ಲಖನೌ : ಫ್ಯಾಶನ್ ಶೋ (Fashion Show) ಎಂದ ಮೇಲೆ ಸಾಂಪ್ರದಾಯಿಕ ದಿರಸುಗಳನ್ನು ಮಾಡರ್ನ್ ಟಚ್ ಕೊಡುವುದು ಮಾಮೂಲಿ. ಇದರ ಜತೆಗೆ ಔಟ್ಫಿಟ್ ವಿಚಾರದಲ್ಲಿ ಹಲವಾರು ಪ್ರಯೋಗಗಳನ್ನೂ ಮಾಡಲಾಗುತ್ತದೆ. ಅದು ವಿಭಿನ್ನ ಕ್ಷೇತ್ರ. ಸೃಜನಶೀಲತೆಗೆ ಅಲ್ಲಿ ವಿಶಾಲ ವ್ಯಾಪ್ತಿಯಿದೆ. ಆದರೆ ಕೆಲವು ಮೂಲಭೂತವಾದಿಗಳು ಫ್ಯಾಶನ್ ಶೋ ಕುರಿತು ಅಪಸ್ವರ ಎತ್ತುತ್ತಲೇ ಇರುತ್ತಾರೆ. ಅಂಥದ್ದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಶೋ ಒಂದರಲ್ಲಿ ಬುರ್ಖಾ ಧರಿಸಿದ್ದಕ್ಕೆ ಮುಸ್ಲಿ ಮುಖಂಡರೊಬ್ಬರು ತಗಾದೆ ತೆಗೆದಿದ್ದು, ಕ್ಷಮೆ ಕೋರುವಂತೆ ಆಯೋಜಕರಿಗೆ ಒತ್ತಡ ಹೇರಿದ್ದಾರೆ.
मुजफ्फरनगर के श्रीराम कॉलेज में बुर्के में कैटवॉक !!
— Sachin Gupta (@SachinGuptaUP) November 27, 2023
जमीयत उलेमा ने कहा– "बुर्का फैशन का हिस्सा नहीं, ये पर्दे के लिए इस्तेमाल होता है। कॉलेजवाले आइंदा ऐसा न करें"#Muzaffarnagar #Up pic.twitter.com/P8sswuGpPD
ಮುಝಫ್ಫರ್ ನಗರದ ಕಾಲೇಜೊಂದರಲ್ಲಿ ಬುರ್ಖಾ ಧರಿಸಿ ರ್ಯಾಂಪ್ ಮೇಲೆ ಹೆಜ್ಜೆ ಹಾಕುವ ಮೂಲಕ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಮತ್ತು ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರದರ್ಶಿಸಲು ಕೆಲವು ವಿದ್ಯಾರ್ಥಿಗಳು ಮುಂದಾಗಿದ್ದರು. ಮಕ್ಕಳ ಬುದ್ಧಿವಂತಿಕೆ ವಿವಾದಕ್ಕೆ ಕಾರಣವಾಗಿದ್ದು, ಮುಸ್ಲಿಂ ಸಂಘಟನೆಯೊಂದು ಸಂಸ್ಥೆಯ ಅಧಿಕಾರಿಗಳಿಂದ ಕ್ಷಮೆಯಾಚಿಸುವಂತೆ ಒತ್ತಡ ತಂದಿದ್ದಾರೆ.
ಜಮಿಯತ್ ಉಲಮಾದ ಪ್ರತಿನಿಧಿಯೊಬ್ಬರು ಬುರ್ಖಾ ಬಟ್ಟೆಯ ತುಂಡು ಅಥವಾ ಫ್ಯಾಷನ್ ಶೋಗೆ ಬಳಸಲು ಉದ್ದೇಶಿಸಿರುವ ವಸ್ತುವಲ್ಲ ಎಂದು ಹೇಳಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳು ಬುರ್ಖಾ ಹಾಕಿದ್ರೂ ತಪ್ಪು ತೆಗೆದ್ರೂ ತಪ್ಪು ಎಂಬ ಗೊಂದಲದ ಪರಿಸ್ಥಿತಿ ಸೃಷ್ಟಿಸಿದ್ದಾರೆ. ಆದರೆ, ಕಾಲೇಜು ಆಡಳಿತ ಮಂಡಳಿ ಮಕ್ಕಳ ಪರವಾಗಿ ನಿಂತಿದೆ. ಪಾತಿನಿಧ್ಯದ ರೂಪವಾಗಿರುವ ಫ್ಯಾಶನ್ ಶೋಗೆ ಎಲ್ಲರ ಬೆಂಬಲ ಇದೆ ಎಂದು ಹೇಳಿಕೊಂಡಿದೆ.
