ಆಕ್ಷೇಪಣೆಗಳ ನಂತರ ಸಂಜೆಯ ವೇಳೆಗೆ ಹಾಳೆಗಳನ್ನು ತೆಗೆದು ಹಾಕಲಾಯಿತು. ಜ್ವಾಲಾಪುರ ಪ್ರದೇಶದಲ್ಲಿರುವ ಮಸೀದಿಗಳು ಮತ್ತು ಮಝಾರ್‌ಗ​ಳ ಮುಂದೆ ಬಿದಿರಿನ ಅಟ್ಟಣಿಗೆಗಳ ಮೇಲೆ ಹಾಳೆಗಳನ್ನು ನೇತು ಹಾಕಲಾಗಿತ್ತು.

VISTARANEWS.COM


on

Kanwar Yatra
Koo

ಡೆಹ್ರಾಡೂನ್‌: ಸಂಭಾವ್ಯ ಗಲಭೆಗಳನ್ನು ತಪ್ಪಿಸಲು ಉತ್ತರಾಖಂಡ (Uttarakhand)ದ ಹರಿದ್ವಾರ (Haridwar)ದ ಕನ್ವರ್ ಯಾತ್ರೆ (Kanwar Yatra) ಮಾರ್ಗದಲ್ಲಿನ ಎರಡು ಮಸೀದಿಗಳು ಮತ್ತು ಮಝಾರ್​​ (ಸಮಾಧಿ)ಗಳ ಮುಂಭಾಗಗಳನ್ನು ಶುಕ್ರವಾರ ಬಿಳಿ ಬಟ್ಟೆಯ ದೊಡ್ಡ ಹಾಳೆಗಳಿಂದ ಮುಚ್ಚಲಾಗಿತ್ತು. ಆದಾಗ್ಯೂ ಆಕ್ಷೇಪಣೆಗಳ ನಂತರ ಸಂಜೆಯ ವೇಳೆಗೆ ಹಾಳೆಗಳನ್ನು ತೆಗೆದು ಹಾಕಲಾಯಿತು.

ಜ್ವಾಲಾಪುರ ಪ್ರದೇಶದಲ್ಲಿರುವ ಮಸೀದಿಗಳು ಮತ್ತು ಮಝಾರ್‌ಗ​ಳ ಮುಂದೆ ಬಿದಿರಿನ ಅಟ್ಟಣಿಗೆಗಳ ಮೇಲೆ ಹಾಳೆಗಳನ್ನು ನೇತು ಹಾಕಲಾಗಿತ್ತು. ಈ ಕ್ರಮದ ಬಗ್ಗೆ ಪ್ರತಿಕ್ರಿಯಿಸಿದ್ದ ಮಸೀದಿಯ ಮೌಲಾನಾ ಮತ್ತು ಮಝಾರ್​​ನ ಉಸ್ತುವಾರಿಗಳು ಈ ಬಗ್ಗೆ ಯಾವುದೇ ಆಡಳಿತಾತ್ಮಕ ಆದೇಶದ ಬಗ್ಗೆ ನಮಗೆ ತಿಳಿದಿಲ್ಲ. ಕನ್ವರ್ ಯಾತ್ರೆಯ ಸಮಯದಲ್ಲಿ ಇಂತಹ ಕ್ರಮವನ್ನು ತೆಗೆದುಕೊಳ್ಳುತ್ತಿರುವುದು ಇದೇ ಮೊದಲು ಎಂದು ಹೇಳಿದ್ದರು.

