ರಾಜಸ್ಥಾನ:ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಟೀಕಿಸಿ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಬಿಕಾನೇರ್‌ನ ಬಿಜೆಪಿ ಅಲ್ಪಸಂಖ್ಯಾತ ಮೋರ್ಛಾದ ಜಿಲ್ಲಾಧ್ಯಕ್ಷ ಉಸ್ಮಾನ್ ಘನಿ(Usman Ghani)ಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇತ್ತೀಚೆಗೆ ರಾಜಸ್ತಾನದ ಬಾನಸ್ವರಾದಲ್ಲಿ ಪತ್ರಕರ್ತರ ಜೊತೆ ಮಾತನಾಡುತ್ತಾ ಪ್ರಧಾನಿ ಮೋದಿ(Narendra Modi) ಯವರು ಮುಸ್ಲಿಮರ ಬಗ್ಗೆ ನೀಡಿರುವ ಹೇಳಿಕೆಗೆ ಟೀಕೆ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಅವರನ್ನು ಪಕ್ಷದಿಂದ ಉಚ್ಛಾಟನೆ(Expelled) ಗೊಳಿಸಲಾಗಿತ್ತು. ಇದೀಗ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದ ಮುಕ್ತ ಪ್ರಸಾದ್ ನಗರ ಪೊಲೀಸ್ ಠಾಣಾಧಿಕಾರಿ ಧೀರೇಂದ್ರೆ ಶೆಖಾವತ್, ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ದಿನವೇ ಅವರ ಬಂಧನಕ್ಕೆ ನಾವು ತೆರಳಿದ್ದೆವು. ಆದರೆ ಅವರು ದಿಲ್ಲಿಯಲ್ಲಿದ್ದರು. ಶನಿವಾರ ಅವರು ವಾಪಾಸ್ಸಾಗ್ತಿದ್ದಂತೆ ಅವರು ನೇರವಾಗಿ ಠಾಣೆಗೆ ಬಂದು ತಮ್ಮ ಬಂಧನಕ್ಕೆ ಪೊಲೀಸ್ ವಾಹನ ಕಳುಹಿಸಲು ನಿಮಗೆಷ್ಟು ಧೈರ್ಯ ಎಂದು ತಗಾದೆ ತೆಗೆದಿದ್ದರು. ನಮಗೆ ಅವರು ಯಾರೆಂಬುದೇ ಗೊತ್ತಿರಲಿಲ್ಲ. ಪೊಲೀಸ್ ಠಾಣೆಯ ಎದುರು ತಮ್ಮ ನೂರಾರು ಬೆಂಬಲಿಗರ ಜೊತೆಗೆ ಬಂದಿದ್ದ ಉಸ್ಮಾನ್ ಘನಿ, ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದರು. ಪೊಲೀಸ್ ಠಾಣೆ ಎದುರು ನಡೆಯುತ್ತಿದ್ದ ಹೈಡ್ರಾಮಾ ತಾರಕಕ್ಕೇರುತ್ತಿದ್ದಂತೆ ನಾವು ಅವರನ್ನು ಬಂಧಿಸಿದ್ದೇವೆ. ಅಲ್ಲದೇ ಸೆಕ್ಷನ್ 151 (ಶಾಂತಿ ಕದಲುವ ಯತ್ನ) ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಎದುರು ಅವರನ್ನು ಹಾಜರು ಪಡಿಸುತ್ತೇವೆ ಎಂದು ಮಾಹಿತಿ ಕೊಟ್ಟರು.
ಉಸ್ಮಾನ್ ಘನಿ ಹೇಳಿದ್ದೇನು?
ಪತ್ರಕರ್ತರ ಜೊತೆ ಮಾತನಾಡುತ್ತಾ ಮುಸ್ಲಿಮರ ಬಳಿ ಹೋಗಿ ಬಿಜೆಪಿಗೆ ಮತ ನೀಡುವಂತೆ ಕೇಳೋಕೆ ಹೋದರೆ ಅವರು ಪ್ರಧಾನಿ ಮೋದಿ ಮುಸ್ಲಿಮರ ಬಗ್ಗೆ ನೀಡಿರುವ ಹೇಳಿಕೆಗಳ ಕುರಿತು ಕೇಳುತ್ತಾರೆ. ಅವರಿಗೆ ಕೊಡಲು ನನ್ನ ಬಳಿ ಉತ್ತರ ಇಲ್ಲ. ಅಲ್ಲದೇ ರಾಜಸ್ಥಾನದಲ್ಲಿ ಜಾಟ್ ಸಮುದಾಯ ಕೂಡ ಬಿಜೆಪಿ ವಿರುದ್ಧ ಕೋಪಗೊಂಡಿದೆ. ಚುರು ಮತ್ತು ಇತರೆ ಲೋಕಸಭಾ ಕ್ಷೇತ್ರಗಳಲ್ಲಿ ಜಾಟ್ ಸಮುದಾಯಗಳು ಬಿಜೆಪಿ ವಿರುದ್ಧ ಮತ ಚಲಾಯಿಸಿದೆ. ನನ್ನ ಈ ಹೇಳಿಕೆಗೆ ನನ್ನ ವಿರುದ್ಧ ಕ್ರಮ ಜರುಗಿಸಿದರೂ ತಲೆಗೆಡಿಸಿಕೊಳ್ಳಲ್ಲ ಎಂದು ಅವರು ಹೇಳಿಕೆ ಕೊಟ್ಟಿದ್ದರು.
ಇದನ್ನೂ ಓದಿ: Yogi Adityanath:”ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮುಸ್ಲಿಮರಿಗೆ ಬೀಫ್ ಸೇವನೆ ಹಕ್ಕು”- ಮತ್ತೆ ಗುಡುಗಿದ ಯೋಗಿ
ಇತ್ತೀಚೆಗೆ ದೆಹಲಿಯಲ್ಲೂ ಉಸ್ಮಾನ್ ಘನಿ ಪಕ್ಷ ವಿರೋಧಿ ಹೇಳಿಕೆ ಕೊಟ್ಟಿದ್ದರು. ಈ ಬಾರಿ ಬಿಜೆಪಿ ರಾಜಸ್ಥಾನದ ೨೫ ಸ್ಥಾನಗಳಲ್ಲಿ ಮೂರು-ನಾಲ್ಕು ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಮುಸ್ಲಿಂರು, ಜಾಟ್ ಸಮುದಾಯದ ಜನ ಪ್ರಧಾನಿ ಮೋದಿ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದಾರೆ. ಉಸ್ಮಾನ್ ಘನಿ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಘನಿ ಹೇಳಿಕೆಯಿಂದ ತೀವ್ರ ಮುಜುಗರಕ್ಕೀಡಾಗಿದ್ದ ಬಿಜೆಪಿ ಅವರನ್ನು ಉಚ್ಛಾಟಿಸಿತ್ತು.