ಬೆಂಗಳೂರು: ಸಾಮಾನ್ಯವಾಗಿ ಕಾರಿನಲ್ಲಿ (Car) ಪ್ರಯಾಣ ಮಾಡುವಾಗ ಸೀಟ್ ಬೆಲ್ಟ್ (Seat Belt) ಹಾಕಿಕೊಳ್ಳಿ ಎಂದು ಹೇಳುತ್ತಾರೆ. ಅಸಲಿಗೆ, ಸೀಟ್ ಬೆಲ್ಟ್ ಹಾಕದಿದ್ದರೆ ಟ್ರಾಫಿಕ್ ಪೊಲೀಸರು (Traffic Police) ದಂಡ ಕೂಡ ವಿಧಿಸುತ್ತಾರೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ, ಸೀಟ್ ಬೆಲ್ಟ್ ಧರಿಸದೇ ಇದ್ದರೆ ಅಪಘಾತ (Accident) ಸಂದರ್ಭದಲ್ಲಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಒಂದೊಮ್ಮೆ ಸೀಟ್ ಬೆಲ್ಟ್ ಹಾಕಿಕೊಂಡಿದ್ದರೆ ಪ್ರಾಣಾಪಾಯದ ತೀವ್ರ ಬಹಳತೆ ಕಡಿಮೆ ಇರುತ್ತದೆ. ಬಹುಶಃ ಈ ಮಾಹಿತಿ ಇಎಲ್ಲರಿಗೂ ಗೊತ್ತೇ ಇರುತ್ತದೆ. ಹಾಗಿದ್ದೂ, ಬಹಳಷ್ಟು ಬಾರಿ ಸೀಟ್ ಬೆಲ್ಟ್ ಹಾಕಿಕೊಳ್ಳದೇ ಪ್ರಯಾಣ ಮಾಡುವುದನ್ನು ನಾವು ಕಾಣಬಹುದು. ಅದೇ ರೀತಿ, ಒಂದೊಮ್ಮೆ ಸೀಟ್ ಬೆಲ್ಟ್ ಹಾಕದೇ ಇದ್ದರೆ, ಅಪಘಾತ ಸಂಭವಿಸಿದಾಗ ಎಂಥ ಪರಿಣಾಮ ಉಂಟಾಗುತ್ತದೆ ಎಂಬುದಕ್ಕೆ ಈ ವೈರಲ್ ವಿಡಿಯೋ (Video Viral) ನೋಡಿ. ಈ ವಿಡಿಯೋ ನೋಡಿದ್ರೆ ಒಂದು ಕ್ಷಣ ಎದೆ ಧಸಕ್ ಎನ್ನುತ್ತದೆ. ಅಷ್ಟರ ಮಟ್ಟಿಗೆ ಭೀಕರವಾಗಿದೆ.
Video Viral: ಸೀಟ್ ಬೆಲ್ಟ್ ಧರಿಸಿದ ವ್ಯಕ್ತಿ ಮುಗಿಲೆತ್ತರಕ್ಕೆ ಎಗರಿ ಬೀಳುತ್ತಿರುವ ವಿಡಿಯೋ
Wear your seatbelt 💀 pic.twitter.com/WYmm5xw1Mf
— CCTV IDIOTS (@cctvidiots) June 17, 2023
ಟ್ವಿಟರ್‌ನಲ್ಲಿ CCTV IDIOTS ಹೆಸರಿನ ಖಾತೆಯು ಈ ಅಪಘಾತದ ವಿಡಿಯೋವನ್ನು ಷೇರ್ ಮಾಡಿದ್ದು, ವಿಯರ್ ಇವರ್ ಸೀಟ್ ಬೆಲ್ಟ್ ಎಂದು ಶೀರ್ಷಿಕೆ ನೀಡಿದೆ. ಈ ವಿಡಿಯೋದಲ್ಲಿ ಅಪಘಾತದ ಒಂದು ದೃಶ್ಯವಿದ್ದು, ಕಾರಿನಿಂದ ವ್ಯಕ್ತಿಯೊಬ್ಬ ಮುಗಿಲೆತ್ತರಕ್ಕೆ ನೆಗೆದು ಕೆಳಗೆ ಬಿದ್ದು ಸಾಯುತ್ತಾನೆ. ಒಂದೊಮ್ಮೆ ಆ ವ್ಯಕ್ತಿ ಸೀಟ್ ಬೆಲ್ಟ್ ಹಾಕಿಕೊಂಡಿದ್ದರೆ ಕಾರಿನಲ್ಲೇ ಉಳಿಯುತ್ತಿದ್ದನೇನೋ? ಆದರೆ, ಈ ವಿಡಿಯೋವನ್ನು ಎಲ್ಲಿ ಚಿತ್ರಿಕರಿಸಲಾಗಿದೆ, ಯಾವ ದೇಶದಲ್ಲಿ ನಡೆದಿದ್ದು, ಕಾರಿನಲ್ಲಿದ್ದವರು ಬದುಕಿದರೇ, ಸತ್ತರೆ ಎಂಬ ಯಾವ ಮಾಹಿತಿಯನ್ನು ಹಂಚಿಕೊಡಿಲ್ಲ. ಆದರೆ, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಸೀಟ್ ಬೆಲ್ಟ್ ಧರಿಸದೇ ಇದ್ದರೆ ಆಗುವಂಥ ಭೀಕರ ಪರಿಣಾಮಕ್ಕೆ ಈ ವಿಡಿಯೋ ಸಾಕ್ಷಿಯಾಗುತ್ತಿದೆ.