ಹರಿದ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರತಿಕ್ರಿಯೆಗೆ ಲಭಿಸಿಲ್ಲ. ಇತ್ತ ಕ್ಯಾಬಿನೆಟ್ ಸಚಿವ ಸತ್ಪಾಲ್ ಮಹಾರಾಜ್ ಈ ಬಗ್ಗೆ ಮಾತನಾಡಿ, ಶಾಂತಿ, ಸುವ್ಯವಸ್ಥೆ ಕಾಪಾಡಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದರು. “ಸಂಭಾವ್ಯ ತೊಂದರೆಯನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ. ಇದು ಅಂತಹ ದೊಡ್ಡ ವಿಷಯವಲ್ಲ. ಕಟ್ಟಡಗಳು ನಿರ್ಮಾಣ ಹಂತದಲ್ಲಿದ್ದಾಗ ನಾವು ಅದನ್ನು ಮುಚ್ಚುತ್ತೇವೆʼʼ ಎಂದು ಹೇಳಿದ್ದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ವ್ಯಾಪಕ ವಿರೋಧ

ಸ್ಥಳೀಯರು ಮತ್ತು ರಾಜಕಾರಣಿಗಳು ಸೇರಿದಂತೆ ಹಲವರು ಈ ಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಬಳಿಕ ಬಟ್ಟೆಯ ಹಾಳೆಗಳನ್ನು ತೆಗೆದು ಹಾಕಿತು. “ಪರದೆಗಳನ್ನು ತೆಗೆದುಹಾಕಲು ರೈಲ್ವೆ ಪೊಲೀಸ್ ಠಾಣೆಯಿಂದ ನಮಗೆ ಆದೇಶ ಬಂದಿದೆ. ಅದಕ್ಕಾಗಿಯೇ ನಾವು ಇವುಗಳನ್ನು ತೆಗೆದುಹಾಕಿದ್ದೇವೆ” ಎಂದು ವಿಶೇಷ ಪೊಲೀಸ್ ಅಧಿಕಾರಿ (SPO) ಡ್ಯಾನಿಶ್ ಅಲಿ ತಿಳಿಸಿದರು.

ನಾಯಕರು ಹೇಳಿದ್ದೇನು?

ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಸಚಿವ ನಯೀಮ್ ಖುರೇಷಿ ಅವರು ತಮ್ಮ ಜೀವನದಲ್ಲಿ ಇಂತಹ ಕ್ರಮ ನೋಡಿದ್ದು ಇದು ಮೊದಲ ಬಾರಿ ಎಂದು ವ್ಯಂಗ್ಯವಾಡಿದ್ದಾರೆ. “ನಾವು ಮುಸ್ಲಿಮರು ಯಾವಾಗಲೂ ಕನ್ವರ್ ಜಾತ್ರೆಗೆ ಶಿವಭಕ್ತರನ್ನು ಸ್ವಾಗತಿಸುತ್ತೇವೆ ಮತ್ತು ಅವರಿಗೆ ವಿವಿಧ ಸ್ಥಳಗಳಲ್ಲಿ ಉಪಹಾರವನ್ನು ವ್ಯವಸ್ಥೆ ಮಾಡುತ್ತೇವೆ. ಇದು ಹರಿದ್ವಾರದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಸಾಮರಸ್ಯಕ್ಕೆ ಉದಾಹರಣೆ. ಮಸೀದಿಯನ್ನು ಮುಚ್ಚುವ ಸಂಪ್ರದಾಯ ಎಂದಿಗೂ ಇರಲಿಲ್ಲ” ಎಂದು ಹೇಳಿದ್ದಾರೆ.

ʼʼಕನ್ವರ್ ಮೇಳ ಪ್ರಾರಂಭವಾಗುವ ಮೊದಲು ಆಡಳಿತವು ಸಭೆ ನಡೆಸಿದ್ದು, ಹಿಂದೂ ಮತ್ತು ಮುಸ್ಲಿಂ ಸಮುದಾಯದ ಸದಸ್ಯರನ್ನು ಎಸ್‌ಪಿಒಗಳನ್ನಾಗಿ ಮಾಡಲಾಗಿತ್ತು. ಆ ವೇಳೆ ಧಾರ್ಮಿಕ ಕಟ್ಟಡಗಳನ್ನು ಮುಚ್ಚುವ ಬಗ್ಗೆ ಯಾರೂ ಮಾತನಾಡಿಲ್ಲʼʼ ಎಂದು ಮಝಾರ್‌ನ ಉಸ್ತುವಾರಿ ಶಕೀಲ್ ಅಹ್ಮದ್ ಹೇಳಿದ್ದಾರೆ. ʼʼಕನ್ವರ್‌ ಯಾತ್ರಾರ್ಥಿಗಳು ವಿಶ್ರಾಂತಿ ಪಡೆಯಲು ಮಸೀದಿಗಳು ಮತ್ತು ಮಝಾರ್‌ನ ಹೊರಗಿನ ಮರಗಳ ನೆರಳಿನಲ್ಲಿ ನಿಲ್ಲುತ್ತಾರೆ. ಇದರಿಂದ ಯಾವುದೇ ಸಮಸ್ಯೆಯಾಗಿಲ್ಲʼʼ ಎಂದಿದ್ದಾರೆ.

