Site icon Vistara News

Viral News: ತಮ್ಮನಿಗೆ ಕಿಡ್ನಿ ಕೊಟ್ಟ ಹೆಂಡತಿ, ಹೆಂಡತಿಗೆ ತಲಾಖ್ ಕೊಟ್ಟ ಗಂಡ!

Viral News, Muslim woman donate kidney to his brother and Husband giver her triple talaq

ನವದೆಹಲಿ: ಕಿಡ್ನಿ ತೊಂದರೆಯಿಂದ (Kidney Problem) ಬಳಲುತ್ತಿದ್ದ ತನ್ನ ಸಹೋದರನಿಗೆ ಆ ಮುಸ್ಲಿಂ ಮಹಿಳೆ (Muslim Woman) ಕಿಡ್ನಿ ದಾನ ಮಾಡಿದಳು(Kidney Donate). ಆ ವಿಷಯ ತಿಳಿದ ಆ ಮಹಿಳೆಯ ಗಂಡ ವಾಟ್ಸಾಪ್‌ನಲ್ಲಿ ತ್ರಿವಳಿ ತಲಾಖ್ ನೀಡಿದ(Triple Talaq)! ಹೌದು, ಇಂಥದೊಂದು ವಿಚಿತ್ರ ಘಟನೆ ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆದಿದೆ(Viral News).

ಆ ಸಂತ್ರಸ್ತ ಮಹಿಳೆಯ ಹೆಸರು ತರನ್ನುಮ್. ಇವರ ಪತಿ ಮೊಹಮ್ಮದ್ ರಶೀದ್ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಪತ್ನಿ ತರನ್ನುಮ್ ಅವರು ತಮ್ಮ ಸಹೋದರನಿಗೆ ಕಿಡ್ನಿ ದಾನ ಮಾಡಿ ಆತನ ಪ್ರಾಣವನ್ನು ಕಾಪಾಡಿದರು. ಆದರೆ, ಈ ಮಾಹಿತಿಯಿಂದ ವ್ಯಗ್ರಗೊಂಡ ಮೊಹಮ್ಮದ್ ರಶೀದ್, ತರನ್ನುಮ್ ಅವರಿಂದ 40 ಲಕ್ಷ ರೂ. ಬೇಡಿಕೆ ಇಟ್ಟ. ಇದಕ್ಕೆ ನಿರಾಕರಿಸಿದ್ದಕ್ಕೆ ಆಗಸ್ಟ್ 30ರಂದು ವಾಟ್ಸಾಪ್‌ ಮೂಲಕವೇ ತ್ರಿವಳಿ ತಲಾಖ್ ನೀಡಿದ್ದಾನೆ.

20 ವರ್ಷಗಳ ಹಿಂದೆ ತರನ್ನುಮ್ ಮತ್ತು ರಶೀದ್ ಮದುವೆಯಾಗಿದ್ದಾರೆ. ಆದರೆ ರಶೀದ್ ನಂತರ ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದಾನೆ. ಅವರ ಮದುವೆಯ ಸಮಯದಲ್ಲಿ ದಂಪತಿಗೆ ಮಕ್ಕಳಿರಲಿಲ್ಲ. ಆದರೆ, ರಶೀದ್ ಎರಡನೇ ಮದುವೆಯಾಗಿದ್ದಾರೆಂದು ತರನ್ನುಮ್ ಅವರು ಹೇಳಿದ್ದಾರೆ.

ತರನ್ನುಮ್ ಅವರ ಸಹೋದರ ಮೊಹಮ್ಮದ್ ಶಾಕಿರ್ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು ಮತ್ತು ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಹೋದರನ ಜೀವ ಉಳಿಸಲು ತರನ್ನುಮ್ ಅವರು ತಮ್ಮ ಕಿಡ್ನಿ ದಾನ ಮಾಡಲು ಮುಂದಾದರು. ಇದಕ್ಕಾಗಿ ಐದು ತಿಂಗಳ ಹಿಂದೆ ಅವರು ಶಸ್ತ್ರ ಚಿಕಿತ್ಸೆಗೊಳಗಾದರು.

ಕಿಡ್ನಿ ಕಸಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ತರನ್ನುಮ್ ಅವರು ಉತ್ತರ ಪ್ರದೇಶದ ಗೊಂಡಾದಲ್ಲಿನ ತಮ್ಮ ಅತ್ತೆಯ ಮನೆಗೆ ವಾಪಸಾದರು. ಆಗ, ಕಿಡ್ನಿ ದಾನಕ್ಕೆ ಸಂಬಂಧಿಸಿದಂತೆ ಪತಿ ಹಾಗೂ ಪತ್ನಿ ನಡುವೆ ಕದನ ಶುರುವಾಯಿತು. ಅಂತಿಮವಾಗಿ ಪತಿ ರಶೀದ್ ವಾಟ್ಸಾಪ್ ಮೂಲಕವೇ ತ್ರಿವಳಿ ತಲಾಖ್ ನೀಡಿದ್ದಾನೆ. ಇದರಿಂದಾಗಿ ಅವರು ಗಂಡನ ಮನೆ ತೊರೆದ ತರನ್ನುಮ್ ಅನಿವಾರ್ಯವಾಗಿ ಪೋಷಕರ ಜತೆ ಉಳಿದಕೊಂಡರು. ಈಗ ತ್ರಿವಳಿ ತಲಾಖ್ ನೀಡಿದ ಪತಿಯ ವಿರುದ್ಧ ಕಾನೂನು ಹೋರಾಟವನ್ನು ಆರಂಭಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಧೇಶ್ಯಾಮ್ ರೈ ಖಚಿತಪಡಿಸಿದ್ದಾರೆ. ಭಾರತದಲ್ಲಿ ತ್ರಿವಳಿ ತಲಾಖ್ ನಿಷೇಧವಾಗಿದ್ದರೂ ಆಗಾಗ ತ್ರಿವಳಿ ತಲಾಖ್ ವರದಿಯಾಗುತ್ತಲೇ ಇರುತ್ತವೆ. ಈ ಪ್ರಕರಣವು ಕೂಡಾ ಅದೇ ಸಾಲಿಗೆ ಸೇರುತ್ತದೆ.

ಈ ಸುದ್ದಿಯನ್ನೂ ಓದಿ: Triple Talaq: ಮದುವೆಯಾದ 2 ಗಂಟೆಯಲ್ಲೇ ಪತ್ನಿಗೆ ತ್ರಿವಳಿ ತಲಾಕ್ ನೀಡಿದ ದುರುಳ; ವರದಕ್ಷಿಣೆ ಆಸೆಗೆ ನೀಚ ಕೃತ್ಯ

Exit mobile version