UP Minister Resigns: ಯೋಗಿ ಸರ್ಕಾರದಿಂದ ಒಂದು ವಿಕೆಟ್‌ ಪತನ; ಸಚಿವೆ ಸೋನಮ್‌ ಚಿಶ್ಟಿ ರಾಜೀನಾಮೆ - Vistara News

ದೇಶ

UP Minister Resigns: ಯೋಗಿ ಸರ್ಕಾರದಿಂದ ಒಂದು ವಿಕೆಟ್‌ ಪತನ; ಸಚಿವೆ ಸೋನಮ್‌ ಚಿಶ್ಟಿ ರಾಜೀನಾಮೆ

UP Minister Resigns: ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ಸೋನಂ ಕಿನ್ನರ್ ಎಂದೇ ಖ್ಯಾತರಾಗಿರುವ ಚಿಶ್ಟಿ ಅವರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸೋಲಿನ ಹೊಣೆಯನ್ನು ಹೊತ್ತುಕೊಂಡು ತಮ್ಮ ಆತ್ಮಸಾಕ್ಷಿಗೆ ಘಾಸಿಯಾಗಿರುವ ಕಾರಣ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.

VISTARANEWS.COM


on

UP Minister Resigns
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಖನೌ:ಲೋಕಸಭೆ ಚುನಾವಣೆ(Lok Sabha Election)ಯಲ್ಲಿ ಹೀನಾಯ ಸೋಲಿನ ಬಳಿಕ ಉತ್ತರಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ದಿನೇ ದಿನೇ ಹೆಚ್ಚಾಗುತ್ತಿದೆ. ಸಿಎಂ ಯೋಗಿ ಆದಿತ್ಯಾನಾಥ್‌(Yogi Adityanath) ಮತ್ತು ಡಿಸಿಎಂ ಕೇಶವ್‌ ಪ್ರಸಾದ್‌ ಮೌರ್ಯ(Keshav Prasad Mourya) ನಡುವಿನ ಭಿನ್ನಮತದ ಬೆನ್ನಲ್ಲೇ ಉತ್ತರಪ್ರದೇಶ ಮಂಗಳಮುಖಿಯರ ಕಲ್ಯಾಣ ಮಂಡಳಿಯ ಉಪಾಧ್ಯಕ್ಷೆ, ಯೋಗಿ ಸರ್ಕಾರದ ಸಚಿವೆ(UP Minister Resigns) ಸೋನಮ್‌ ಚಿಶ್ಟಿ (Sonam Chishti) ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ಇಲಾಖೆಯಲ್ಲಿ ಎಗ್ಗಿಲ್ಲದೇ ಭ್ರಷ್ಟಾಚಾರ ನಡೆಯುತ್ತಿದೆ ಮತ್ತು ಅಧಿಕಾರಿಗಳು ತಮ್ಮ ಮಾತು ಕೇಳುತ್ತಿಲ್ಲ ಹೀಗಾಗಿ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಹೇಳಿದ್ದಾರೆ.

ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ಸೋನಂ ಕಿನ್ನರ್ ಎಂದೇ ಖ್ಯಾತರಾಗಿರುವ ಚಿಶ್ಟಿ ಅವರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸೋಲಿನ ಹೊಣೆಯನ್ನು ಹೊತ್ತುಕೊಂಡು ತಮ್ಮ ಆತ್ಮಸಾಕ್ಷಿಗೆ ಘಾಸಿಯಾಗಿರುವ ಕಾರಣ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.

“ವಿವಿಧ ಜಿಲ್ಲೆಗಳು/ಲೋಕಸಭಾ ಸ್ಥಾನಗಳಲ್ಲಿ ಭಾರತೀಯ ಜನತಾ ಪಕ್ಷದ ಸೋಲು ಮತ್ತು ಕಾರ್ಯಕ್ಷಮತೆಯ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಮತ್ತು ನಾನು MoS ಆಗಿ ಪಕ್ಷವನ್ನು ಬಲಪಡಿಸುವಲ್ಲಿ ವಿಫಲಳಾಗಿದ್ದೇನೆ. ನಾನು ರಾಜೀನಾಮೆ ನೀಡುತ್ತಿದ್ದೇನೆ. ಇದರ ನಂತರ, ನಾನು ಬಿಜೆಪಿಯ ಸಂಘಟನೆಯನ್ನು ಬಲಪಡಿಸಲು ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ ಮತ್ತು ಯುಪಿ ಬಿಜೆಪಿ ನನಗೆ ನೀಡುವ ಯಾವುದೇ ಜವಾಬ್ದಾರಿಯನ್ನು ಪೂರೈಸುತ್ತೇನೆ ಎಂದು ಬರೆದಿದ್ದಾರೆ.

ನನ್ನ ಇಲಾಖೆಯಲ್ಲಿ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆದಿರುವ ಕಾರಣ ನಾನು ರಾಜೀನಾಮೆ ನೀಡಿದ್ದೇನೆ. ನನ್ನ ಇಲಾಖೆಗೆ ಬಜೆಟ್ ಮಂಜೂರು ಮಾಡಿದಾಗ, ನನ್ನ ಒಪ್ಪಿಗೆಯಿಲ್ಲದೆ ಕೆಲವು ಕಾರ್ಯಗಳು ನಡೆದಿವೆ. ನನ್ನ ಆಡಳಿತ ಮಂಡಳಿಯಲ್ಲಿ ಸಿಬ್ಬಂದಿ ಇಲ್ಲ,’’ ಎಂದು ಹೇಳಿದರು.

“ಅಖಿಲೇಶ್ ಯಾದವ್ ಆಡಳಿತದಲ್ಲಿ ನನಗೆ ಮನೆ ಮಂಜೂರು ಮಾಡಲಾಗಿತ್ತು ಆದರೆ ಅದರ ನಿರ್ವಹಣೆಗೆ ತಗಲುವ ವೆಚ್ಚಕ್ಕೆ ಭಾರಿ ಬಿಲ್ ನೀಡಲಾಯಿತು. ನನಗೆ ಸರ್ಕಾರದಿಂದ ಮನೆ ಮಂಜೂರು ಮಾಡುವಾಗ, ಅದರ ನಿರ್ವಹಣೆಗೆ ಸರ್ಕಾರವೇ ವೆಚ್ಚವನ್ನು ಭರಿಸಬೇಕು ಎಂದು ಹೇಳಲಾಗಿತ್ತು. ಸರ್ಕಾರದ ಎಸ್ಟೇಟ್ ಇಲಾಖೆಯು ಸಮಾಜ ಕಲ್ಯಾಣ ಇಲಾಖೆ ವೆಚ್ಚವನ್ನು ಭರಿಸುವುದಾಗಿ ಹೇಳುತ್ತಿದೆ ಆದರೆ ಸಮಾಜ ಕಲ್ಯಾಣ ಇಲಾಖೆಯು ಯೋಗಿಜಿ (ಯೋಗಿ ಆದಿತ್ಯನಾಥ್ ಅವರ ಮುಖ್ಯಮಂತ್ರಿ ಕಚೇರಿ ಭರಿಸಲಿದೆ ಎಂದು ಹೇಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:Vinod Dondale: ಕನ್ನಡ ಕಿರುತೆರೆಯ ಖ್ಯಾತ ನಿರ್ದೇಶಕ ವಿನೋದ್ ದೊಂಡಾಲೆ ಆತ್ಮಹತ್ಯೆಗೆ ಶರಣು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Chenab Bridge: ಐಫೆಲ್ ಟವರ್‌ಗಿಂತ ಎತ್ತರದ ಚೆನಾಬ್ ಸೇತುವೆ ಆಗಸ್ಟ್ 15ರಂದು ಉದ್ಘಾಟನೆಗೆ ಸಜ್ಜು!