ಇದನ್ನೂ ಓದಿ: Kanwar Yatra: ಕನ್ವರ್‌ ಯಾತ್ರೆ ವೇಳೆ ನಾಮ ಫಲಕ ಕಡ್ಡಾಯ; ಸುಪ್ರೀಂಕೋರ್ಟ್‌ನಿಂದ ಮತ್ತೊಂದು ಮಹತ್ವದ ಆದೇಶ

ಕಾಂಗ್ರೆಸ್ ಮುಖಂಡ ರಾವ್ ಅಫಾಕ್ ಅಲಿ ಮಾತನಾಡಿ, ʼʼಮಸೀದಿಗಳು ಮತ್ತು ಮಝಾರ್‌ ಮುಚ್ಚುವ ಆಡಳಿತದ ನಿರ್ಧಾರ ಆಶ್ಚರ್ಯಕರವಾಗಿತ್ತುʼʼ ಎಂದು ಹೇಳಿದ್ದಾರೆ.

Continue Reading

ದೇಶ

Mamata Banerjee: ಮಾತನಾಡಲು 5 ನಿಮಿಷ ಮಾತ್ರ ಅವಕಾಶ ನೀಡಿದರು: ನೀತಿ ಆಯೋಗದ ಸಭೆಯಿಂದ ಹೊರ ಬಂದ ಮಮತಾ ಬ್ಯಾನರ್ಜಿ ಕಿಡಿ

Mamata Banerjee: ನವದೆಹಲಿಯಲ್ಲಿ ನಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ನೀತಿ ಆಯೋಗದ 9ನೇ ಆಡಳಿತ ಮಂಡಳಿ ಸಭೆಯಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೊರ ನಡೆದಿದ್ದಾರೆ. ʼʼನನಗೆ ಕೇವಲ ಐದು ನಿಮಿಷಗಳ ಕಾಲ ಮಾತನಾಡಲು ಅವಕಾಶ ನೀಡಲಾಯಿತು. ಕೆಲವರು ನನ್ನ ಮುಂದೆ 10-20 ನಿಮಿಷಗಳ ಕಾಲ ಮಾತನಾಡಿದರು” ಎಂದು ಮಮತಾ ಬ್ಯಾನರ್ಜಿ ಹೊರಬಂದ ನಂತರ ಆರೋಪಿಸಿದರು.

VISTARANEWS.COM


on

Mamata Banerjee
Koo

ನವದೆಹಲಿ: ಶನಿವಾರ (ಜುಲೈ 27) ನವದೆಹಲಿಯಲ್ಲಿ ನಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅಧ್ಯಕ್ಷತೆಯ ನೀತಿ ಆಯೋಗ (NITI Aayog)ದ 9ನೇ ಆಡಳಿತ ಮಂಡಳಿ ಸಭೆಯಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಹೊರ ನಡೆದಿದ್ದಾರೆ.