ಕಾರ್ ಬಾನೆಟ್ ಮೇಲೆ 20 ಕಿ.ಮೀ. ಟ್ರಾಫಿಕ್ ಪೊಲೀಸ್‌ನನ್ನು ಎಳೆದುಕೊಂಡ ಮಾದಕವ್ಯಸನಿ ಡ್ರೈವರ್
ಕಾರ್ ಬಾನೆಟ್ ಮೇಲೆ ಟ್ರಾಫಿಕ್ ಪೊಲೀಸ್‌ರೊಬ್ಬರನ್ನು, ಆ ಕಾರಿನ ಚಾಲಕ ಸುಮಾರು 20 ಕಿ.ಮೀ.ವರೆಗೂ ಎಳೆದುಕೊಂಡು ಘಟನೆ ನವಿ ಮುಂಬೈನಲ್ಲಿ ಶನಿವಾರ ನಡೆದಿದೆ. ಡ್ರಗ್ಸ್ ಸೇವಿಸಿ ಚಾಲಕ ಕಾರು ಚಾಲನೆ ಮಾಡುತ್ತಿದ್ದ. ಕಾರ್ ತಡೆಯಲು ಟ್ರಾಫಿಕ್ ಪೊಲೀಸ್ ಹೋದಾಗ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ(Viral Video). ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ 37 ವರ್ಷದ ಟ್ರಾಫಿಕ್ ಪೊಲೀಸ್ ಸಿದ್ದೇಶ್ವರ್ ಮಾಲಿ ಬಂದೋಬಸ್ತ್ ಕರ್ತವ್ಯದಲ್ಲಿದ್ದರು. ಚಾಲಕನನ್ನು 22 ವರ್ಷದ ಆದಿತ್ಯಾ ಬೆಂಬ್ಡೆ ಎಂದು ಗುರುತಿಸಲಾಗಿದೆ. ಆತನನ್ನು ಬಂಧಿಸಿರುವ ಪೊಲೀಸರು, ಕೊಲೆ ಯತ್ನ, ಮಾದಕ ವಸ್ತು ಸೇವನೆ ತಡೆ ಕಾಯ್ದೆಗಳಡಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಡೀ ಘಟನೆಯು ಪಲ್ಮಾ ಬೀಚ್ ರೋಡ್‌ನಲ್ಲಿ ನಡೆದಿದ್ದು, ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಾಲಿ ಹಾಗೂ ಇನ್ನೊಬ್ಬ ಪೊಲೀಸ್ ಅವರು ಕೋಪರಖೈರೆನೆ-ವಾಶಿ ಲೇನ್ ರಸ್ತೆಯಲ್ಲಿ ಕಾರ್ ತಡೆಯಲು ಮುಂದಾಗಿದ್ದಾರೆ. ಆಗ ಕಾರ್ ಚಾಲಕ ಮಾಲಿ ಮೇಲೆ ಕಾರ್ ಹರಿಸಲು ಮುಂದಾಗಿದ್ದಾನೆ. ಆ ಗಳಿಗೆಯಲ್ಲಿ ಬಾನೆಟ್ ಮೇಲೆ ಮಾಲಿ ಬಿದ್ದಿದ್ದಾರೆ. ಆಗವಾಹನವನ್ನು ನಿಲ್ಲಿಸುವು ಬದಲಿಗೆ ಆರೋಪಿ ಚಾಲಕ, ಕಾರನ್ನು ಘಟನಾ ಸ್ಥಳದಿಂದ ಸುಮಾರು 20 ಕಿ.ಮೀ.ದೂರದ ಗವನ್ ಘಾಟ್‌ವರೆಗೂ ಎಳೆದುಕೊಂಡು ಹೋಗಿದ್ದಾನೆ.
ಈ ಸುದ್ದಿಯನ್ನೂ ಓದಿ: Viral News: ಲಂಡನ್ನಲ್ಲಿ ಭಜನೆ ಮಾಡುತ್ತಿರುವ ಕೊಹ್ಲಿ ದಂಪತಿ; ವಿಡಿಯೊ ವೈರಲ್
20 ಕಿ.ಮೀ ಕ್ರಮಿಸಿದ ಬಳಿಕ ಟಾಪ್ ಮೇಲಿದ್ದ ಚಾಲಕ ಕೆಳಗೆ ಬಿದ್ದಿದ್ದಾನೆ. ಆ ಮಧ್ಯ ಕಾರನ್ನ ಪೊಲೀಸರು ಚೇಜ್ ಮಾಡುತ್ತಿದ್ದರು. ಆ ಬಳಿಕ ಆತನನ್ನು ಅಟ್ಟಿಸಿಕೊಂಡು ಹೋದ ಪೊಲೀಸರು ಬಂಧಿಸಿದ್ದಾರೆ. ಬಳಿಕ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆತ ಡ್ರಗ್ಸ್ ಸೇವಿಸಿರುವುದು ಪತ್ತೆಯಾಗಿದೆ.
ಇನ್ನಷ್ಟು ಕುತೂಹಲಕರ ವೈರಲ್ ನ್ಯೂಸ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.