ನವದೆಹಲಿ: ಸುಸ್ಥಿದಾರನಾಗಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ (Vijay Mallya) ಅವರು ಸೋಷಿಯಲ್ ಮೀಡಿಯಾದಲ್ಲಿ (Social Media) ಕಾಣಿಸಿಕೊಳ್ಳುವುದು ಇತ್ತೀಚೆಗೆ ಅಪರೂಪವಾಗಿದೆ. ವಿಜಯ್ ಮಲ್ಯ ಅವರು ಎಕ್ಸ್ ವೇದಿಕೆಯಲ್ಲಿ ದೀಪಾವಳಿ ಶುಭಾಶಯಗಳನ್ನು ತಿಳಿಸುವ ಟ್ವೀಟ್ (x platform) ಮಾಡಿದ್ದಾರೆ. ವಿಶೇಷ ಎಂದರೆ, ಮಲ್ಯ ಅವರು ಬ್ಯಾಂಕುಗಳ ರಜಾ ದಿನದಂದೇ (Bank Holiday) ಈ ರೀತಿಯಾಗಿ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಾರೆ!
Happy Deepavali to all. May you be blessed.
— Vijay Mallya (@TheVijayMallya) November 11, 2023
ಮಲ್ಯ ಅವರು ಮದ್ಯದ ಕಂಪನಿ, ವಿಮಾನಯಾನ ಸಂಸ್ಥೆ, ಫಾರ್ಮುಲಾ ಒನ್ ತಂಡ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಕ್ಲಬ್‌ನಲ್ಲಿ ಹೂಡಿಕೆ ಮಾಡಿದ್ದರು. ಆದಾಗ್ಯೂ, ಸಾವಿರಾರು ಕೋಟಿ ರೂಪಾಯಿ ಸಾಲಗಳನ್ನು ಹಿಂದಿರುಗಿಸಲು ವಿಫಲವಾದಾಗ ಅವರು ತೊಂದರೆಗೆ ಸಿಲುಕಿದರು ಮತ್ತು ಹಣವನ್ನು ಮರುಪಡೆಯಲು ಬ್ಯಾಂಕ್‌ಗಳು ತೀವ್ರ ಪ್ರಯತ್ನ ನಡೆಸಿದ್ದವು. ಈ ವೇಳೆ, ಅವರು ಅಂದರೆ 2016ರಲ್ಲಿ ಭಾರತವನ್ನು ತೊರೆದು ವಿದೇಶದಲ್ಲಿ ತಲೆಮರೆಸಿಕೊಂಡಿದ್ದರು. ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಸಾಕಷ್ಟು ಹೂಡಿಕೆ ಮಾಡಿದ್ದರು. ಈ ವಿಮಾನಯಾನ ಸಂಸ್ಥೆ ನಷ್ಟದಲ್ಲಿ ಸಾಗುತ್ತಿದ್ದಂತೆ ಮಲ್ಯ ಅವರು ವೈಫಲ್ಯವು ಆರಂಭವಾಯಿತು. ಪರಿಣಾಮ ಅವರ ಅನೇಕ ವ್ಯವಹಾರಗಳು ನಷ್ಟವನ್ನು ಕಾಣಲಾರಂಭಿಸಿದವು.
ಪೈಲಟ್‌ಗಳು ಮತ್ತು ಎಂಜಿನಿಯರ್ಸ್ ವೇತನ ನೀಡಲು ವಿಳಂಬವಾದ ಹಿನ್ನೆಲೆಯಲ್ಲಿ ಭಾರತೀಯ ಸರ್ಕಾರವು, 2012ರಲ್ಲಿ ಏರ್ ಲೈನ್ಸ್ ಅನುಮತಿಯನ್ನು ರದ್ದು ಮಾಡಿತು.
ವಿದೇಶದಲ್ಲಿರುವ ವಿಜಯ್ ಮಲ್ಯ ಅವರು ಹಬ್ಬಗಳಂಥ ವಿಶೇಷ ಸಂದರ್ಭದಲ್ಲಿ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾರೆ. ಈ ವರ್ಷ ಮಲ್ಯ ಅವರು ಎಲ್ಲರಿಗೂ ಪೊಂಗಲ್, ಸಂಕ್ರಾಂತಿ, ಹೋಳಿ, ಯುಗಾದಿ, ವಿಷು, ಈಸ್ಟರ್, ಜನ್ಮಾಷ್ಟಮಿ, ಗಣೇಶ ಚತುರ್ಥಿ, ಮತ್ತು ಈದ್ ಶುಭಾಶಯಗಳನ್ನು ಸೋಷಿಯಲ್ ಮೀಡಿಯಾದ ಮೂಲಕ ಕೋರಿದ್ದರು. ಮಲ್ಯ ತಮ್ಮ ಇತ್ತೀಚಿನ ಪೋಸ್ಟ್‌ನಲ್ಲಿ, “ಎಲ್ಲರಿಗೂ ದೀಪಾವಳಿಯ ಶುಭಾಶಯಗಳು. ನೀವು ಆಶೀರ್ವದಿಸಿ” ಎಂದು ಬರೆದುಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Vijay Mallya | ಸೆಟ್ಟೇರಲಿದೆ ವಿಜಯ್ ಮಲ್ಯ ವಂಚನೆ ಕಥೆ ಫೈಲ್ ನಂ 323: ಉದ್ಯಮಿ ಪಾತ್ರಧಾರಿ ಯಾರು?
ಎಕ್ಸ್ ವೇದಿಕೆಯಲ್ಲಿ ವಿಜಯ್ ಮಲ್ಯ ಅವರು ಟ್ವೀಟ್ ಮಾಡುತ್ತಿದ್ದಂತೆ ಅನೇಕ ನೆಟ್ಟಿಗರು ಅವರನ್ನು ಕಾಳೆಯುವ ಪ್ರಯತ್ನ ಮಾಡಿದ್ದಾರೆ. ಬ್ಯಾಂಕ್ ಹಾಲಿಡೇ ದಿನವೇ ವಿಜಯ್ ಮಲ್ಯ ಬ್ಯಾಕ್ ಆಗಿದ್ದಾರೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಹಬ್ಬಗಳಿಗೆ ವಿಶ್ ಮಾಡೋದನ್ನು ಎಂದು ಮರೆಯ ವ್ಯಕ್ತಿ, ಸಾಲವನ್ನು ಮರು ಪಾವತಿಸುವುದು ಮಾತ್ರ ಮಾಡುವುದಿಲ್ಲ, ಜಿನೀಯಸ್ ಎಂದು ಹೇಳಿದ್ದಾರೆ.