“ರಾಜ್ಯ ಸರ್ಕಾರಗಳ ವಿರುದ್ಧ ಕೇಂದ್ರ ಸರ್ಕಾರ ತಾರತಮ್ಯ ಮಾಡಬಾರದು ಎಂದು ಸಭೆಯಲ್ಲಿ ನಾನು ಹೇಳಿದೆ. ನಾನು ಮಾತನಾಡಲು ಬಯಸಿದ್ದೆ. ಆದರೆ ನನ್ನ ಮೈಕ್ ಮ್ಯೂಟ್ ಆಗಿತ್ತು. ನನಗೆ ಕೇವಲ ಐದು ನಿಮಿಷಗಳ ಕಾಲ ಮಾತನಾಡಲು ಅವಕಾಶ ನೀಡಲಾಯಿತು. ಕೆಲವರು ನನ್ನ ಮುಂದೆ 10-20 ನಿಮಿಷಗಳ ಕಾಲ ಮಾತನಾಡಿದರು” ಎಂದು ಮಮತಾ ಬ್ಯಾನರ್ಜಿ ಹೊರಬಂದ ನಂತರ ಸುದ್ದಿಗಾರರಿಗೆ ತಿಳಿಸಿದರು.

“ಪ್ರತಿಪಕ್ಷದಿಂದ ನಾನು ಮಾತ್ರ ಭಾಗವಹಿಸಿದ್ದೆ. ಆದರೆ ನನಗೆ ಮಾತನಾಡಲು ಅವಕಾಶ ನೀಡಲಿಲ್ಲ. ಇದು ಕೇಂದ್ರ ಮಾಡಿದ ಅವಮಾನ” ಎಂದು ಅವರು ದೂರಿದರು. ಪ್ರತಿಪಕ್ಷ ಆಡಳಿತದ ಹಲವು ರಾಜ್ಯಗಳು ಸಭೆಯನ್ನು ಬಹಿಷ್ಕರಿಸುವುದಾಗಿ ಈ ಹಿಂದೆಯೇ ಘೋಷಿಸಿದ್ದವು. ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಮಾಚಲ ಪ್ರದೇಶದ ಸುಖ್ವಿಂದರ್ ಸಿಂಗ್ ಸುಖು ಮತ್ತು ತೆಲಂಗಾಣದ ರೇವಂತ್ ರೆಡ್ಡಿ ಅವರು 2024ರ ಕೇಂದ್ರ ಬಜೆಟ್‌ನಲ್ಲಿ ತಮ್ಮ ರಾಜ್ಯಗಳ ವಿರುದ್ಧ ಪಕ್ಷಪಾತ ಧೋರಣೆ ತೋರಲಾಗಿದೆ ಎಂದು ಆರೋಪಿಸಿ ಸಭೆಯಲ್ಲಿ ಭಾಗವಹಿಸಲಿಲ್ಲ.

ಇನ್ನು ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್, ಕೇರಳ ಮುಖ್ಯಮಂತ್ರಿ, ಎಡಪಕ್ಷದ ನಾಯಕ ಪಿಣರಾಯಿ ವಿಜಯನ್ ಮತ್ತು ಆಮ್ ಆದ್ಮಿ ಪಕ್ಷ ನೇತೃತ್ವದ ಪಂಜಾಬ್ ಮತ್ತು ದೆಹಲಿ ಸರ್ಕಾರಗಳು ಸಹ ಸಭೆಯನ್ನು ಬಹಿಷ್ಕರಿಸಿವೆ. ತಮ್ಮ ಧ್ವನಿಯನ್ನು ಸಾಮಾನ್ಯ ವೇದಿಕೆಯಲ್ಲಿ ಎತ್ತಬೇಕು ಎನ್ನುವ ಕಾರಣಕ್ಕೆ ಸಭೆಯಲ್ಲಿ ಭಾಗವಹಿಸುತ್ತಿರುವುದಾಗಿ ಆರಂಭದಲ್ಲಿ ಮಮತಾ ಬ್ಯಾನರ್ಜಿ ತಿಳಿಸಿದ್ದರು. ಆದರೆ ಇದೀಗ ಮಾತನಾಡಲು ಅವಕಾಶವೇ ಸಿಕ್ಕಿಲ್ಲ ಎಂದು ಹೊರ ಬಂದಿದ್ದಾರೆ.

