Site icon Vistara News

Video Viral: ಎಂಥಾ ಅದೃಷ್ಟಾರೀ… 110 ಕಿಮೀ ಸ್ಪೀಡ್‌ನಲ್ಲಿ ಹೋಗುತ್ತಿದ್ದ ರೈಲಿನಿಂದ ಬಿದ್ರೂ ಏನು ಆಗಿಲ್ಲ!

Man fell from moving train

ನವದೆಹಲಿ: ನಮ್ಮ ನಸೀಬು ಗಟ್ಟಿ ಇತ್ತು ಅಂದ್ರೆ, ಕ್ಷಣಾರ್ಧದಲ್ಲಿ ಸಾವಿನ ದವಡೆಯಿಂದ ಪಾರಾಗಿ ಬಿಡುತ್ತೇವೆ. ಅಂಥ ಅನೇಕ ಘಟನೆಗಳು ನಡೆದಿವೆ ಕೂಡ. ಈಗ ಅದೇ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ. ಉತ್ತರ ಪ್ರದೇಶದ (Uttar Pradesh) ಶಹಜಹಾನ್‌ಪುರದಲ್ಲಿ (Shahjahanpur) ಹೈಸ್ಪೀಡ್ ರೈಲಿನಿಂದ (High Speed Rail) ಪ್ಲಾಟ್‌ಫಾರ್ಮ್ ಮೇಲೆ ಬಿದ್ದ ವ್ಯಕ್ತಿಯೊಬ್ಬ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖರ್ ವೈರಲ್ (Video Viral) ಆಗಿದೆ.

ಈ ಪವಾಡ ರೀತಿಯ ಘಟನೆಯು ಉತ್ತರ ಪ್ರದೇಶದ ಶಹಜಹಾನ್‌ಪುರದ ರೈಲು ನಿಲ್ದಾಣದಲ್ಲಿ ನಡೆದಿದೆ. ಸುಮಾರು 110 ಕಿ.ಮೀ ಸ್ಪೀಡ್‌ನಲ್ಲಿ ಹೋಗುತ್ತಿದ್ದ ಪಾಟಲಿಪುತ್ರ ರೈಲಿನಿಂದ ವ್ಯಕ್ತಿಯು ರೈಲು ನಿಲ್ದಾಣ ಪ್ಲಾಟ್‌ಫಾರ್ಮ್ ಬಿದ್ದಿದ್ದಾನೆ. ಆದರೆ, ಪ್ರಾಣಾಪಾಯದಿಂದ ಆ ವ್ಯಕ್ತಿ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾನೆ.

ರೈಲಿನಿಂದ ಬಿದ್ದ ವ್ಯಕ್ತಿಯು, ಪ್ಲಾಟ್‌ಫಾರ್ಮ್‌ ಮೇಲೆ ಕೆಲವು ಅಡಿಗಳವರೆಗೂ ಉರಳುತ್ತಾ ಹೋಗಿದ್ದಾನೆ. ಇಡೀ ಘಟನೆಯನ್ನು ಇತರ ಪ್ರಯಾಣಿಕರು ಸುಮ್ಮನೆ ನೋಡುತ್ತಿರುವ ದೃಶ್ಯವು ವಿಡಿಯೋದಲ್ಲಿ ಸೆರೆಯಾಗಿದೆ. ಅಷ್ಟು ಸ್ಪೀಡ್ ರೈಲಿನಿಂದ ಬಿದ್ದರೂ ವ್ಯಕ್ತಿಗೆ ಏನೂ ಆಗಿಲ್ಲ. ಆತ ಕೂಡಲೇ ಎದ್ದು ನಿಂತಿದ್ದಾನೆ. ಚಲಿಸುತ್ತಿರುವ ರೈಲಿನಿಂದ ಆತ ಹೇಗೆ ಬಿದ್ದ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ 2 ವರ್ಷ ಇದ್ದು, ಒಂದೇ ಒಂದು ರೂ. ಬಿಲ್‌ ಕಟ್ಟದೆ ಹೋಗಲೂ ಸಾಧ್ಯ!

