Viral video: ಜಗತ್ತಿನ ಅತ್ಯಂತ ಕಠಿಣ ಉದ್ಯೋಗ ಯಾವುದು? ಈ ವಿಡಿಯೊ ನೋಡಿ! - Vistara News

ವೈರಲ್ ನ್ಯೂಸ್

Viral video: ಜಗತ್ತಿನ ಅತ್ಯಂತ ಕಠಿಣ ಉದ್ಯೋಗ ಯಾವುದು? ಈ ವಿಡಿಯೊ ನೋಡಿ!

Viral video: ಜಗತ್ತಿನ ಅತ್ಯಂತ ಕಠಿಣ ಉದ್ಯೋಗ ಯಾವುದು ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಿದ್ಯಾ? ಹಾಗಾದರೆ ಉತ್ತರಕ್ಕಾಗಿ ಈ ವಿಡಿಯೊ ನೋಡಿ.

VISTARANEWS.COM


on

cheeta
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಜಗತ್ತಿನಲ್ಲಿ ಅತ್ಯಂತ ಕಠಿಣ, ಅಪಾಯಕಾರಿ ಉದ್ಯೋಗ (Most Difficult Job) ಯಾವುದು ಎನ್ನುವ ಪ್ರಶ್ನೆಗೆ ಒಬ್ಬೊಬ್ಬರು ಒಂದೊಂದು ರೀತಿ ಉತ್ತರಿಸಬಹುದು. ನಿಮ್ಮ ಮನಸ್ಸಲ್ಲೂ ಥಟ್ಟನೆ ಕೆಲವೊಂದು ಸವಾಲು ಎನಿಸುವ ಉದ್ಯೋಗದ ಚಿತ್ರ ಮೂಡಿರಬಹುದು. ಆದರೆ ಈ ವಿಡಿಯೊ ನೋಡಿದ ಬಳಿಕ ನಿಮ್ಮ ಅಭಿಪ್ರಾಯ ಬದಲಾಗಬಹುದು. ಇದುವೇ ಅತ್ಯಂತ ಸವಾಲಿನ ಕೆಲಸ ಎನ್ನುವ ತೀರ್ಮಾನಕ್ಕೆ ನೀವು ಬರಲೂಬಹುದು. ಹೌದು, ಈ ವಿಡಿಯೊ ಇದೀಗ ಸೋಷಿಯಲ್‌ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ (Viral video). ಅಷ್ಟಕ್ಕೂ ಈ ವಿಡಿಯೊದಲ್ಲಿ ಏನಿದೆ ಎನ್ನುವ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಮೈ ಜುಂ ಎನಿಸುವ ವಿಡಿಯೊ ನೋಡಿ

ಕೆಲವೊಂದು ಅಪಾಯಕಾರಿ ಉದ್ಯೋಗಗಳು ಜೀವಕ್ಕೆ ಅಪಾಯವನ್ನು ಉಂಟು ಮಾಡುತ್ತವೆ. ಆದರೂ ಕೆಲವರು ಅದರಲ್ಲೇ ಮುಂದುವರಿಯುತ್ತಾರೆ. ಹಣದ ಕಾರಣದಿಂದ ಕೆಲವರಿಗೆ ಅನಿವಾರ್ಯವಾದರೆ ಇನ್ನು ಕೆಲವರು ʼಥ್ರಿಲ್‌ʼಗಾಗಿ ಇಂತಹ ಕೆಲಸ ನಿರ್ವಹಿಸುತ್ತಾರೆ. ಇತ್ತೀಚೆಗೆ ಇಬ್ಬರು ವನ್ಯಜೀವಿ ಸಂರಕ್ಷಣಾ ತಾಣದಲ್ಲಿ ಚಿರತೆಗಳಿಗೆ ಆಹಾರವನ್ನು ನೀಡುತ್ತಿರುವ ವಿಡಿಯೊ ವೈರಲ್ ಆಗಿದೆ. ಇದು ನಿಜವಾಗಿಯೂ ವಿಶ್ವದ ಅತ್ಯಂತ ಅಪಾಯಕಾರಿ ಕೆಲಸ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಹಲವು ಚಿರತೆಗಳಿಗೆ ಇಬ್ಬರು ಗಾಡಿಯಲ್ಲಿ ತಂದ ಆಹಾರವನ್ನು ಹಂಚುವ ದೃಶ್ಯ ಇದಾಗಿದೆ. ʼತಿಂಡಿಯ ಸಮಯ! ಅವರಿಬ್ಬರು ಅದ್ಭುತ ವ್ಯಕ್ತಿಗಳು. ನಿಮಗೆ ಈ ಉದ್ಯೋಗ ನಿರ್ವಹಿಸುವ ಧೈರ್ಯ ಇದ್ಯಾ?ʼ ಎನ್ನುವ ಪ್ರಶ್ನೆಯೊಂದಿಗೆ ಈ ವಿಡಿಯೊವನ್ನು ಪೋಸ್ಟ್‌ ಮಾಡಲಾಗಿದೆ. ಇವರು ಎಸೆಯುವ ಮಾಂಸವನ್ನು ಚಿರತೆಗಳು ಗಾಳಿಯಲ್ಲಿ ಹಾರಿ ಕ್ಯಾಚ್‌ ಹಿಡಿಯುವುದನ್ನು ವಿಡಿಯೊದಲ್ಲಿ ಕಾಣಬಹುದು. ಅಲ್ಲದೆ ಎರಡು ಚಿರತೆಗಳು ಮಾಂಸದ ತುಂಡನ್ನು ಎಳೆಯುವುದನ್ನು ಮತ್ತು ಅದಕ್ಕಾಗಿ ಜಗಳ ಮಾಡುತ್ತಿರುವುದೂ ಕಂಡು ಬರುತ್ತಿದೆ. ಅಚ್ಚರಿಯ ಸಂಗತಿ ಎಂದರೆ ಚಿರತೆಗಳು ಈ ಇಬ್ಬರು ವ್ಯಕ್ತಿಗಳ ತಂಟೆಗೆ ಹೋಗುವುದಿಲ್ಲ.

