Site icon Vistara News

UP Minister Resigns: ಯೋಗಿ ಸರ್ಕಾರದಿಂದ ಒಂದು ವಿಕೆಟ್‌ ಪತನ; ಸಚಿವೆ ಸೋನಮ್‌ ಚಿಶ್ಟಿ ರಾಜೀನಾಮೆ

UP Minister Resigns

ಲಖನೌ:ಲೋಕಸಭೆ ಚುನಾವಣೆ(Lok Sabha Election)ಯಲ್ಲಿ ಹೀನಾಯ ಸೋಲಿನ ಬಳಿಕ ಉತ್ತರಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ದಿನೇ ದಿನೇ ಹೆಚ್ಚಾಗುತ್ತಿದೆ. ಸಿಎಂ ಯೋಗಿ ಆದಿತ್ಯಾನಾಥ್‌(Yogi Adityanath) ಮತ್ತು ಡಿಸಿಎಂ ಕೇಶವ್‌ ಪ್ರಸಾದ್‌ ಮೌರ್ಯ(Keshav Prasad Mourya) ನಡುವಿನ ಭಿನ್ನಮತದ ಬೆನ್ನಲ್ಲೇ ಉತ್ತರಪ್ರದೇಶ ಮಂಗಳಮುಖಿಯರ ಕಲ್ಯಾಣ ಮಂಡಳಿಯ ಉಪಾಧ್ಯಕ್ಷೆ, ಯೋಗಿ ಸರ್ಕಾರದ ಸಚಿವೆ(UP Minister Resigns) ಸೋನಮ್‌ ಚಿಶ್ಟಿ (Sonam Chishti) ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ಇಲಾಖೆಯಲ್ಲಿ ಎಗ್ಗಿಲ್ಲದೇ ಭ್ರಷ್ಟಾಚಾರ ನಡೆಯುತ್ತಿದೆ ಮತ್ತು ಅಧಿಕಾರಿಗಳು ತಮ್ಮ ಮಾತು ಕೇಳುತ್ತಿಲ್ಲ ಹೀಗಾಗಿ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಹೇಳಿದ್ದಾರೆ.

ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ಸೋನಂ ಕಿನ್ನರ್ ಎಂದೇ ಖ್ಯಾತರಾಗಿರುವ ಚಿಶ್ಟಿ ಅವರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸೋಲಿನ ಹೊಣೆಯನ್ನು ಹೊತ್ತುಕೊಂಡು ತಮ್ಮ ಆತ್ಮಸಾಕ್ಷಿಗೆ ಘಾಸಿಯಾಗಿರುವ ಕಾರಣ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.

“ವಿವಿಧ ಜಿಲ್ಲೆಗಳು/ಲೋಕಸಭಾ ಸ್ಥಾನಗಳಲ್ಲಿ ಭಾರತೀಯ ಜನತಾ ಪಕ್ಷದ ಸೋಲು ಮತ್ತು ಕಾರ್ಯಕ್ಷಮತೆಯ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಮತ್ತು ನಾನು MoS ಆಗಿ ಪಕ್ಷವನ್ನು ಬಲಪಡಿಸುವಲ್ಲಿ ವಿಫಲಳಾಗಿದ್ದೇನೆ. ನಾನು ರಾಜೀನಾಮೆ ನೀಡುತ್ತಿದ್ದೇನೆ. ಇದರ ನಂತರ, ನಾನು ಬಿಜೆಪಿಯ ಸಂಘಟನೆಯನ್ನು ಬಲಪಡಿಸಲು ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ ಮತ್ತು ಯುಪಿ ಬಿಜೆಪಿ ನನಗೆ ನೀಡುವ ಯಾವುದೇ ಜವಾಬ್ದಾರಿಯನ್ನು ಪೂರೈಸುತ್ತೇನೆ ಎಂದು ಬರೆದಿದ್ದಾರೆ.

ನನ್ನ ಇಲಾಖೆಯಲ್ಲಿ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆದಿರುವ ಕಾರಣ ನಾನು ರಾಜೀನಾಮೆ ನೀಡಿದ್ದೇನೆ. ನನ್ನ ಇಲಾಖೆಗೆ ಬಜೆಟ್ ಮಂಜೂರು ಮಾಡಿದಾಗ, ನನ್ನ ಒಪ್ಪಿಗೆಯಿಲ್ಲದೆ ಕೆಲವು ಕಾರ್ಯಗಳು ನಡೆದಿವೆ. ನನ್ನ ಆಡಳಿತ ಮಂಡಳಿಯಲ್ಲಿ ಸಿಬ್ಬಂದಿ ಇಲ್ಲ,’’ ಎಂದು ಹೇಳಿದರು.

“ಅಖಿಲೇಶ್ ಯಾದವ್ ಆಡಳಿತದಲ್ಲಿ ನನಗೆ ಮನೆ ಮಂಜೂರು ಮಾಡಲಾಗಿತ್ತು ಆದರೆ ಅದರ ನಿರ್ವಹಣೆಗೆ ತಗಲುವ ವೆಚ್ಚಕ್ಕೆ ಭಾರಿ ಬಿಲ್ ನೀಡಲಾಯಿತು. ನನಗೆ ಸರ್ಕಾರದಿಂದ ಮನೆ ಮಂಜೂರು ಮಾಡುವಾಗ, ಅದರ ನಿರ್ವಹಣೆಗೆ ಸರ್ಕಾರವೇ ವೆಚ್ಚವನ್ನು ಭರಿಸಬೇಕು ಎಂದು ಹೇಳಲಾಗಿತ್ತು. ಸರ್ಕಾರದ ಎಸ್ಟೇಟ್ ಇಲಾಖೆಯು ಸಮಾಜ ಕಲ್ಯಾಣ ಇಲಾಖೆ ವೆಚ್ಚವನ್ನು ಭರಿಸುವುದಾಗಿ ಹೇಳುತ್ತಿದೆ ಆದರೆ ಸಮಾಜ ಕಲ್ಯಾಣ ಇಲಾಖೆಯು ಯೋಗಿಜಿ (ಯೋಗಿ ಆದಿತ್ಯನಾಥ್ ಅವರ ಮುಖ್ಯಮಂತ್ರಿ ಕಚೇರಿ ಭರಿಸಲಿದೆ ಎಂದು ಹೇಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:Vinod Dondale: ಕನ್ನಡ ಕಿರುತೆರೆಯ ಖ್ಯಾತ ನಿರ್ದೇಶಕ ವಿನೋದ್ ದೊಂಡಾಲೆ ಆತ್ಮಹತ್ಯೆಗೆ ಶರಣು

Exit mobile version