ಭಾರತೀಯ ರೈಲ್ವೇ ಎಂಜಿನಿಯರ್‌ಗಳ ಕೌಶಲ ಚೆನಾಬ್ ಸೇತುವೆಯಲ್ಲಿ (Chenab Bridge) ಎದ್ದು ಕಾಣುತ್ತಿದೆ. ಐಫಲ್ ಟವರ್‌ಗಿಂತಲೂ ಎತ್ತರದಲ್ಲಿರುವ ಈ ಸೇತುವೆ ಜಮ್ಮು ಮತ್ತು ಕಾಶ್ಮೀರದ ಸೊಬಗನ್ನು ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಹಲವಾರು ವಿಶೇಷತೆಗಳನ್ನು ಹೊಂದಿರುವ ಉಧಂಪುರ್ ಶ್ರೀನಗರ- ಬಾರಾಮುಲ್ಲಾ ರೈಲು ಸಂಪರ್ಕ ಜಾಲವನ್ನು(UdhampurSrinagar-Baramulla Rail Link) ಶೀಘ್ರದಲ್ಲೇ ಪೂರ್ಣಗೊಳಿಸುವುದಾಗಿ ಭಾರತೀಯ ರೈಲ್ವೇ ತಿಳಿಸಿದೆ.

VISTARANEWS.COM


on

By

UdhampurSrinagar-Baramulla Rail Link
Koo

ನವದೆಹಲಿ: ಕೇಂದ್ರಾಡಳಿತ ಪ್ರದೇಶವಾದ (Udhampur Srinagar-Baramulla Rail Link) ಜಮ್ಮು ಮತ್ತು ಕಾಶ್ಮೀರದಲ್ಲಿ (jammu and kashmir) ಭಾರತೀಯ ರೈಲ್ವೇ (Indian Railways) ನಿರ್ಮಿಸಿರುವ ಚೆನಾಬ್ ಸೇತುವೆ (Chenab Bridge) ಆಗಸ್ಟ್ 15ರಂದು ಉದ್ಘಾಟನೆಗೊಳ್ಳಲು ಸಜ್ಜಾಗಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಜಮ್ಮು ಕಾಶ್ಮೀರದಲ್ಲಿ ಸಂಪರ್ಕವನ್ನು ಸುಧಾರಿಸಲು ಭಾರತೀಯ ರೈಲ್ವೇಯು ಚೆನಾಬ್ ಸೇತುವೆಯ ಮೇಲೆ ರೈಲು ಕಾರ್ಯಾಚರಣೆಯನ್ನು ಸ್ವಾತಂತ್ರ್ಯ ದಿನದಂದು (independence day) ಪ್ರಾರಂಭಿಸಲಿದೆ.

ಪ್ರಾರಂಭದಲ್ಲಿ ರೈಲು ಸೇವೆಗಳು ಜಮ್ಮುವಿನ ರಿಯಾಸಿಯಿಂದ ಕಾಶ್ಮೀರದ ಸಂಗಲ್ದಾನ್‌ವರೆಗೆ ಸಂಚರಿಸಲಿದ್ದು, ಬಳಿಕ ಈ ಸೇವೆಗಳನ್ನು ಇತರ ಪ್ರದೇಶಗಳಿಗೆ ವಿಸ್ತರಿಸಲಾಗುವುದು.

UdhampurSrinagar-Baramulla Rail Link


ಭಾರತೀಯ ರೈಲ್ವೇಯ ಮಹತ್ವಾಕಾಂಕ್ಷೆಯ ಉಧಂಪುರ್ ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (UdhampurSrinagar-Baramulla Rail Link) ಯೋಜನೆಯನ್ನು ಸಂಪರ್ಕಿಸುವ ಉದ್ದೇಶದಿಂದ ಚೆನಾಬ್ ಸೇತುವೆಯನ್ನು ನಿರ್ಮಿಸಲಾಗಿದೆ. ಇದು ಯೋಜನೆಯ ಒಂದು ಭಾಗವಾಗಿದೆ. ಉಧಂಪುರ್ ಶ್ರೀನಗರ- ಬಾರಾಮುಲ್ಲಾ ರೈಲು ಸಂಪರ್ಕ ಜಾಲದ (USBRL) ಒಟ್ಟು ಉದ್ದ 272 ಕಿ.ಮೀ.ಗಳಾಗಿದೆ.


ಹೊಸದಾಗಿ ನಿರ್ಮಿಸಲಾದ ಚೆನಾಬ್ ಸೇತುವೆಯ ಮೇಲೆ ಕಳೆದ ಕೆಲವು ದಿನಗಳಿಂದ ಪ್ರಾಯೋಗಿಕವಾಗಿ ರೈಲು ಓಡಾಟವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಈ ಸೇತುವೆ ಮೇಲೆ ಆಗಸ್ಟ್ 15ರಿಂದ ರೈಲುಗಳ ಓಡಾಟ ನಡೆಸಲಿದ್ದು, ಪ್ರಯಾಣಿಕರು ಪ್ರಯಾಣ ನಡೆಸಬಹುದಾಗಿದೆ.

UdhampurSrinagar-Baramulla Rail Link


ಚೆನಾಬ್ ಸೇತುವೆಯ ಮೇಲೆ ರೈಲುಗಳ ಸಂಚಾರವು ಜಮ್ಮು ಮತ್ತು ಕಾಶ್ಮೀರಕ್ಕೆ ಪರ್ಯಾಯ ಮತ್ತು ವಿಶ್ವಾಸಾರ್ಹ ಸಾರಿಗೆ ವ್ಯವಸ್ಥೆಯನ್ನು ಒದಗಿಸುವ ಉದೇಶದ ಹಿನ್ನೆಲೆಯಲ್ಲಿ ನಿರ್ಮಿಸಲಾಗಿದೆ.


ಯುಎಸ್‌ಬಿಆರ್‌ಎಲ್ ಯೋಜನೆ ಹೇಗಿದೆ?

ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (USBRL) ಯೋಜನೆ ಪೂರ್ಣಗೊಂಡ ಅನಂತರ ಈ ಯೋಜನೆಯಡಿಯಲ್ಲಿ ಸಂಪೂರ್ಣ ರೈಲು ಜಾಲವು ಬಾರಾಮುಲ್ಲಾದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಉಧಮ್‌ಪುರದವರೆಗೆ ವಿಸ್ತರಿಸಲಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ರೈಲು ಜಾಲವನ್ನು ನಿರ್ಮಿಸಲಾಗುತ್ತಿದೆ. ಇದು ಪ್ರಯಾಣಿಕರಿಗೆ ಎಲ್ಲಾ ಹವಾಮಾನದ ಪ್ರಯಾಣಕ್ಕೆ ಸೂಕ್ತವಾಗಿರುತ್ತದೆ.

