ವೈರಲ್ ನ್ಯೂಸ್
Viral News : ರೋಗಿಯ ಶವದ ಜತೆಯೇ ಏಳು ವರ್ಷ ಬದುಕಿದ ವೈದ್ಯ! ಇದು ನಿಜವಾದ ಹಾರರ್ ಸ್ಟೋರಿ
ಅಮೆರಿಕದ ಫ್ಲೋರಿಡಾದಲ್ಲಿ ಕಾರ್ಲ್ ಹೆಸರಿನ ವೈದ್ಯ ತನ್ನ ಬಳಿ ಚಿಕಿತ್ಸೆ ಪಡೆದಿದ್ದ ರೋಗಿಯ ಮೃತದೇಹವನ್ನೇ ಏಳು ವರ್ಷಗಳ ಕಾಲ ಮನೆಯಲ್ಲಿಟ್ಟುಕೊಂಡಿದ್ದ (Viral News) ಕಥೆಯಿದು.
ವಾಷಿಂಗ್ಟನ್: ಯಾರನ್ನಾದರೂ ಕೊಲೆ ಮಾಡಿ, ಅವರ ಶವದ ಜತೆಯೇ ಕೆಲ ದಿನಗಳ ಕಾಲ ಬದುಕುವ ವಿಚಿತ್ರ ಅಪರಾಧಿಗಳನ್ನು ನಾವು ಇತ್ತೀಚಿನ ದಿನಗಳಲ್ಲಿ ಕಂಡಿದ್ದೇವೆ. ಆದರೆ ಬಹಳ ಹಿಂದೆ ಅಂದರೆ 1880ರ ದಶಕದಲ್ಲಿಯೇ ವೈದ್ಯನೊಬ್ಬ ತಾನು ಚಿಕಿತ್ಸೆ ನೀಡಿದ್ದ ಯುವತಿಯ ಶವದೊಂದಿಗೇ ಬರೋಬ್ಬರಿ ಏಳು ವರ್ಷಗಳ ಕಾಲ ಬದುಕಿದ್ದ. ಅಂತದ್ದೊಂದು ವಿಚಿತ್ರ ಕಥೆ (Viral News) ಇಲ್ಲಿದೆ.
ಇದನ್ನೂ ಓದಿ: Viral Video: ಮಹೀಂದ್ರ XUV700 ಎಡಿಎಎಸ್ ದುರ್ಬಳಕೆ, ಸ್ಟಂಟ್ ವಿಡಿಯೋ ವೈರಲ್
ಹೌದು. ಅಮೆರಿಕದ ಫ್ಲೋರಿಡಾದಲ್ಲಿ ಡಾ.ಡೆತ್ ಎಂದೇ ಕರೆಸಿಕೊಂಡಿದ್ದ ವೈದ್ಯ ಕಾರ್ಲ್ ಟಾಂಜ್ಲರ್ ಒಮ್ಮೆ ಎಲೆನಾ ಮಿಲಾಗ್ರೊ ಡಿ ಹೊಯೊಸ್ ಹೆಸರಿನ ಯುವತಿಗೆ ಟ್ಯೂಮರ್ ಕಾಯಿಲೆಗೆ ಚಿಕಿತ್ಸೆ ನೀಡಿದ್ದ. ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಳು. ಆಕೆಯ ಕುಟುಂಬಸ್ಥರು ಶವವನ್ನು ಸಮಾಧಿ ಮಾಡಿದ ನಂತರ ಅಲ್ಲಿಗೆ ತೆರಳಿದ್ದ ಕಾರ್ಲ್ ಆ ಶವವನ್ನು ಮತ್ತೆ ಬದುಕಿಸುವುದಕ್ಕೆಂದು ಅದನ್ನು ಮನೆಗೆ ತಂದಿದ್ದ.
ಎಲೆನಾಳ ಕಣ್ಣನ್ನು ಗಾಜಿನಿಂದ ಬದಲಿಸಿ, ಕೆಲವು ಭಾಗಗಳನ್ನು ಬೇರೆ ಬೇರೆ ವಸ್ತುಗಳಿಂದ ಬದಲಿಸಿ ಆಕೆಯನ್ನು ಬದುಕಿಸುವ ಪ್ರಯತ್ನ ಮಾಡಿದ್ದ. ಬರೋಬ್ಬರಿ ಏಳು ವರ್ಷಗಳಾದ ನಂತರ ಎಲೆನಾಳ ಶವ ಸಮಾಧಿಯಲ್ಲಿ ಇಲ್ಲದಿರುವ ವಿಚಾರ ತಿಳಿದು ಆಕೆಯ ಕುಟುಂಬ ಪೊಲೀಸ್ ದೂರು ನೀಡಿತ್ತು. ಆಗ ಈ ವೈದ್ಯ ಸಿಕ್ಕಿಬಿದ್ದಿದ್ದ.
