Site icon Vistara News

Viral News: ಮೃಗಾಲಯದ ಸಿಂಹದ ಜತೆ ಸೆಲ್ಫಿ ತೆಗೆಯಲು ಹೋಗಿ ಸ್ಮಶಾನ ಪಾಲಾದ!

Viral News, Man jumped in lion enclosure and ended in death

ಹೈದ್ರಾಬಾದ್: ತಿರುಪತಿ ಮೃಗಾಲಯದಲ್ಲಿ (Tirupati zoo) ಅವಘಡವೊಂದು ಸಂಭವಿಸಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಪ್ರಾಣಿಗಳನ್ನು ನೋಡಲು ಮೃಗಾಲಯಕ್ಕೆ ಆಗಮಿಸಿದ್ದ ವ್ಯಕ್ತಿಯೊಬ್ಬರು ಸಿಂಹದ ಸೆಲ್ಫಿ ತೆಗೆದುಕೊಳ್ಳುವುದಕ್ಕಾಗಿ ಅದಿರುವ ಆವರಣಕ್ಕೆ (Lion’s Enclosure) ಜಿಗಿದಿದ್ದಾರೆ. ಆಗ ಸಿಂಹವು ಆತನನ್ನು ಕಚ್ಚಿ ಜಜ್ಜಿ ಹಾಕಿದೆ. ಪರಿಣಾಮ ಆತ ಮೃತಪಟ್ಟಿದ್ದಾನೆ (ended in death) ಎಂದು ಅಧಿಕಾರಿಗಳು ತಿಳಿಸಿದ್ದಾರೆ(Viral News).

ಮೃತ ವ್ಯಕ್ತಿಯನ್ನು ರಾಜಸ್ಥಾನದ ಅಲ್ವಾರದ 38 ವರ್ಷದ ಪ್ರಹ್ಲಾದ್ ಗುಜ್ಜರ್ ಎಂದು ತಿರುಪತಿಯ ವೆಂಕಟೇಶ್ವರ ಝೂಲಾಜಿಕಲ್ ಪಾರ್ಕ್‌ನ ಅಧಿಕಾರಿಗಳು ಗುರುತಿಸಿದ್ದಾರೆ. ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸುವ ಪ್ರದೇಶಕ್ಕೆ ಗುಜ್ಜರ್ ಹೋಗಿದ್ದಾಗ ಈ ಅನಾಹುತ ಸಂಭವಿಸಿದೆ.

ಸಿಂಹ ಇರುವ ಪ್ರವೇಶಿಸದಂತೆ ಅಲ್ಲಿನ ಸಿಬ್ಬಂದಿ ನೀಡಿದ ಎಚ್ಚರಿಕೆಯನ್ನು ಆತ ನಿರಾಕರಿಸಿದ್ದಾನೆ ಮತ್ತು 25 ಅಡಿ ಎತ್ತರದ ಬೇಲಿಯನ್ನು ಹತ್ತಿ ಸಿಂಹ ಇರುವ ಆವರಣಕ್ಕೆ ಹಾರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಂಹದ ಆವರಣಕ್ಕೆ ನೆಗೆದ ಕೂಡಲೇ ಅಲ್ಲಿಂದ ಡೊಂಗಲ್‌ಪುರ ಹೆಸರಿನ ಸಿಂಹವು, ಕಾವಲುಗಾರ ಬಂದು ಅದನ್ನು ನಿಯಂತ್ರಿಸುವ ಹೊತ್ತಿಗೆ ವ್ಯಕ್ತಿಯನ್ನು ಕೊಂದು ಹಾಕಿತ್ತು. ಪೊಲೀಸ್ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತಿದೆ.

ಗುಜ್ಜರ್ ಆವರಣಕ್ಕೆ ಪ್ರವೇಶಿಸಿದಾಗ ಕುಡಿದ ಸ್ಥಿತಿಯಲ್ಲಿದ್ದಾನಾ ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬರಲಿದೆ. ಗುಜ್ಜರ್ ಏಕಾಂಗಿಯಾಗಿ ಮೃಗಾಲಯಕ್ಕೆ ಭೇಟಿ ನೀಡಿದ್ದು, ಅಧಿಕಾರಿಗಳು ಅವರ ಕುಟುಂಬವನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮೃಗಾಲಯದ ಕ್ಯುರೇಟರ್ ಸಿ ಸೆಲ್ವಂ ಹೇಳಿದ್ದಾರೆ.

ಮೃಗಾಲಯದಲ್ಲಿ ಕುಮಾರ್, ಸುಂದರಿ ಮತ್ತು ಡೊಂಗಲ್‌ಪುರ್ ಎಂಬ ಮೂರು ಸಿಂಹಗಳಿವೆ. ಈ ಮೊರು ಸಿಂಹಗಳ ಪೈಕಿ ಡೊಂಗಲ್‌ಪುರ್ ಸಿಂಹವನ್ನು ಗುರುವಾರ ಪ್ರದರ್ಶಿಸಲಾಯಿತು. ಅವಘಡ ಸಂಭವಿಸುತ್ತಿದ್ದಂತೆ ಡೊಂಗಲ್‌ಪುರವನ್ನು ಈಗ ಪಂಜರಕ್ಕೆ ಸ್ಥಳಾಂತರಿಸಲಾಗಿದ್ದು, ನಿಗಾದಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral News: 45 ದಿನದಲ್ಲಿ 2.5 ಲಕ್ಷ ರೂ. ಭಿಕ್ಷೆ ಬೇಡಿದ ಮಹಿಳೆ ಅರೆಸ್ಟ್; ಈಕೆಗೆ ಮನೆ, ಜಮೀನು ಇದೆ

Exit mobile version