ನೆಟ್ಟಿಗರ ಪ್ರತಿಕ್ರಿಯೆ

ಈಗಾಗಲೇ ಈ ವಿಡಿಯೊವನ್ನು 1 ಲಕ್ಷಕ್ಕಿಂತ ಅಧಿಕ ಮಂದಿ ಬೆರಗುಗಣ್ಣಿನಿಂದ ವೀಕ್ಷಿಸಿದ್ದಾರೆ. ಚಿರತೆಗಳು ಆ ವ್ಯಕ್ತಿಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸದೇ ಇರುವುದು ಹಲವರಲ್ಲಿ ಅನುಮಾನ ಮೂಡಿಸಿದೆ. ʼʼಚಿರತೆಗಳು ಆ ವ್ಯಕ್ತಿಗಳನ್ನು ಯಾಕೆ ತಿನ್ನುತ್ತಿಲ್ಲ?ʼʼ ಎಂದು ಒಬ್ಬರು ಕೇಳಿದ್ದಾರೆ. ಇನ್ನೊಬ್ಬರು ತಮಾಷೆಯಿಂದ, ʼʼಯಾವುದೇ ಕಾರಣಕ್ಕೂ ನನ್ನಿಂದ ಈ ಕೆಲಸ ನಿರ್ವಹಿಸಲು ಸಾಧ್ಯವಿಲ್ಲʼʼ ಎಂದು ಹೇಳಿದ್ದಾರೆ. ಇನ್ನೊಬ್ಬರು ಈ ಸವಾಲನ್ನು ಸ್ವೀಕರಿಸಿದ್ದಾರೆ. ʼʼಈ ಕೆಲಸ ನಿರ್ವಹಿಸಲು ನಾನು ಉತ್ಸುಕನಾಗಿದ್ದೇನೆ. ಇದು ಸವಾಲಿನಿಂದ ಕೂಡಿದ ಉದ್ಯೋಗʼʼ ಎಂದು ಅವರು ಹೇಳಿದ್ದಾರೆ. ʼʼಬಹುಶಃ ಆ ಸಿಬ್ಬಂದಿ ಸಂಭಾವ್ಯ ದಾಳಿಯಿಂದ ಪಾರಾಗಲು ಮುನ್ನಚ್ಚರಿಕೆ ಕ್ರಮ ತೆಗೆದುಕೊಂಡಿರಬಹುದುʼʼ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: ಇಲ್ಲೊಬ್ಬ ರಿಯಲ್‌ ಸ್ಪೈಡರ್‌ ಮ್ಯಾನ್‌; ಯಾರೂ ಅನುಕರಿಸಬೇಡಿ ಎಂದ ನೆಟ್ಟಿಗರು

ಚಿರತೆಗಳು ವಿಶ್ವದ ಅತ್ಯಂತ ಅಪಾಯಕಾರಿ ಜೀವಿಗಳು. ಚಿರತೆಗಳಿಗೆ ಆಹಾರ ನೀಡುವ ಇಬ್ಬರು ರಾಷ್ಟ್ರೀಯ ಉದ್ಯಾನವನದ ಸಿಬ್ಬಂದಿ ಎನ್ನುವುದರಲ್ಲಿ ಸಂಶಯವಿಲ್ಲ. ಅವರ ಕೆಲಸವು ಖಂಡಿತವಾಗಿಯೂ ಕಠಿಣ. ಅದೇನೆ ಇರಲಿ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Viral Video: ನಟಿಯ 4 ತಿಂಗಳ ಮಗು ‘ಐ ಲವ್ ಯು’ ಅಂದು ಬಿಡೋದೆ! ಇದು ಕಲಿಗಾಲ ಗುರೂ ಅಂದ್ರು ಫ್ಯಾನ್ಸ್‌!

Viral Video: ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ʻತಿಥಿʼ ಸಿನಿಮಾದ (Thithi Kannada Film) ಕಾವೇರಿ ಪಾತ್ರದಲ್ಲಿ ಅಭಿನಯಿಸಿದ್ದ ಅವರು ಎಲ್ಲರ ಗಮನ ಸೆಳೆದಿದ್ದರು. ಸಾಫ್ಟವೇರ್‌ ಎಂಜಿನಿಯರ್‌ ಪ್ರೇಮ್‌ ಎಂಬುವರ ಕೈ ಹಿಡಿದಿದ್ದರು.

VISTARANEWS.COM


on

thithi fame actress pooja kaveri 4 months baby boy says i love you
Koo

ಬೆಂಗಳೂರು: “ತಿಥಿʼʼ ಸಿನಿಮಾ ಮೂಲಕ (Viral Video) ಮನೆಮಾತಾಗಿದ್ದ ಸ್ಯಾಂಡಲ್‌ವುಡ್‌ ನಟಿ ಪೂಜಾ ಎಸ್ ಎಂ ಆಗಾಗ ತಮ್ಮ ವೈಯಕ್ತಿಕ ವಿಚಾರಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ʻತಿಥಿʼ ಸಿನಿಮಾದ (Thithi Kannada Film) ಕಾವೇರಿ ಪಾತ್ರದಲ್ಲಿ ಅಭಿನಯಿಸಿದ್ದ ಅವರು ಎಲ್ಲರ ಗಮನ ಸೆಳೆದಿದ್ದರು. ಸಾಫ್ಟವೇರ್‌ ಎಂಜಿನಿಯರ್‌ ಪ್ರೇಮ್‌ ಎಂಬುವರ ಕೈ ಹಿಡಿದಿದ್ದರು. 4 ತಿಂಗಳ ಹಿಂದೆ ಮುದ್ದಾದ ಗಂಡು ಮಗುವಿಗೆ ಪೂಜಾ ಜನ್ಮ ನೀಡಿದ್ದರು. ಇದೀಗ ಮಗ ‘ಐ ಲವ್ ಯು’ ಎಂದು ತಂದೆ ಹೇಳಿಕೊಟ್ಟಂತೆ ಹೇಳಿರುವ ಕ್ಯೂಟ್‌ ವಿಡಿಯೊ ವೈರಲ್‌ ಆಗುತ್ತಿದೆ. 4 ತಿಂಗಳ ಮಗನನ್ನು ಮಡಿಲಲ್ಲಿ ಮಲಗಿಸಿಕೊಂಡು ಪೂಜಾ ಪತಿ ಪ್ರೇಮ್ ‘ಐ ಲವ್ ಯು’ ಎಂದು ಒಂದೊಂದೇ ಪದವನ್ನು ಹೇಳಿಕೊಟ್ಟಿದ್ದಾರೆ. ಅದನ್ನು ಮಗು ಕೂಡ ಚೆನ್ನಾಗಿ ಆಲಿಸಿ ಹೇಳಿದೆ.