ಇದನ್ನೂ ಓದಿ: Viral Video : ಹಾವು ಮತ್ತು ಮುಂಗುಸಿ ನಡುವೆ ನಡೆಯಿತು ಫೈಟ್; ವೈರಲ್ ಆಯ್ತು ವಿಡಿಯೊ
ಹಲವಾರು ಡಿಗ್ರಿಗಳನ್ನು ಪಡೆದುಕೊಂಡು ಭೂಮಿ ಮೇಲಿನ ಬುದ್ಧಿವಂತ ವೈದ್ಯ ಎಂದೇ ಪ್ರಖ್ಯಾತಿ ಪಡೆದಿದ್ದ ಕಾರ್ಲ್ ಆಗ ಪೊಲೀಸರು ಹಾಗೂ ನ್ಯಾಯಾಲಯದ ಎದುರು ಹೇಳಿದ್ದ ಕಥೆ ಎಲ್ಲರಲ್ಲೂ ಭಯ ಹುಟ್ಟಿಸಿತ್ತು. ಕಾರ್ಲ್ 12 ವರ್ಷದವನಿದ್ದಾಗ ಆತನ ಹಿಂದಿನ ತಲೆಮಾರಿನವರ ದೆವ್ವ ಅವನ ಬಳಿ ಬಂದು ಮಾತನಾಡಿತ್ತಂತೆ. ಮುಂದೆ ಇವಳೇ ನಿನ್ನ ವಧುವಾಗುವವಳು ಎಂದು ಎಲೆನಾಳ ಆತ್ಮವನ್ನು ಕರೆತಂದು ಪರಿಚಯಿಸಿತ್ತಂತೆ. ಅದೇ ಕಾರಣಕ್ಕೆ ಆತ ಆಕೆಯ ದೇಹವನ್ನು ಏಳು ವರ್ಷಗಳ ಕಾಲ ಮನೆಯಲ್ಲೇ ಇಟ್ಟುಕೊಂಡು ಬದುಕಿಸುವ ಪ್ರಯತ್ನ ಮಾಡಿದ್ದ. ಆಕೆಯೇ ನನ್ನ ವಧು ಎಂದು ನ್ಯಾಯಾಲಯದ ಮುಂದೆಯೂ ಹೇಳಿದ್ದ.
ದೇಶ
Viral Video: ರಸ್ತೆ ಅಂತಾರಾ ಇದಕ್ಕೆ?-ಆಕ್ರೋಶದಿಂದ ಕೂಗುತ್ತ, ತಮ್ಮ ಬೂಟು ಕಾಲಿನಿಂದ ಡಾಂಬರು ಕೆದರಿದ ಶಾಸಕ!
ಶಾಸಕ ಬೇದಿರಾಮ್ ಅವರು ಭೇಟಿಕೊಟ್ಟಿದ್ದು ಗಾಝಿಪುರದ ಜಖಾನಿಯನ್ ಏರಿಯಾದಲ್ಲಿ ನಿರ್ಮಿಸಲಾದ, ಜಂಗೀಪುರ- ಬಹರಿಯಾಬಾದ್-ಯೂಸುಫ್‌ಪುರ್ ಸಂಪರ್ಕ ರಸ್ತೆಗೆ. ಇಲ್ಲಿ 4.5 ಕಿಮೀಗಳಷ್ಟು ದೂರವನ್ನು 3.8 ಕೋಟಿ ರೂಪಾಯಿ ವೆಚ್ಚದಲ್ಲಿ ಆರು ತಿಂಗಳ ಹಿಂದಷ್ಟೇ ನಿರ್ಮಿಸಲಾಗಿತ್ತು.
ಗಾಝಿಪುರ: ಕಳಪೆಯಾದ ರಸ್ತೆಯನ್ನು ನೋಡಿ ಶಾಸಕರೊಬ್ಬರು ಕೆಂಡಾಮಂಡಲರಾಗಿ, ತಮ್ಮ ಬೂಟು ಕಾಲಿನಿಂದ ಆ ರಸ್ತೆಯನ್ನು ಕೆದರಿ, ಜಲ್ಲಿಕಲ್ಲು, ಡಾಂಬರುಗಳನ್ನೆಲ್ಲ ತೆಗೆದು ತೋರಿಸಿದ ಘಟನೆ ಉತ್ತರ ಪ್ರದೇಶದ ಗಾಝಿಪುರದಲ್ಲಿ ನಡೆದಿದೆ. ಶಾಸಕರ ಆಕ್ರೋಶ ಮತ್ತು ಅವರು ಕಾಲಿನಿಂದಲೇ ರಸ್ತೆಯನ್ನು ಕೆದರಿದ, ಗುತ್ತಿಗೆದಾರನಿಗೆ ಬಾಯಿಗೆ ಬಂದಂತೆ ಬೈದಿರುವ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸುಹೇಲ್ದೇವ್ ಭಾರತೀಯ ಸಮಾಜ ಪಾರ್ಟಿ ಶಾಸಕ ಬೇದಿರಾಮ್ ಅವರು ತಮ್ಮ ವಿಧಾನಸಭಾ ಕ್ಷೇತ್ರವಾದ ಗಾಝಿಪುರಕ್ಕೆ ಭೇಟಿಕೊಟ್ಟಿದ್ದರು. ಅಲ್ಲಿ ಒಂದು ಕಡೆ ಹಾಳಾದ ರಸ್ತೆಯನ್ನು ನೋಡಿದ ಅವರು ಉಗ್ರಸ್ವರೂಪ ತಾಳಿದ್ದಾರೆ. ‘ಇದಕ್ಕೆ ಯಾರಾದರೂ ರಸ್ತೆ ಎನ್ನುತ್ತಾರಾ? ಇಲ್ಲಿ ಕಾರು ಸಂಚಾರ ಮಾಡಬಹುದಾ?’ ಎಂದು ಕೋಪದಿಂದ ಗುತ್ತಿಗೆದಾರನ ಬಳಿ ಪ್ರಶ್ನಿಸಿದ್ದಾರೆ.