“ನೀತಿ ಆಯೋಗದ ಆಡಳಿತ ಮಂಡಳಿ ಸಭೆಯು ವಿಕಸಿತ್ ಭಾರತ್ @2047ರ ವಿಷನ್ ಡಾಕ್ಯುಮೆಂಟ್‌ನ ಅಪ್ರೋಚ್ ಪೇಪರ್ ಅನ್ನು ಚರ್ಚಿಸಲಿದೆ. ಸಭೆಯು ವಿಕಸಿತ್ ಭಾರತ್ @2047ರ ಗುರಿಯನ್ನು ಸಾಧಿಸುವಲ್ಲಿ ರಾಜ್ಯಗಳ ಪಾತ್ರದ ಕುರಿತು ವಿವರವಾದ ಚರ್ಚೆಗಳನ್ನು ಮಾಡಲಿದೆʼʼ ಎಂದು ಸಭೆಯ ಮುನ್ನ ಸರ್ಕಾರದ ಹೇಳಿಕೆ ನೀಡಿತ್ತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಮುಖ್ಯ ಕಾರ್ಯದರ್ಶಿಗಳ 3ನೇ ರಾಷ್ಟ್ರೀಯ ಸಮ್ಮೇಳನದ ಶಿಫಾರಸುಗಳ ಬಗ್ಗೆಯೂ ಸಭೆ ಗಮನಹರಿಸಲು ನಿರ್ಧರಿಸಲಾಗಿದೆ ಎಂದೂ ತಿಳಿಸಿತ್ತು.

ಇದನ್ನೂ ಓದಿ: DK Shivakumar: ನೀತಿಯೇ ಇಲ್ಲದಿರುವಾಗ, ನೀತಿ ಆಯೋಗದ ಸಭೆಗೆ ಹೋಗಬೇಕೆ: ಡಿ.ಕೆ. ಶಿವಕುಮಾರ್

ಸಮ್ಮೇಳನದಲ್ಲಿ ಐದು ಪ್ರಮುಖ ವಿಷಯಗಳ ಬಗ್ಗೆ ಗಮನ ಕೇಂದ್ರೀಕರಿಸಿದೆ- ಕುಡಿಯುವ ನೀರು: ಪ್ರಮಾಣ ಮತ್ತು ಗುಣಮಟ್ಟ, ವಿದ್ಯುತ್: ಗುಣಮಟ್ಟ ಮತ್ತು ವಿಶ್ವಾಸಾರ್ಹತೆ, ಆರೋಗ್ಯ: ಕೈಗೆಟಕುವಿಕೆ ಮತ್ತು ಆರೈಕೆಯ ಗುಣಮಟ್ಟ, ಶಾಲಾ ಶಿಕ್ಷಣ: ಕೈಗೆಟಕುವಿಕೆ ಮತ್ತು ಗುಣಮಟ್ಟ ಮತ್ತು ಭೂಮಿ ಮತ್ತು ಆಸ್ತಿ: ಪ್ರವೇಶ, ಡಿಜಿಟಲೀಕರಣ, ನೋಂದಣಿ. ಜತೆಗೆ ಸ್ವಾತಂತ್ರ್ಯದ 100ನೇ ವರ್ಷವಾದ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಸವನ್ನಾಗಿಸುವ ಗುರಿ ಹೊಂದಲಾಗಿದೆ.

Continue Reading

ವಾಣಿಜ್ಯ

Mukesh Ambani: ಬಜೆಟ್ ದಿನ 9,200 ಕೋಟಿ ರೂ. ಕಳೆದುಕೊಂಡಿದ್ದ ಮುಕೇಶ್ ಅಂಬಾನಿ!