ಸಂಪೂರ್ಣ ವ್ಯವಸ್ಥೆಯಲ್ಲಿ ರೈಲ್ವೇ ಅತ್ಯಂತ ಸುರಕ್ಷತಾ ಕ್ರಮಗಳಿಗೆ ಗಮನ ನೀಡಿದೆ. ಸಂಪೂರ್ಣ ಜಾಲವು ಸಿಸಿಟಿವಿ ಮಾನಿಟರಿಂಗ್, ಸುಧಾರಿತ ಸುರಂಗ ಸುರಕ್ಷತೆ ತಂತ್ರಜ್ಞಾನ ಮತ್ತು ಹವಾನಿಯಂತ್ರಿತ ವ್ಯವಸ್ಥೆಗಳೊಂದಿಗೆ ಸುಸಜ್ಜಿತಗೊಂಡಿದೆ.

UdhampurSrinagar-Baramulla Rail Link


ಈ ಜಾಲವು ಹಲವಾರು ಸುರಂಗಗಳು ಮತ್ತು ಸೇತುವೆಗಳ ಮೂಲಕ ಹಾದುಹೋಗುತ್ತದೆ. ಇದು ಪ್ರಯಾಣಿಕರಿಗೆ ಜಮ್ಮು ಮತ್ತು ಕಾಶ್ಮೀರದ ರಮಣೀಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅವಕಾಶ ನೀಡುತ್ತದೆ. ಈಗಾಗಲೇ ಯೋಜನೆಯು ಪೂರ್ಣಗೊಳ್ಳಬೇಕಿತ್ತು. ಆದರೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ಯೋಜನೆ ಪೂರ್ಣಗೊಳ್ಳಲು ಹೆಚ್ಚು ಕಾಲಾವಕಾಶ ಬೇಕಾಯಿತು. ಈ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸುವುದಾಗಿ ಭಾರತೀಯ ರೈಲ್ವೇಯು ಸರಕಾರಕ್ಕೆ ಭರವಸೆ ನೀಡಿದೆ.

ಇದನ್ನೂ ಓದಿ: Doda Encounter: ಜಮ್ಮು ದಾಳಿ ಹಿಂದೆ ಇದ್ಯಾ ಪಾಕ್‌ ಮಾಜಿ ಸೈನಿಕರ ಕೈವಾಡ? ಉಗ್ರರಿಗಿದ್ಯಾ ಸೇನಾ ತರಬೇತಿ?

ಐಫೆಲ್ ಟವರ್‌ಗಿಂತ ಎತ್ತರದಲ್ಲಿದೆ!

ಭಾರತೀಯ ರೈಲ್ವೇಯ ಎಂಜಿನಿಯರ್‌ಗಳ ಕೌಶಲ ಚೆನಾಬ್ ಸೇತುವೆ ನಿರ್ಮಾಣದಲ್ಲಿ ಎದ್ದು ಕಾಣುತ್ತಿದೆ. ಇದು ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರವಾಗಿದೆ. 359 ಮೀಟರ್ ಎತ್ತರದ ಸೇತುವೆಯು ಅತಿ ಹೆಚ್ಚು ತೀವ್ರತೆಯ ಭೂಕಂಪನ ಶಕ್ತಿಗಳನ್ನು ತಡೆದುಕೊಳ್ಳಬಲ್ಲದು.

Continue Reading

ವೈರಲ್ ನ್ಯೂಸ್

Viral News: ವಾಷಿಂಗ್ ಮೆಷಿನ್‌ನಿಂದ ಬಟ್ಟೆ ಎಂದು ಎಳೆದಾಗ ಬಂದಿದ್ದು ನಾಗರ ಹಾವು!

ಹಾವುಗಳು ಎಲ್ಲಿ ಅವಿತಿರುತ್ತದೆ ಎಂದು ಹೇಳುವುದು ಕಷ್ಟ. ಕೆಲವೊಮ್ಮೆ ಮನೆಯೊಳಗೆ ಬಂದು ಮನೆ ಮಂದಿಯೆಲ್ಲ ಆತಂಕಗೊಳ್ಳುವಂತೆ ಮಾಡುತ್ತವೆ. ಹಾವುಗಳ ಕಡಿತ ಅಪಾಯಕಾರಿ ಆಗಿರುವುದರಿಂದ ಈ ನಿಟ್ಟಿನಲ್ಲಿ ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸುವುದು ಉತ್ತಮ. ತಿಳಿಯದಂತೆ ಮನೆಯೊಳಗೆ ಬರುವ ಹಾವುಗಳು ತಮಗೆ ಸುರಕ್ಷಿತವೆನಿಸುವ ಜಾಗದಲ್ಲಿ ಅವಿತು ಕುಳಿತುಕೊಳ್ಳುತ್ತವೆ. ಇವು ಕೆಲವೊಮ್ಮೆ ಅಪಾಯ ತಂದೊಡ್ಡಬಹುದು. ಕೇರಳದ ಕಣ್ಣೂರಿನಲ್ಲಿ ಇಂತಹ ಒಂದು ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral News) ಆಗಿದೆ.

VISTARANEWS.COM


on

By

Viral News
Koo

ಕಣ್ಣೂರು: ವಾಷಿಂಗ್ ಮೆಷಿನ್ (cobra in washing machine) ಒಳಗೆ ಬಟ್ಟೆ ತುಂಡು ಸಿಕ್ಕಿಹಾಕಿಕೊಂಡಿದೆ ಎಂದು ಭಾವಿಸಿ ಅದನ್ನು ತೆಗೆಯಲು ಹೋದವನಿಗೆ ಅದರಲ್ಲಿ ಇರುವುದು ಬಟ್ಟೆ ತುಂಡಲ್ಲ ನಾಗರ ಹಾವಿನ ಮರಿ (baby cobra) ಎಂದು ತಿಳಿದು ಶಾಕ್ ಆಗಿದೆ. ಕೂಡಲೇ ವಾಷಿಂಗ್ ಮೆಷಿನ್ ಒಳಗೆ ಹಾಕಿದ್ದ ತನ್ನ ಕೈ ಹಿಂದಕ್ಕೆ ತೆಗೆದು ಅಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಈ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral News) ಆಗಿದೆ.