“ನಮ್ಮ 4 ತಿಂಗಳ ಮಗು ತಂದೆಗೆ ತನ್ನ ಮೊದಲ ಪ್ರೀತಿಯನ್ನು ವ್ಯಕ್ತಪಡಿಸುತ್ತಿದೆ” ಎಂದು ಬರೆದು ಪೂಜಾ ವಿಡಿಯೊ ಹಂಚಿಕೊಂಡಿದ್ದಾರೆ. 2 ದಿನಗಳಲ್ಲಿ 1 ಮಿಲಿಯನ್‌ಗೂ ಹೆಚ್ಚು ವೀವ್ಸ್ ಪಡೆದು ವಿಡಿಯೊ ಗಮನ ಸೆಳೆದಿದೆ. ‘ಕಲಿಗಾಲ ಇದು’,4 ತಿಂಗಳಿಗೆ ಹೀಗಾದರೆ ಮುಂದೆ ಹೇಗೆ? ಎಂದು ಕಮೆಂಟ್‌ ಮಾಡಿದ್ದಾರೆ ನೆಟ್ಟಿಗರು.

ಇದನ್ನೂ ಓದಿ: Hair Growth Tips: ತಲೆ ಕೂದಲು ವೇಗವಾಗಿ ಬೆಳೆಯಬೇಕೆ? ಹೀಗೆ ಮಾಡಿ

ತಿಥಿ ಚಿತ್ರದಲ್ಲಿ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿಯನ್ನು ಪೂಜಾ ಪಡೆದಿದ್ದರು. “ದಾರಿ ಯಾವುದಯ್ಯ ವೈಕುಂಠಕ್ಕೆʼʼ ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿದ್ದರು. “ನೀವು ಕರೆ ಮಾಡಿದ ಚಂದದಾರರುʼʼ ಸಿನಿಮಾ ನಂತರ ಅವಕಾಶಗಳು ಅಷ್ಟಾಗಿ ಪೂಜಾರವರಿಗೆ ಸಿಕ್ಕಿರಲಿಲ್ಲ. ಹೀಗಾಗಿ ಅವರು ತಮ್ಮ ವಿದ್ಯಾಭ್ಯಾಸದ ಕಡೆ ಗಮನ ಹರಿಸಿದ್ದರು. ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೂ ಸೇರಿಕೊಂಡಿದ್ದರೆಂದು ಹೇಳಲಾಗಿದೆ. ಉತ್ತಮ ಅವಕಾಶಗಳು ಸಿಕ್ಕರೆ ಮತ್ತೆ ಸ್ಯಾಂಡಲ್‌ವುಡ್‌ಗೆ ಕಾಲಿಡುವುದಾಗಿ ಅವರು ಈ ಹಿಂದೆ ಹೇಳಿಕೊಂಡಿದ್ದರು.

Continue Reading

ವೈರಲ್ ನ್ಯೂಸ್

Viral News: ಬಿಲ್‌ ಗೇಟ್ಸ್ ಮನಗೆದ್ದ ಈ ಡಾಲಿ ಚಾಯ್‌ವಾಲಾ ಯಾರು? ಏನಿವರ ಕಥೆ?

Viral News: ಭಾರತದ ಪ್ರವಾಸದಲ್ಲಿರುವ ಮೈಕ್ರೋಸಾಫ್ಟ್‌ನ ಸಹ-ಸಂಸ್ಥಾಪಕ, ಕೋಟ್ಯಧಿಪತಿ ಮತ್ತು ಸಮಾಜಸೇವಕ ಬಿಲ್ ಗೇಟ್ಸ್ ಬೀದಿ ಬದಿ ಚಹಾ ಸೇವಿಸುತ್ತಿರುವ ವಿಡಿಯೊ ವೈರಲ್‌ ಆಗಿದೆ. ಪ್ರಸಿದ್ಧ ಚಹಾ ಮಾರಾಟಗಾರ ಡಾಲಿ ಚಾಯ್‌ವಾಲಾ ಬಳಿ ಬಿಲ್ ಗೇಟ್ಸ್ ಚಹಾ ಸೇವಿಸಿದ್ದು, ಅವರ ಹಿನ್ನೆಲೆ ಬಗ್ಗೆ ಇಲ್ಲಿದೆ ಮಾಹಿತಿ.