ಮುಜಾಫರ್ ನಗರದ ಶ್ರೀ ರಾಮ್ ಕಾಲೇಜಿನಲ್ಲಿ ಭಾನುವಾರ ನಡೆದ ಫ್ಯಾಷನ್ ಶೋನ ವೀಡಿಯೊ ವೈರಲ್ ಆದ ನಂತರ ವಿವಾದ ಭುಗಿಲೆದ್ದಿದೆ. ಫ್ಯಾಷನ್ ಸ್ಪ್ಲಾಶ್ ಎಂದು ಕರೆಯಲ್ಪಡುವ ಮೂರು ದಿನಗಳ ಈವೆಂಟ್ ಬಗ್ಗೆ ಮುಸ್ಲಿಂ ನಾಯಕರು ಆಕ್ಷೇಪ ಮಾಡಿದ್ದಾರೆ.
ಕ್ಷಮೆಯಾಚಿಸಬೇಕು’
ವೀಡಿಯೊ ವೈರಲ್ ಆದ ನಂತರ ಪ್ರತಿಕ್ರಿಯಿಸಿದ ಜಮಿಯತ್ ಉಲಮಾದ ಜಿಲ್ಲಾ ಸಂಚಾಲಕ ಮೌಲಾನಾ ಮುಕರ್ರಂ ಖಾಸ್ಮಿ, ಕಾಲೇಜು ಒಂದು ಧರ್ಮವನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ ಕ್ಷಮೆಯಾಚಿಸದಿದ್ದರೆ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
“ಈ ಘಟನೆಯನ್ನು ನಾವು ಖಂಡಿಸುತ್ತೇವೆ. ಬುರ್ಖಾ ಫ್ಯಾಷನ್ ನ ವಸ್ತುವಲ್ಲ, ಅದನ್ನು ಹೆಣ್ಣು ಮಕ್ಕಳ ಮೈ ಮುಚ್ಚಲು ಬಳಸಲಾಗುತ್ತದೆ. ಇದು ಮುಸ್ಲಿಂ ಮಹಿಳೆಯರ ಘನತೆ ಮತ್ತು ಗೌರವದ ಸಂಕೇತವಾಗಿದೆ. ಬುರ್ಖಾವನ್ನು ಧರಿಸುವುದರಿಂದ ಮಹಿಳೆಯರು ತಪ್ಪು ಉದ್ದೇಶಗಳನ್ನು ಹೊಂದಿರುವ ಪುರುಷರ ನೋಟದಿಂದ ಪಾರಾಗಬಹುದು! ಒಂದು ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸುವುದು ಮತ್ತು ಇನ್ನೊಬ್ಬರ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು ಕಾಲೇಜು ಅಧಿಕಾರಿಗಳಿಗೆ ಸಮಂಜಸವಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಆರೈಕೆ ಮಾಡದ ಮಗನಿಗೆ ತಾಯಿಯ ಫ್ಲ್ಯಾಟ್ ಖಾಲಿ ಮಾಡಲು ಬಾಂಬೆ ಹೈಕೋರ್ಟ್ ಆದೇಶ
“ಕಾಲೇಜಿನ ಅಧಿಕಾರಿಗಳು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಮತ್ತು ಅವರು ಕ್ಷಮೆಯಾಚಿಸದಿದ್ದರೆ, ನಾವು ಕಾನೂನು ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಅವರು ಮತ್ತೆ ಯಾವುದೇ ಧರ್ಮದ ಅನುಯಾಯಿಗಳಿಗೆ ಈ ರೀತಿ ಮಾಡಬಾರದು” ಎಂದು ಮೌಲಾನಾ ಹೇಳಿದ್ದಾರೆ.
‘ವೈವಿಧ್ಯತೆಯಲ್ಲಿ ಏಕತೆ’
ಈ ಕಾರ್ಯಕ್ರಮದಲ್ಲಿ ಎಲ್ಲಾ ರೀತಿಯ ಬಟ್ಟೆಗಳನ್ನು ಪ್ರತಿನಿಧಿಸಲಾಗುತ್ತಿದೆ ಅವರಲ್ಲಿ ಒಬ್ಬರು ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಬುರ್ಖಾಗಳನ್ನು ವಿನ್ಯಾಸಗೊಳಿಸಲು ನಿರ್ಧರಿಸಿದರು ಎಂದು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.
