ವಾಷಿಂಗ್ಟನ್, ಅಮೆರಿಕ: ಕಳೆದ ತಿಂಗಳು ಭಾರತ ಪ್ರವಾಸದಲ್ಲಿದ್ದ ಅಮೆರಿಕದ ವಾಣಿಜ್ಯ ಸಚಿವೆ ಗಿನಾ ರಾಯ್ಮೊಂಡೊ (US Commerce Secretary Gina Raimondo) ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಮೋದಿ ಅವರು ಅಸಾಧ್ಯ ಮತ್ತು ದೂರದೃಷ್ಟಿಯ ನಾಯಕ, ಭಾರತವನ್ನು ಜಾಗತಿಕ ಶಕ್ತಿಯನ್ನಾಗಿಸುವ ನಿಟ್ಟಿನಲ್ಲಿ ಮುನ್ನಡೆಯುತ್ತಿರುವ ಮೋದಿ ಜಗತ್ತಿನ ಜನಪ್ರಿಯ ನಾಯಕರಾಗಿದ್ದಾರೆಂದು ಅವರು ಶ್ಲಾಘಿಸಿದ್ದಾರೆ.
ಪ್ರಧಾನಿ ಮೋದಿಯವರೊಂದಿಗೆ ಒಂದೂವರೆ ಗಂಟೆಗೂ ಹೆಚ್ಚು ಸಮಯ ಕಳೆಯಲು ನನಗೆ ನಂಬಲಾಗದ ಅವಕಾಶವಿತ್ತು. ಅವರು ಅತ್ಯಂತ ಜನಪ್ರಿಯ ವಿಶ್ವ ನಾಯಕರಾಗಿದ್ದಾರೆ. ಅವರು ಅಸಾಧ್ಯವನ್ನು ಸಾಧ್ಯವಾಗಿಸುವ ಮತ್ತು ದೂರದೃಷ್ಟಿಯುಳ್ಳವರು. ಭಾರತದ ಜನರಿಗೆ ಅವರ ಬದ್ಧತೆಯ ಮಟ್ಟವು ಕೇವಲ ವರ್ಣನಾತೀತವಾಗಿದೆ. ಅದು ಆಳವಾದ ಮತ್ತು ಭಾವೋದ್ರಿಕ್ತ ಮತ್ತು ನೈಜವಾಗಿದೆ. ಬಡತನದಿಂದ ಜನರನ್ನು ಮೇಲೆತ್ತುವ ಮತ್ತು ಜಾಗತಿಕ ಶಕ್ತಿಯಾಗಿ ಭಾರತವನ್ನು ಮುನ್ನಡೆಸುವುದರಲ್ಲಿ ಅವರು ಮಗ್ನರಾಗಿದ್ದಾರೆ ಎಂದು ರಾಯ್ಮೊಂಡೋ ಅವರು ಹೇಳಿದರು.
ಮೋದಿ ಜತೆಗಿನ ಭೇಟಿಯ ಅತ್ಯುತ್ತಮ ಸಂಗತಿ ಏನೆಂದರೆ, ಪ್ರಧಾನಿ ಮೋದಿ ಅವರನ್ನು ಬಲ್ಲವರಿಗೆಲ್ಲರೂ ಗೊತ್ತು ಅವರೊಬ್ಬ ಟೆಕ್ ಸ್ನೇಹಿ ಮನುಷ್ಯ ಎಂದು. ಅವರಿಗೆ ಆ ಬಗ್ಗೆ ಆಳವಾದ ಮಾಹಿತಿ ಇದೆ. ಆದ್ದರಿಂದ ನಾನು ಶುಕ್ರವಾರ ರಾತ್ರಿ 7.30ಕ್ಕೆ ಅವರ ಮನೆಯಲ್ಲಿ ಇದ್ದೆ. ಕೃತಕ ಬದ್ಧಿಮತ್ತೆ ಮತ್ತು ರೆಡಿಯೋ ಅಕ್ಸೆಸ್ ಬಗ್ಗೆ ಕುರಿತು ಅವರೊಂದಿಗೆ ಮಾತುಕತೆ ನಿಗದಿಯಾಗಿತ್ತು. ಇದೊಂದು ಅದ್ಭುತ ಎಂದಷ್ಟೇ ಹೇಳಬಹುದು ಎಂದು ಅವರು ಹೇಳಿದರು.
ಭಾರತ-ಅಮೆರಿಕ ವಾಣಿಜ್ ಮಾತುಕತೆ ಮತ್ತು ಇಂಡೋ-ಯುಎಸ್ ಫೋರಮ್ ಮೀಟಿಂಗ್‌ಗಾಗಿ ಕಳೆದ ತಿಂಗಳ ಅಮೆರಿಕ ವಾಣಿಜ್ಯ ಸಚಿವೆ ರಾಯ್ಮೊಂಡೊ ಅವರು ಭಾರತ ಪ್ರವಾಸ ಕೈಗೊಂಡಿದ್ದರು. ಅವರು ಅತ್ಯುನ್ನತ ವ್ಯಾಪಾರೋದ್ಯಮ ತಂಡದ ನೇತೃತ್ವವನ್ನು ವಹಿಸಿದ್ದರು.
ಇದನ್ನೂ ಓದಿ: PM Narendra Modi: ಜಾಗತಿಕ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಮೋದಿ ನಂ.1, ಆದರೂ ಕೊಂಚ ತಗ್ಗಿದ ಪಾಪ್ಯುಲಾರಿಟಿ
ಮುಂಬರುವ ವರ್ಷಗಳಲ್ಲಿ ತಂತ್ರಜ್ಞಾನ ಎರಡು ಇಕೋ ಸಿಸ್ಟಮ್ ಗಳು ಇರಲಿವೆ. ಒಂದು ಇಕೋಸಿಸ್ಟಮ್ ನಮ್ಮ ಪ್ರಜಾಸತ್ತಾತ್ಮಕ ಮೌಲ್ಯಗಳೊಂದಿಗೆ ಸ್ಥಿರವಾಗಿರಲಿದೆ ಮತ್ತೊಂದು ಇದರ ವಿರುದ್ಧವಾಗಿರಲಿದೆ. ಈ ತಂತ್ರಜ್ಞಾನ ಇಕೋಸಿಸ್ಟಮ್‌ನಲ್ಲಿ ಅಮೆರಿಕ ಮತ್ತು ಭಾರತಗಳೆರಡೂ ಜತೆಗೂಡಿ ವಿಶ್ವವನ್ನು ಮುನ್ನಡೆಸಬೇಕೆಂದು ನಾನು ಅವರಿಗೆ(ಮೋದಿ) ಹೇಳಿದರು. ಅವರು ನನಗೆ ಹೇಳಿದರು, AI ಕೇವಲ ಕೃತಕ ಬುದ್ಧಿಮತ್ತೆಗೆ ನಿಲ್ಲುವುದಿಲ್ಲ. ಅವರು ಹೇಳಿದರು, AI ಅಂದರೆ ಅಮೆರಿಕ(America) ಮತ್ತು ಭಾರತ(India) ತಂತ್ರಜ್ಞಾನ ಎಂದರು. ಅವರ ಮಾತು ಕೇಳಿ ಖುಷಿಯಾಯಿತು ಎಂದು ರಾಯ್ಮೊಂಡೋ ಅವರು ಹೇಳಿದರು.