Site icon Vistara News

ರಾಷ್ಟ್ರಪತಿ ಚುನಾವಣೆ ಬೆನ್ನಲ್ಲೇ ಉಪ ರಾಷ್ಟ್ರಪತಿ ಎಲೆಕ್ಷನ್‌, ಆ. 6ಕ್ಕೆ ಮತದಾನ, ಜು.5ರಂದು ಅಧಿಸೂಚನೆ

vice presedential election

ನವ ದೆಹಲಿ: ರಾಷ್ಟ್ರಪತಿ ಚುನಾವಣೆಗೆ ೨೦ ದಿನಗಳಷ್ಟೇ ಬಾಕಿ. ಉಳಿದಿವೆ. ಜುಲೈ ೧೮ರಂದು ಮತದಾನ ನಡೆದು ೨೧ರಂದು ಫಲಿತಾಂಶ ಪ್ರಕಟವಾಗಲಿದೆ. ಇದರ ನಡುವೆಯೇ 16ನೇ ಉಪರಾಷ್ಟ್ರಪತಿ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಆಗಸ್ಟ್ 6 ಕ್ಕೆ ಮತದಾನ ನಡೆಯಲಿದೆ.

ಬುಧವಾರ (ಜೂ.29) ಚುನಾವಣಾ ಆಯೋಗವು ಉಪರಾಷ್ಟ್ರಪತಿ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದೆ. ಆಗಸ್ಟ್ 6ರಂದು ಬೆಳಿಗ್ಗೆ 10 ರಿಂದ 5ರವರೆಗೆ ಮತದಾನ ನಡೆಯಲಿದ್ದು, ಅಂದೇ ಮತ ಎಣಿಕೆ ಕೂಡಾ ನಡೆಯಲಿದೆ. ಜುಲೈ ೫ರಂದು ಅಧಿಕೃತ ಅಧಿಸೂಚನೆ ಹೊರಬೀಳಲಿದ್ದು, ಜುಲೈ ೧೯ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಜುಲೈ 20ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುದಾರಿಕೆ ಹಿಂಪಡೆಯಲು ಜುಲೈ 22 ಕೊನೆಯ ದಿನವಾಗಿದೆ.

ಇದನ್ನು ಓದಿ| President Election: ನಾಮಪತ್ರ ಸಲ್ಲಿಸಿದ ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್‌ ಸಿನ್ಹಾ

ಆಗಸ್ಟ್ 10ಕ್ಕೆ ಹಾಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಅಧಿಕಾರವಧಿ ಮುಕ್ತಾಯವಾಗಲಿದೆ. ಹೀಗಾಗಿ ರಾಜ್ಯಸಭೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿರುವ ವೆಂಕಯ್ಯನಾಯ್ಡು ಅವರ ಸ್ಥಾನಕ್ಕೆ ಆಗಸ್ಟ್ 6 ರಂದು ಚುನಾವಣೆ ನಡೆಯಲಿದೆ.

ಈ ಚುನಾವಣೆಯಲ್ಲಿ ರಾಜ್ಯಸಭೆಯ 2೬3 ಚುನಾಯಿತ ಸದಸ್ಯರು, 12 ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರು, 543 ಲೋಕಸಭೆಯ ಚುನಾಯಿತ ಸದಸ್ಯರು ಮತದಾರರಾಗಿರುತ್ತಾರೆ.

ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಈಗಾಗಲೇ ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಹಾಗೂ ಪ್ರತಿಪಕ್ಷಗಳ ಅಭ್ಯರ್ಥಿ ಯಶ್ವಂತ್ ಸಿನ್ಹಾ ಚುನಾವಣಾ ಪ್ರಚಾರದಲ್ಲಿ  ತೊಡಗಿಕೊಂಡಿದ್ದಾರೆ.

ಇದನ್ನು ಓದಿ| ರಾಷ್ಟ್ರಪತಿ ಚುನಾವಣೆ: ಮನಸು ಬದಲಿಸಿದ ತೆಲಂಗಾಣ ಸಿಎಂ ಕೆಸಿಆರ್‌, ಬೆಂಬಲ ಯಾವ ಅಭ್ಯರ್ಥಿಗೆ?

Exit mobile version