VISTARANEWS.COM


on

dolly
Koo

ಹೊಸದಿಲ್ಲಿ: ಮೈಕ್ರೋಸಾಫ್ಟ್‌ನ (Microsoft) ಸಹ-ಸಂಸ್ಥಾಪಕ, ಕೋಟ್ಯಧಿಪತಿ ಮತ್ತು ಸಮಾಜಸೇವಕ ಬಿಲ್ ಗೇಟ್ಸ್ (Bill Gates) ಭಾರತದ ಪ್ರವಾಸದಲ್ಲಿದ್ದಾರೆ. ಈ ಬಗ್ಗೆ ಅವರು ಸೋಷಿಯಲ್‌ ಮೀಡಿಯಾದ ಮೂಲಕ ಆಗಾಗ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ಬೀದಿ ಬದಿಯ ಚಹಾ ಗಾಡಿಯೊಂದರ ಬಳಿ ಚಹಾ ಮಾಡಿಸಿಕೊಂಡು ಸವಿಯುತ್ತಿರುವ ವಿಡಿಯೊ ಇದೀಗ ವೈರಲ್‌ (Viral News) ಆಗಿದೆ. ಪ್ರಸಿದ್ಧ ಚಹಾ ಮಾರಾಟಗಾರ ಮತ್ತು ಸೋಷಿಯಲ್‌ ಮೀಡಿಯಾದಲ್ಲಿ ಈಗಾಗಲೇ ಸಾಕಷ್ಟು ಪರಿಚಿತರಾಗಿರುವ ʼಡಾಲಿ ಚಾಯ್‌ವಾಲಾʼ (Dolly Chaiwalla) ಅವರ ಜತೆ ಕಾಣಿಸಿಕೊಂಡು ಚಹಾ ಸವಿಯುವ ವಿಡಿಯೊವನ್ನು ಬಿಲ್‌ ಗೇಟ್ಸ್‌ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಈ ಡಾಲಿ ಚಾಯ್‌ವಾಲಾ ಯಾರು? ಅವರ ಹಿನ್ನೆಲೆ ಏನು? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಡಾಲಿ ಚಾಯ್‌ವಾಲಾ

ಮಹಾರಾಷ್ಟ್ರ ನಾಗಪುರದ ಸರ್ದಾರ್‌ ಏರಿಯಾದ ಹಳೆ ವಿಸಿಎ ಮೈದಾನ (Old VCA stadium)ದ ಬಳಿ ಬೀದಿ ಬದಿಯ ಚಹಾ ಗಾಡಿ ಇಟ್ಟುಕೊಂಡಿರುವ ಡಾಲಿ ಚಾಯ್‌ವಾಲಾ ತಮ್ಮ ವಿಶಿಷ್ಟ ಶೈಲಿಯ ಚಹಾ ತಯಾರಿಯ ಮೂಲಕವೇ ಜನಪ್ರಿಯರಾಗಿದ್ದಾರೆ. ಅವರ ನಿಜ ಹೆಸರು ಯಾರಿಗೂ ತಿಳಿದಿಲ್ಲ. ಆದರೆ ಅವರ ವಿಡಿಯೊಗಳನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಲಕ್ಷಗಟ್ಟಲೆ ಮಂದಿ ವೀಕ್ಷಿಸುತ್ತಾರೆ. ತಮ್ಮದೇ ಅನನ್ಯ ಶೈಲಿಯಲ್ಲಿ ಚಹಾ ಮಾಡುವ ವಿಡಿಯೊಗಳನ್ನು ಅವರು ಆಗಾಗ ಅಪ್‌ಲೋಡ್‌ ಮಾಡುತ್ತಿರುತ್ತಾರೆ. ಚಹಾ ಮಾತ್ರವಲ್ಲ ಡಾಲಿ ಚಾಯ್‌ವಾಲಾ ಅಂಗಡಿಯಲ್ಲಿ ಸಿಗರೇಟ್‌ ಕೂಡ ಲಭ್ಯ. ಹೀಗಾಗಿಯೇ ಅವರ ಅಂಗಡಿ ಮುಂದೆ ಯಾವಾಗಲೂ ಜನ ಸಂದಣಿ ಕಂಡು ಬರುತ್ತದೆ.

ಬಿಲ್ ಗೇಟ್ಸ್ ಯಾರೆಂದೇ ಗೊತ್ತಿರಲಿಲ್ಲ!

ಕುತೂಹಲಕಾರಿ ಸಂಗತಿಯೆಂದರೆ, ಬಿಲ್ ಗೇಟ್ಸ್ ಬಗ್ಗೆ ಡಾಲಿ ಚಾಯ್‌ವಾಲಾ ಅವರಿಗೆ ಗೊತ್ತೇ ಇರಲಿಲ್ಲವಂತೆ. ʼʼಕೋಟ್ಯಧಿಪತಿಯೊಬ್ಬರಿಗೆ ನಾನು ಚಹಾ ನೀಡುತ್ತಿದ್ದೇನೆ ಎಂಬ ವಿಚಾರ ಆಗ ನನಗೆ ಗೊತ್ತಿರಲಿಲ್ಲ. ಮರುದಿನ ವಿಡಿಯೊ ವೈರಲ್‌ ಆಗಿ ಜನ ಈ ಬಗ್ಗೆ ಮಾತನಾಡಲು ಆರಂಭಿಸಿದಾಗಲೇ ನನಗೆ ಬಿಲ್‌ ಗೇಟ್ಸ್‌ ಬಗ್ಗೆ ಗೊತ್ತಾಗಿದ್ದುʼʼ ಎಂದು ಡಾಲಿ ಚಾಯ್ ವಾಲಾ ಹೇಳಿದ್ದಾರೆ. ಆರಂಭದಲ್ಲಿ ಈ ವಿಡಿಯೊವನ್ನು ಅವರ ಟೀ ಸ್ಟಾಲ್‌ ಇರುವ ನಾಗಪುರದಲ್ಲಿಯೇ ಇದರ ಚಿತ್ರೀಕರಿಸಲಾಗಿತ್ತು ಎಂದು ಭಾವಿಸಲಾಗಿತ್ತು. ಆದರೆ ಈ ವಿಡಿಯೊವನ್ನು ಹೈದರಾಬಾದ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ಡಾಲಿ ತಿಳಿಸಿದ್ದಾರೆ. ʼʼಇದನ್ನು ಮೂರು ದಿನಗಳ ಹಿಂದೆ ಚಿತ್ರೀಕರಿಸಲಾಗಿದೆ. ಬಿಲ್ ಗೇಟ್ಸ್ ಅವರ ತಂಡವು ನನ್ನನ್ನು ಸಂಪರ್ಕಿಸಿತು ಮತ್ತು ನನ್ನನ್ನು ಹೈದರಾಬಾದ್‌ಗೆ ಆಹ್ವಾನಿಸಿತು. ಈ ಮೊದಲು, ನನಗೆ ಅವರ ಬಗ್ಗೆ ತಿಳಿದಿರಲಿಲ್ಲ ಮತ್ತು ವಿಡಿಯೊ ವೈರಲ್ ಆದ ಒಂದು ದಿನದ ನಂತರ ಅವರು ಎಷ್ಟು ಪ್ರಸಿದ್ಧ ವ್ಯಕ್ತಿ ಎನ್ನುವುದು ತಿಳಿಯಿತುʼʼ ಎಂದಿದ್ದಾರೆ.