ಕೇಂದ್ರ ಬಜೆಟ್‌ ಮಂಡನೆಯಾದ ದಿನ ಷೇರು ಮಾರುಕಟ್ಟೆಯು ಸಣ್ಣ ಕುಸಿತದೊಂದಿಗೆ ಕ್ಲೋಸ್‌ ಆಗಿತ್ತು. ಆದರೆ ಇದು ವಹಿವಾಟಿನ ವೇಳೆ ಬಹುದೊಡ್ಡ ಪರಿಣಾಮವನ್ನು ಬೀರಿತ್ತು. ಕೆಲವು ಷೇರುಗಳು ತೀವ್ರವಾಗಿ ಕುಸಿದರೆ, ಇನ್ನು ಸಣ್ಣ ಪ್ರಮಾಣದಲ್ಲಿ ಏರಿಕೆ ಕಂಡವು. ಇದು ಮುಕೇಶ್ ಅಂಬಾನಿ (Mukesh Ambani) ಸೇರಿದಂತೆ ದೇಶದ ದೊಡ್ಡ ಬಿಲಿಯನೇರ್‌ಗಳ ಸಂಪತ್ತಿನ ಮೇಲೆ ಭಾರೀ ಪರಿಣಾಮವನ್ನು ಬೀರಿತು.

VISTARANEWS.COM


on

By

Mukesh Ambani
Koo

ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವನ್ನು (Ananth Ambani and Radhika Merchant’s wedding) ಅದ್ಧೂರಿಯಾಗಿ ನಡೆಸಿ ವಿಶ್ವದ ಗಮನ ಸೆಳೆಯುವಂತೆ ಮಾಡಿದ್ದ ರಿಲಯನ್ಸ್ ಉದ್ಯಮಿ ಮುಕೇಶ್ ಅಂಬಾನಿ (businessman Mukesh Ambani) 2024ರ ಕೇಂದ್ರ ಬಜೆಟ್ (Union Budget 2024) ಮಂಡನೆಯಾದ ದಿನ ಷೇರು ಮಾರುಕಟ್ಟೆಯಲ್ಲಿ ಆದ ಏರುಪೇರಿನಿಂದಾಗಿ ಬರೋಬ್ಬರಿ 9,200 ಕೋಟಿ ರೂ. ಕಳೆದುಕೊಂಡಿದ್ದರು!

ಕೇಂದ್ರ ಬಜೆಟ್‌ ದಿನ ಷೇರು ಮಾರುಕಟ್ಟೆಯು ಸಣ್ಣ ಕುಸಿತದೊಂದಿಗೆ ಕ್ಲೋಸ್‌ ಆಗಿತ್ತು. ಆದರೆ ಇದು ವಹಿವಾಟಿನ ವೇಳೆ ಬಹುದೊಡ್ಡ ಪರಿಣಾಮವನ್ನು ಬೀರಿತ್ತು. ಈ ಸಂದರ್ಭದಲ್ಲಿ ವಹಿವಾಟಿನಲ್ಲಿ ಗಮನಾರ್ಹವಾದ ಏರಿಳಿತಗಳು ಕಂಡುಬಂದವು. ಕೆಲವು ಷೇರುಗಳು ತೀವ್ರವಾಗಿ ಕುಸಿದರೆ ಇನ್ನು ಸಣ್ಣ ಪ್ರಮಾಣದಲ್ಲಿ ಏರಿಕೆ ಕಂಡವು. ಇದು ದೇಶದ ದೊಡ್ಡ ಬಿಲಿಯನೇರ್‌ಗಳ ಸಂಪತ್ತಿನ ಮೇಲೆ ಭಾರೀ ಪರಿಣಾಮವನ್ನು ಬೀರಿತು.

ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ನಿವ್ವಳ ಮೌಲ್ಯದಲ್ಲಿ ಈ ದಿನ ಗಣನೀಯ ಇಳಿಕೆಯಾಗಿದೆ. ಬಜೆಟ್ ದಿನದಂದು, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಏರುವ ನಿರೀಕ್ಷೆ ಇತ್ತು. ಇದರಿಂದ ಮುಕೇಶ್ ಅಂಬಾನಿ ಅವರ ನಿವ್ವಳ ಮೌಲ್ಯವನ್ನು ಹೆಚ್ಚಾಗುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಮಾರುಕಟ್ಟೆಯಲ್ಲಿ ಇದು ವ್ಯತಿರಿಕ್ತ ಪರಿಣಾಮ ಬೀರಿತು.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಅಂಬಾನಿ ಅವರ ನಿವ್ವಳ ಮೌಲ್ಯವು 1.10 ಬಿಲಿಯನ್ ಡಾಲರ್‌ ಅಂದರೆ ಸರಿಸುಮಾರು 9200 ಕೋಟಿ ರೂ. ಗಳಷ್ಟು ಕಡಿಮೆಯಾಗಿದೆ. ಈ ಕುಸಿತದ ಹೊರತಾಗಿಯೂ ಈ ವರ್ಷದ ಆರಂಭದಲ್ಲಿ ಅವರ ಸಂಪತ್ತು 16 ಶತಕೋಟಿ ಡಾಲರ್‌ಗಳಷ್ಟು ಹೆಚ್ಚಾಗಿತ್ತು.

ಕಳೆದ ಕೆಲವು ದಿನಗಳಲ್ಲಿ ಅಂಬಾನಿ ಅವರ ನಿವ್ವಳ ಮೌಲ್ಯವು 7 ಶತಕೋಟಿ ಡಾಲರ್‌ಗಿಂತ ಕಡಿಮೆಯಾಗಿದೆ. ಜುಲೈ 19ರಂದು ಅವರ ನಿವ್ವಳ ಮೌಲ್ಯವು 119 ಶತಕೋಟಿ ಡಾಲರ್ ಆಗಿತ್ತು. ಆದರೆ ಅದು ಈಗ 112 ಶತಕೋಟಿ ಡಾಲರ್‌ಗೆ ಇಳಿದಿದೆ ಎನ್ನಲಾಗಿದೆ.

ಇದನ್ನೂ ಓದಿ: Jio Air Fiber: ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಘೋಷಿಸಿದ ಜಿಯೊ! ಎಲ್ಲಿಯವರೆಗೆ ಈ ಆಫರ್‌?

ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಇತ್ತೀಚೆಗೆ ಕುಸಿಯುತ್ತಲೇ ಇದ್ದು, ಮುಂದಿನ ದಿನಗಳಲ್ಲಿ ಅಂಬಾನಿ ಸಂಪತ್ತಿನಲ್ಲಿ ಮತ್ತಷ್ಟು ಕುಸಿತ ಉಂಟಾಗಬಹುದು ಎನ್ನಲಾಗಿದೆ.

Mukesh Ambani
Mukesh Ambani


ಇದಕ್ಕೆ ವ್ಯತಿರಿಕ್ತವಾಗಿ ಉದ್ಯಮಿ ಗೌತಮ್ ಅದಾನಿ ಅವರ ಸಂಪತ್ತು ಹೆಚ್ಚಳವಾಗಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಅದಾನಿ ಅವರ ನಿವ್ವಳ ಮೌಲ್ಯವು 751 ಮಿಲಿಯನ್ ಡಾಲರ್‌ಗಳು ಅಂದರೆ ಸರಿಸುಮಾರು 63 ಕೋಟಿ ರೂಪಾಯಿ ಹೆಚ್ಚಳವಾಗಿದೆ. ಅವರ ಸಂಪತ್ತು 102 ಬಿಲಿಯನ್ ಡಾಲರ್‌ ಗಳನ್ನು ತಲುಪಿದೆ. ಈ ವರ್ಷ ಅವರ ಸಂಪತ್ತು 17.8 ಬಿಲಿಯನ್ ಡಾಲರ್‌ಗಳಷ್ಟು ಏರಿಕೆಯಾಗಿದೆ.