‘ಗಾಝಿಪುರದಲ್ಲಿ ಹಲವು ಕಡೆಗಳಲ್ಲಿ ರಸ್ತೆ ಸರಿಯಿಲ್ಲ ಎಂದು ಸ್ಥಳೀಯರು ದೂರು ಕೊಟ್ಟ ಕಾರಣಕ್ಕೆ, ಪರಿಶೀಲನೆ ನಡೆಸಲು ಅಲ್ಲಿಗೆ ತೆರಳಿದ್ದೆ. ಆದರೆ ನಾನು ಅಲ್ಲಿಗೆ ಹೋದರೆ ಪಿಡಬ್ಲ್ಯೂಡಿ ಇಲಾಖೆಯ ಯಾವ ಅಧಿಕಾರಿಯೂ ಇರಲಿಲ್ಲ. ಹೀಗಾಗಿ ಗುತ್ತಿಗೆದಾರನನ್ನು ಸ್ಥಳಕ್ಕೆ ಕರೆಸಿ ಸಮಸ್ಯೆ ಏನೆಂದು ತೋರಿಸಿದ್ದೇನೆ. ಅದಾದ ಮೇಲೆ ಪಿಡಬ್ಲ್ಯೂಡಿ ಉನ್ನತ ಅಧಿಕಾರಿಯೊಂದಿಗೆ ಮಾತಾಡಿದ್ದೇನೆ. ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡಲಾಗಿದ್ದರೂ, ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿಲ್ಲ. ಒಂದು ವರ್ಷ ಬಿಡಿ, ಆರು ತಿಂಗಳೂ ಕೂಡ ರಸ್ತೆ ಬಾಳಿಕೆಗೆ ಬರುವುದಿಲ್ಲ’ ಎಂದು ಶಾಸಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಂದಹಾಗೇ, ಶಾಸಕ ಬೇದಿರಾಮ್ ಅವರು ಭೇಟಿಕೊಟ್ಟಿದ್ದು ಗಾಝಿಪುರದ ಜಖಾನಿಯನ್ ಏರಿಯಾದಲ್ಲಿ ನಿರ್ಮಿಸಲಾದ, ಜಂಗೀಪುರ- ಬಹರಿಯಾಬಾದ್-ಯೂಸುಫ್‌ಪುರ್ ಸಂಪರ್ಕ ರಸ್ತೆಗೆ. ಇಲ್ಲಿ 4.5 ಕಿಮೀಗಳಷ್ಟು ದೂರವನ್ನು 3.8 ಕೋಟಿ ರೂಪಾಯಿ ವೆಚ್ಚದಲ್ಲಿ ಆರು ತಿಂಗಳ ಹಿಂದಷ್ಟೇ ನಿರ್ಮಿಸಲಾಗಿತ್ತು. ಆದರೆ ಈಗಲೇ ಹಾಳಾಗಿದೆ. ಹೀಗಾಗಿ ಸ್ಥಳೀಯರು ಒಟ್ಟಾಗಿ ಅಲ್ಲಿನ ಶಾಸಕರಿಗೆ ದೂರು ಕೊಟ್ಟಿದ್ದರು ಎನ್ನಲಾಗಿದೆ.
ಉತ್ತರ ಪ್ರದೇಶದಲ್ಲಿ ಹಾಳಾದ ರಸ್ತೆಯ ಚಿತ್ರಣ ಬಹಿರಂಗವಾಗಿದ್ದು ಇದೇ ಮೊದಲಲ್ಲ. ಕಳೆದ ವರ್ಷ ಪಿಲಿಬಿತ್ನಲ್ಲಿ ನಾಗರಿಕರೊಬ್ಬರು ರಸ್ತೆಯನ್ನು ತಮ್ಮ ಕೈಗಳಿಂದಲೇ ಕಿತ್ತು ಹಾಕಿದ್ದರು. ರಸ್ತೆ ಮೇಲ್ಮೈಯೆಲ್ಲ ಕಿತ್ತುಬಂದಿದ್ದನ್ನು ತೋರಿಸಿದ್ದರು. ಅದೆಷ್ಟು ಕಳಪೆಯಾಗಿ ರಸ್ತೆ ನಿರ್ಮಾಣ ಮಾಡಲಾಗಿದೆ ನೋಡಿ ಎಂದು ವಿಡಿಯೊ ಮೂಲಕ ತೋರಿಸಿದ್ದರು. ಆ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿತ್ತು.