ʼʼದಕ್ಷಿಣ ಭಾರತದ ಚಿತ್ರಗಳನ್ನು ನೋಡಿ ನಾನು ಈ ಶೈಲಿಯನ್ನು ರೂಢಿಸಿಕೊಂಡಿದ್ದೇನೆ. ಮುಂದೊಂದು ದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಚಹಾ ನೀಡಬೇಕೆಂಬ ಆಸೆ ಇದೆʼʼ ಎಂದು ಡಾಲಿ ತಿಳಿಸಿದ್ದಾರೆ.

ವಿಡಿಯೊದಲ್ಲೇನಿದೆ?

ಗೇಟ್ಸ್, ಚಾಯ್‌ವಾಲಾ ಅವರಿಗೆ ʼಒಂದು ಚಾಯ್ʼಗಾಗಿ ಆರ್ಡರ್ ಮಾಡುವುದರೊಂದಿಗೆ ವಿಡಿಯೊ ಆರಂಭವಾಗುತ್ತದೆ. ಚಾಯ್‌ವಾಲಾ ನಂತರ ತಮ್ಮ ವಿಶೇಷವಾದ ಗಾಡಿಯಲ್ಲಿರುವ ಸಾಮಗ್ರಿಗಳು ಹಾಗೂ ಸ್ಟವ್‌ ಮೂಲಕ ಚಹಾವನ್ನು ತಯಾರಿಸುತ್ತಾನೆ. ಅಂತಿಮವಾಗಿ ಗೇಟ್ಸ್ ಗಾಜಿನ ಲೋಟದಲ್ಲಿ ಬಿಸಿ ಚಹಾವನ್ನು ಆನಂದಿಸುತ್ತಿರುವುದನ್ನು ತೋರಿಸುತ್ತದೆ. ಡಾಲಿ ಚಾಯ್‌ವಾಲಾನೊಂದಿಗೆ ಗೇಟ್ಸ್‌ ಫೋಟೋಗೆ ಪೋಸ್ ನೀಡುವುದರೊಂದಿಗೆ ವಿಡಿಯೊ ಮುಕ್ತಾಯಗೊಳ್ಳುತ್ತದೆ.

ಇದನ್ನೂ ಓದಿ: Viral Video: ʼಒನ್‌ ಚಾಯ್‌ ಪ್ಲೀಸ್…‌ʼ ಭಾರತದ ಬೀದಿ ಚಹಾ ಸವಿದ ಬಿಲ್‌ ಗೇಟ್ಸ್! ವಿಡಿಯೋ ವೈರಲ್

Continue Reading

ವೈರಲ್ ನ್ಯೂಸ್

Viral video: ಗೃಹ ಸಚಿವ ಅಮಿತ್‌ ಶಾ ಕಾರ್‌ಗೂ CAAಗೂ ಇದೆ ಸಂಬಂಧ!

Viral video: ಅಮಿತ್‌ ಶಾ ಅವರ ಕಾರಿನ ವಿಡಿಯೋ ಇದೀಗ ವೈರಲ್‌ ಆಗಿದೆ. ಕಾರಣ ನೀವೇ ನೋಡಿ.

VISTARANEWS.COM


on

amit shah car CAA
Koo

ಹೊಸದಿಲ್ಲಿ: ಗೃಹ ಸಚಿವ ಅಮಿತ್‌ ಶಾ (Home Minister Amit Shah) ಅವರ ಖಾಸಗಿ ಕಾರಿನ ನಂಬರ್‌ ಎಷ್ಟು? ಇದಕ್ಕೂ ಪೌರತ್ವ ನೋಂದಣಿ ತಿದ್ದುಪಡಿ ಕಾಯಿದೆಗೂ (Citizen Amendment Act – CAA) ಸಂಬಂಧವಿದೆ ಎಂದರೆ ನಂಬುತ್ತೀರಾ? ಇದೀಗ ವೈರಲ್‌ ವಿಡಿಯೋ (viral video) ಆಗಿರುವ ಅಮಿತ್‌ ಶಾ ಅವರ ಕಾರಿನ ವಿಡಿಯೋ ನೋಡಿದರೆ ನೀವೇ ತೀರ್ಮಾನ ಮಾಡಬಹುದು.

