Site icon Vistara News

Viral News: 100 ದಿನ..200ಕ್ಕೂ ಹೆಚ್ಚು ವಿಮಾನಗಳು.. ಮಹಿಳಾ ಪ್ರಯಾಣಿಕರೇ ಈತನ ಟಾರ್ಗೆಟ್‌, ಇದು ಹೈಟೆಕ್‌ ಕಳ್ಳನ ಕಥೆ

Viral News

ನವದೆಹಲಿ: ಈತ ಒಂದೇ ವರ್ಷದಲ್ಲಿ 200 ವಿಮಾನ(200 Flights) ಗಳನ್ನು ಹತ್ತಿ ಇಳಿದಿದ್ದಾನೆ. ಸಾವಿರಾರು ಕಿಲೋಮೀಟರ್‌ ವಿಮಾನದಲ್ಲೇ ದೇಶದೊಳಗೆ ಪ್ರಯಾಣ ಬೆಳೆಸಿದ್ದಾನೆ. ಸುಮಾರು ನೂರಕ್ಕೂ ಅಧಿಕ ದಿನಗಳ ಕಾಲ ವಿಮಾನಯಾನವನ್ನೇ ಮಾಡಿದ್ದಾನೆ. ಅಬ್ಬಾ.. ಹಾಗಾದ್ರೆ ಈತ ದೊಡ್ಡ ಉದ್ಯಮಿ ಅಥವಾ ಟ್ರಾವೆಲರ್ ಆಗಿರಲೇಬೇಕು ಎಂದು ನಾವು ಭಾವಿಸಿದರೆ ಅದು ನಮ್ಮ ತಪ್ಪು ಕಲ್ಪನೆ. ಈತ ವಿಮಾನ ಪ್ರಯಾಣಿಕರನ್ನೇ ಟಾರ್ಗೆಟ್‌ ಮಾಡಿ ದೋಚುವ ಹೈ ಟೆಕ್‌ ಕಳ್ಳ(Viral News) ವಿಮಾನದಲ್ಲೇ ಪ್ರಯಾಣಿಸುವ ಈತ ಕಳ್ಳತನವೇ ಈತನ ಫುಲ್‌ ಟೈಂ ಜಾಬ್‌ ಆಗಿದೆ. ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬಂಧಿತನನ್ನು ರಾಜೇಶ್‌ ಕಪೂರ್‌(Rajesh Kapoor) ಎಂದು ಗುರುತಿಸಲಾಗಿದ್ದು, ಈತನನ್ನು ಪೊಲೀಸರು ದಿಲ್ಲಿಯ ಪಹಾರ್‌ಗಂಜ್‌ ಇಂದ ಅರೆಸ್ಟ್‌ ಮಾಡಲಾಗಿದೆ.

ಖತರ್ನಾಕ್‌ ಕಳ್ಳ ಬಲೆಗೆ ಬಿದ್ದಿದ್ದು ಹೇಗೆ?

ಕಳೆದ ತಿಂಗಳು ಹೈದರಾಬಾದ್‌ನಿಂದ ದಿಲ್ಲಿಗೆ ವಿಮಾನಯಾನ ನಡೆಸುತ್ತಿದ್ದ ಮಹಿಳೆಯ ಬ್ಯಾಗ್‌ನಿಂದ 7ಲಕ್ಷ ಮೌಲ್ಯದ ಚಿನ್ನ ಕಳುವಾಗಿತ್ತು. ಇದಾದ ಬೆನ್ನಲ್ಲೇ ಅಮೆರಿಕ ಮೂಲಕದ ವ್ಯಕ್ತಿಯೊಬ್ಬ ಕೂಡ ತನ್ನ ಬ್ಯಾಗ್‌ನಲ್ಲಿದ್ದ 20ಲಕ್ಷ ರೂ. ಕಳುವಾಗಿದೆ ಎಂದು ದೂರು ದಿಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ದಿಲ್ಲಿ, ಅಮೃತಸರ ಮತ್ತು ಹೈದರಾಬಾದ್‌ ವಿಮಾನ ನಿಲ್ದಾಣಗಳ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ರಾಜೇಶ್‌ ಬಗ್ಗೆ ಮಾಹಿತಿ ಸಿಕ್ಕಿದೆ. ತಕ್ಷಣ ಆತನನ್ನು ಅರೆಸ್ಟ್‌ ಮಾಡಿದಾಗ ಈತನ ಕೈಚಳಕದ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಕಳ್ಳತನ ಹೇಗೆ ಮಾಡುತ್ತಿದ್ದ?

