Site icon Vistara News

Viral News: ರೇಮಂಡ್ ಮಾಲೀಕ ಸಿಂಘಾನಿಯಾನ ಕಂಜೂಸ್‌ ಮುಖ ಬಯಲು ಮಾಡಿದ ‘ಮೋದಿ’

gautam singhania navaz modi

ಹೊಸದಿಲ್ಲಿ: ರೇಮಂಡ್‌ ಸಂಸ್ಥೆಯ ಎಂಡಿ (Raymond MD) ಗೌತಮ್ ಸಿಂಘಾನಿಯಾರಿಂದ (Gautam Singhania) ವಿಚ್ಛೇದನ ತೆಗೆದುಕೊಂಡಿರುವ ಪತ್ನಿ ನವಾಜ್ ಮೋದಿ (Navaz Modi), ಗೌತಮ್‌ ಸಿಂಘಾನಿಯಾನ ಹಲವು ವಿಚಿತ್ರ ಖಯಾಲಿಗಳನ್ನು ಬಯಲು ಮಾಡುತ್ತಿದ್ದಾರೆ. ಅಂಥದೇ ಇನ್ನೊಂದು ಆರೋಪ ಮಾಡಿರುವ ಆಕೆ, ಆತನ ʼಕಂಜೂಸಿತನʼವನ್ನು ಬಯಲಿಗೆಳೆದಿದ್ದಾಳೆ. ಈ ಕೋಟ್ಯಧಿಪತಿ ಕೈಗಾರಿಕೋದ್ಯಮಿ ನೀರು ಆಹಾರ ಇಲ್ಲದೆ ಆಕೆಯನ್ನು ತಿರುಪತಿ ಬೆಟ್ಟ ಹತ್ತುವಂತೆ ಮಾಡಿದ್ದನಂತೆ.

ಕುಬೇರ ದಂಪತಿಯ ನಡುವೆ ಆಗಿರುವ ವಿಚ್ಛೇದನ, ಅವರ ದಾಂಪತ್ಯದಲ್ಲಿದ್ದ ಕಹಿಯನ್ನು ಹೊರಗೆ ಹಾಕುತ್ತಿದೆ. ಗೌತಮ್‌ ಸಿಂಘಾನಿಯಾ ತಮ್ಮನ್ನು ತಿರುಪತಿ ದೇವಸ್ಥಾನಕ್ಕೆ (Tirupati shrine) ಆಹಾರ ಮತ್ತು ನೀರು ಇಲ್ಲದೆ ನಡೆಸಿದರು ಎಂದು ಆಡಿಯೋ ಕ್ಲಿಪ್‌ನಲ್ಲಿ ನವಾಜ್‌ ಹೇಳಿಕೊಂಡಿದ್ದಾಳೆ. ʼಸಿಂಘಾನಿಯಾ ಭಗವಾನ್ ವೆಂಕಟೇಶ್ವರನ ದೊಡ್ಡ ಭಕ್ತ, ಆದರೆ ವೆಂಕಟೇಶ ಹಣದ ದೇವರು ಎಂಬ ಕಾರಣದಿಂದ ಮಾತ್ರʼ ಎಂದು ಟೀಕಿಸಿದ್ದಾರೆ.

ನವಾಜ್‌ ತನ್ನನ್ನು ಮದುವೆಯಾಗಲು ಒಪ್ಪಿದರೆ ತಿರುಮಲದಲ್ಲಿರುವ ತಿರುಪತಿ ದೇವಸ್ಥಾನಕ್ಕೆ ತಾನು ಆಕೆಯೊಂದಿಗೆ ಬರುವುದಾಗಿ ಗೌತಮ್‌ ಹರಕೆ ಹೇಳಿಕೊಂಡಿದ್ದನಂತೆ. ಮದುವೆಯ ನಂತರ ಆಹಾರ ನೀರು ಏನೂ ಇಲ್ಲದೆ ಪವಿತ್ರ ಬೆಟ್ಟವನ್ನು ಕಟ್ಟಪಡುತ್ತಾ ಏರಲು ಒತ್ತಾಯಿಸಿದ ಎಂದು ನವಾಜ್ ಉಲ್ಲೇಖಿಸಿದ್ದಾರೆ.

ಗೌತಮ್‌ ಸಿಂಘಾನಿಯಾ ತನ್ನನ್ನು ಹಾಗೂ ಮಗಳನ್ನು ಒದೆಯುವುದು, ಗುದ್ದುವುದು ಮಾಡಿದ್ದಾರೆ ಎಂದು ನವಾಜ್‌ ಈ ಹಿಂದೆ ಆರೋಪಿಸಿದ್ದರು. ಹೊಡೆತದ ಗಾಯಗಳು ತುಂಬಾ ತೀವ್ರವಾಗಿದ್ದು, ಆಕೆಗೆ ಆಂತರಿಕ ರಕ್ತಸ್ರಾವವಾಗಿರಬಹುದು ಎಂದು ಆಸ್ಪತ್ರೆಯವರು ಹೇಳಿದರಂತೆ. ವಾಹಿನಿಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ನವಾಜ್‌ ಇದನ್ನು ಹೇಳಿದ್ದಾರೆ.