ಎಲ್ಲಾದರೂ ಹೊರ ಊರಿಗೆ ಹೋದಾಗ ಹೋಟೆಲ್‌ಗಳಲ್ಲಿ ಉಳಿದುಕೊಂಡರೆ ಅದಕ್ಕೆ ಇಂತಿಷ್ಟು ಎಂದು ಹಣ ತೆರಬೇಕಾಗುತ್ತದೆ. ಅದರಲ್ಲೂ ಸ್ಟಾರ್‌ ಹೋಟೆಲ್‌ಗಳಿಗೆ ಹೋದರಂತೂ ದಿನಕ್ಕೆ ಸಾವಿರದ ಲೆಕ್ಕಾಚಾರದಲ್ಲೇ ಹಣ ಕೊಡಬೇಕಾಗುತ್ತದೆ. ಆದರೆ ಇಲ್ಲೊಬ್ಬ ಭೂಪ ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಬರೋಬ್ಬರಿ ಎರಡು ವರ್ಷಗಳ ಕಾಲವಿದ್ದು, ಒಂದೇ ಒಂದು ರೂಪಾಯಿಯನ್ನೂ ಕೊಡದೆ ಚೆಕ್‌ ಔಟ್‌ ಮಾಡಿಕೊಂಡು ಹೋಗಿದ್ದಾನೆ. ಈ ಸುದ್ದಿ ಎಲ್ಲೆಡೆ ವೈರಲ್‌ (Viral News) ಆಗುತ್ತಿದೆ.

ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ ರೋಸೆಟ್‌ ಹೌಸ್‌ ಹೋಟೆಲ್‌ನಲ್ಲಿ ಈ ರೀತಿಯ ಘಟನೆ ನಡೆದಿದೆ. ಈ ಬಗ್ಗೆ ಹೋಟೆಲ್‌ನ ನಿರ್ವಹಣೆ ಮಾಡುತ್ತಿರುವ ಬರ್ಡ್‌ ಏರ್‌ಪೋರ್ಟ್ಸ್‌ ಹೋಟೆಲ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯ ಅಧಿಕಾರಿ ವಿನೋದ್‌ ಮಲ್ಹೋತ್ರಾ ಅವರು ಪೊಲೀಸರಲ್ಲಿ ದೂರನ್ನೂ ದಾಖಲಿಸಿದ್ದಾರೆ.

ಅಂಕುಶ್‌ ದತ್ತಾ ಹೆಸರಿನ ವ್ಯಕ್ತಿ 2019ರ ಮೇ 30ರಂದು ಹೋಟೆಲ್‌ಗೆ ಬಂದು ಒಂದು ರೂಮ್‌ ಬುಕ್‌ ಮಾಡಿದ್ದಾನೆ. ಮಾರನೇ ದಿನ ಅಂದರೆ 2019ರ ಮೇ 31ರಂದೇ ಆತ ರೂಮಿನಿಂದ ಚೆಕ್‌ಔಟ್‌ ಮಾಡುವುದಾಗಿ ನಮೂದಿಸಿದ್ದಾನೆ. ಆದರೆ ಆತ ಹೋಟೆಲ್‌ ಸಿಬ್ಬಂದಿಯ ಕಣ್ತಪ್ಪಿಸಿ 2021ರ ಜನವರಿ 22ರವರೆಗೂ ಹೋಟೆಲ್‌ನಲ್ಲೇ ಉಳಿದುಕೊಂಡಿದ್ದ!

ಈ ಸುದ್ದಿಯನ್ನೂ ಓದಿ: Viral News: ಇದೆಂಥ ಫ್ರಸ್ಟ್ರೇಷನ್‌; 1, 2 ರೂ. ಕಾಯಿನ್‌ಗಳಲ್ಲಿ ಮಾಜಿ ಪತ್ನಿಗೆ 55,000 ರೂ. ಜೀವನಾಂಶ ನೀಡಿದ ವ್ಯಕ್ತಿ

ಈ ಹೋಟೆಲ್‌ನ ಯಾವ ರೂಮಿಗೆ ಯಾವ ಬೆಲೆ ತೆರಬೇಕು ಎನ್ನುವುದರಿಂದ ಹಿಡಿದು ಸಂಪೂರ್ಣ ಉಸ್ತುವಾರಿಯನ್ನು ಪ್ರೇಮ್‌ ಪ್ರಕಾಶ್‌ ಹೆಸರಿನ ವ್ಯಕ್ತಿ ನೋಡಿಕೊಳ್ಳುತ್ತಿದ್ದಾನೆ. ಆತನೂ ಕೂಡ ಅಂಕುಶ್‌ ಸಹಾಯಕ್ಕೆ ನಿಂತಿದ್ದು, ಹೋಟೆಲ್‌ನ ಬಿಲ್‌ಗಳಲ್ಲಿ ಸಾಕಷ್ಟು ಮೋಸ ಮಾಡಿ ಅಂಕುಶ್‌ ಎರಡು ವರ್ಷಗಳ ಕಾಲ ಅಲ್ಲಿಯೇ ಉಳಿದುಕೊಳ್ಳಲು ನೆರವು ಮಾಡಿದ್ದಾನೆ ಎಂದೂ ದೂರಿನಲ್ಲಿ ಹೇಳಲಾಗಿದೆ.

Exit mobile version