ಗ್ವಾಲಿಯರ್: ಚಿನ್ನದ ಚಮಚವನ್ನು ಬಾಯಿಯಲ್ಲೇ ಇಟ್ಟುಕೊಂಡು ಹುಟ್ಟುವುದು, ಬಾಲ್ಯದಲ್ಲಿಯೇ ಕಿಂಗ್ ಸೈಜ್ ಜೀವನವನ್ನು ಕಾಣುವುದು, ಪ್ರತಿ ಕ್ಷಣವೂ ಐಷಾರಾಮಿ ಜೀವನವನ್ನು ಅನುಭವಿಸುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೆ, ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಪುತ್ರ ಯುವರಾಜ ಮಹಾಆರ್ಯಮನ್ ಸಿಂಧಿಯಾ ಅವರು ಹಾಗಲ್ಲ. ಅವರಿಗೆ ಕೇವಲ 27 ವರ್ಷವಾದರೂ 400 ಬೆಡ್‌ರೂಮ್‌ಗಳಿರುವ 4 ಸಾವಿರ ಕೋಟಿ ರೂಪಾಯಿ ಮೌಲ್ಯದ ಮನೆ, ಅಲ್ಲ ಅರಮನೆಯಲ್ಲಿ ವಾಸಿಸುತ್ತಾರೆ. ಅವರ ಜೀವನ ಶೈಲಿಯೂ ಅಷ್ಟೇ ‘ಕಿಂಗ್ʼ ಆಗಿದೆ.
ವಿಸ್ತಾರ ನ್ಯೂಸ್ WhatsApp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಮಹಾಆರ್ಯಮನ್ ಸಿಂಧಿಯಾ ಅವರು ಇತ್ತೀಚೆಗೆ ದೇಶದ ಮಹಾನ್ ಉದ್ಯಮಿ ರತನ್ ಟಾಟಾ ಅವರನ್ನು ಭೇಟಿಯಾಗಿದ್ದು, ಇದಾದ ಬಳಿಕ ಅವರ ಜೀವನಶೈಲಿ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಜ್ಯೋತಿರಾದಿತ್ಯ ಸಿಂಧಿಯಾ ಅವರದ್ದು ರಾಜಮನೆತನವಾದ ಕಾರಣ ಅವರು ಸಾವಿರಾರು ಕೋಟಿ ರೂ. ಒಡೆಯರಾಗಿದ್ದಾರೆ. ಇವರ ಪುತ್ರ ಮಹಾಆರ್ಯಮನ್ ಗ್ವಾಲಿಯರ್‌ನ ಜೈ ವಿಲಾಸ್ ಅರಮನೆಯಲ್ಲಿ ವಾಸಿಸುತ್ತಾರೆ. ಇದು 400 ಬೆಡ್‌ರೂಮ್‌ಗಳನ್ನು ಹೊಂದಿರುವ ನಿವಾಸವಾಗಿದೆ.
ಉದ್ಯಮಿ ಕೂಡ ಹೌದು
2019ರಲ್ಲಿ ಅಮೆರಿಕದಲ್ಲಿ ಪದವಿ ಪಡೆದಿರುವ ಮಹಾಆರ್ಯಮನ್ ಅವರು ಉದ್ಯಮಿ ಆಗಿದ್ದಾರೆ. ಅವರು ಕೆಲ ದಿನ ಅಮೆರಿಕದಲ್ಲಿ ಕೆಲಸ ಮಾಡಿ, ಭಾರತಕ್ಕೆ ಬಂದು ಉದ್ಯಮ ನಡೆಸುತ್ತಿದ್ದರು. ಹಾಗೆಯೇ, ಸಿಂಬಾಲ್ ಎಂಬ ಸಂಗೀತ ಮಹೋತ್ಸವ, ಪ್ರವಾಸ್ ಎಂಬ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದುಡ್ಡು ಮಾಡುತ್ತಾರೆ. ತಮ್ಮ ಮನೆಯಲ್ಲಿಯೇ 2021ರಲ್ಲಿ ಪ್ರವಾಸ್ ಕಾರ್ಯಕ್ರಮ ಆಯೋಜಿಸಿ ಗಮನ ಸೆಳೆದಿದ್ದರು. ಅಂದಹಾಗೆ, ಮಹಾಆರ್ಯಮನ್‌ಗೆ ಸಂಗೀತ ಹಾಗೂ ಬಗೆಬಗೆಯ ತಿಂಡಿಗಳನ್ನು ಸೇವಿಸುವುದು ಎಂದರೆ ತುಂಬ ಇಷ್ಟ.
ಇದನ್ನೂ ಓದಿ: Viral video: ಹೆದ್ದಾರಿಯಲ್ಲಿ ಉರುಳಿಬಂದ ಬಂಡೆಗೆ ಕಾರುಗಳು ಪುಡಿಪುಡಿ, ಬೆಚ್ಚಿ ಬೀಳಿಸುವಂತಿದೆ ವಿಡಿಯೋ!
ಆನ್‌ಲೈನ್ ಮೂಲಕ ತರಕಾರಿಗಳನ್ನು ಸರಬರಾಜು ಮಾಡುವ MyMandi ಎಂಬ ಸ್ಟಾರ್ಟ್‌ಅಪ್‌ಅನ್ನು ಕೂಡ ಆರಂಭಿಸಿ ಯಶಸ್ವಿಯಾಗಿದ್ದಾರೆ. ಇದು ಈಗ ಮಾಸಿಕವಾಗಿ ಒಂದು ಕೋಟಿ ರೂಪಾಯಿ ತರುವ ಉದ್ಯಮವಾಗಿ ಹೊರಹೊಮ್ಮಿದೆ. ಕ್ರಿಕೆಟ್‌ನಲ್ಲೂ ಮಹಾಆರ್ಯನ್ ಆಸಕ್ತಿ ಹೊಂದಿದ್ದು, ಅವರು ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ನ ಸದಸ್ಯರಾಗಿದ್ದಾರೆ. ನಾಗರಿಕ ವಿಮಾನಯಾನ ಸಚಿವರಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಆಸ್ತಿಯ ಮೌಲ್ಯ 10 ಸಾವಿರ ಕೋಟಿ ರೂಪಾಯಿಗಿಂತ ಜಾಸ್ತಿ ಇದೆ ಎಂದು ವರದಿಗಳಿಂದ ತಿಳಿದುಬಂದಿದೆ.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