Continue Reading
Advertisement
Money Guide
ಮನಿ-ಗೈಡ್17 mins ago

Money Guide: ಐಟಿಆರ್ ಇನ್ನೂ ಸಲ್ಲಿಸಿಲ್ಲವೇ? ಕೊನೆಯ ಕ್ಷಣದ ಗೊಂದಲ ತಪ್ಪಿಸಲು ಈ ಟಿಪ್ಸ್‌ ಫಾಲೋ ಮಾಡಿ

Womens Asia Cup Final
ಕ್ರೀಡೆ40 mins ago

Womens Asia Cup Final: 8ನೇ ಪ್ರಶಸ್ತಿ ನಿರೀಕ್ಷೆಯಲ್ಲಿ ಭಾರತ; ನಾಳೆ ಫೈನಲ್​

dk shivakumar hd kumarswamy
ಪ್ರಮುಖ ಸುದ್ದಿ44 mins ago

DK Shivakumar: ನಮ್ಮ ಸರ್ವನಾಶವೇ ಕುಮಾರಸ್ವಾಮಿ ಅವರ ಆಲೋಚನೆ: ಡಿಸಿಎಂ ಡಿಕೆ ಶಿವಕುಮಾರ್

karnataka high court
ಪ್ರಮುಖ ಸುದ್ದಿ1 hour ago

Karnataka High Court: ʼಚಿಲ್ಲರೆ ಅಂಗಡಿಯವರಲ್ಲೂ ಯುಪಿಐ ಇದೆ, ನಿಮ್ಮಲ್ಲೇಕಿಲ್ಲ?ʼ ಬೆಸ್ಕಾಂಗೆ ಹೈಕೋರ್ಟ್‌ ತರಾಟೆ

Ghuspaithia Hindi movie release on August 9
ಕರ್ನಾಟಕ1 hour ago

Ghuspaithiya Hindi Movie: ರಮೇಶ್ ರೆಡ್ಡಿ ನಿರ್ಮಾಣದ ʼಘುಸ್ಪೈಥಿಯಾʼ ಹಿಂದಿ ಸಿನಿಮಾ ಆ. 9ರಂದು ತೆರೆಗೆ

2nd International Airport in Bengaluru Another round of discussion was held by Minister MB Patil
ಕರ್ನಾಟಕ1 hour ago

MB Patil: ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ; ಪರಿಣತರ ಜತೆ ಎಂ.ಬಿ.ಪಾಟೀಲ್‌ ಸಮಾಲೋಚನೆ

Kanwar Yatra
ದೇಶ2 hours ago

Kanwar Yatra: ಕನ್ವರ್ ಯಾತ್ರೆ ಮಾರ್ಗದಲ್ಲಿನ ಮಸೀದಿ ಕಾಣದಂತೆ ಪರದೆ; ವ್ಯಾಪಕ ವಿರೋಧದ ಬಳಿಕ ತೆರವು

ramanagara news
ರಾಮನಗರ2 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

pramod mutalik dog meat
ಪ್ರಮುಖ ಸುದ್ದಿ2 hours ago

Dog Meat: 15 ವರ್ಷದಿಂದ ಅಬ್ದುಲ್ ರಜಾಕ್ ನಾಯಿ ಮಾಂಸ ತಿನ್ನಿಸುತ್ತಿದ್ದಾರೆ: ಪ್ರಮೋದ್‌ ಮುತಾಲಿಕ್‌ ಶಾಕಿಂಗ್‌ ಹೇಳಿಕೆ

Shiva Rajkumar played the dupe for saikumar in film
ಸ್ಯಾಂಡಲ್ ವುಡ್2 hours ago

Shiva Rajkumar: ಸಾಯಿಕುಮಾರ್‌ಗೆ ಶಿವಣ್ಣ ಡ್ಯೂಪ್ ಆಗಿದ್ದ ಸಿನಿಮಾ ಯಾವುದು? ಆ ದೃಶ್ಯಕ್ಕೆ ಅಭಿಮಾನಿಗಳಿಂದ ಶಿಳ್ಳೆ, ಚಪ್ಪಾಳೆ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

ramanagara news
ರಾಮನಗರ2 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ3 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ21 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ22 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ23 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ1 day ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

ಟ್ರೆಂಡಿಂಗ್‌