ಮುಂಬೈ: ಇತ್ತೀಚೆಗೆ ಏರ್ ಇಂಡಿಯಾದ ಪ್ರಯಾಣಿಕನೊಬ್ಬ ವಿಮಾನದೊಳಗೇ ಸಿಗರೇಟ್ ಸೇದಿದ್ದು, ಅದನ್ನು ಪ್ರಶ್ನಿಸಿದ ಸಿಬ್ಬಂದಿಯೊಂದಿಗೆ ಜಗಳವಾಡಿರುವ ಘಟನೆ ನಡೆದಿದೆ. ಕೆಲ ದಿನಗಳ ಹಿಂದೆ ನಡೆದಿದ್ದ ಈ ಘಟನೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral News) ಆಗಿದೆ.
ಇದನ್ನೂ ಓದಿ: Viral Video: ಕಣ್ಗಾವಲು ಡ್ರೋನ್ಗೆ ರಷ್ಯಾದ ಯುದ್ಧ ವಿಮಾನ ಡಿಕ್ಕಿ ಹೊಡೆಯಲು ಬಂದ ವಿಡಿಯೊ ಬಿಡುಗಡೆ ಮಾಡಿದ ಅಮೆರಿಕ
ಅಮೆರಿಕದ ನಾಗರಿಕನಾಗಿರುವ ರಮಾಕಾಂತ್ ದ್ವಿವೇದಿ(37) ಮಾರ್ಚ್ 11ರಂದು ಲಂಡನ್‌ನಿಂದ ಮುಂಬೈ ಪ್ರಯಾಣ ಮಾಡುತ್ತಿದ್ದರು. ಆ ವೇಳೆ ವಿಮಾನದ ಬಾತ್‌ರೂಂಗೆ ತೆರಳಿದ ರಮಾಕಾಂತ್ ಅಲ್ಲಿ ಸಿಗರೇಟ್ ಸೇದಿದ್ದಾರೆ. ತಕ್ಷಣ ವಿಮಾನದ ಅಲಾರಾಂಗಳು ಮೊಳಗಿದ್ದು, ಸಿಬ್ಬಂದಿ ಬಾತ್‌ರೂಂನತ್ತ ಓಡಿದ್ದಾರೆ. ವಿಮಾನದಲ್ಲಿ ಸಿಗರೇಟ್ ಸೇದುವುದು ಕಾನೂನು ಬಾಹಿರ ಎಂದು ಸಿಬ್ಬಂದಿ ಹೇಳಿದ್ದಾರೆ. ರಮಾಕಾಂತ್ ಅವರೊಂದಿಗೆ ಜಗಳವಾಡಿದ್ದಾನೆ. ಅವರಿಗೇ ಬೈದಿದ್ದಾನೆ. ಅಷ್ಟೇ ಅಲ್ಲದೆ ರಮಾಕಾಂತ್ ವಿಮಾನದ ಮುಖ್ಯ ದ್ವಾರವನ್ನೂ ತೆರೆಯಲು ಯತ್ನಿಸಿದ್ದ ಎಂದು ಸಿಬ್ಬಂದಿ ದೂರಿದ್ದಾರೆ. ಹಾಗೆಯೇ ಆತ ಸಹ ಪ್ರಯಾಣಿಕರಿಗೂ ಸಾಕಷ್ಟು ತೊಂದರೆ ಕೊಟ್ಟಿದ್ದಾಗಿ ವರದಿಯಾಗಿದೆ.
ರಮಾಕಾಂತ್‌ನನ್ನು ಬಂಧಿಸಿದ ಪೊಲೀಸರು ಆತನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಆರೋಪಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ ಬಳಿಕ ಆತ 25,000 ಶ್ಯೂರಿಟಿ ಮೇಲೆ ಜಾಮೀನು ಪಡೆದಿದ್ದಾನೆ. ಆದರೆ ಆರೋಪಿ ಬಳಿ ಹಣವಿಲ್ಲವಾದ್ದರಿಂದ ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆರೋಪಿಯನ್ನು ಆರ್ಥರ್ ರೋಡ್‌ನ ಜೈಲಿನಲ್ಲಿ ಇರಿಸಲಾಗಿದೆ.
ಇದನ್ನೂ ಓದಿ: Viral News : ರೋಗಿಯ ಶವದ ಜತೆಯೇ ಏಳು ವರ್ಷ ಬದುಕಿದ ವೈದ್ಯ! ಇದು ನಿಜವಾದ ಹಾರರ್ ಸ್ಟೋರಿ