ಕರ್ನಾಟಕ
Viral Video: ಅರ್ಧ ರಾತ್ರೀಲಿ ಮಧ್ಯ ರಸ್ತೇಲಿ ಮೊಬೈಲ್ ಹಿಡಿದು ನಿಂತಿದ್ದ ಇನ್ಫ್ಲುಯೆನ್ಸರ್; ಮುಂದಾಗಿದ್ದೇನು?
Viral Video: ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್‌ಗಳು (social media influencers) ಎಲ್ಲೆಂದರಲ್ಲಿ ಮೊಬೈಲ್ ಹಿಡಿದು ವಿಡಿಯೊ ಮಾಡುವ ಮುನ್ನ ಹುಷಾರಾಗಿ ಇರಬೇಕು ಎಂದು ಸಾರುತ್ತಿದೆ ಈ ಘಟನೆ.
ಬೆಂಗಳೂರು: ನಗರ ಪ್ರದೇಶದಲ್ಲಿ ಕಳ್ಳರ ಹಾವಳಿ ಹೆಚ್ಚಿದೆ. ಸ್ಕೂಟರ್‌ನಲ್ಲಿ ಬಂದ ಕಳ್ಳರಿಬ್ಬರು ಮೊಬೈಲ್ ಕಸಿದು ಪರಾರಿ ಆಗಲು ಯತ್ನಿಸಿದ್ದಾರೆ. ರೆಸ್ಟೋರೆಂಟ್ ಬಳಿ ನಿಂತು ವಿಡಿಯೊ ಮಾಡುತ್ತಿದ್ದ ಇನ್ಫ್ಲುಯೆನ್ಸರ್‌ವೊಬ್ಬರ ಮೊಬೈಲ್ ಎಗರಿಸಲು ಬಂದ ಕಳ್ಳರ ಕೃತ್ಯದ ವಿಡಿಯೊ ಬೆಂಗಳೂರು 360 ಎಂಬ ಟ್ವಿಟರ್ ಪೇಜ್‌ನಲ್ಲಿ ವೈರಲ್ (viral video) ಆಗಿದೆ.
ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿರುವ ರುಚಿಕಾ ಎಂಬುವರು ರೆಸ್ಟೋರೆಂಟ್‌ವೊಂದರ ಕಂಟೆಂಟ್ ಕ್ರಿಯೆಟ್ ಮಾಡಲು ಮುಂದಾಗಿದ್ದರು. ಮೊದಲಿಗೆ ಇಬ್ಬರು ಹುಡುಗಿಯರು Ever tried Gufha Restaurant? ಎನ್ನುತ್ತಾ ಮತ್ತಿಬ್ಬರು ಹುಡುಗಿಯರತ್ತ ಕ್ಯಾಮೆರಾ ತಿರುಗಿಸಿದರು. ಅಷ್ಟರಲ್ಲಿ ಸ್ಕೂಟರ್‌ನಲ್ಲಿ ಬಂದ ಇಬ್ಬರು ಖದೀಮರು ಮೊಬೈಲ್ ಎಗರಿಸಲು ಮುಂದಾದರು.
ವಿಡಿಯೊ ಸಮೇತ ತಮ್ಮ ಅನುಭವ ಹಂಚಿಕೊಂಡಿರುವ ರುಚಿಕಾ, ನಾವು ಕಂಟೆಂಟ್ ಕ್ರಿಯೇಟರ್‌ಗಳಾಗಿರುವುದರಿಂದ ರೆಸ್ಟೋರೆಂಟ್‌ವೊಂದರ ಕಂಟೆಂಟ್ ಶೂಟಿಂಗ್ ಮಾಡುತ್ತಿದ್ದೆವು. ಈ ವೇಳೆ ಸ್ಕೂಟರ್‌ನಲ್ಲಿ ಬಂದ ಇಬ್ಬರು ಹುಡುಗರು ನಮ್ಮ ಕೈನಲ್ಲಿದ್ದ ನನ್ನ ಫೋನ್ ಕಸಿದುಕೊಳ್ಳಲು ಪ್ರಯತ್ನಿಸಿದರು. ಆದರೆ ಅದೃಷ್ಟವಶಾತ್ ನಾನು ಆ ಸಮಯದಲ್ಲಿ ನನ್ನ ಫೋನ್ ಅನ್ನು ಕೆಳಗೆ ಮಾಡಿದ್ದರಿಂದ ಕಳ್ಳತನ ಆಗುವುದು ತಪ್ಪಿತು ಎಂದಿದ್ದಾರೆ.
