Site icon Vistara News

Video Viral: ವಡಾ ಪಾವ್ ತಿಂದು, ಅಯ್ಯೋ ಖಾರ ಅಂದ್ರು ಜಪಾನ್ ರಾಯಭಾರಿ! ಹೀಗೆ ವಿಡಿಯೋ ಪೋಸ್ಟ್ ಮಾಡಿ ಅಂದ್ರು ಮೋದಿ

Vada Pav

ನವದೆಹಲಿ: ಖಾರದ ಖಾದ್ಯಗಳಲ್ಲಿ ವಡಾ ಪಾವ್‌ಗೆ (Vada Pav) ತನ್ನದೇ ಆದ ಸ್ಥಾನವಿದೆ. ವಿಶೇಷವಾಗಿ ಮಹಾರಾಷ್ಟ್ರ, ಮುಂಬೈಗೆ ಹೋದವರು ಈ ವಡಾ ಪಾವ್ ತಿನ್ನದೇ ಬರೋದಕ್ಕೆ ಆಗಲ್ಲ. ಅಷ್ಟರ ಮಟ್ಟಿಗೆ ಅದು ಫೇಮಸ್ಸು. ಇತ್ತೀಚೆಗಷ್ಟೇ, ಭಾರತಕ್ಕೆ ಆಗಮಿಸಿದ್ದ ಟ್ವಿಟರ್ ಸಿಇಒ ಟಿಮ್ ಕುಕ್‌ ಅವರಿಗೆ ನಟಿ ಮಾಧುರಿ ದಿಕ್ಷಿತ್ ಅವರು ವಡಾ ಪಾವ್ ರುಚಿ ತೋರಿಸಿದ್ದರು. ಇದೀಗ ಭಾರತದಲ್ಲಿರುವ ಜಪಾನ್ ರಾಯಭಾರಿ (Japan ambassador) ಹಿರೋಶಿ ಸುಜುಕಿ (Hiroshi Suzuki) ಹಾಗೂ ಅವರ ಪತ್ನಿ ವಡಾ ಪಾವ್ ತಿನ್ನುವ ವಿಡಿಯೋ ಸಖತ್ ವೈರಲ್ (Video Viral) ಆಗಿದೆ. ವಿಶೇಷ ಎಂದರೆ ಈ ವಿಡಿಯೋಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೂ ಪ್ರತಿಕ್ರಿಯಿಸಿದ್ದಾರೆ.

ವಡಾ ಪಾವ್ ಸೇವಿಸುತ್ತಿರುವ ಜಪಾನ್ ರಾಯಭಾರಿ ದಂಪತಿ

ಭಾರತದಲ್ಲಿ ಜಪಾನ್‌ನ ರಾಯಭಾರಿ ಹಿರೋಶಿ ಸುಜುಕಿ ಅವರು ಪುಣೆಯ ಬೀದಿಗಳಲ್ಲಿ ಪಾಕಶಾಲೆಯ ಪ್ರಯಾಣದ ಬಗ್ಗೆ ಇತ್ತೀಚೆಗೆ ಮಾಡಿದ ಟ್ವೀಟ್ ಗಮನ ಸೆಳೆದಿದೆ. ಸುಜುಕಿ ಅವರ ತಮ್ಮ ಪತ್ನಿಯೊಂದಿಗೆ ವಡಾ ಪಾವ್ ಮತ್ತು ಮಿಸಳ್ ಪಾವ್ ಸೇವಿಸುತ್ತಿರುವ ವಿಡಿಯೋ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆದಿದೆ.

ಸುಜುಕಿ ದಂಪತಿಯು ಪುಣೆಯಲ್ಲಿ ಮಹಾರಾಷ್ಟ್ರ ಶೈಲಿಯ ಸ್ಟ್ರೀಟ್ ಫುಡ್ ಸೇವಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅವರು ವಡಾ ಪಾವ್ ಮತ್ತು ಮಿಸಳ್ ಪಾವ್ ಸೇವಿಸುವ ದೃಸ್ಯಗಳು ವಿಡಿಯೋದಲ್ಲಿವೆ. ಸ್ಟ್ರೀಟ್ ಫುಡ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ಖಾರದ ಬಗ್ಗೆ ಮಾತ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕ್ರಿಯೆ ಟ್ವೀಟ್

ಟ್ವಿಟರ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿರುವ ಸುಜುಕಿ, ಭಾರತದ ಸ್ಟ್ರೀಟ್ ಫುಡ್ ಬಗ್ಗೆ ನನಗೆ ಪ್ರೀತಿ ಇದೆ. ಆದರೆ, ಖಾರಾ ಸ್ವಲ್ಪ ಕಮ್ಮಿ ಇರಲಿ ಪ್ಲೀಸ್ ಎಂದು ಕ್ಯಾಪ್ಷನ್ ನೀಡಿದ್ದಾರೆ. ಇದೇ ವೇಳೆ, ಟ್ವಿಟರ್‌ ಫಾಲೋವರ್ಸ್ ಶಿಫಾರಸಿನ ಅನ್ವಯ ಮಿಸಳ್ ಪಾವ್ ಕೂಡ ಟೇಸ್ಟ್ ಮಾಡಿದ್ದಾರೆ. ಆ ವಿಡಿಯೋವನ್ನೂ ಅವರು ಪೋಸ್ಟ್ ಮಾಡಿದ್ದಾರೆ. ಒಂದು ವಿಡಿಯೋದಲ್ಲಿ ನನ್ನ ಹೆಂಡತಿ ತಿನ್ನೋದರಲ್ಲಿ ನನ್ನನ ಸೋಲಿಸಿದಳು ಎಂದು ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Video Viral: ನಾಗರಹೊಳೆ ಸಫಾರಿಯಲ್ಲಿ ಕಾಣಿಸಿಕೊಂಡ ಬಿಳಿ ಜಿಂಕೆ; ನೋಡಲಿದು ಕ್ಯೂಟ್‌ ಕ್ಯೂಟ್‌!

ಈ ವಿಡಿಯೋ ಈಗ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆದಿದೆ. ಅವರು ಕೂಡ ಈ ವಿಡಿಯೋಗೆ ಟ್ವೀಟ್ ಮಾಡಿ, ಇದೊಂದು ಸ್ಪರ್ಧೆಯಲ್ಲಿ ನೀವು ಸೋತರೂ ಪರವಾಗಿಲ್ಲ, ಮಿಸ್ಟರ್ ರಾಯಭಾರಿ. ನೀವು ಭಾರತದ ಪಾಕಶಾಲೆಯ ವೈವಿಧ್ಯತೆಯನ್ನು ಆನಂದಿಸುತ್ತಿರುವುದನ್ನು ಮತ್ತು ಅಂತಹ ವಿನೂತನ ರೀತಿಯಲ್ಲಿ ಅದನ್ನು ಪ್ರಸ್ತುತಪಡಿಸುವುದನ್ನು ನೋಡಲು ಸಂತೋಷವಾಗಿದೆ. ಇನ್ನಷ್ಟು ವೀಡಿಯೊಗಳು ಬರುತ್ತಿರಲಿ ಎಂದು ಹೇಳಿದ್ದಾರೆ.

ಇನ್ನಷ್ಟು ಕುತೂಹಲಕಾರಿ ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version