ಪ್ರದರ್ಶನದಲ್ಲಿ ಭಾಗವಹಿಸಿದ ವಿದ್ಯಾರ್ಥಿಯೊಬ್ಬರು, “ಪ್ರತಿಯೊಬ್ಬರೂ ತಮ್ಮ ಸೃಜನಶೀಲತೆಯನ್ನು ವ್ಯಕ್ತಪಡಿಸಲು ಹೊಸ ಮಾರ್ಗಗಳ ಬಗ್ಗೆ ಯೋಚಿಸಲು ಪ್ರಯತ್ನಿಸುತ್ತಿದ್ದರು. ಎಲ್ಲಾ ರೀತಿಯ ಉಡುಪುಗಳನ್ನು ಪ್ರದರ್ಶಿಸಲಾಗುತ್ತಿತ್ತು ಮತ್ತು ನಮ್ಮ ಸ್ನೇಹಿತರೊಬ್ಬರು ಬುರ್ಖಾಗಳಿಗೂ ಪ್ರಾತಿನಿಧ್ಯ ನೀಡುವ ಆಲೋಚನೆ ವ್ಯಕ್ತಪಡಿಸಿದರು. ನಮ್ಮ ಉಡುಗೆ ಶೈಲಿಗೆ ಪ್ರಾತಿನಿಧ್ಯ ನೀಡುವುದು ಮತ್ತು ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರದರ್ಶಿಸುವುದು ನಮ್ಮ ಉದ್ದೇಶವಾಗಿತ್ತು. ಮುಸ್ಲಿಂ ಹುಡುಗಿಯರು ಯಾವುದರಲ್ಲೂ ಹಿಂದೆ ಬೀಳದಂತೆ ನೋಡಿಕೊಳ್ಳಲು ನಾವು ಬಯಸಿದ್ದೇವೆ.
ವಿದ್ಯಾರ್ಥಿನಿ ಬುಶ್ರಾ ಖಾನ್ ಎಂಬುವರು ಪ್ರತಿಕ್ರಿಯಿಸಿ, “ಇದನ್ನು ಮಾಡಲು ಯಾರೂ ನಮ್ಮನ್ನು ಒತ್ತಾಯಿಸಲಿಲ್ಲ , ನಾವು ಬಯಸಿದ್ದರಿಂದ ನಾವು ಅದನ್ನು ಮಾಡಿದ್ದೇವೆ. ನಾವು ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ. ವಿನ್ಯಾಸಗಳನ್ನು ಪ್ರದರ್ಶಿಸುವುದು ನಮ್ಮ ಉದ್ದೇಶವಾಗಿತ್ತು ಎಂದಿದ್ದಾರೆ.
ಸೃಜನಶೀಲತೆಗೆ ವೇದಿಕೆ’
ಶ್ರೀ ರಾಮ್ ಗ್ರೂಪ್ ಆಫ್ ಕಾಲೇಜುಗಳ ಮಾಧ್ಯಮ ಸಂಯೋಜಕ ರವಿ ಗೌತಮ್, “ಮೌಲಾನಾ ಅವರ ಅಭಿಪ್ರಾಯಗಳು ಅವರಿಗೆ ಸೀಮಿತ. ಮತ್ತು ನಾನು ಅದರ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ನಮ್ಮದು ಶಿಕ್ಷಣ ಸಂಸ್ಥೆಯಾಗಿದ್ದು, ಧರ್ಮವನ್ನು ಲೆಕ್ಕಿಸದೆ ವಿದ್ಯಾರ್ಥಿಗಳಿಗೆ ಸಾಧ್ಯವಾದಷ್ಟು ಉತ್ತಮ ಶಿಕ್ಷಣವನ್ನು ನೀಡುವುದು ನಮ್ಮ ಉದ್ದೇಶವಾಗಿದೆ. ಫ್ಯಾಷನ್ ವಿನ್ಯಾಸವನ್ನು ಅಧ್ಯಯನ ಮಾಡುವ ಹುಡುಗಿಯರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅವರ ಸೃಜನಶೀಲತೆಯನ್ನು ಪ್ರದರ್ಶಿಸಲು ವೇದಿಕೆಯನ್ನು ನೀಡುವ ಉದ್ದೇಶವನ್ನು ಹೊಂದಿದ್ದೆವು ಎಂದು ಹೇಳಿದ್ದಾರೆ.
“ಹುಡುಗಿಯರು ಯಾವುದೇ ರೀತಿಯಲ್ಲಿ ಧಾರ್ಮಿಕ ಭಾವನೆಗಳನ್ನು ನೋಯಿಸಲಿಲ್ಲ ಮತ್ತು ವಾಸ್ತವವಾಗಿ, ತಮ್ಮ ಸಂಪ್ರದಾಯಗಳನ್ನು ಪ್ರದರ್ಶಿಸಿದ್ದಾರೆ. ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಮತ್ತು ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆಯನ್ನು ವ್ಯಕ್ತಪಡಿಸುವುದನ್ನು ನಾವು ನಿಲ್ಲಿಸಿದ್ದರೆ ನಾವು ಕೆಲಸದಲ್ಲಿ ನಾವು ವಿಫಲರಾಗುತ್ತಿದ್ದೆವು. ವಿದ್ಯಾರ್ಥಿಗಳು ಯಾವುದೇ ತಪ್ಪು ಮಾಡಿದ್ದಾರೆ ಎಂದು ನಾನು ಭಾವಿಸುವುದಿಲ್ಲ” ಎಂದು ಗೌತಮ್ ಹೇಳಿದ್ದಾರೆ.