Site icon Vistara News

Viral News : ಸೀರೆಯುಟ್ಟು ಬೈಕ್‌ನಲ್ಲಿ ಪ್ರಪಂಚ ಪರ್ಯಟನೆ ಮಾಡಲು ಹೊರಟ ಯುವತಿ

#image_title

ಮುಂಬೈ: ಹವ್ಯಾಸ ಎಲ್ಲರಲ್ಲೂ ಇದ್ದೇ ಇರುತ್ತದೆ. ಆದರೆ ಅದಕ್ಕೆ ಹೆಚ್ಚಿನ ಮಹತ್ವ ಕೊಡುವವರು ಕೆಲವರು ಮಾತ್ರ. ಅದೇ ರೀತಿ ಇದೀಗ ಮಹಾರಾಷ್ಟ್ರದ ಪುಣೆಯ ಯುವತಿಯೊಬ್ಬರು ಪ್ರಪಂಚವನ್ನೇ ಒಬ್ಬಂಟಿಯಾಗಿ ಸುತ್ತಲು ಹೊರಟಿದ್ದಾರೆ. ಸೀರೆಯುಟ್ಟುಕೊಂಡು ಬೈಕ್‌ ಹತ್ತಿ ಪ್ರಪಂಚ ಸುತ್ತಲು ಹೊರಟಿರುವ ಅವರ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral News) ಆಗಿದೆ.

ಇದನ್ನೂ ಓದಿ: Viral video: ಸೀರೆಯಲ್ಲಿ ಪ್ರತಿದಿನ ವರ್ಕೌಟ್‌! 56ರ ಮಹಿಳೆಯ ಭರ್ಜರಿ ಪವರ್‌ಲಿಫ್ಟಿಂಗ್!

ರಮಿಲಾ ಲತಪಟೆ(27) ಈಗ ಪ್ರಪಂಚ ಪರ್ಯಟನೆಗೆ ಹೊರಟಿರುವ ಯುವತಿ. ಅವರು ಮಹಿಳಾ ದಿನಾಚರಣೆ ಮಾರನೇ ದಿನವಾದ ಮಾ.9ರಂದು ಪ್ರಯಾಣ ಆರಂಭಿಸಲಿದ್ದರೆ, ಮುಂದಿನ ವರ್ಷದ ಮಹಿಳಾ ದಿನಾಚರಣೆಗೆ ಮುಂಬೈಗೆ ವಾಪಸು ಬರಲಿದ್ದಾರೆ. ಒಟ್ಟಾರೆಯಾಗಿ 20 ದೇಶಗಳನ್ನು ಒಬ್ಬಂಟಿಯಾಗಿ ಬೈಕ್‌ನಲ್ಲಿ ಸುತ್ತಲಿದ್ದಾರೆ. ತಾನು ಹೋದಲ್ಲೆಲ್ಲ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ವಸ್ತುಗಳನ್ನು ಖರೀದಿಸಿ ತರಲಿದ್ದಾರೆ. ಭಾರತದ ಅದರಲ್ಲೂ ಮಹಾರಾಷ್ಟ್ರದ ಸಂಸ್ಕೃತಿಯನ್ನು ಎಲ್ಲೆಡೆ ಪ್ರಚಾರ ಮಾಡುವ ನಿಟ್ಟಿನಲ್ಲಿ ಈ ಪ್ರಯಾಣ ಹೊರಟಿರುವುದಾಗಿ ರಮಿಲಾ ಹೇಳಿಕೊಂಡಿದ್ದಾರೆ.

ರಮಿಲಾ ತಮ್ಮ 16ನೇ ವಯಸ್ಸಿನಿಂದಲೂ ಒಬ್ಬಂಟಿ ಪ್ರಯಾಣ ಮಾಡಲಾರಂಭಿಸಿದ್ದಾರಂತೆ. ಅವರ ತಂದೆ ಚಿಕ್ಕವರಿದ್ದಾಗಿಂದಲೂ ಮಕ್ಕಳನ್ನು ಪ್ರತಿ ವರ್ಷ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದರಂತೆ. ಅದರಿಂದಾಗಿ ರಮಿಲಾಗೆ ಪ್ರವಾಸದ ಬಗ್ಗೆ ಆಸಕ್ತಿ ಹೆಚ್ಚಿದೆ. ಒಬ್ಬಂಟಿಯಾಗಿ ದೇಶವನ್ನು ಸುತ್ತಿದ್ದಾರೆ. ಕೆಲವು ವಿದೇಶಗಳಿಗೂ ಒಬ್ಬಂಟಿಯಾಗಿ ಸುತ್ತಿ ಬಂದಿದ್ದಾರಂತೆ.

ಇದನ್ನೂ ಓದಿ: Viral News: ಸ್ಸಾರಿ ಹುಡ್ಗೀರೇ… ನನ್ನ ಹೆಂಡ್ತಿ ಬಹಳಾ ಸ್ಟ್ರಿಕ್ಟು! ವೈರಲ್ ಆಯ್ತು ಆಟೋ ರಿಕ್ಷಾ ಹಿಂಬದಿ ಸಾಲು!
ರಮಿಲಾ ಪ್ರಯಾಣ ಮಾ.9ರ ಬೆಳಗ್ಗೆ 4.30ಕ್ಕೆ ಮುಂಬೈನ್‌ ಗೇಟ್‌ ವೇ ಆಫ್‌ ಇಂಡಿಯಾದಿಂದ ಆರಂಭವಾಗಲಿದೆ. ಅವರು ತಮ್ಮೊಂದಿಗೆ ಕೇವಲ ಏಳು ಸೀರೆಗಳನ್ನು ತೆಗೆದುಕೊಂಡು ಹೋಗಲಿದ್ದಾರೆ. ಮಧ್ಯಪ್ರದೇಶದ ಮಹೇಶವರಿ ಸೀರೆ, ಮಹಾರಾಷ್ಟ್ರದ ಪೈಥಾನಿ ಸೀರೆಯಂತಹ ವಿಶೇಷ ಸೀರೆಗಳನ್ನೇ ತಮ್ಮೊಂದಿಗೆ ತೆಗೆದುಕೊಂಡು ಹೋಗಲಿದ್ದಾರೆ. ಹೋದ ಕೆಲವು ಸ್ಥಳಗಳಲ್ಲಿ ಕಾರ್ಯಕ್ರಮವನ್ನೂ ನಡೆಸಲಿದ್ದಾರೆ ಎಂದು ವರದಿಯಿದೆ.

Exit mobile version