ಹೌದು, ಇಂದು ಬಿಜೆಪಿ ಹೈಕಮಾಂಡ್‌ ಸಭೆಗೆ ದಿಲ್ಲಿಯ ಬಿಜೆಪಿ ಕಚೇರಿಗೆ ಅಮಿತ್‌ ಶಾ ಆಗಮಿಸಿದಾಗ ಚಿತ್ರಿಸಿದ ವಿಡಿಯೋ ಇದು. ಅವರ ಕಾರಿನ ನಂಬರ್‌ ಗಮನಿಸಿದವರು ಅಚ್ಚರಿಪಟ್ಟಿದ್ದಾರೆ. ಇದರಲ್ಲಿ ʼCAA’ ಇದೆ. `DL1 CAA 4421′ ಎಂಬುದು ಈ ಕಾರಿನ ನಂಬರ್‌. ಅಮಿತ್‌ ಶಾ ಅವರು ಸಿಎಎ ಜಾರಿಗೆ ಟೊಂಕ ಕಟ್ಟಿದ್ದಾರೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಇದನ್ನು ಸೂಕ್ಷ್ಮವಾಗಿ ಗಮನಿಸಿದ ಆನ್‌ಲೈನ್‌ ಜಾಣರು ತಮ್ಮದೇ ಅಭಿಪ್ರಾಯಗಳನ್ನು ಈ ಕುರಿತು ತೇಲಿಬಿಟ್ಟಿದ್ದಾರೆ. “ಅಮಿತ್‌ ಶಾ ಸಿಎಎ ಜಾರಿ ಬಗ್ಗೆ ಎಷ್ಟು ಸೀರಿಯಸ್‌ ಆಗಿದ್ದಾರೆ ಅನ್ನೋದು ಇದರಲ್ಲೇ ಗೊತ್ತಾಗುತ್ತದೆ” ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ. “ಇದು ಸೂಕ್ಷ್ಮ ಸಂದೇಶ” “CAA ಬರ್ತಾ ಇದೆ, ದಾರಿ ಬಿಡಿ” “ಇದು ಕಾಕತಾಳೀಯ ಆಗಿರಲಿಕ್ಕಿಲ್ಲ” “ಇದು ಮೊದಲೇ ನಮ್ಮ ಕಣ್ಣಿಗೆ ಯಾಕೆ ಬೀಳ್ಲಿಲ್ಲ?” ಎಂದೂ ಇನ್ನೂ ಹಲವರು ಕಾಮೆಂಟ್‌ ಮಾಡಿದ್ದಾರೆ.

ಇತ್ತೀಚೆಗೆ ಅಮಿತ್‌ ಶಾ ಅವರು ಸಿಎಎ ಲೋಕಸಭೆ ಚುನಾವಣೆಗೂ ಮುನ್ನ ಜಾರಿಯಾಗಲಿದೆ ಎಂದು ಹೇಳಿದ್ದರು. ಇತ್ತೀಚೆಗೆ ಗೃಹ ಸಚಿವಾಲಯ ಸಿಎಎ ಜಾರಿಗೆ ಬೇಕಾದ ನಿಯಮಾವಳಿಗಳನ್ನು ಹೊರಡಿಸಲಿದೆ ಎಂದು ಹೇಳಿತ್ತು.

2019ರಲ್ಲೇ ಸಿಎಎ ತಿದ್ದುಪಡಿ ಜಾರಿಯಾದರೂ ನಿಯಮಗಳ ಅಧಿಸೂಚನೆ ಹೊರಡಿಸಿರಲಿಲ್ಲ. ಈ ಕಾಯ್ದೆಯ ಅನ್ವಯ ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಹಿಂದೂಗಳು, ಸಿಖ್‌ಗಳು, ಬೌದ್ಧರು, ಪಾರ್ಸಿಗಳು, ಜೈನರು ಮತ್ತು ಕ್ರಿಶ್ಚಿಯನ್ನರು ಡಿಸೆಂಬರ್ 31, 2014 ರಂದು ಅಥವಾ ಮೊದಲು ಭಾರತಕ್ಕೆ ಪ್ರವೇಶಿಸಿದ್ದರೆ ಅಂಥವರಿಗೆ ಭಾರತೀಯ ಪೌರತ್ವವನ್ನು ಒದಗಿಸುವ ಅವಕಾಶವನ್ನು ಈ ಸಿಎಎ ಒದಗಿಸುತ್ತದೆ. ಕೇವಲ ಧರ್ಮವೇ ಭಾರತೀಯ ಪೌರತ್ವ ಪಡೆಯಲು ಮಾನದಂಡವಾದ್ದರಿಂದ ದೇಶಾದ್ಯಂತ ಭಾರೀ ವಿರೋಧ ಕೂಡ ವ್ಯಕ್ತವಾಗಿತ್ತು.

ಸಿಎಎ ವಿರೋಧಿಸಿ 2019 ರಲ್ಲಿ ಭಾರೀ ಪ್ರತಿಭಟನೆಗಳು ಕೂಡ ನಡೆದವು. ಅನೇಕ ರಾಜಕೀಯ ನಾಯಕರು ಸಿಎಎ ಅನ್ನು ರಾಷ್ಟ್ರೀಯ ನಾಗರಿಕರ ನೋಂದಣಿ(NRC)ಗೆ ಸಂಪರ್ಕ ಕಲ್ಪಿಸಿದ್ದರಿಂದ ಗೊಂದಲವು ಉಂಟಾಯಿತು. ಈ ಮಧ್ಯೆ, ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ಜೋರಾದ್ದರಿಂದ ಪ್ರತಿಭಟನೆಗಳನ್ನು ಕೈ ಬಿಡಲಾಯಿತು.

ಅಲ್ಲದೇ, ಕೋವಿಡ್ ಕಾರಣದಿಂದಾಗಿ ಸಿಎಎ ಜಾರಿ ಸಂಬಂಧ ನಿಯಮಗಳನ್ನು ರೂಪಿಸುವಲ್ಲಿ ಕೇಂದ್ರ ಸರ್ಕಾರ ಕೂಡ ವಿಳಂಬ ಮಾಡಿತು. ಸಾಂಕ್ರಾಮಿಕ ಪರಿಸ್ಥಿತಿಯನ್ನು ನಿಭಾಯಿಸುವುದು ಮೊದಲ ಆದ್ಯತೆಯಾದ್ದರಿಂದ ನಿಯಮಗಳನ್ನು ರಚಿಸಲು ಕೇಂದ್ರ ಸರ್ಕಾರವು ಮುಂದಾಗಲಿಲ್ಲ. ಈಗ ಮತ್ತೆ ಸಿಎಎ ಕುರಿತು ಅಧಿಸೂಚನೆ ಹೊರಡಿಸಲು ಸರ್ಕಾರವು ಈಗ ಮುಂದಾಗಿದೆ. ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಅದೇ ಕಾರಣಕ್ಕೆ ಕೇಂದ್ರ ಸರ್ಕಾರವು ಮತ್ತೆ ಸಿಎಎಯತ್ತ ತನ್ನ ಕಣ್ಣು ನೆಟ್ಟಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: CAA Rules: ಕೇಂದ್ರ ಸರ್ಕಾರದಿಂದ ಶೀಘ್ರವೇ ಸಿಎಎ ನಿಯಮಗಳ ಅಧಿಸೂಚನೆ?