ಹಾವುಗಳು ಎಲ್ಲಿ ಅವಿತಿರುತ್ತದೆ ಎಂದು ಹೇಳುವುದು ಕಷ್ಟ. ಕೆಲವೊಮ್ಮೆ ಮನೆಯೊಳಗೆ ಬಂದು ಮನೆ ಮಂದಿಯೆಲ್ಲ ಆತಂಕಗೊಳ್ಳುವಂತೆ ಮಾಡುತ್ತವೆ. ಹಾವುಗಳ ಕಡಿತ ಅಪಾಯಕಾರಿ ಆಗಿರುವುದರಿಂದ ಈ ನಿಟ್ಟಿನಲ್ಲಿ ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸುವುದು ಉತ್ತಮ. ನಮಗೆ ತಿಳಿಯದಂತೆ ಮನೆಯೊಳಗೆ ಬರುವ ಹಾವುಗಳು ತಮಗೆ ಸುರಕ್ಷಿತವೆನಿಸುವ ಜಾಗದಲ್ಲಿ ಅವಿತು ಕುಳಿತುಕೊಳ್ಳುತ್ತವೆ. ಇವು ಕೆಲವೊಮ್ಮೆ ಅಪಾಯ ತಂದೊಡ್ಡಬಹುದು.

ಕೇರಳದ ಕಣ್ಣೂರಿನಲ್ಲಿ (kerala kannur) ಈಗ ಇಂತಹ ಒಂದು ಘಟನೆ ನಡೆದಿದೆ. ವಾಷಿಂಗ್ ಮೆಷಿನ್ ನೊಳಗೆ ಅವಿತಿದ್ದ ನಾಗರಹಾವೊಂದು ಮನೆ ಮಂದಿಯೆಲ್ಲ ಬೆಚ್ಚಿ ಬೀಳುವಂತೆ ಮಾಡಿದೆ.

Viral News


ಕೇರಳದ ಕಣ್ಣೂರಿನಲ್ಲಿ ವಾಷಿಂಗ್ ಮೆಷಿನ್ ರಿಪೇರಿ ಮಾಡುತ್ತಿದ್ದ ತಂತ್ರಜ್ಞ ಜನಾರ್ದನನ್ ಕಡಂಬೇರಿ ಅವರು ಬಹುತೇಕ ದುರಸ್ತಿ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ರಿಪೇರಿ ಬಳಿಕ ವಾಷಿಂಗ್ ಮೆಷಿನ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಇಲ್ಲವೋ ಎಂದು ನೋಡಲು ವಾಷಿಂಗ್ ಮೆಷಿನ್ ಒಳಗೆ ಇಣುಕಿ ನೋಡಿದ್ದಾರೆ. ಅದರೊಳಗೆ ಬಟ್ಟೆಯ ತುಂಡಿನಂತೆ ಇರುವುದನ್ನು ಗಮನಿಸಿ ಅದನ್ನು ಹೊರತೆಗೆಯಲು ಯಂತ್ರದೊಳಗೆ ಕೈ ಹಾಕಿದರು. ಆದರೆ ಅದು ಬಟ್ಟೆಯ ತುಂಡಲ್ಲ ನಾಗರ ಹಾವಿನ ಮರಿ ಎಂದು ತಿಳಿದು ಕಡಂಬೇರಿಯವರು ಯಂತ್ರದಿಂದ ತನ್ನ ಕೈಯನ್ನು ಬೇಗನೆ ಹೊರತೆಗೆದರು. ಇದರಿಂದಾಗಿ ಹಾವು ಕಡಿತದಿಂದ ಸ್ವಲ್ಪದರಲ್ಲೇ ಪಾರಾದರು. ಅನಂತರ ಅವರು ಇನ್ನೊಬ್ಬ ವ್ಯಕ್ತಿಗೆ ಮಾಹಿತಿ ನೀಡಿದರು.

ಇದನ್ನೂ ಓದಿ: Viral Video: ಅತೀ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ; ಮೇಲೆ ಹಾರಿ ನೆಲಕ್ಕೆ ಅಪ್ಪಳಿಸಿದ ದಂಪತಿ

ಕೆಲವು ದಿನಗಳಿಂದ ಮಷಿನ್ ಕೆಲಸ ಮಾಡುತ್ತಿಲ್ಲ, ಮುಚ್ಚಳವನ್ನು ಮುಚ್ಚಿ ದಿನಗಟ್ಟಲೆ ಇಡಲಾಗಿದೆ. ಹಾವು ಯಂತ್ರದೊಳಗೆ ಹೇಗೆ ಪ್ರವೇಶಿಸಿತು ಎಂಬ ಬಗ್ಗೆ ಸುಳಿವು ಸಿಕ್ಕಿಲ್ಲ ಎಂದು ಮನೆಯವರು ತಿಳಿಸಿದ್ದಾರೆ.

Continue Reading

ದೇಶ

Foreign Secretary: ಕೇರಳಕ್ಕಾಗಿ ‘ವಿದೇಶಾಂಗ ಕಾರ್ಯದರ್ಶಿ’ಯನ್ನು ನೇಮಿಸಿದ ಪಿಣರಾಯಿ; ಭುಗಿಲೆದ್ದ ವಿವಾದ

Foreign Secretary: ರಾಜ್ಯದಲ್ಲಿ ವಿದೇಶಾಂಗ ಕಾರ್ಯದರ್ಶಿಯನ್ನು ನೇಮಕ ಮಾಡಿದ ರಾಜ್ಯ ಸರ್ಕಾರದ ತೀರ್ಮಾನವನ್ನು ಕೇರಳ ಬಿಜೆಪಿ ಘಟಕವು ಖಂಡಿಸಿದೆ. “ರಾಜ್ಯದಲ್ಲಿ ಐಎಎಸ್‌ ಅಧಿಕಾರಿಯನ್ನು ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಿಸುವ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಅಧಿಕಾರದ ಆಕ್ರಮಣ ಮಾಡಿದ್ದಾರೆ” ಎಂದು ಕೇರಳ ಬಿಜೆಪಿ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Foreign Secretary
Koo

ತಿರುವನಂತಪುರಂ: ದೇಶದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕಾರ್ಯದರ್ಶಿ ಇದ್ದಾರೆ. ಭಾರತ ಸೇರಿ ಹಲವು ದೇಶಗಳಲ್ಲಿ ವಿದೇಶಾಂಗ ಕಾರ್ಯದರ್ಶಿ (Foreign Secretary) ಇರುತ್ತಾರೆ. ಭಾರತದಲ್ಲಿ ಯಾವ ರಾಜ್ಯದಲ್ಲೂ ವಿದೇಶಾಂಗ ಕಾರ್ಯದರ್ಶಿ ಎಂಬ ಹುದ್ದೆ ಇಲ್ಲ. ಆದರೆ, ಕೇರಳದ ಪಿಣರಾಯಿ ವಿಜಯನ್‌ (Pinarayi Vijayan) ನೇತೃತ್ವದ ರಾಜ್ಯ ಸರ್ಕಾರವು ಐಎಎಸ್‌ ಅಧಿಕಾರಿ ಕೆ. ವಾಸುಕಿ (IAS Officer K. Vasuki) ಅವರನ್ನು ”ಕೇರಳದ ವಿದೇಶಾಂಗ ಕಾರ್ಯದರ್ಶಿ” ಎಂಬುದಾಗಿ ನೇಮಕ ಮಾಡಿದೆ. ಇದು ಈಗ ಭಾರಿ ಚರ್ಚೆ, ವಿವಾದಕ್ಕೆ ಕಾರಣವಾಗಿದೆ.

