ಭೋಪಾಲ್, ಮಧ್ಯ ಪ್ರದೇಶ: ಕುಡುಕನೊಬ್ಬ ಆದಿವಾಸಿ ವ್ಯಕ್ತಿಯ (Tribal Man) ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವ (Man Urinated) ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ (Viral Video) ಆಗಿದ್ದು, ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ, ಮೂತ್ರವಿಸರ್ಜನೆ ಮಾಡಿದ ವ್ಯಕ್ತಿ ಬಿಜೆಪಿಗೆ (BJP) ಸೇರಿದವ ಎಂಬ ಸುದ್ದಿ ವ್ಯಾಪಕವಾಗಿ ಹಬ್ಬಿ, ಮಧ್ಯ ಪ್ರದೇಶದಲ್ಲಿ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಈ ವಿಡಿಯೋ ಕಾರಣವಾಗಿದೆ. ಮಧ್ಯ ಪ್ರದೇಶದಲ್ಲಿ ಶೀಘ್ರವೇ ವಿಧಾನಸಭೆ ಚುನಾವಣೆ ನಡೆಯಲಿದೆ. ಹಾಗಾಗಿ, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಶಿವರಾಜ್ ಸಿಂಗ್ ಚೌಹಾಣ್ (Madhya Pradesh Chief Minister Shivraj Singh Chouhan) ಅವರು, ತನಿಖೆಗೆ ಆದೇಶಿಸಿದ್ದಾರೆ.
ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆಯನ್ನು ಖಂಡಿಸಿರುವ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು, ಆರೋಪಿಯ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೆ. ಆದರೆ, ಕಾಂಗ್ರೆಸ್, ಸರ್ಕಾರದ ವಿರುದ್ದ ಈ ಘಟನೆಯನ್ನು ಬಳಸಿಕೊಂಡಿದ್ದು, ಮಧ್ಯ ಪ್ರದೇಶದಲ್ಲಿ ಆದಿವಾಸಿಗಳ ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದೆ.
He is Pravesh Shukla, BJPian.
— ✎𝒜 πrundhati🌵 (@Polytikles) July 4, 2023
He urinated openly on Tribal man. pic.twitter.com/hv2touu4oB
ವಿಡಿಯೋದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ವ್ಯಕ್ತಿಯನ್ನು ಪ್ರವೇಶ್ ಶುಕ್ಲಾ ಎಂದು ಗುರುತಿಸಲಾಗಿದೆ. ಈತ ಸಿಧಿ ಬಿಜೆಪಿ ಶಾಸಕ ಕೇದರನಾಥ್ ಶುಕ್ಲಾ ಅವರ ಪ್ರತಿನಿಧಿಯಾಗಿದ್ದಾನೆಂದು ಹೇಳಲಾಗುತ್ತಿದೆ. ಪ್ರವೇಶ್ ಶುಕ್ಲಾ ಸಿಗರೇಟ್ ಸೇದುತ್ತಾ, ಕೆಳಗೆ ಕುಳಿತಿರುವ ವ್ಯಕ್ತಿಯ ಮುಖ, ಕೂದಲು ಮತ್ತು ತಲೆ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ಘಟನೆಯ 9 ದಿನಗಳ ಹಿಂದೆ ಸಿಧಿ ಜಿಲ್ಲೆಯ ಕುಬ್ರಿ ಗ್ರಾಮದಲ್ಲಿ ನಡೆದಿದ್ದು, ಈಗ ವಿಡಿಯೋ ವೈರಲ್ ಆಗಿದೆ.