Continue Reading

ಚಾಮರಾಜನಗರ

Chamarajanagar News : ಜೋಳದ ಬೆಳೆ ತಿಂದ ಎತ್ತುಗಳ ಕಾಲು ಕತ್ತರಿಸಿದ ಟಿಬೆಟಿಯನ್ನರು!

Chamarajanagar News: ಎತ್ತುಗಳು ಜೋಳದ ಬೆಳೆಯನ್ನು ತಿಂದು ನಾಶ ಮಾಡಿವೆ ಎಂದು ಅವುಗಳ ಕಾಲುಗಳನ್ನೇ ಕತ್ತರಿಸಿರುವ ಅಮಾನವೀಯ ಘಟನೆ ನಡೆದಿದೆ. ಮೂವರು ಟಿಬೆಟಿಯನರು ಈ ಕೃತ್ಯ ಎಸಗಿದ್ದು, ಮಾಲೀಕರ ಆಕ್ರಂದನ ಮುಗಿಲು ಮುಟ್ಟಿದೆ.

VISTARANEWS.COM


on

By

Tibetans cut off the legs of bulls for eating their crops
Koo

ಚಾಮರಾಜನಗರ: ಜೋಳದ ಬೆಳೆಯನ್ನು ಎತ್ತುಗಳು ತಿಂದು ನಾಶ ಮಾಡಿವೆ ಎಂದು ಪಾಪಿಗಳು ಎತ್ತುಗಳ ಕಾಲುಗಳನ್ನೇ ಕತ್ತರಿಸಿದ್ದಾರೆ. ಈ ಕ್ರೂರ ಘಟನೆ ಚಾಮರಾಜನಗರದ ಹನೂರು ತಾಲೂಕಿನ ಒಡೆಯರ ಪಾಳ್ಯದ ಟಿಬೆಟಿಯನ್ ಕ್ಯಾಂಪ್‌ನ ದಿ ವಿಲೇಜ್‌ನಲ್ಲಿ (Chamarajanagar News) ನಡೆದಿದೆ.

ದಿ ವಿಲೇಜ್‌ನಲ್ಲಿ ಟಿಬೆಟಿಯನ್ನರು ವ್ಯವಸಾಯ ಮಾಡಿಕೊಂಡು ವಾಸವಿದ್ದಾರೆ. ಜೋಳದ ಫಸಲನ್ನು ನಾಶ ಮಾಡಿವೆ ಎಂಬ ಕಾರಣಕ್ಕೆ ಮೂವರು ಟಿಬೆಟಿಯನ್ನರು ಈ ಕೃತ್ಯವನ್ನು ಎಸಗಿದ್ದಾರೆ. ಗಡಿ ಜಿಲ್ಲೆ ರೈತರ ಮೇಲೆ ದರ್ಪ ಮೆರೆಯುತ್ತಿರುವ ಟಿಬೆಟಿಯನ್ನರು, 15ಕ್ಕೂ ಹೆಚ್ಚು ಎತ್ತುಗಳ ಕಾಲು, ಬಾಲ, ಕೊಂಬುಗಳನ್ನು ಕತ್ತರಿಸಿದ್ದಾರೆ. ಇದರಿಂದಾಗಿ ಎತ್ತುಗಳು ಬದುಕಿದ್ದು ಸತ್ತಂತೆ ಆಗಿವೆ.

Tibetans cut off the legs of bulls for eating their crops

ಇತ್ತ ಎತ್ತುಗಳ ಸ್ಥಿತಿ ಕಂಡು ರೈತ ಮಹಿಳೆಯರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳೀಯರ ಮೇಲೆ ಟಿಬೆಟಿಯನ್‌ರ ದರ್ಪಕ್ಕೆ ಕಿಡಿಕಾರಿದ್ದಾರೆ. ಕೃಷಿಗೆ ಈ ಎತ್ತುಗಳೇ ಆಧಾರವಾಗಿದ್ದವು. ಮನೆ ಮಕ್ಕಳಂತೆ ಜೋಪಾನ ಮಾಡಿದ್ದ ಎತ್ತುಗಳ ಕಾಲುಗಳನ್ನು ಕತ್ತರಿಸಿದ್ದಾರೆ. ನಮ್ಮ ಬದುಕು ಬೀದಿಗೆ ಬಂದಿದೆ.

Tibetans cut off the legs of bulls for eating their crops

ಇದನ್ನೂ ಓದಿ: Road Accident : ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು; ಇಬ್ಬರು ಸಾವು, ಮತ್ತಿಬ್ಬರು ಗಂಭೀರ

ಮಗು ಅಳುತ್ತಿದ್ದಕ್ಕೆ ಸಿಟ್ಟಾಗಿ ಗೋಡೆಗೆ ಎಸೆದು ಬಿಸಾಡಿದ ಪಾಪಿ ತಂದೆ!

ಧಾರವಾಡ: ಮಗಳಿಗೆ ಬೆರಗುವ ಮೂಡಿಸುವ ಜಾದೂಗಾರನಾಗಿ ಇರಬೇಕಾದ ಅಪ್ಪನೊಬ್ಬ ಕ್ರೂರಿಯಾದ ಸುದ್ದಿ ಇದು. ಮಗು ಮಲಗುವಾಗ ಅಳುತ್ತೆ ಎಂಬ ಕಾರಣಕ್ಕೆ ಪಾಪಿ ತಂದೆ ಗೋಡೆಗೆ ಎಸೆದು ಬೀಸಾಕಿದ್ದಾನೆ. ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ.