ಮೊಬೈಲ್ ಕಸಿಯಲು ಬಂದ ಕಳ್ಳರು
ರಾತ್ರಿ 11.15ರ ಸುಮಾರಿಗೆ ಜಯನಗರದಲ್ಲಿರುವ ರೆಸ್ಟೋರೆಂಟ್ ಹೊರಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಇನ್ನು ಈ ಘಟನೆ ನಡೆಯುವ ಮುನ್ನ ಈ ಯುವತಿಯರು ಕನಿಷ್ಠ 20 ನಿಮಿಷಗಳ ಕಾಲ ಅಲ್ಲೆ ವಿಡಿಯೊ ರೆಕಾರ್ಡ್ ಮಾಡುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ. ಇದೆನ್ನಲ್ಲ ದೂರದಿಂದಲೇ ಗಮನಿಸಿ ಕಳ್ಳರು ಫೋನ್ ಎಗರಿಸುವ ಕೃತ್ಯಕ್ಕೆ ಮುಂದಾಗಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಸದ್ಯ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸರು, ಘಟನೆಯ ವಿವರ ಹಾಗೂ ದೂರುದಾರರ ಫೋನ್ ನಂಬರ್ ನೀಡುವಂತೆ ತಿಳಿಸಿದ್ದಾರೆ.
ತಮಗೂ ಹೀಗೆಲ್ಲ ಆಗಿದೆ ಎಂದು ಕಮೆಂಟ್
ಯುವತಿಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಇದೇ ರೀತಿಯ ಅನುಭವ ತಮಗೂ ಆಗಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಅದರಲ್ಲೊಬ್ಬರು ತಾನು ರಾತ್ರಿ 8.30ರ ಸುಮಾರಿಗೆ ಕೋರಮಂಗಲ 1ನೇ ಬ್ಲಾಕ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಆಟೊದಲ್ಲಿ ಹಿಂಬಾಲಿಸಿ ಕೆಲವರು ಫೋನ್ ಕಸಿದುಕೊಳ್ಳಲು ಪ್ರಯತ್ನಸಿದರು. ಆದರೆ ಫೋನ್ ಗಟ್ಟಿಯಾಗಿ ಹಿಡಿದಿದ್ದರಿಂದ ಅದು ಸಾಧ್ಯವಾಗಲಿಲ್ಲ. ನಿತ್ಯವೂ ಈ ದಾರಿಯಲ್ಲೆ ಮನೆಗೆ ಹೋಗಿ ಬರಬೇಕಾಗಿರುವುದರಿಂದ ಭೀತಿಯಲ್ಲೆ ಓಡಾಡಬೇಕಿದೆ ಎಂದಿದ್ದಾರೆ.
ಇದನ್ನೂ ಓದಿ: Karnataka Rain: ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ; ಬೆಂಗಳೂರು ಸೇರಿ ಇಲ್ಲೆಲ್ಲ ವರ್ಷಧಾರೆ
ಬೆಂಗಳೂರು ಸೇರಿದಂತೆ ವಿವಿಧೆಡೆ ಕಳ್ಳತನ ಪ್ರಕರಣಗಳು ವರದಿ ಆಗುತ್ತಿದ್ದು, ಪೊಲೀಸರ ಕಾರ್ಯವೈಖರಿ ಜನಾಕ್ರೋಶಕ್ಕೆ ಕಾರಣವಾಗುತ್ತಿದೆ. ಸರಗಳ್ಳತನದಿಂದ ಹಿಡಿದು ಮೊಬೈಲ್ ಹಾಗೂ ಅಪಾರ್ಟ್‌ಮೆಂಟ್‌ನಲ್ಲಿ ಚಪ್ಪಲಿ, ಶೂ ಕಳ್ಳತನ ಮಾತ್ರವಲ್ಲದೆ ಮನೆಯ ಮುಂದೆ ಇಟ್ಟಿರುವ ಹೂ ಕುಂಡಗಳನ್ನೂ ಕಳ್ಳತನ ಮಾಡುವ ಖರ್ತಾನಕ್ ಕಳ್ಳರ ಹಾವಳಿ ಹೆಚ್ಚಿದೆ.
ಕ್ರೈಂ
Viral News : ಅಪ್ಪ ಓದಿಕೋ ಎಂದಿದ್ದೇ ತಪ್ಪಾಯ್ತು; ನೇಣು ಬಿಗಿದುಕೊಂಡು ಮೃತಳಾದ 9 ವರ್ಷದ ಇನ್‌ಸ್ಟಾ ಕ್ವೀನ್!
ಅಪ್ಪ ಓದಿಕೊಳ್ಳುವುದಕ್ಕೆ ಹೇಳಿದರು ಎನ್ನುವ ಕಾರಣಕ್ಕೇ ಬಾಲಕಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಈ ವಿಚಾರ ಎಲ್ಲೆಡೆ ಸುದ್ದಿಯಾಗಿದೆ.