ಪ್ರವೇಶ್ ಅವರು ಕೇದಾರನಾಥ್ ಶುಕ್ಲಾ ಮತ್ತು ರೇವಾ ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ರಾಜೇಂದ್ರ ಶುಕ್ಲಾ ಅವರೊಂದಿಗೆ ಇರುವ ಕೆಲವು ಫೋಟೋಗಳು ವೈರಲ್ ಆಗುತ್ತಿವೆ. ಆದರೆ, ಬಿಜೆಪಿಯ ಆ ವ್ಯಕ್ತಿಯ ಜತೆಗಿನ ನಂಟನ್ನು ನಿರಾಕರಿಸಿದೆ. ಆ ವ್ಯಕ್ತಿ ನನ್ನ ಕ್ಷೇತ್ರ ಮತದಾರ. ಅವರ ಬಗ್ಗೆ ಗೊತ್ತಿದೆ. ಆದರೆ, ಆರೋಪಿ ನನ್ನ ಪ್ರತಿನಿಧಿ ಅಥವಾ ಬಿಜೆಪಿ ಕಾರ್ಯಕರ್ತನಲ್ಲ ಎಂದು ಕೇದಾರನಾಥ್ ಶುಕ್ಲಾ ಹೇಳಿದ್ದಾರೆ. ಆದರೆ, ಪ್ರವೇಶ್ ಅವರು ಕೇದಾರನಾಥ್ ಶುಕ್ಲಾ ಅವರ ಪ್ರತಿನಿಧಿ ಎಂದು ಹೇಳಿಕೊಳ್ಳುವ ಪೋಸ್ಟರ್ ಕೂಡ ವೈರಲ್ ಆಗಿದೆ!
मेरे संज्ञान में सीधी जिले का एक वायरल वीडियो आया है…
— Shivraj Singh Chouhan (@ChouhanShivraj) July 4, 2023
मैंने प्रशासन को निर्देश दिए हैं कि अपराधी को गिरफ्तार कर कड़ी से कड़ी कार्रवाई कर एनएसए भी लगाया जाए।
ರಾಷ್ಟ್ರೀಯ ಭದ್ರತಾ ಕಾಯ್ದೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಆರೋಪಿ ಪ್ರವೇಶ್ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ. ಪರಾರಿಯಾಗಿರುವ ಆರೋಪಿ ಪತ್ತೆಗೆ ತಂಡಗಳನ್ನು ರಚಿಸಲಾಗಿದೆ ಎಂದು ಮಧ್ಯ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Karnataka Election 2023: ಪಿಸ್ತೂಲ್ ಪ್ರದರ್ಶಿಸಿದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ವಿಡಿಯೋ ವೈರಲ್
ಸಿಧಿ ಜಿಲ್ಲೆಯ ವೈರಲ್ ವೀಡಿಯೊ ನನ್ನ ಗಮನಕ್ಕೆ ಬಂದಿದೆ. ಅಪರಾಧಿಯನ್ನು ಬಂಧಿಸಲು ಮತ್ತು ಸಾಧ್ಯವಾದಷ್ಟು ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಡಳಿತಕ್ಕೆ ಸೂಚನೆ ನೀಡಿದ್ದೇನೆ ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಚೌಹಾಣ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವು ಬಿಜೆಪಿ ವಿರುದ್ಧ ಹರಿ ಹಾಯ್ದಿದ್ದು, ಬುಡಕಟ್ಟು ಸಮುದಾಯದವರ ವಿರುದ್ಧ ಇಂತಹ ಅಶ್ಲೀಲ ಮತ್ತು ಹೇಯ ಕೃತ್ಯಗಳಿಗೆ ನಾಗರಿಕ ಸಮಾಜದಲ್ಲಿ ಸ್ಥಾನವಿಲ್ಲ. ಅಪರಾಧ ಮಾಡಿದ ವ್ಯಕ್ತಿಯನ್ನು ಬಿಜೆಪಿಯವರು ಎಂದು ಹೇಳಲಾಗುತ್ತದೆ ಎಂದು ಮಾಜಿ ಸಿಎಂ ಕಮಲನಾಥ್ ಅವರು ಹೇಳಿದ್ದಾರೆ. ಈ ಘಟನೆಯು ಇಡೀ ರಾಜ್ಯವೇ ತಲೆ ತಗ್ಗಿಸುವಂತೆ ಮಾಡಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೇ ಬಿಜೆಪಿ ಆಡಳಿತದಲ್ಲಿ ಆದಿವಾಸಿಗಳ ಮೇಲೆ ದೌರ್ಜನ್ಯ ನಿರಂತರವಾಗಿದೆ ಎಂದು ಆರೋಪಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.