ಒಂದು ವರ್ಷದ ಹೆಣ್ಣು ಮಗು ಸಾವು ಬದುಕಿನ ಮಧ್ಯೆ ಹೋರಾಡಿ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ. ಶಂಬುಲಿಂಗಯ್ಯ ಶಾಪುರಮಠ ಎಂಬಾತ ಪಾಪಿ ತಂದೆಯಾಗಿದ್ದಾನೆ. ಕಳೆದ ರಾತ್ರಿ ಮಗು ಅಳುತ್ತಿತ್ತು. ಅಳುವ ಮಗುವಿಗೆ ಸಮಾಧಾನ ಪಡಿಸುವ ಬದಲಿಗೆ ಮಗುವಿನ ಕಾಲು ಹಿಡಿದು ಗೋಡೆಗೆ ಎಸೆದಿದ್ದಾನೆ.

ಗೋಡೆಗೆ ರಭಸವಾಗಿ ಎಸೆದ ಪರಿಣಾಮ ಮಗುವಿನ ತಲೆಗೆ ಬಲವಾದ ಪೆಟ್ಟಾಗಿದೆ. ಕೂಡಲೇ ಮಗುವಿನ ತಾಯಿ ಕಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿತ್ತು. ಆದರೆ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದರಿಂದ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ.

ಸದ್ಯ ಕುಟುಂಬಸ್ಥರಿಂದ ಗರಗ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪಾಪಿ ತಂದೆ ಶಂಬುಲಿಂಗಯ್ಯನನ್ನು ಬಂಧಿಸಿದ್ದಾರೆ. ಗರಗ ಪೊಲೀಸ್ ಠಾಣಾ ವ್ಯಾಪ್ತಿಯನ್ನ ನಡೆದ ಘಟನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ‌

Continue Reading
Advertisement
Yuvraj Singh
ಕ್ರೀಡೆ4 mins ago

Yuvraj Singh: ಲೋಕಸಭಾ ಸ್ಪರ್ಧೆ ಬಗ್ಗೆ ಅಧಿಕೃತ ಮಾಹಿತಿ ನೀಡಿದ ಯುವರಾಜ್​ ಸಿಂಗ್​

Anant Ambani wedding bollywood celebrities Pose
ಬಾಲಿವುಡ್8 mins ago

Anant Ambani: ಅಂಬಾನಿ ಫ್ಯಾಮಿಲಿಯ ಪ್ರಿ-ವೆಡ್ಡಿಂಗ್‌ಗೆ ಬಾಲಿವುಡ್‌ ಸೆಲೆಬ್ರಿಟಿಗಳು ಪೋಸ್‌ ಕೊಟ್ಟಿದ್ದು ಹೀಗೆ!

Share Market
ದೇಶ8 mins ago

Stock Market: ರಜಾ ದಿನವೂ ಸ್ಪೆಷಲ್‌ ಟ್ರೇಡಿಂಗ್, ಸೆನ್ಸೆಕ್ಸ್‌, ನಿಫ್ಟಿ ಅಬ್ಬರ ಜೋರು

Blast in Bengaluru NIA to take over probe into Rameswaram Cafe bomb blast case
ಕ್ರೈಂ15 mins ago

Blast in Bengaluru: ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್ ಕೇಸ್‌ ತನಿಖೆ NIA ಹೆಗಲಿಗೆ? ಇಂದೇ ಹಸ್ತಾಂತರ!

no abuse
ಕ್ರೈಂ16 mins ago

ಮಾತು ಬಾರದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; ಗುದ ದ್ವಾರಕ್ಕೆ ಪೆನ್‌ ತುರುಕಿಸಿ ವಿಕೃತಿ ಮೆರೆದ ಸಂಬಂಧಿಕರು

ಕ್ರೀಡೆ33 mins ago

BCCI Annual Contract: ಅಯ್ಯರ್, ಇಶಾನ್​ಗೆ ಗುತ್ತಿಗೆ ಪಟ್ಟಿ ಸೇರಲು ಇನ್ನೂ ಇದೆ ಅವಕಾಶ; ಈ ಷರತ್ತು ಅನ್ವಯ!

Minister MB Patil important meeting with senior officers of Lulu Group
ಕರ್ನಾಟಕ59 mins ago

Bengaluru News: ವಿಜಯಪುರದಲ್ಲಿ ರಫ್ತು ಆಧಾರಿತ ಆಹಾರ ಸಂಸ್ಕರಣ ಘಟಕ, ಸಚಿವ ಎಂ.ಬಿ.ಪಾಟೀಲ್ ಮಹತ್ವದ ಸಭೆ

Rameswaram Cafe blast sketched for 3 months without using a mobile phone
ಬೆಂಗಳೂರು1 hour ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌ಗೆ 3 ತಿಂಗಳಿಂದಲೇ ಸ್ಕೆಚ್‌? ಮೊಬೈಲ್‌ ಬಳಸದೇ ಕೃತ್ಯ!

Bjp Karnataka Former minister Manohar Tahsildar join BJP Is Haveri stronger
ರಾಜಕೀಯ1 hour ago

‌BJP Karnataka: ಬಿಜೆಪಿ ಸೇರಿದ ಮಾಜಿ ಸಚಿವ ಮನೋಹರ್‌ ತಹಸೀಲ್ದಾರ್; ಹಾವೇರಿ ಮತ್ತಷ್ಟು ಸ್ಟ್ರಾಂಗ್?

Unleashing the rage of Yuva The First Single
ಸ್ಯಾಂಡಲ್ ವುಡ್2 hours ago

Yuva Rajkumar: ಇಂದು ಚಾಮರಾಜನಗರದಲ್ಲಿ ‘ಯುವ’ ಪರ್ವ; ಅತಿಥಿಯಾಗಿ ಬರುವ ನಟ ಯಾರು?

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rameswaram Cafe Blast Suspected travels in BMTC Volvo bus
ಬೆಂಗಳೂರು2 hours ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು21 hours ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು23 hours ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ1 day ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ1 day ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ2 days ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ4 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ4 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ4 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

ಟ್ರೆಂಡಿಂಗ್‌