Site icon Vistara News

Viral Video: ಅಮರನಾಥ ಯಾತ್ರೆ ಸಂಭ್ರಮದಲ್ಲಿ ಅಮೆರಿಕದ ತಾಯಿ- ಮಗ!

Viral Video

ಅಮೆರಿಕದ (America) ತಾಯಿ ಮಗ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಅಮರನಾಥ ಯಾತ್ರೆ (Amarnath Yatra) ಕೈಗೊಂಡಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (viral video) ಆಗಿದೆ.

ತಾಯಿ ಹೀದರ್ ಹಾಥ್‌ವೇ ತನ್ನ ಮಗ ಹಡ್ಸನ್ ಹ್ಯಾಥ್‌ವೇ ಅವರೊಂದಿಗೆ 13,000 ಅಡಿ ಎತ್ತರದಲ್ಲಿರುವ ಅಮರನಾಥ ದೇವಾಲಯಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಭಾರತ ಸರ್ಕಾರದ ಸಹಕಾರದಿಂದಾಗಿ ಈ ಯಾತ್ರೆಯನ್ನು ಕೈಗೊಳ್ಳಲು ಸಾಧ್ಯವಾಯಿತು. ಅಮರನಾಥಕ್ಕೆ ಹೋಗಬೇಕೆಂಬ ತಮ್ಮ ಕನಸು ನನಸಾಗುತ್ತಿದೆ ಎಂದು ಹೇಳಿದರು.

ನಾವು ಇಲ್ಲಿರುವುದಕ್ಕೆ ತುಂಬಾ ಕೃತಜ್ಞರಾಗಿರುತ್ತೇವೆ. ಅಮರನಾಥಕ್ಕೆ ಬರಬೇಕೆಂದು ಹಲವು ವರ್ಷಗಳಿಂದ ನಾನು ಕನಸು ಕಂಡಿದ್ದೇನೆ. ಇದು ಭಾರತ ಸರ್ಕಾರದ ಅದ್ಭುತ ಸಂಸ್ಥೆ ಮತ್ತು ಶ್ರೈನ್ ಬೋರ್ಡ್‌ನಿಂದ ಮಾತ್ರ ಸಾಧ್ಯವಾಗಿದೆ ಎಂದು ಹೀದರ್ ಹೇಳಿದರು.

ಇದು ಅತ್ಯಂತ ಸಂತೋಷದ ಕ್ಷಣ. ಎಲ್ಲವೂ ತುಂಬಾ ಅದ್ಭುತವಾಗಿದೆ. ಅಮರನಾಥ ಯಾತ್ರೆಯು ಅವಳಿ ಮಾರ್ಗಗಳಿಂದ ಜೂನ್ 29 ರಂದು ಪ್ರಾರಂಭ ಮಾಡಿದ್ದೇವೆ. ಅನಂತನಾಗ್‌ನ ಸಾಂಪ್ರದಾಯಿಕ 48 ಕಿ.ಮೀ. ನುನ್ವಾನ್- ಪಹಲ್ಗಾಮ್ ಮಾರ್ಗ ಮತ್ತು 14 ಕಿ.ಮೀ. ಕಡಿಮೆ ಆದರೆ ಕಡಿದಾದ ಬಾಲ್ಟಾಲ್ ಗಂದರ್ಬಾಲ್ ಮಾರ್ಗದಲ್ಲಿ ಯಾತ್ರೆಯು ಆಗಸ್ಟ್ 19 ರವರೆಗೆ ಮುಂದುವರಿಯುತ್ತದೆ ಎಂದು ತಿಳಿಸಿದರು.


ವಾರ್ಷಿಕ ಯಾತ್ರೆಯ ಮೊದಲ ದಿನದಂದು 13,000ಕ್ಕೂ ಹೆಚ್ಚು ಯಾತ್ರಿಕರು ಪವಿತ್ರ ದೇಗುಲಕ್ಕೆ ಭೇಟಿ ನೀಡಿದರು. ಈ ವರ್ಷದಲ್ಲಿ ಇಲ್ಲಿಯವರೆಗೆ 1,50,000 ಲಕ್ಷ ಯಾತ್ರಿಕರು ಪವಿತ್ರ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಕಳೆದ ವರ್ಷ ಗುಹಾ ದೇಗುಲಕ್ಕೆ 4.5 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಭೇಟಿ ನೀಡಿದ್ದರು.

ಇದನ್ನೂ ಓದಿ: BSF: ಭಾರತ-ಪಾಕ್‌ ಗಡಿಯಲ್ಲಿ ಬರೋಬ್ಬರಿ 126 ಡ್ರೋನ್‌, 150 ಕೆಜಿ ಹೆರಾಯಿನ್‌ ವಶಪಡಿಸಿಕೊಂಡ ಬಿಎಸ್‌ಎಫ್‌

ಈ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ಅಮರನಾಥ ಯಾತ್ರೆಯನ್ನು ಜುಲೈ 7 ಶನಿವಾರದಂದು ಎರಡೂ ಮಾರ್ಗಗಳಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಆದರೆ ಹವಾಮಾನ ಸುಧಾರಿಸಿದ ಅನಂತರ ಯಾತ್ರೆಯನ್ನು ಪುನರಾರಂಭಿಸಲಾಯಿತು.

Exit mobile version