ದಿಲ್ಲಿ ಡೆಪ್ಯೂಟಿ ಪೊಲೀಸ್‌ ಕಮಿಷನರ್‌ ಉಷಾ ರಂಗ್ರಾಣಿ ಪ್ರತಿಕ್ರಿಯಿಸಿದ್ದು, ರಾಜೇಶ್‌ ವಿಚಾರಣೆ ವೇಳೆ ತನ್ನ ಕುಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಅವರು ಹೇಗೆ ಕಳ್ಳತನ ಮಾಡುತ್ತಿದ್ದ, ಹೇಗೆ ಎಸ್ಕೇಪ್‌ ಆಗುತ್ತಿದ್ದ ಎಂಬ ಬಗ್ಗೆ ಮಾಹಿತಿ ನೀಡಿದ್ದಾನೆ ಎಂದು ಹೇಳಿದರು. ಅವರು ಹೇಳುವ ಪ್ರಕಾರ ಆತ ಕನೆಕ್ಟಿಂಗ್‌ ಫ್ಲೈಟ್ಸ್‌ ಅಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನೇ ಟಾರ್ಗೆಟ್‌ ಮಾಡುತ್ತಿದ್ದ. ಆ ಮಹಿಳೆ ಏಪ್ರಿಲ್‌ನಲ್ಲಿ ಹೈದರಾಬಾದ್‌ನಿಂದ ದಿಲ್ಲಿಗೆ ಬಂದು, ಅಲ್ಲಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಳು. ಅದೇ ರೀತಿ ಅಮೆರಿಕ ಮೂಲದ ಆ ವ್ಯಕ್ತಿಯೂ ಅಮೃತಸರದಿಂದ ದಿಲ್ಲಿಗೆ ಬಂದು ಅಲ್ಲಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದ. ಇಂತವರನ್ನೇ ಗುರಿಯನ್ನಾಗಿಸಿಕೊಳ್ಳುವ ರಾಜೇಶ್‌, ಪ್ರಯಾಣಿಕರ ಚಲನವಲನ, ವರ್ತನೆ ಮೇಲೆ ತೀವ್ರ ನಿಗಾ ಇರಿಸಿಕೊಳ್ಳುತ್ತಾನೆ. ಅವರ ಬ್ಯಾಗ್‌ ಮೇಲಿರುವ ಸ್ಲಿಪ್‌ನಿಂದಾಗಿ ಅವನಿಗೆ ಅವರ ಬ್ಯಾಗ್‌ನಲ್ಲಿ ಏನಿದೆ ಎಂಬುದು ತಿಳಿಯುತ್ತಿತ್ತು. ಬೋರ್ಡಿಂಗ್‌ ಗೇಟ್‌ ಬಳಿ ಈತ ಅವರ ಜೊತೆ ಮಾತುಕತೆ ನಡೆಸುತ್ತಾನೆ. ಇದಾದ ಬಳಿಕ ವಿಮಾನದಲ್ಲಿ ತನ್ನ ಸೀಟು ಬಲಿಸಿಕೊಡುವಂತೆ ವಿಮಾನ ಸಿಬ್ಬಂದಿಯನ್ನು ಕೇಳುತ್ತಾನೆ. ಹೇಗಾದರೂ ಮಾಡಿ ತಾನು ಟಾರ್ಗೆಟ್‌ ಮಾಡಿರುವ ವ್ಯಕ್ತಿಯ ಪಕ್ಕವೇ ಸೀಟು ಸಿಗುವಂತೆ ಮಾಡುತ್ತಾನೆ. ಆಗ ತನ್ನ ಕೈಚಳಕ ತೋರಿಸಿ ಚಿನ್ನ, ನಗದು ದೋಚಿದ್ದಾನೆ.

ಇದನ್ನೂ ಓದಿ: Karnataka weather: ವ್ಯಾಪಕ ಮಳೆಯೊಂದಿಗೆ 60 ಕಿ.ಮೀ ವೇಗದಲ್ಲಿ ಅಪ್ಪಿಳಿಸಲಿದೆ ಗಾಳಿ; 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಬಹುತೇಕ ಮಹಿಳೆಯರನ್ನೇ ಟಾರ್ಗೆಟ್‌ ಮಾಡಿ ಕದಿಯುತ್ತಿದ್ದ ಈತ ಪಹಾರ್‌ಗಂಜ್‌ನಲ್ಲಿ ಸ್ವಂತ ಗೆಸ್ಟ್‌ ಹೌಸ್‌ವೊಂದನ್ನು ಹೊಂದಿದ್ದಾನೆ. ಅಲ್ಲದೇ ಮನಿ ಎಕ್ಸ್‌ಚೇಂಜ್‌ ಉದ್ಯಮ ಮತ್ತು ಮೊಬೈಲ್‌ ಅಂಗಡಿಗಳನ್ನು ಈತ ಹೊಂದಿದ್ದಾನೆ ಎನ್ನಲಾಗಿದೆ. ಇನ್ನು ತಾನು ಕದ್ದ ಚಿನ್ನಾಭರಣಗಳನ್ನು ಸ್ಥಳೀಯ ಚಿನ್ನದ ಅಂಗಡಿ ಮಾಲೀಕ ಶರದ್‌ ಜೈನ್‌ಗೆ ಮಾರುತ್ತಿದ್ದ ಎನ್ನಲಾಗಿದೆ.

Exit mobile version