ಕೆ. ವಾಸುಕಿ ಅವರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. “ಐಎಎಸ್‌ ಅಧಿಕಾರಿ ಕೆ. ವಾಸುಕಿ ಅವರನ್ನು ರಾಜ್ಯದ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಕೇರಳಕ್ಕೆ ಸಂಬಂಧಿಸಿದ ವಿದೇಶಾಂಗ ಚಟುವಟಿಕೆಗಳ ಕುರಿತು ಇವರು ಕಾರ್ಯನಿರ್ವಹಿಸಲಿದ್ದಾರೆ. ದೆಹಲಿಯಲ್ಲಿರುವ ಕೇರಳ ಹೌಸ್‌ ಸ್ಥಾನಿಕ ಕಮಿಷನರ್‌ ಅವರು ವಾಸುಕಿ ಅವರಿಗೆ ದೆಹಲಿಯಲ್ಲಿರುವ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು, ವಿದೇಶದಲ್ಲಿರುವ ರಾಯಭಾರ ಕಚೇರಿಗಳು, ರಾಜತಾಂತ್ರಿಕ ಅಧಿಕಾರಿಗಳ ಜತೆ ಸಂಪರ್ಕ ಸಾಧಿಸಲು ನೆರವಾಗಲಿದ್ದಾರೆ” ಎಂದು ಜುಲೈ 15ರಂದೇ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಬಿಜೆಪಿ ಆಕ್ರೋಶ

ರಾಜ್ಯದಲ್ಲಿ ವಿದೇಶಾಂಗ ಕಾರ್ಯದರ್ಶಿಯನ್ನು ನೇಮಕ ಮಾಡಿದ ರಾಜ್ಯ ಸರ್ಕಾರದ ತೀರ್ಮಾನವನ್ನು ಕೇರಳ ಬಿಜೆಪಿ ಘಟಕವು ಖಂಡಿಸಿದೆ. “ರಾಜ್ಯದಲ್ಲಿ ಐಎಎಸ್‌ ಅಧಿಕಾರಿಯನ್ನು ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಿಸುವ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಅಧಿಕಾರದ ಆಕ್ರಮಣ ಮಾಡಿದ್ದಾರೆ. ಅಷ್ಟೇ ಅಲ್ಲ, ಭಾರತ ಸಂವಿಧಾನದಲ್ಲಿ ಕೇಂದ್ರ ಪಟ್ಟಿಗೆ ನೀಡಿರುವುದನ್ನು ಅವರು ಉಲ್ಲಂಘಿಸಿದ್ದಾರೆ. ವಿದೇಶಾಂಗ ಸಚಿವಾಲಯದಲ್ಲಿ ಮಧ್ಯಪ್ರವೇಶಿಸಲು ಕೇರಳಕ್ಕೆ ಯಾವುದೇ ಅಧಿಕಾರ ಇಲ್ಲ” ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಶಿ ತರೂರ್‌ ಹೇಳಿದ್ದೇನು?

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ, ತಿರುವನಂತಪುರಂ ಸಂಸದ ಶಶಿ ತರೂರ್‌ ಅವರು ಪ್ರತಿಕ್ರಿಯಿಸಿದ್ದಾರೆ. “ವಿದೇಶಾಂಗ ವ್ಯವಹಾರಗಳನ್ನು ಕೇಂದ್ರ ಸರ್ಕಾರವೇ ನೋಡಿಕೊಳ್ಳುತ್ತದೆ ಹಾಗೂ ಯಾವುದೇ ರಾಜ್ಯ ಸರ್ಕಾರಕ್ಕೆ ಇದಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವ ಹಕ್ಕುಗಳಿಲ್ಲ. ಆದರೆ, ರಾಜ್ಯ ಸರ್ಕಾರವು ವಿದೇಶದಲ್ಲಿರುವ ತನ್ನ ರಾಜ್ಯದ ನಾಗರಿಕರ ರಕ್ಷಣೆಗೆ ಕಾಳಜಿ ತೋರಬಹುದಾಗಿದೆ. ಹಾಗೆಯೇ, ಕೆ. ವಾಸುಕಿ ಅವರು ಸ್ವತಂತ್ರವಾಗಿ ಯಾವುದೇ ದೇಶದ ಜತೆ ಕಾರ್ಯನಿರ್ವಹಿಸುವ ಅಧಿಕಾರ ಹೊಂದಿಲ್ಲ. ಭಾರತ ಸರ್ಕಾರದ ಅಂಗಸಂಸ್ಥೆಗಳ ಮೂಲಕವೇ ಅವರು ನಿರ್ವಹಿಸಿದ್ದಾರೆ” ಎಂದು ರಾಜ್ಯದ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದಾರೆ. ಪ್ರಸ್ತುತ, ವಿಕ್ರಮ್‌ ಮಿಸ್ರಿ ಅವರು ವಿದೇಶಾಂಗ ಕಾರ್ಯದರ್ಶಿಯಾಗಿದ್ದಾರೆ.

ಇದನ್ನೂ ಓದಿ: Kerala Gold Smuggling Case: ನಾನು ಸುಮ್ಮನಿರಲು 30 ಕೋಟಿ ರೂ. ಆಫರ್‌; ಪಿಣರಾಯಿ ವಿರುದ್ಧ ಸ್ವಪ್ನಾ ಆರೋಪ

Continue Reading

ಬಜೆಟ್ 2024

Union Budget 2024: ಷೇರು ಮಾರುಕಟ್ಟೆ ಮೇಲೆ ಬಜೆಟ್ ದಿನದ ಎಫೆಕ್ಟ್‌ ಏನು? ಇಲ್ಲಿದೆ 10 ವರ್ಷಗಳ ಹಿನ್ನೋಟ

Union Budget 2024: ಬಜೆಟ್ ಮಂಡನೆ ದಿನ ಷೇರು ಮಾರುಕಟ್ಟೆಯಲ್ಲಿ ಏನಾಗಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ. ಈ ಬಗ್ಗೆ ಇತಿಹಾಸ ಏನು ಹೇಳುತ್ತದೆ ಎಂಬುದನ್ನು ನೋಡೋಣ. 2013ರಿಂದ ಬಜೆಟ್ ದಿನಗಳಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಆಗಿರುವ ಬದಲಾವಣೆಗಳು ಹೇಗಿತ್ತು ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

union budget 2024
Koo

ಹಣಕಾಸು ಸಚಿವೆ (Finance Minister) ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಜುಲೈ 23ರಂದು ಮಂಗಳವಾರ ಕೇಂದ್ರ ಬಜೆಟ್ 2024-25 (Union Budget 2024) ಅನ್ನು ಮಂಡಿಸುವ ಸಿದ್ಧತೆಯಲ್ಲಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಏರಿಕೆ ಹಾದಿಯಲ್ಲಿ ಜಿಗಿಯುತ್ತಿರುವ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಬಜೆಟ್‌ ಮಂಡನೆ ದಿನ ಕೊಂಚ ತಲ್ಲಣ ಉಂಟು ಮಾಡಬಹುದಾ ಎಂಬ ಪ್ರಶ್ನೆ ಎದ್ದಿದೆ. ಆದರೆ ಆರ್ಥಿಕ ತಜ್ಞರು ಈ ಬಜೆಟ್ ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಎಂದಿನಂತೆ ಅದು ನಡೆಯುತ್ತದೆ ಎನ್ನುತ್ತಿದ್ದಾರೆ.