ಚೆನ್ನೈ: ಮಕ್ಕಳೆಂದ ಮೇಲೆ ಆಟ, ಪಾಠ ಇರಲೇಬೇಕು. ಓದದೆ ಆಟವನ್ನೇ ಆಡುತ್ತಿದ್ದರೆ ತಂದೆ ತಾಯಿ ಬೈಯುವುದು, ಹೊಡೆಯುವುದು ಸಾಮಾನ್ಯವೇ. ಆದರೆ ತಮಿಳುನಾಡಿನಲ್ಲಿ ಬಾಲಕಿಯೊಬ್ಬಳು ತನ್ನ ತಂದೆ ಓದಿಕೊಳ್ಳುವುದಕ್ಕೆ ಹೇಳಿದರು ಎನ್ನುವ ಕಾರಣಕ್ಕೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್‌ಸ್ಟಾಗ್ರಾಂನಲ್ಲಿ ಮಿಂಚುತ್ತಿದ್ದ ಆ ಬಾಲಕಿಯ ಸಾವು ಇದೀಗ ಎಲ್ಲೆಡೆ ವೈರಲ್ (Viral News) ಸುದ್ದಿಯಾಗಿದೆ. ಈ ಬಾಲಕಿ ಇನ್‌ಸ್ಟಾ ಕ್ವೀನ್ ಎಂದೇ ಖ್ಯಾತಳಾಗಿದ್ದಳು.
ಇದನ್ನೂ ಓದಿ: Viral Video: ಐಸ್ ಕ್ರೀಂ ತಯಾರಿಸೋಕೆ ಫ್ರಿಜ್ ಬೇಡ್ವೇ ಬೇಡ; ಸೀಲಿಂಗ್ ಫ್ಯಾನ್ ಇದ್ದರೂ ಸಾಕು ಎನ್ನುತ್ತಿದ್ದಾರೆ ಈ ಮಹಿಳೆ
ತಮಿಳುನಾಡಿನ ತಿರವಲ್ಲೂರು ನಿವಾಸಿ ಶಿವಮೂರ್ತಿ ಅವರ ಮಗಳು ಪ್ರತೀಕ್ಷಾ ಈಗಿನ್ನೂ 9ನೇ ವರ್ಷದಲ್ಲಿದ್ದಳು. ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್, ಪೋಸ್ಟ್‌ಗಳನ್ನು ಹಾಕುತ್ತಿದ್ದ ಪ್ರತೀಕ್ಷಾ ಊರಲೆಲ್ಲ ತುಂಬ ಪ್ರಸಿದ್ಧಳಾಗಿದ್ದಳಂತೆ. ಊರವರೆಲ್ಲರೂ ಆಕೆಗೆ ಇನ್‌ಸ್ಟಾ ಕ್ವೀನ್ ಎಂದೇ ಕರೆಯುತ್ತಿದ್ದರಂತೆ. ಸೋಮವಾರದಂದು ಆಕೆ ಶಿವಮೂರ್ತಿ ಅವರ ಮಾವನ ಮನೆ ಬಳಿ ಆಟವಾಡುತ್ತಿದ್ದಳು. ಅದನ್ನು ಕಂಡ ಶಿವಮೂರ್ತಿ ಆಟವಾಡಿದ್ದು ಸಾಕು, ಮನೆಗೆ ಹೋಗಿ ಓದಿಕೋ ಎಂದು ಹೇಳಿದ್ದಾರೆ. ಹಾಗೆಯೇ ಮನೆಯ ಕೀಯನ್ನು ಆಕೆಯ ಕೈಗೆ ಕೊಟ್ಟಿದ್ದಾರೆ.
ಮಗಳಿಗೆ ಕೀ ಕೊಟ್ಟ ಶಿವಮೂರ್ತಿ ಬೈಕ್‌ಗೆ ಪೆಟ್ರೋಲ್ ಹಾಕಿಸಿಕೊಂಡು ಬರಲೆಂದು ತೆರಳಿದ್ದಾರೆ. ರಾತ್ರಿ 8.15ರ ವೇಳೆಗೆ ಮನೆಗೆ ವಾಪಸು ಬಂದಿದ್ದಾರೆ. ಆಗ ಮನೆ ಒಳಗಿನಿಂದ ಲಾಕ್ ಆಗಿತ್ತು. ಎಷ್ಟೇ ಕರೆದರೂ ಮಗಳು ಬಂದು ಬಾಗಿಲು ತೆರೆದಿಲ್ಲ. ಗಾಬರಿಗೊಂಡ ಶಿವಮೂರ್ತಿ ಮನೆಯ ಕಿಟಕಿಯೊಂದನ್ನು ಒಡೆದು ಒಳಗೆ ಹೋಗಿದ್ದಾರೆ. ಅಲ್ಲಿ ಪ್ರತೀಕ್ಷಾ ಟವಲ್ ಒಂದರಿಂದ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಆಕೆಯ ಜೀವ ಹೋಗದೆ ಒದ್ದಾಡುತ್ತಿದ್ದ ಹಿನ್ನೆಲೆ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ವೈರಲ್ ನ್ಯೂಸ್
Viral Video: ಐಸ್ ಕ್ರೀಂ ತಯಾರಿಸೋಕೆ ಫ್ರಿಜ್ ಬೇಡ್ವೇ ಬೇಡ; ಸೀಲಿಂಗ್ ಫ್ಯಾನ್ ಇದ್ದರೂ ಸಾಕು ಎನ್ನುತ್ತಿದ್ದಾರೆ ಈ ಮಹಿಳೆ
ಮಹಿಳೆ ಮೊದಲು ಹಾಲನ್ನು ಕಾಯಿಸಿಕೊಂಡು, ಐಸ್ಕ್ರೀಂ ಮಾಡಲು ಹಾಕಬೇಕಾದ ಪದಾರ್ಥಗಳನ್ನೆಲ್ಲ ಅದಕ್ಕೆ ಹಾಕಿ, ಗ್ಯಾಸ್ ಸ್ಟವ್ ಮೇಲಿಟ್ಟು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳುತ್ತಾರೆ. ಆ ಮಿಶ್ರಣವನ್ನು ಒಂದು ಚಿಕ್ಕ ಸ್ಟೀಲ್ ಕ್ಯಾನ್ಗೆ ಸುರಿಯುತ್ತಾರೆ. ಆಮೇಲೆ ಏನು ಮಾಡಿದರು ಎಂಬುದನ್ನು ಕೆಳಗಿನ ವಿಡಿಯೊದಲ್ಲೇ ನೋಡಿ !
