ಹಮೀರಪುರ್: ಮದುವೆಯ ಮೊದಲ ರಾತ್ರಿ ದಿನವೇ (Wedding First Night) ಕಾಮೋತ್ತೇಜಕಗಳನ್ನು (enhancement pills) ಸೇವಿಸಿದ, ಪತ್ನಿಯೊಂದಿಗೆ ಮೃಗದಂತೆ ವರ್ತಿಸಿದ ಪರಿಣಾಮ ಆಕೆ ಮೃತಪಟ್ಟ ಘಟನೆ (bride dies) ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ. ವಯಾಗ್ರ ಸೇವಿಸಿದ ಗಂಡ ಅಕ್ಷರಶಃ ತನ್ನ ಪತ್ನಿಯನ್ನೇ ಅತ್ಯಾಚಾರವೇ ಮಾಡಿದ್ದ ಎನ್ನಲಾಗಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಪತ್ನಿಯನ್ನು ಕಾನ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಗಾಯಗಳಿಂದ ಚೇತರಿಸಿಕೊಳ್ಳದ ಆಕೆ ಮೂರು ದಿನಗಳ ಬಳಿಕ ಕೊನೆಯುಸಿರೆಳೆದಿದ್ದಾಳೆ(Viral News).
ಫೆಬ್ರವರಿ 3ರಂದು ಮದುವೆ ನಡೆದಿದ್ದು, ಫೆಬ್ರವರಿ 7ರಂದು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅದಾದ ಮೂರು ದಿನಗಳ ಬಳಿಕ ಅಂದರೆ ಫೆಬ್ರವರಿ 10ರಂದು ಮಹಿಳೆಯು ಮೃತಪಟ್ಟಿದ್ದಾಳೆ. ಈಕೆಯ ಗಂಡ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದು, ಫಸ್ಟ್ ನೈಟ್ ದಿನ ಕಾಮೋತ್ತೇಜಕ ಮಾತ್ರಗಳನ್ನು ಸೇವಿಸಿ, ಆಕೆಯೊಂದಿಗೆ ಅಸ್ವಾಭಾವಿಕ ಸೆಕ್ಸ್‌ಗೆ ಒತ್ತಾಯಿಸಿದ್ದಾನೆ. ಇದರಿಂದ ಆಕೆಗೆ ತೀವ್ರ ಗಾಯಗಳಾದವು. ಆತನ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮೃತಪಟ್ಟ ಮಹಿಳೆಯ ಸಂಬಂಧಿಕರು ಎಸ್‌ಪಿ ದೀಕ್ಷಾ ಶರ್ಮಾ ಅವರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಫೆಬ್ರವರಿ 7 ರಂದು ಆರೋಪಿಯಿಂದ ನನಗೆ ಕರೆ ಮಾಡಿ, ನನ್ನ ಸಹೋದರಿಯನ್ನು ಹಿಂದಕ್ಕೆ ಕರೆದುಕೊಂಡು ಹೋಗುವಂತೆ ಕೇಳಿದರು. ನನ್ನ ತಂಗಿ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದು, ಆಕೆಯ ಚಿಕಿತ್ಸೆಗೆ ಹಣ ಖರ್ಚು ಮಾಡಲು ಬಯಸುವುದಿಲ್ಲ ಎಂದು ಹೇಳಿದ. ಆಕೆಯ ಚಿಕಿತ್ಸೆಗೆ ಸುಮಾರು 10 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ಆರೋಪಿ ತಿಳಿಸಿದ. ನಂತರ, ನಾನು ಅವಳನ್ನು ಕಾನ್ಪುರದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದೆ. ಅಲ್ಲಿ ಮೂರು ದಿನಗಳ ಚಿಕಿತ್ಸೆಯ ನಂತರ ಅವಳು ಮೃತಪಟ್ಟಳು. ನನ್ನ ಸಹೋದರಿ ಯಾವುದೇ ಕಾಯಿಲೆಯಿಂದ ಬಳಲುತ್ತಿರಲಿಲ್ಲ. ಆಕೆಯ ಗಂಡ ಹತ್ತು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಎಂದು ಮೃತಪಟ್ಟ ಮಹಿಳೆಯ ಸಹೋದರ ಆರೋಪಿಸಿದ್ದಾರೆ.
ವರದಿಗಳ ಪ್ರಕಾರ, ಮದುವೆಯ ರಾತ್ರಿ ಕಾಮೋತ್ತೇಜಕ ಮಾತ್ರೆಗಳನ್ನು ಸೇವಿಸಿದ ನಂತರ ಪತಿ ಅವಳೊಂದಿಗೆ ದೈಹಿಕ ಸಂಬಂಧವನ್ನು ಬೆಳೆಸಲು ಪ್ರಯತ್ನಿಸಿದ್ದಾನೆ. ಅಕ್ಷರಶಃ ಆಕೆಯನ್ನು ಅತ್ಯಾಚಾರವೇ ಮಾಡಿದ್ದಾನೆ. ಇದರಿಂದ ವಧುವಿಗೆ ತೀವ್ರ ಗಾಯಗಳಾಗಿವೆ ಮತ್ತು ಆಕೆಯ ಆರೋಗ್ಯವು ಹದಗೆಡಲು ಪ್ರಾರಂಭಿಸಿತು. ಅಂತಿಮವಾಗಿ ಆಕೆ ಮೃತಪಟ್ಟಿದ್ದಾಳೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Viral News: ‘ಅಸ್ವಾಭಾವಿಕ ಲೈಂಗಿಕಕ್ರಿಯೆ’ಗೆ ಒತ್ತಾಯಿಸುತ್ತಿದ್ದ ಗಂಡನ ಶಿಶ್ನವನ್ನೇ ಬಾಯಿಂದ ಕತ್ತರಿಸಿದ ಹೆಂಡತಿ!