ಹೀಗಾಗಿ ಬಜೆಟ್ ಮಂಡನೆ ದಿನ ಷೇರು ಮಾರುಕಟ್ಟೆಯಲ್ಲಿ ಏನಾಗಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ. ಈ ಬಗ್ಗೆ ಈ ಹಿಂದಿನ ಷೇರು ಮಾರುಕಟ್ಟೆ ಇತಿಹಾಸ ಏನು ಹೇಳುತ್ತದೆ ಎಂಬುದನ್ನು ನೋಡೋಣ. 2013ರಿಂದ ಬಜೆಟ್ ದಿನಗಳಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಆಗಿರುವ ಬದಲಾವಣೆಗಳು ಹೇಗಿತ್ತು ಎನ್ನುವ ಮಾಹಿತಿ ಇಲ್ಲಿದೆ.

2013ರ ಬಜೆಟ್

ಪ್ರಮುಖ ಅಂಶ: ಬಂಡವಾಳ ಹಿಂತೆಗೆತ ಮತ್ತು ಸ್ಪೆಕ್ಟ್ರಮ್ ಮಾರಾಟದಿಂದ ಹೆಚ್ಚಿನ ಆದಾಯ, ಮ್ಯೂಚುವಲ್ ಫಂಡ್ ಮತ್ತು ಈಕ್ವಿಟಿ ಫ್ಯೂಚರ್ಸ್ ವಹಿವಾಟುಗಳಿಗೆ ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ತೆರಿಗೆಯಲ್ಲಿ ಕಡಿತ.
ಬಜೆಟ್‌ ಮಂಡನೆ ದಿನ: 2013ರ ಫೆಬ್ರವರಿ 28
ಇಂಟ್ರಾ-ಡೇ ಸ್ವಿಂಗ್: ಶೇ. 2.8

2014ರ ಮಧ್ಯಂತರ ಬಜೆಟ್

ಮಾರುಕಟ್ಟೆ ಪ್ರತಿಕ್ರಿಯೆ: ದೇಶೀಯ ಷೇರು ಮಾರುಕಟ್ಟೆಯಲ್ಲಿ ಶೇ. 0.5ರಷ್ಟು ಏರಿಕೆಯಾಗಿದೆ.
ಬಜೆಟ್‌ ಮಂಡನೆ ದಿನ: 2014ರ ಫೆಬ್ರವರಿ 17
ಇಂಟ್ರಾ-ಡೇ ಸ್ವಿಂಗ್: ಶೇ. 0.8

2014ರ ಪೂರ್ಣ ಬಜೆಟ್

ಮುಖ್ಯಾಂಶಗಳು: ಹೊಸದಾಗಿ ರಚನೆಯಾದ ನರೇಂದ್ರ ಮೋದಿ ಸರ್ಕಾರದ ಮೊದಲ ಬಜೆಟ್.
ಮಾರುಕಟ್ಟೆ ಪ್ರತಿಕ್ರಿಯೆ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಶೇ. 0.3ರಷ್ಟು ಇಳಿಕೆಯಾಗಿದೆ.
ಬಜೆಟ್‌ ಮಂಡನೆ ದಿನ: 2014ರ ಜುಲೈ 10
ಇಂಟ್ರಾ-ಡೇ ಸ್ವಿಂಗ್: ಶೇ. 3.2


2015ರ ಬಜೆಟ್

ಮುಖ್ಯಾಂಶಗಳು: ಆರೋಗ್ಯ ಕ್ಷೇತ್ರ, ವೈದ್ಯಕೀಯ ಶಿಕ್ಷಣ, ಸಂಸ್ಥೆಗಳ ಸ್ಥಾಪನೆ, ಸೌರ ವಿದ್ಯುತ್ ಯೋಜನೆಗಳು ಮತ್ತು ನಮಾಮಿ ಗಂಗೆ ಯೋಜನೆಗೆ 2,037 ಕೋಟಿ ರೂ.
ಮಾರುಕಟ್ಟೆ ಪ್ರತಿಕ್ರಿಯೆ: ಬಿಎಸ್‌ಇ ಸೆನ್ಸೆಕ್ಸ್ ಶೇ.0.5ರಷ್ಟು ಏರಿಕೆ ಕಂಡಿದೆ.
ಬಜೆಟ್‌ ಮಂಡನೆ ದಿನ: 2015ರ: ಫೆಬ್ರವರಿ 28
ಇಂಟ್ರಾ-ಡೇ ಸ್ವಿಂಗ್: ಶೇ. 2.3

2016ರ ಬಜೆಟ್

ಮುಖ್ಯಾಂಶಗಳು: 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ, ಗ್ರಾಮೀಣ ನೈರ್ಮಲ್ಯಕ್ಕಾಗಿ ಸ್ವಚ್ಛ ಭಾರತ ಅಭಿಯಾನಕ್ಕೆ 9,000 ಕೋಟಿ ಅನುದಾನ.
ಮಾರುಕಟ್ಟೆ ಪ್ರತಿಕ್ರಿಯೆ: ಷೇರು ಮಾರುಕಟ್ಟೆ ಶೇ. 0.7ರಷ್ಟು ಕುಸಿತ
ಬಜೆಟ್‌ ಮಂಡನೆ ದಿನ: 2016ರ ಫೆಬ್ರವರಿ 29
ಇಂಟ್ರಾ-ಡೇ ಸ್ವಿಂಗ್‌: ಶೇ. 3.8

2017ರ ಬಜೆಟ್

ಮುಖ್ಯಾಂಶಗಳು: 2.5 ಲಕ್ಷ ರೂ. ನಿಂದ 5 ಲಕ್ಷ ರೂ. ನಡುವಿನ ಆದಾಯ ಹೊಂದಿರುವ ವ್ಯಕ್ತಿಗಳಿಗೆ ಆದಾಯ ತೆರಿಗೆ ದರವನ್ನು ಶೇ. 5ಕ್ಕೆ ಕಡಿತಗೊಳಿಸಲಾಗಿದೆ.
ಮಾರುಕಟ್ಟೆ ಪ್ರತಿಕ್ರಿಯೆ: ಸೆನ್ಸೆಕ್ಸ್ ಶೇ.1.8ರಷ್ಟು ಏರಿಕೆಯಾಗಿದೆ.
ಬಜೆಟ್‌ ಮಂಡನೆ ದಿನ: 2017ರ ಫೆಬ್ರವರಿ 1
ಇಂಟ್ರಾ-ಡೇ ಸ್ವಿಂಗ್: ಶೇ. 2.1