ಮೊದಲು ಐಸ್ಕ್ರೀಂ ಎಂದರೆ ಅದು ಹೊರಗೆ ಅಂಗಡಿಗಳಲ್ಲಿ ಮಾತ್ರ ಸಿಗುತ್ತದೆ ಎಂಬ ಕಾಲವಿತ್ತು. ಆದರೆ ಈಗ ಫ್ರಿಜ್ ಇರುವ ಮನೆಗಳಲ್ಲೆಲ್ಲ ಸಾಮಾನ್ಯವಾಗಿ ಐಸ್ಕ್ರೀಂ ತಯಾರಿ ಮಾಡುತ್ತಾರೆ. ಅದೇನೇ ಇದ್ದರೂ, ಐಸ್ಕ್ರೀಂ ಮಾಡಲು ಫ್ರಿಜ್ ಅಂತೂ ಬೇಕೇಬೇಕು. ಆದರೆ ಫ್ರಿಜ್ ಇಲ್ಲದೆಯೂ ನಾನು ಐಸ್ಕ್ರೀಂ ತಯಾರಿ ಮಾಡುತ್ತೇನೆ ಎನ್ನುತ್ತಾರೆ ಈ ಮಹಿಳೆ. ಈಕೆಯ ಐಡಿಯಾ ನೋಡಿ ನೆಟ್ಟಿಗರು ಅಚ್ಚರಿಯಿಂದ ಹುಬ್ಬೇರಿಸಿದ್ದಾರೆ. ಉದ್ಯಮಿ ಆನಂದ್ ಮಹೀಂದ್ರಾ ಅವರು ಟ್ವಿಟರ್ನಲ್ಲಿ ವಿಡಿಯೊ ಶೇರ್ (Viral Video) ಮಾಡಿಕೊಂಡಿದ್ದಾರೆ. ನೀವು ಒಮ್ಮೆ ನೋಡಿಬಿಡಿ.
ಮಹಿಳೆ ಮೊದಲು ಹಾಲನ್ನು ಕಾಯಿಸಿಕೊಂಡು, ಐಸ್ಕ್ರೀಂ ಮಾಡಲು ಹಾಕಬೇಕಾದ ಪದಾರ್ಥಗಳನ್ನೆಲ್ಲ ಅದಕ್ಕೆ ಹಾಕಿ, ಗ್ಯಾಸ್ ಸ್ಟವ್ ಮೇಲಿಟ್ಟು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳುತ್ತಾರೆ. ಆ ಮಿಶ್ರಣವನ್ನು ಒಂದು ಚಿಕ್ಕ ಸ್ಟೀಲ್ ಕ್ಯಾನ್ಗೆ ಸುರಿಯುತ್ತಾರೆ. ಇಷ್ಟಾದ ಮೇಲೆ ಆಕೆ ಆ ಕ್ಯಾನ್ಗೆ ಮುಚ್ಚಲು ಹಾಕಿ, ಮತ್ತೊಂದು ದೊಡ್ಡದಾದ ಅಲ್ಯೂಮೀನಿಯಂ ಪಾತ್ರೆಯಲ್ಲಿ ಅದನ್ನು ಇಡುತ್ತಾರೆ ಮತ್ತು ಹಾಲಿನ ಮಿಶ್ರಣ ಇರುವ ಕ್ಯಾನ್ಗೆ ಇರುವ ಹಿಡಿಕೆಗೆ ಒಂದು ಹಗ್ಗ ಕಟ್ಟುತ್ತಾರೆ. ಇದಾದ ಮೇಲೆ ಆಕೆ ಅಲ್ಯೂಮಿನಿಯಂ ಪಾತ್ರೆಯಲ್ಲಿ, ಸ್ಟೀಲ್ ಕ್ಯಾನ್ ಸುತ್ತಲೂ ದೊಡ್ಡದೊಡ್ಡ ಐಸ್ ತುಂಡುಗಳನ್ನು ಹಾಕುತ್ತಾರೆ. ಅಷ್ಟಾದ ಮೇಲೆ ಫ್ಯಾನ್ ಸ್ವಿಚ್ ಆನ್ ಮಾಡುತ್ತಾರೆ. ಅರೆ, ಅವರೇಕೆ ಫ್ಯಾನ್ ಆನ್ ಮಾಡುತ್ತಾರೆ ಎಂದು ನಿಮಗೆ ಅನ್ನಿಸಬಹುದು. ಅಲ್ಲೇ ಇರುವುದು ಟ್ವಿಸ್ಟ್…!
