ನವದೆಹಲಿ: 2024ರ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯ (CSE) ಅಧಿಸೂಚನೆಯನ್ನು ಕೇಂದ್ರ ಲೋಕ ಸೇವಾ ಆಯೋಗವು (Union Public Service Commission UPSC) ಫೆ. 14ರಂದು ಹೊರಡಿಸಿದೆ. ಆನ್‌ಲೈನ್ ನೋಂದಣಿ ಅಂದೇ ಆರಂಭವಾಗಿದ್ದು, ಮಾರ್ಚ್ 5ರ ತನಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಯುಪಿಎಸ್‌ಸಿ ಸಿಎಸ್ಇ 2024 (UPSC CSE 2024)ರ ಮೂಲಕ ಸುಮಾರು 1,056 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಈ ಪೈಕಿ 40 ಹುದ್ದೆಗಳನ್ನು ವಿಶೇಷ ಚೇತನ ವಿಭಾಗದ (PwPD) ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.
ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ವಿಳಾಸ upsc.gov.in.ಕ್ಕೆ ಭೇಟಿ ನೀಡಿ ಹೆಸರು ನೋಂದಾಯಿಸಬಹುದು. ಗಮನಿಸಿ, ಈ ಬಾರಿ ಅಭ್ಯರ್ಥಿಗಳು ಫೋಟೊ ಅಪ್‌ಲೋಡ್ ಮಾಡಿವ ವಿಧಾನದಲ್ಲಿ ಬದಲಾವಣೆ ತರಲಾಗಿದೆ. ಆ ಕುರಿತಾದ ಮಾಹಿತಿ ಇಲ್ಲಿದೆ.
ಅಭ್ಯರ್ಥಿಗಳು ಗಮನಿಸಬೇಕಾದ ಅಂಶ
- ಅಪ್ಲಿಕೇಷನ್ ಪ್ರಕ್ರಿಯೆ ಆರಂಭವಾದ ದಿನದಿಂದ 10 ದಿನಗಳೊಳಗೆ ತೆಗೆದ ಫೋಟೊ ಅಪ್‌ಲೋಡ್ ಮಾಡಬೇಕು
- ಫೋಟೊದಲ್ಲಿ ಅರ್ಜಿದಾರರ ಹೆಸರು, ಫೋಟೊ ತೆಗೆದ ದಿನಾಂಕ ನಮೂದಾಗಿರಬೇಕು.
- ಅಪ್‌ಲೋಡ್ ಮಾಡಲು ಆಯ್ಕೆ ಮಾಡಿದ ಫೋಟೊದಲ್ಲಿ ಅಭ್ಯರ್ಥಿಯ ಮುಖವು 3/4ರಷ್ಟು ಜಾಗವನ್ನು ಆಕ್ರಮಿಸಬೇಕು.
- ಪರೀಕ್ಷಾ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ (ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ, ಸಂದರ್ಶನ) ಅಭ್ಯರ್ಥಿಗಳು ತಮ್ಮ ಫೋಟೊದೊಂದಿಗೆ ಹೊಂದಿಕೆಯಾಗಬೇಕು. ಅಂದರೆ ಅಭ್ಯರ್ಥಿಯು ಗಡ್ಡವಿರುವ ಛಾಯಾಚಿತ್ರವನ್ನು ಅಪ್‌ಲೋಡ್ ಮಾಡಿದರೆ, ಅವನು ಪ್ರತಿ ಹಂತದಲ್ಲೂ ಅದೇ ರೀತಿ ಕಾಣಿಸಿಕೊಳ್ಳಬೇಕು.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
- ಹೋಮ್ಪೇಜ್ನಲ್ಲಿ ಕಾಣಿಸುವ UPSC CSE 2024 ಅಧಿಸೂಚನೆ ಮೇಲೆ ಕ್ಲಿಕ್ ಮಾಡಿ.
- ಈಗ ಪಿಡಿಎಫ್ ಪೇಜ್ ತೆರೆದುಕೊಂಡು ಪ್ರಿಲಿಮ್ಸ್ ಪರೀಕ್ಷೆಯ ಅಧಿಸೂಚನೆ ಕಾಣಿಸಲಿದೆ. ಇನ್ನೊಂದು ಪುಟದಲ್ಲಿ ಅಪ್ಲಿಕೇಷನ್ ಫಾರಂ ಕಂಡು ಬರಲಿದೆ.
- ಅಗತ್ಯ ಮಾಹಿತಿ ತುಂಬಿ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ ಹೆಸರು ನೋಂದಾಯಿಸಿ.
- ಅಗತ್ಯವಾದ ಡಾಕ್ಯುಮೆಂಟ್, ಫೋಟೊ ಅಪ್‌ಲೋಡ್ ಮಾಡಿ ಆನ್‌ಲೈನ್ ಮೂಲಕ ಪರೀಕ್ಷಾ ಶುಲ್ಕ ಪಾವತಿಸಿ.
- ಒದಗಿಸಿದ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಅರ್ಜಿ ಸಲ್ಲಿಸಿ.
ಪರೀಕ್ಷಾ ಶುಲ್ಕ
ಎಸ್‌ಸಿ / ಎಸ್‌ಟಿ / ವಿಶೇಷ ಚೇತನ ಅಭ್ಯರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಬೇಕಾಗಿಲ್ಲ. ಇತರ ಅಭ್ಯರ್ಥಿಗಳು ಪರೀಕ್ಷಾ ಶುಲ್ಕವಾಗಿ 100 ರೂ. ಪಾವತಿಸಬೇಕು. ಎಸ್‌ಬಿಐಯ ಯಾವುದೇ ಶಾಖೆಯಲ್ಲಿ ಈ ಹಣವನ್ನು ಪಾವತಿಸಬಹುದು ಇಲ್ಲವಾದಲ್ಲಿ ಯಾವುದೇ ಬ್ಯಾಂಕ್‌ನ ನೆಟ್ ಬ್ಯಾಂಕಿಂಗ್ ಸೇವೆ ಅಥವಾ ಕ್ರೆಡಿಟ್, ಡೆಬಿಟ್, ವೀಸಾ, ರುಪೇ ಕಾರ್ಡ್ ಈಲ್ಲವೇ ಯುಪಿಐ ವಿಧಾನದ ಮೂಲಕ ಇದನ್ನು ಪಾವತಿಸಬಹುದು.
ಇದನ್ನೂ ಓದಿ: UPSC 2024 Notification: ಸಿಎಸ್ಇ ಪ್ರಿಲಿಮ್ಸ್ ಪರೀಕ್ಷೆಗೆ ನೋಟಿಫಿಕೇಷನ್; 1056 ಹುದ್ದೆಗಳ ಭರ್ತಿ
ಪರೀಕ್ಷೆ ಯಾವಾಗ?
UPSC CSE 2024 ಪ್ರಿಲಿಮ್ಸ್ ಪರೀಕ್ಷೆಯ ಮೇ 26ರಂದು ನಡೆಯಲಿದೆ. ಇದರಲ್ಲಿ ತೇರ್ಗಡೆಯಾದವರು ಮುಂದಿನ ಹಂತವಾದ ಮೇನ್ ಪರೀಕ್ಷೆ ಬರೆಯಲು ಅರ್ಹತೆ ಪಡೆಯುತ್ತಾರೆ. ಇದನ್ನು ಅಕ್ಟೋಬರ್ 19ರಂದು ಆಯೋಜಿಸಲಾಗುತ್ತದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