58 ವರ್ಷ ವಯಸ್ಸಿನ ಕೈಗಾರಿಕೋದ್ಯಮಿ ಮತ್ತು ಸಾಲಿಸಿಟರ್ ನಾದರ್ ಮೋದಿಯವರ ಪುತ್ರಿ ನವಾಜ್ ಮೋದಿ ಎಂಟು ವರ್ಷಗಳ ಪ್ರಣಯದ ನಂತರ 1999ರಲ್ಲಿ ಗೌತಮ್‌ ಜತೆ ಮದುವೆಯಾಗಿದ್ದರು. ಸಿಂಘಾನಿಯಾ ಈ ತಿಂಗಳ ಆರಂಭದಲ್ಲಿ ನವಾಜ್‌ರಿಂದ ಬೇರೆಯಾದರು.

ಸಿಂಘಾನಿಯಾ ತಮ್ಮ ʼಇಬ್ಬರು ಹೆಣ್ಣು ಮಕ್ಕಳಿಗಾಗಿ ಹಾಗೂ ತನ್ನ ಕುಟುಂಬದ ಘನತೆಯನ್ನು ಎತ್ತಿಹಿಡಿಯುವ ಸಲುವಾಗಿʼ ಹೆಚ್ಚಿನ ಕಾಮೆಂಟ್‌ ಮಾಡುವುದಿಲ್ಲ ಎಂದಿರುವ ಅವರು, ಅವರ ಖಾಸಗಿತನವನ್ನು ಗೌರವಿಸುವಂತೆ ಒತ್ತಾಯಿಸಿದ್ದಾರೆ. ರೇಮಂಡ್‌ನ ಉದ್ಯೋಗಿಗಳು ಮತ್ತು ಮಂಡಳಿಯ ಸದಸ್ಯರಿಗೆ ಅವರು ಇತ್ತೀಚೆಗೆ ಕಳಿಸಿರುವ ಇಮೇಲ್‌ನಲ್ಲಿ, ಸಿಂಘಾನಿಯಾ ಅವರು “ನನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ, ಮಾಧ್ಯಮಗಳಲ್ಲಿನ ವರದಿಗಳ ಬಗ್ಗೆ ಪ್ರತಿಕ್ರಿಯಿಸದಿರಲು ನಿರ್ಧರಿಸಿದ್ದೇನೆʼʼ ಎಂದಿದ್ದಾರೆ.

ಕಂಪನಿಯ ದೀಪಾವಳಿ ಪಾರ್ಟಿಗೆ ನವಾಜ್ ಮೋದಿಗೆ ಪ್ರವೇಶ ನಿರಾಕರಿಸಿದ ವೀಡಿಯೊಗಳು ಹೊರಗಡೆ ಪ್ರಸಾರವಾದಾಗ, ದಂಪತಿಗಳ ನಡುವಿನ ಅಪಶ್ರುತಿ ಸಾರ್ವಜನಿಕವಾಗಿ ಗಮನ ಸೆಳೆಯಿತು. ಸ್ವಲ್ಪ ಸಮಯದ ನಂತರ, ಸಿಂಘಾನಿಯಾ ತಮ್ಮ ವಿಚ್ಛೇದನವನ್ನು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದರು. ವಿಚ್ಛೇದನದ ಪರಿಹಾರವಾಗಿ ಸಿಂಘಾನಿಯಾ ಅವರ ಸಂಪತ್ತಿನ ಶೇಕಡಾ 75ರಷ್ಟಕ್ಕೆ ನವಾಜ್ ಮೋದಿ ಬೇಡಿಕೆಯಿಟ್ಟಿದ್ದಾರೆ.

ವಿಚ್ಛೇದನದ ಕದನದ ಹಿನ್ನೆಲೆಯಲ್ಲಿ, ಗೌತಮ್ ತಂದೆ ಮತ್ತು ರೇಮಂಡ್ ಗ್ರೂಪ್ ಸಂಸ್ಥಾಪಕ ವಿಜಯಪತ್ ಸಿಂಘಾನಿಯಾ ಕೂಡ ಪ್ರತಿಕ್ರಿಯಿಸಿದ್ದಾರೆ. ತನ್ನ ಮಗ ಕಂಪನಿಯನ್ನು ಒಡೆಯುತ್ತಿರುವುದನ್ನು ನೋಡಿ ತಾನು ತೀವ್ರ ನಿರಾಶೆಗೊಂಡಿದ್ದೇನೆ. ಮತ್ತು ಗೌತಮ್ ಸಿಂಘಾನಿಯಾಗೆ ಎಲ್ಲವನ್ನೂ ಬಿಟ್ಟುಕೊಟ್ಟದ್ದು ತನ್ನ ಮೂರ್ಖ ತಪ್ಪು ಎಂದು ವಿಷಾದಿಸಿದ್ದಾರೆ.

ಇದನ್ನೂ ಓದಿ: Viral video: ಜಗತ್ತಿನ ಅತ್ಯಂತ ಕಠಿಣ ಉದ್ಯೋಗ ಯಾವುದು? ಈ ವಿಡಿಯೊ ನೋಡಿ!

Exit mobile version