ನವದೆಹಲಿ: ಎಷ್ಟೋ ಜನರಿಗೆ ಕಾರ್ ಓಡಿಸುವುದು (Car Drive) ಅಂದರೆ ಭಯ. ಆದರೆ, 95 ವರ್ಷದ ಅಜ್ಜಿಯೊಬ್ಬಳು (95 Year Old Man) ಮೊದಲ ಬಾರಿಗೆ ಸರಾಗವಾಗಿ ಕಾರ್ ಓಡಿಸಿ ಸೈ ಎನಿಸಿಕೊಂಡಿದ್ದಾಳೆ. ಹೌದು, ಈ ಅಜ್ಜಿಯ ಕಾರ್ ಡ್ರೈವ್ ಮಾಡುವ ವಿಡಿಯೋವನ್ನು ನಾಗಾಲ್ಯಾಂಡ್ ಸಚಿವ ತೆಜ್ಮೆನ್ ಇಮ್ನಾ ಅಲಾಂಗ್(Nagaland Minister Temjen Imna Along) ಎಕ್ಸ್‌ವೇದಿಕೆಯಲ್ಲಿ ಷೇರ್ ಮಾಡಿದ್ದು, ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಪ್ರವಾಸೋದ್ಯಮ ಮತ್ತು ಉನ್ನತ ಶಿಕ್ಷಣ ಸಚಿವರಾಗಿರುವ ಅಲಾಂಗ್ ಅವರ ಹಾಸ್ಯ ಮತ್ತು ಮನರಂಜನೆಯ ಸಾಮಾಜಿಕ ಮಾಧ್ಯಮ ಶೀರ್ಷಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಜೀವನ ಸಲಹೆ ಮತ್ತು ಹೃದಯಸ್ಪರ್ಶಿ ವೀಡಿಯೊಗಳನ್ನು ನಿಯಮಿತವಾಗಿ ಪೋಸ್ಟ್ ಮಾಡುತ್ತಿರುತ್ತಾರೆ(Viral Video).
ಇನ್‌ಸ್ಟಾಗ್ರಾಮ್ ಬಳಕೆದಾರ ಸುಮಿತ್ ನೇಗಿ ಅವರು ತಮ್ಮ ಅಜ್ಜಿ ವಾಹನ ಚಲಾಯಿಸುವುದನ್ನು ಕಲಿಯುತ್ತಿರುವುದನ್ನು ಸೆರೆಹಿಡಿದಾಗ ವೀಡಿಯೊವನ್ನು ಮೊದಲು ಹಂಚಿಕೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಅಜ್ಜಿಯು ಡ್ರೈವ್ ಮಾಡುವುದನ್ನು ಭಾರೀ ಆನಂದಪಟ್ಟಿರುವಂತೆ ಕಾಣುತ್ತದೆ. ಅಲ್ಲದೇ, ಈ ಹಿಂದೆ ತಾನು ರೈಫಲ್ ಕೂಡ ಬಳಸಿದ್ದೇನೆ ಎಂದು ಹೇಳುವುದನ್ನು ಕೇಳಿಸಿಕೊಳ್ಳಬಹುದು.
दादी जी is ROCKING at the age of 95!
— Temjen Imna Along (@AlongImna) February 11, 2024
Once again, मैं कहना चाहूंगा: Age is indeed just a number.
📽️: the_phoenix_soul pic.twitter.com/r06S6WWIpK
ಈ ವಿಡಿಯೋವನ್ನು ಎಕ್ಸ್ ವೇದಿಕೆಯಲ್ಲಿ ಷೇರ್ ಮಾಡಿರುವ ನಾಗಾಲ್ಯಾಂಡ್ ಸಚಿವರು, ಅಜ್ಜಿಯ ಬಗ್ಗೆ ಹುರಿದುಂಬಿಸುವ ಮಾತುಗಳನ್ನಾಡಿದ್ದಾರೆ. “ದಾದಿ ಜೀ 95ನೇ ವಯಸ್ಸಿನಲ್ಲಿ ರಾಕಿಂಗ್. ಮತ್ತೊಮ್ಮೆ, ವಯಸ್ಸು ಕೇವಲ ಒಂದು ಸಂಖ್ಯೆ ಎಂದು ನಾನು ಹೇಳಲು ಬಯಸುತ್ತೇನೆ,” ಎಂದು ಬರೆದುಕೊಂಡಿದ್ದಾರೆ.
ಸಚಿವರು ಈ ವಿಡಿಯೋವನ್ನು ಎಕ್ಸ್ ವೇದಿಕೆಯಲ್ಲಿ ಷೇರ್ ಮಾಡುತ್ತಿದ್ದಂತೆ ಭಾರೀ ವೈರಲ್ ಆಗಿದೆ. ಸಾವಿರಾರು ವೀವ್ಸ್ ಕೂಡ ಬಂದಿದ್ದು, ಹಲವು ನೆಟ್ಟಿಗರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಅಲಾಂಗ್ ಅವರು ತಮಾಷೆಯ ವೀಡಿಯೊವನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು ಮೂರು ಜನರು ಸಹಾಯ ಮಾಡಿದರೂ ಸಹ ಆಳವಿಲ್ಲದ ಬಾವಿಯಿಂದ ಹೊರಬರಲು ಹೆಣಗಾಡುತ್ತಿರುವುದನ್ನು ಕಾಣಬಹುದು. ಇದು ಕೂಡ ವೈರಲ್ ಆಗಿತ್ತು.
ಈ ಸುದ್ದಿಯನ್ನೂ ಓದಿ: Viral Video: 12ನೇ ತರಗತಿಯ ವಿದಾಯ ಆಚರಣೆ; ಮಕ್ಕಳಿಂದ ಅಪಾಯಕಾರಿ ಕಾರ್ ರ‍್ಯಾಲಿ