2018ರ ಬಜೆಟ್

ಮುಖ್ಯಾಂಶಗಳು: ಉತ್ಪಾದನೆ, ಸೇವೆಗಳು ಮತ್ತು ರಫ್ತುಗಳೊಂದಿಗೆ ಶೇ.8ಕ್ಕಿಂತ ಹೆಚ್ಚಿನ ಬೆಳವಣಿಗೆಯತ್ತ ಹೆಜ್ಜೆ.
ಮಾರುಕಟ್ಟೆ ಪ್ರತಿಕ್ರಿಯೆ: ಭಾರತೀಯ ಷೇರು ಮಾರುಕಟ್ಟೆಯು ಶೇ. 0.2ರಷ್ಟು ಕುಸಿತ
ಬಜೆಟ್‌ ಮಂಡನೆ ದಿನ: 2018ರ ಫೆಬ್ರವರಿ 1
ಇಂಟ್ರಾ-ಡೇ ಸ್ವಿಂಗ್: ಶೇ. 2.1

2019ರ ಮಧ್ಯಂತರ ಬಜೆಟ್

ಮುಖ್ಯಾಂಶಗಳು: ರೈತರಿಗೆ ಪ್ರಮುಖ ಯೋಜನೆ, ಆದಾಯ ತೆರಿಗೆ ಕೊಡುಗೆ, ಸೆಕ್ಷನ್ 87A ಅಡಿಯಲ್ಲಿ ವಾರ್ಷಿಕ ಆದಾಯವನ್ನು 5 ಲಕ್ಷ ರೂ.ವರೆಗೆ ತೆರಿಗೆ ಮುಕ್ತಗೊಳಿಸಲು ರಿಯಾಯಿತಿಯನ್ನು ಹೆಚ್ಚಿಸಲಾಗಿದೆ.
ಮಾರುಕಟ್ಟೆ ಪ್ರತಿಕ್ರಿಯೆ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಶೇ. 0.6% ಏರಿಕೆ.
ಬಜೆಟ್‌ ಮಂಡನೆ ದಿನ: 2019ರ ಫೆಬ್ರವರಿ 1
ಇಂಟ್ರಾ-ಡೇ ಸ್ವಿಂಗ್: ಶೇ. 1.5

2019ರ ಪೂರ್ಣ ಬಜೆಟ್

ಮುಖ್ಯಾಂಶಗಳು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಮೋದಿ 2.0 ಸರ್ಕಾರಕ್ಕೆ ಇದು ಮೊದಲ ಬಜೆಟ್.
ಮಾರುಕಟ್ಟೆ ಪ್ರತಿಕ್ರಿಯೆ: ಷೇರು ಮಾರುಕಟ್ಟೆ ಶೇ.1ರಷ್ಟು ಕುಸಿತ ಕಂಡಿದೆ.
ಬಜೆಟ್‌ ಮಂಡನೆ ದಿನ: 2019ರ ಜುಲೈ 5
ದಿನದ ವಹಿವಾಟು: ಶೇ. 1.5


2020ರ ಬಜೆಟ್

ಮುಖ್ಯಾಂಶಗಳು: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ, ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಳ, ಸೂಪರ್ ರಿಚ್‌ಗಳ ಮೇಲೆ ಹೆಚ್ಚುವರಿ ಸರ್ಚಾರ್ಜ್, ಹೆಚ್ಚಿನ ಮೌಲ್ಯದ ನಗದು ಹಿಂಪಡೆಯುವಿಕೆಯ ಮೇಲೆ ತೆರಿಗೆ, ಕಾರ್ಪೊರೇಟ್ ತೆರಿಗೆ ಕಡಿತ, ವಸತಿ ವಲಯ, ಸ್ಟಾರ್ಟ್‌ಅಪ್‌ಗಳು ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ಕಡಿತ.
ಮಾರುಕಟ್ಟೆ ಪ್ರತಿಕ್ರಿಯೆ: ಮಾರುಕಟ್ಟೆಯು ಶೇ. 2.4ರಷ್ಟು ಕುಸಿತ
ಬಜೆಟ್‌ ಮಂಡನೆ ದಿನ: 2020ರ ಫೆಬ್ರವರಿ 1
ದಿನದ ವಹಿವಾಟು: ಶೇ. 3.2

2021ರ ಬಜೆಟ್

ಮುಖ್ಯಾಂಶಗಳು: ಸಾಂಕ್ರಾಮಿಕ ರೋಗದ ಮಧ್ಯೆ ಭಾರತೀಯ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ದಿಟ್ಟ ಕ್ರಮಗಳು.
ಮಾರುಕಟ್ಟೆ ಪ್ರತಿಕ್ರಿಯೆ: ಷೇರು ಮಾರುಕಟ್ಟೆ ಶೇ. 4.7ರಷ್ಟು ಏರಿಕೆ
ಬಜೆಟ್‌ ಮಂಡನೆ ದಿನ: 2021ರ ಫೆಬ್ರವರಿ 1
ದಿನದ ವಹಿವಾಟು: ಶೇ. 4.9

2022ರ ಬಜೆಟ್

ಮುಖ್ಯಾಂಶಗಳು: ಮೂಲಸೌಕರ್ಯ ಅಭಿವೃದ್ಧಿ, ದೇಶೀಯ ರಕ್ಷಣಾ ವಲಯ, ಬಂಡವಾಳ ವೆಚ್ಚ ಹೆಚ್ಚಳದ ಮೇಲೆ ಕೇಂದ್ರೀಕರಣ
ಮಾರುಕಟ್ಟೆ ಪ್ರತಿಕ್ರಿಯೆ: ಷೇರು ಮಾರುಕಟ್ಟೆ ಶೇ. 1.4ರಷ್ಟು ಜಿಗಿತ.
ಬಜೆಟ್‌ ಮಂಡನೆ ದಿನ: 2022ರ ಫೆಬ್ರವರಿ 1
ಇಂಟ್ರಾ-ಡೇ ಸ್ವಿಂಗ್: ಶೇ. 1.4

2023ರ ಬಜೆಟ್

ಮುಖ್ಯಾಂಶಗಳು: ಹೊಸ ತೆರಿಗೆ ಪದ್ಧತಿಗೆ ಆದಾಯ ತೆರಿಗೆ ರಿಯಾಯಿತಿಯನ್ನು 7 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಹೊಸ ತೆರಿಗೆ ಪದ್ಧತಿಗೆ 50,000 ರೂ.ಗಳ ಪ್ರಮಾಣಿತ ಕಡಿತ.
ಮಾರುಕಟ್ಟೆ ಪ್ರತಿಕ್ರಿಯೆ: ಷೇರು ಮಾರುಕಟ್ಟೆಯು ಶೇ. 0.25ರಷ್ಟು ಕುಸಿತ
ಬಜೆಟ್‌ ಮಂಡನೆ ದಿನ: 2023ರ ಫೆಬ್ರವರಿ 1
ಇಂಟ್ರಾ-ಡೇ ಸ್ವಿಂಗ್: ಶೇ. 3.6