ಸ್ಟೀಲ್ ಕ್ಯಾನ್ ಹಿಡಿಕೆಗೆ ಕಟ್ಟಿರುವ ಹಗ್ಗದ ಇನ್ನೊಂದು ತುದಿಯನ್ನು ಸೀಲಿಂಗ್ ಫ್ಯಾನ್ಗೆ ಕಟ್ಟಲಾಗಿರುತ್ತದೆ. ಫ್ಯಾನ್ ತಿರುಗುತ್ತಿದ್ದಂತೆ ಇತ್ತ ಅಲ್ಯೂಮೀನಿಯಂ ಪಾತ್ರೆಯಲ್ಲಿರುವ ಸ್ಟೀಲ್ ಕ್ಯಾನ್ ಗಿರಗಿರನೆ ತಿರುಗುತ್ತದೆ. ಐಸ್ ತುಂಡುಗಳ ಮಧ್ಯೆ ಅದು ತಿರುಗುತ್ತಿದ್ದಂತೆ, ಅದರೊಳಗೆ ಇರುವ ಹಾಲಿನ ಮಿಶ್ರಣ ಐಸ್ಕ್ರೀಂ ಆಗಿ ಬದಲಾಗುತ್ತದೆ. ಮಹಿಳೆ ಕೆಲ ಹೊತ್ತು ಕ್ಯಾನ್ಗೆ ಮುಚ್ಚಳವನ್ನು ಹಾಕಿ ತಿರುಗಿಸಿ, ಮತ್ತೆ ಕೆಲ ನಿಮಿಷಗಳ ಕಾಲ ಮುಚ್ಚಳವನ್ನು ತೆಗೆದು ತಿರುಗಲು ಬಿಡುತ್ತಾರೆ. ಬಳಿಕ ಅದನ್ನು ಅಲ್ಲಿಂದ ತೆಗೆದು, ಐಸ್ ಕ್ರೀಂ ಎಂದು ಸರ್ವ್ ಮಾಡುತ್ತಾರೆ.
ವಿಡಿಯೊ ಶೇರ್ ಮಾಡಿಕೊಂಡ ಆನಂದ್ ಮಹೀಂದ್ರಾ ಅವರು, ‘ಮನಸ್ಸಿದ್ದಲ್ಲಿ ಮಾರ್ಗ. ಇದು ಹ್ಯಾಂಡ್ ಮೇಡ್ ಮತ್ತು ಫ್ಯಾನ್ ಮೇಡ್ ಐಸ್ ಕ್ರೀಂ. ಇದೆಲ್ಲ ಸಾಧ್ಯವಾಗುವುದು ಭಾರತದಲ್ಲಿ ಮಾತ್ರ’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಮಾರ್ಚ್ 29ರಂದು ಈ ವಿಡಿಯೊವನ್ನು ಆನಂದ್ ಮಹೀಂದ್ರಾ ಶೇರ್ ಮಾಡಿಕೊಂಡಿದ್ದು, ಇಲ್ಲಿಯವರೆಗೆ 1.1 ಮಿಲಿಯನ್ಗಳಷ್ಟು ವೀವ್ಸ್ ಬಂದಿದೆ. ಸಾವಿರಾರು ಜನರು ಲೈಕ್ಸ್ ಕೊಟ್ಟಿದ್ದಾರೆ. ವಿಶ್ವದಲ್ಲೇ ಅತ್ಯುತ್ತಮವಾದ ಐಸ್ಕ್ರೀಂ ತಯಾರಿಸುವ ವಿಧಾನ ಎಂದು ಒಬ್ಬರು ಬರೆದಿದ್ದರೆ, ಇನ್ನೊಬ್ಬರು, ಮಹಿಳೆಯ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ.
-
ಸುವಚನ9 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ6 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಕರ್ನಾಟಕ7 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಪ್ರಮುಖ ಸುದ್ದಿ15 hours ago
ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು
-
ಕ್ರಿಕೆಟ್22 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ವೈರಲ್ ನ್ಯೂಸ್22 hours ago
Viral Video: ಇದು ರೋಲ್ಸ್ ರಾಯ್ಸ್ ಆಫ್ ಆಟೋ; ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು ಮೇಲ್ಭಾಗ ತೆರೆದುಕೊಳ್ಳತ್ತೆ!
-
ಕರ್ನಾಟಕ18 hours ago
ವಿಸ್ತಾರ Special: ಬಿಜೆಪಿ ಇತಿಹಾಸದಲ್ಲೇ ಮೊದಲ ಪ್ರಯತ್ನ ಇದು: ಅಭ್ಯರ್ಥಿ ಆಯ್ಕೆಗೆ ಶುಕ್ರವಾರ ನಡೆಯಲಿದೆ ಆಂತರಿಕ ಚುನಾವಣೆ
-
ಕ್ರಿಕೆಟ್19 hours ago
IPL 203 : ಐಪಿಎಲ್ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