Site icon Vistara News

Viral Video: ಕೃಷಿ ಹೊಂಡಕ್ಕೆ ಬಿದ್ದಿದ್ದ ಮರಿಯಾನೆ ರಕ್ಷಿಸಿದ ಅರಣ್ಯ ಇಲಾಖೆ

Viral Video, 4 year old elephant rescued from pond in Tamil Nadu

ನವದೆಹಲಿ: ಕೃಷಿ ಹೊಂಡದಲ್ಲಿ (Agriculture Pond) ಬಿದ್ದಿದ್ದ ನಾಲ್ಕು ವರ್ಷದ ಗಂಡು ಮರಿಯಾನೆಯನ್ನು (Elephant Rescued) ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ(Tamil Nadu Forest Department). ಕೊಯಮತ್ತೂರಿನ ಮದುಕ್ಕರೈ ಅರಣ್ಯ (Madukkarai Forest) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸುಮಾರು 4 ವರ್ಷದ ಮರಿಯಾನೆ ಗುರುವಾರ ಮುಂಜಾನೆ ಕೃಷಿ ಹೊಂಡಕ್ಕೆ ಬಿದ್ದಿತ್ತು. ಅಧಿಕಾರಿಗಳು ಅರಣ್ಯ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದಾಗ, ಮರಿಯಾನೆ ನರಳುತ್ತಿದ್ದನ್ನು ಕೇಳಿ, ಸ್ಥಳಕ್ಕೆ ಧಾವಿಸಿದ್ದಾರೆ. ಆಗ, ಅರಣ್ಯ ಇಲಾಖೆ ಆನೆಗೆ ಸಹಾಯ ಮಾಡಲು ರಕ್ಷಣಾ ಕಾರ್ಯಾಚರಣೆ ಆರಂಭಿಸಿತು. ಅರಣ್ಯ ಸಿಬ್ಬಂದಿಯ ಪ್ರಯತ್ನಗಳು ಮತ್ತು ಆನೆಯ ರಕ್ಷಣೆಯ ನಂತರದ ಘಟನಾವಳಿಗಳನ್ನು ಒಳಗೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ(Viral Video).

ಕೃಷಿ ಹೊಂಡದಲ್ಲಿ ಸಿಲುಕಿದ್ದ ಆನೆಯನ್ನು ಅರಣ್ಯಾಧಿಕಾರಿಗಳು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಇಂದು(ಗುರುವಾರ) ಮುಂಜಾನೆ ಕೊಯಮತ್ತೂರಿನ ಮಧುಕ್ಕರೈ ಅರಣ್ಯ ವ್ಯಾಪ್ತಿಯಲ್ಲಿ ಅಧಿಕಾರಿಗಳು ಗಸ್ತು ತಿರುಗುತ್ತಿದ್ದ ವೇಳೆ, ಮರಿಯಾನೆ ಕೃಷಿ ಹೊಂಡದಲ್ಲಿ ಪತ್ತೆಯಾಗಿತ್ತು ಎಂದು ಎಕ್ಸ್ ವೇದಿಕೆಯಲ್ಲಿ ವಿಡಿಯೋದೊಂದಿಗೆ ಎಎನ್ಐ ಪೋಸ್ಟ್ ಮಾಡಿದೆ. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡ್ ಆಗಿದ್ದು, ಸಾಕಷ್ಟು ಆನ್‌ಲೈನ್ ಬಳಕೆದಾರರು ತಮಿಳುನಾಡು ಅರಣ್ಯ ಇಲಾಖೆಯ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಅರಣ್ಯ ಇಲಾಖೆಯ ಪ್ರಯತ್ನಗಳನ್ನು ಮೆಚ್ಚಿದ್ದಾರೆ.

ಕೊಯಮತ್ತೂರಿನ ಜಿಲ್ಲೆಯ ಕಾಡಂಚಿನ ಗ್ರಾಮಗಳಿಗೆ ಆನೆಗಳು ಹಿಂಡು ನುಗ್ಗುತ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು, ರಾತ್ರಿ ಗಸ್ತಿನಲ್ಲಿ ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು ನಿಯೋಜಿಸಿದೆ.

ಇತ್ತೀಚೆಗೆ ತಮಿಳುನಾಡು ಅರಣ್ಯ ಇಲಾಖೆಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಕಣ್ಗಾವಲು ಕಾರ್ಯವಿಧಾನವು ಮಧುಕ್ಕರೈನಲ್ಲಿನ ರೈಲ್ವೆ ಹಳಿಯಲ್ಲಿ ಆನೆಗಳ ಚಲನವಲನಗಳನ್ನು ದಾಖಲಿಸಲು ಪ್ರಾರಂಭಿಸಿದೆ. ಕಣ್ಗಾವಲು ವ್ಯವಸ್ಥೆಯಲ್ಲಿ 12 ಟವರ್‌ಗಳಲ್ಲಿ ಥರ್ಮಲ್ ಮತ್ತು ನಾರ್ಮಲ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ರೈಲ್ವೆ ಹಳಿಗಳ ಉದ್ದಕ್ಕೂ ಆಯಕಟ್ಟಿನ ಸ್ಥಳಗಳಲ್ಲಿ ಪ್ರಾಣಿಗಳ ಚಲನವಲನವನ್ನು ಮೊದಲೇ ಪತ್ತೆಹಚ್ಚಲು ಸಾಧ್ಯವಾಗುತ್ತಿದೆ ಎಂದು ಪರಿಸರ ಹವಾಮಾನ ಬದಲಾವಣೆ ಮತ್ತು ಅರಣ್ಯಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು ತಿಳಿಸಿದ್ದಾರೆ.

ಕೃಷಿ ಹೊಂಡದಲ್ಲಿ ಸಿಲುಕಿದ್ದ ಮರಿಯಾನೆ ರಕ್ಷಣೆ ಮಾಡಿದ ಪ್ರದೇಶದಲ್ಲಿ ಸಾಕಷ್ಟು ಆನೆಗಳು ಸಾವಿಗೀಡಾದ ಉದಾಹರಣೆಗಳಿವೆ. ಈ ಪ್ರದೇಶದಲ್ಲಿ ಹಾದುವ ಹೋಗುವ ರೈಲು ಮಾರ್ಗಗಳಲ್ಲಿ ಆನೆಗಳು ಟ್ರೈನ್‌ಗೆ ಡಿಕ್ಕಿ ಹೊಡೆದು ಮೃತಪಟ್ಟ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ.

ಈ ಸುದ್ದಿಯನ್ನೂ ಓದಿ: Viral Video: ಕೋಳಿಯ ಹಿಂಭಾಗಕ್ಕೆ ಪಟಾಕಿ ತುರುಕಿ ಸಿಡಿಸಿದರು! ಕೃತ್ಯ ಎಸಗಿದವರಿಗೆ ಶಿಕ್ಷೆಗೆ ಆಗ್ರಹ

Exit mobile version