2024ರ ಮಧ್ಯಂತರ ಬಜೆಟ್

ಮುಖ್ಯಾಂಶಗಳು: ಲೋಕಸಭಾ ಚುನಾವಣೆಗೆ ಮುನ್ನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಮಧ್ಯಂತರ ಬಜೆಟ್‌ ಪ್ರಸ್ತುತಪಡಿಸಿದರು.
ಮಾರುಕಟ್ಟೆ ಪ್ರತಿಕ್ರಿಯೆ: ಸ್ಟಾಕ್ ಮಾರುಕಟ್ಟೆ ಸೂಚ್ಯಂಕಗಳು ದಿನದಂದು ಕೆಳಮಟ್ಟಕ್ಕೆ ಕೊನೆಗೊಂಡಿವೆ.
ಬಜೆಟ್‌ ಮಂಡನೆ ದಿನ: 2024ರ ಫೆಬ್ರವರಿ 1
ಎಸ್ ಆಂಡ್ ಪಿಬಿಎಸ್‌ಇ ಸೆನ್ಸೆಕ್ಸ್: 106.81 ಪಾಯಿಂಟ್‌ಗಳ ಇಳಿಕೆಯೊಂದಿಗೆ 71,645.30 ಕ್ಕೆ ಕೊನೆಗೊಂಡಿತು.
ಎನ್‌ಎಸ್‌ಇ ನಿಫ್ಟಿ 50: 28.25 ಪಾಯಿಂಟ್‌ಗಳ ಇಳಿಕೆಯೊಂದಿಗೆ 21,697.45ಕ್ಕೆ ಸ್ಥಿರವಾಯಿತು.

ಇದನ್ನೂ ಓದಿ: Union Budget 2024: ಬಜೆಟ್‌ಗೂ ಮೊದಲು, ನಂತರ ಹೂಡಿಕೆ ಮಾಡುವುದು ಲಾಭವೇ? ತಜ್ಞರು ಹೇಳೋದಿಷ್ಟು

ಕೇಂದ್ರ ಬಜೆಟ್ 2024 ಮಂಡನೆಗೆ ಮುಂಚಿತವಾಗಿ ನಿಫ್ಟಿ ಮತ್ತು ಸೆನ್ಸೆಕ್ಸ್‌ನಲ್ಲಿನ ವೇಗವು ಕೊಂಚ ನಿಧಾನವಾಗಿದೆ. ಸಾಮಾನ್ಯ ತೆರಿಗೆದಾರರು, ಹೂಡಿಕೆದಾರರು, ಕೈಗಾರಿಕೆಗಳು, ರೈತರು, ಮಹಿಳೆಯರು ಮತ್ತು ಎಫ್‌ಎಂಸಿಜಿ, ರಿಯಲ್ ಎಸ್ಟೇಟ್ ಮತ್ತು ತಂತ್ರಜ್ಞಾನದಂತಹ ಪ್ರಮುಖ ಉದ್ಯಮ ವಲಯಗಳು ಸೇರಿದಂತೆ ವಿವಿಧ ಶ್ರೇಣಿಯ ಮಧ್ಯಸ್ಥಗಾರರ ಅಗತ್ಯತೆಗಳು ಮತ್ತು ನಿರೀಕ್ಷೆಗಳನ್ನು ಬಜೆಟ್ ಮೇಲೆ ಹೆಚ್ಚಾಗಿದೆ. ಪ್ರಸ್ತುತ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ತಮ್ಮ ದಾಖಲೆಯ ಉನ್ನತ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ. ಹಾಗಾಗಿ ಈ ಬಾರಿಯ ಕೇಂದ್ರ ಬಜೆಟ್‌ ಕುತೂಹಲ ಮೂಡಿಸಿದೆ.

Continue Reading
Advertisement
CM Siddaramaiah
ಕರ್ನಾಟಕ3 mins ago

CM Siddaramaiah: ಬಿಜೆಪಿ ತನ್ನ ಅವಧಿಯ ಹಗರಣಗಳನ್ನು ಮುಚ್ಚಿ ಹಾಕಿದೆ: ಸಿಎಂ ಸಿದ್ದರಾಮಯ್ಯ

Viral video
ವೈರಲ್ ನ್ಯೂಸ್7 mins ago

Viral Video: ಏಳು ತಿಂಗಳ ಮಗುವಿನ ಮೇಲೆ ಗುಂಡು ಹಾರಿಸಿದ ಕ್ರೂರ ಮಹಿಳೆ!

Honor Released Honor 200 Pro 5G and Honor 200 5G Smartphones
ಬೆಂಗಳೂರು11 mins ago

Honor 200 Series : ಒಂದೇ ದಿನ 2 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ಹಾನರ್

Self Harming
Latest13 mins ago

Self Harming: ಹೆಂಡತಿಗೆ ಹೆದರಿಸಲು ಹೋಗಿ ಜೀವ ಕಳೆದುಕೊಂಡ ಲೋಕೋ ಪೈಲಟ್‍!

Health Tips Kannada
ಆರೋಗ್ಯ15 mins ago

Health Tips Kannada: ಮಳೆಗಾಲದಲ್ಲಿ ಹಾಗಲಕಾಯಿ ತಿಂದರೆ ಪ್ರಯೋಜನಗಳು ಎಷ್ಟೊಂದು!

Movie ticket price hike
ಕರ್ನಾಟಕ29 mins ago

Movie ticket price hike: ಸಿನಿಮಾ ಪ್ರೇಕ್ಷಕರ ಮೇಲೂ ತೆರಿಗೆ ಪ್ರಹಾರ; ಸಿನಿಮಾ ಟಿಕೆಟ್‌, OTT ಸಬ್‌ಸ್ಕ್ರಿಪ್ಶನ್ ಶುಲ್ಕ ಭಾರಿ ಏರಿಕೆ?

US Teacher
ವೈರಲ್ ನ್ಯೂಸ್33 mins ago

School Teacher: 14 ವರ್ಷದ ವಿದ್ಯಾರ್ಥಿಗೆ ತನ್ನ ಬೆತ್ತಲೆ ಫೋಟೊ ಕಳುಹಿಸಿದ ಶಿಕ್ಷಕಿ; ಈಗ ಜೈಲಿನ ಅತಿಥಿ

Mohammed Shami
ಕ್ರೀಡೆ41 mins ago

Mohammed Shami : ರೋಹಿತ್​ ಶರ್ಮಾಗೆ ನನ್ನ ಬೌಲಿಂಗ್​ ಎಂದರೆ ಭಯ; ಮೊಹಮ್ಮದ್ ಶಮಿ

Heavy rain in Chandragutti village and other places of Soraba taluk
ಶಿವಮೊಗ್ಗ44 mins ago

Karnataka Rain: ಸೊರಬ ತಾಲೂಕಿನ ವಿವಿಧೆಡೆ ಮಳೆ ಆರ್ಭಟ; ವರದಾ ನದಿ ತೀರದ ವ್ಯಾಪ್ತಿಯ ಕೃಷಿ ಭೂಮಿ ಜಲಾವೃತ

Sexual Abuse
Latest47 mins ago

Sexual Abuse: ವಿದ್ಯಾರ್ಥಿನಿಯನ್ನು ಅಪಹರಿಸಿ 12 ದಿನ ಅತ್ಯಾಚಾರ ಎಸಗಿ ಪೊಲೀಸ್‌ ಠಾಣೆ ಮುಂದೆಯೇ ಬಿಟ್ಟು ಹೋದರು!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ7 hours ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ8 hours ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ1 day ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ1 day ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ2 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ4 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ5 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ5 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