Site icon Vistara News

Video Viral: ಪ್ರೀತಿ ನಿರಾಕರಿಸಿದ ಹುಡುಗಿ ಮೇಲೆ ಮಚ್ಚು ಬೀಸಿದ ಪಾಗಲ್ ಪ್ರೇಮಿ

Girl Attacked in pune

ಪುಣೆ, ಮಹಾರಾಷ್ಟ್ರ: ಪ್ರೀತಿ ನಿರಾಕರಿಸಿದ ಹುಡುಗಿಯ (Girl Student) ಮೇಲೆ ಹುಡುಗನೊಬ್ಬನು ಮಚ್ಚಿನಿಂದ (Machete) ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಆರೋಪಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆ ಮಹಾರಾಷ್ಟ್ರದ (Maharashtra) ಪುಣೆ (Pune City) ನಗರದ ಸದಾಶಿವ ಪೇಟೆ ಪ್ರದೇಶದಲ್ಲಿ ನಡೆದಿದೆ(video Viral).

59 ಸೆಕೆಂಡ್‌ನ ಈ ವಿಡಿಯೋ ಭಾರೀ ಸದ್ದು ಮಾಡುತ್ತಿದೆ. ಹುಡುಗನೊಬ್ಬ ಸಂತ್ರಸ್ತೆ ಯುವತಿಯನ್ನು ಕುರಿಸಿಕೊಂಡು ಸ್ಕೂಟರ್‌ನಲ್ಲಿ ಹೋಗುತ್ತಿರುತ್ತಾನೆ. ಆಗ ಆರೋಪಿ ಅಂದರೆ ಹುಡುಗಿಯನ್ನು ಪ್ರೀತಿಸುವ ಯುವಕ ಸ್ಕೂಟರ್ ಅಡ್ಡಗಟ್ಟುತ್ತಾನೆ. ಮೊದಲು ಸ್ಕೂಟರ್ ಓಡಿಸುತ್ತಿದ್ದವನ ಮೇಲೆ ಹಲ್ಲೆ ಮಾಡುತ್ತಾನೆ. ಆತ ತಪ್ಪಿಸಿಕೊಂಡ ಹೋಗುತ್ತಿದ್ದಂತೆ ಹುಡುಗಿಯನ್ನು ಬೆನ್ನಲ್ಲೇ ಆಕೆಯ ಮೇಲೆ ಮಚ್ಚು ಬೀಸುತ್ತಾನೆ. ಈ ವಿಡಿಯೋ ಫುಲ್ ವೈರಲ್ ಆಗಿದೆ.

Video Viral: ಹುಡುಗಿಯ ಮೇಲೆ ಮಚ್ಚಿನಿಂದ ದಾಳಿ

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪುಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ದಾಳಿಯಲ್ಲಿ ಗಾಯಗೊಂಡಿರುವ ಎಂಪಿಎಸ್‌ಸಿ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಲವು ವರದಿಗಳ ಪ್ರಕಾರ, ಸಂತ್ರಸ್ತ ವಿದ್ಯಾರ್ಥಿಗೆ, ಆರೋಪಿ ಹಲವು ದಿನಗಳಿಂದ ಪೀಡಿಸುತ್ತಿದ್ದ ಎನ್ನಲಾಗಿದೆ. ಈ ವಿಡಿಯೋ ಫುಲ್ ವೈರಲ್ ಆಗಿದ್ದು, ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಡಿದ್ದಾರೆ.

Exit mobile version