Site icon Vistara News

Viral Video: 370ನೇ ವಿಧಿ ರದ್ದಾಗಿದ್ದು ಒಳ್ಳೆಯದಾಯ್ತು! ಈ ಸ್ವಾತಂತ್ರ್ಯ ಆಗಿರಲಿಲ್ಲ ಎಂದ ಬೈಕ್ ಸ್ಟಂಟ್ ಮಾಡಿದ ಕಾಶ್ಮೀರ ಬಾಲೆ!

Girl Stunt on Bike

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಹುಡುಗಿಯೊಬ್ಬಳ (girl) ರಸ್ತೆಯೊಂದರಲ್ಲಿ ಬುಲೆಟ್ ರೈಡ್ ಮಾಡುತ್ತಿರುವ (Bullet Ride) ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ (Viral Video) ಆಗಿದೆ. ಬುಲೆಟ್ ಓಡಿಸುತ್ತಿರುವ ಹುಡುಗಿ, ತನ್ನರೆಡು ಕೈಗಳನ್ನು ಬಿಟ್ಟು ಸ್ಟಂಟ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಷ್ಟೇ ಅಲ್ಲ, ಹಿನ್ನೆಲೆಯಲ್ಲಿ ಶಾರುಕ್ ಖಾನ್ ಸಿನಿಮಾದ ಹಾಡು ಕೂಡ ಪ್ಲೇ ಆಗುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ. ಈ ಮಧ್ಯೆ, ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಶ್ರೀನಗರ ಪೊಲೀಸರು (Srinagar Police) ಈ ಬೈಕ್ ವಶಪಡಿಸಿಕೊಂಡಿದ್ದಾರೆ.

ಈ ಹುಡುಗಿ ತನ್ನ ಸ್ಟಂಟ್‌ನ ವಿಡಿಯೋವನ್ನು ಟ್ವಿಟರ್‌ನಲ್ಲಿ ಷೇರ್ ಮಾಡಿದ್ದಳು. ಅಲ್ಲದೇ, ಇಂದು ನಾನು ಹೆಮ್ಮೆಯಿಂದ ಹೇಳಲು ಬಯಸುತ್ತೇನೆ ನನ್ನ ಕಾಶ್ಮೀರವು ಹುಡುಗರಿಗಾಗಿ ಮಾತ್ರವಲ್ಲದೆ ನಮಗೂ ಸಾಕಷ್ಟು ಬದಲಾಗಿದೆ. 370 ಮತ್ತು 35ಎ ರದ್ದತಿಗೆ ಮುನ್ನ ಅದು ಸಾಧ್ಯವಾಗಿರಲಿಲ್ಲ. ಭಾರತ ಸರ್ಕಾರಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾಳೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.

ಶ್ರೀನಗರದ ರಸ್ತೆಯೊಂದರಲ್ಲಿ ಅಪ್ರಾಪ್ತ ಬಾಲಕಿ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಅಪಾಯಕಾರಿ ಸಾಹಸ ಪ್ರದರ್ಶಿಸುತ್ತಿರುವುದನ್ನು ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. ನಿಯಮ ಉಲ್ಲಂಘಿಸಿದ್ದರಿಂದ ಟ್ರಾಫಿಕ್ ಪೊಲೀಸರು, ಯುವತಿಯನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಅಲ್ಲದೇ, ಟ್ರಾಫಿಕ್ ಪೊಲೀಸ್ ಅಧೀಕ್ಷಕರು ಆಕೆಗೆ ಕೌನ್ಸೆಲಿಂಗ್ ಕೂಡ ಮಾಡಿದ್ದಾರೆ. ಈ ಕುರಿತು ಶ್ರೀನಗರ ಟ್ರಾಫಿಕ್ ಸಿಟಿ ಪೊಲೀಸರು ಟ್ವಿಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಟೆರೇಸ್ಸೇ ಡ್ಯಾನ್ಸ್ ಫ್ಲೋರ್ ಆಯ್ತು, ಯುವತಿ ಸಖತ್ ಸ್ಟೆಪ್ಸ್! ವಿಡಿಯೋ ವೈರಲ್

ರಸ್ತೆಯಲ್ಲಿ ಬೈಕ್ ಮೇಲೆ ಸ್ಟಂಟ್ ಮಾಡಿದ್ದರೆ ಯುವತಿ ಕ್ಷಮೆಯಾಚಿಸಿದ್ದಾಳೆ. ಎರಡು ಮೂರು ದಿನಗಳ ಹಿಂದೆ ವಿಡಿಯೋ ಅಪ್ಲೋಡ್ ಮಾಡಿದ್ದು, ಕರೆ ಬಂದ ನಂತರ ಅದನ್ನು ಡಿಲೀಟ್ ಮಾಡಿರುವುದಾಗಿ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.

ಬಾಯಿ ಮುಚ್ಚೆ ಸಾಕು’, ಮೆಟ್ರೊದಲ್ಲಿ ಇಬ್ಬರು ನಾರಿಯರ ಜಗಳ

ಮೆಟ್ರೊ ರೈಲು ಎಂದರೆ ಏನು ನೆನಪಾಗುತ್ತದೆ? ಸಮಯಕ್ಕೆ ಸರಿಯಾಗಿ ಬರುವ ರೈಲು, ಸ್ವಚ್ಛತೆ, ತುಸು ಗದ್ದಲ ಇದ್ದರೂ ಸರಿಯಾದ ಸಮಯಕ್ಕೆ ಅಂದುಕೊಂಡ ಜಾಗ ತಲುಪುತ್ತೇವೆ ಎಂಬ ವಿಶ್ವಾಸ ನೆನಪಿಗೆ ಬರುತ್ತದೆ. ಆದರೆ, ದೆಹಲಿ ಮೆಟ್ರೊ ರೈಲು (Delhi Metro) ಎಂದರೆ ಇತ್ತೀಚೆಗೆ ಇದ್ಯಾವುದೂ ನೆನಪಿಗೆ ಬರುವುದಿಲ್ಲ. ಪ್ರೇಮಿಗಳಿಬ್ಬರ ಸರಸ ಸಲ್ಲಾಪ, ಲಿಪ್‌ಲಾಕ್‌, ಯುವತಿಯರು ರೀಲ್ಸ್‌ ಮಾಡುವುದು, ಯುವಕರು ಜಗಳ ಆಡುವುದು, ಮಹಿಳೆಯರು ವಾಗ್ವಾದ ನಡೆಸುವ ಚಟುವಟಿಕೆಗಳು ಸುದ್ದಿಯಾಗುತ್ತಿವೆ. ಇದರ ಬೆನ್ನಲ್ಲೇ, ಚಲಿಸುತ್ತಿದ್ದ ಮೆಟ್ರೊದಲ್ಲಿ ಇಬ್ಬರು ಮಹಿಳೆಯರು ಜಗಳವಾಡಿದ ವಿಡಿಯೊ ಈಗ ವೈರಲ್‌ (Viral Video) ಆಗಿದೆ.

ಹೌದು, ದೆಹಲಿ ಮೆಟ್ರೊದಲ್ಲಿ ಇಬ್ಬರು ಮಹಿಳೆಯರ ಮಧ್ಯೆ ಭಾರಿ ವಾಗ್ವಾದ ನಡೆದಿದೆ. ನೀನು ಬಾಯಿ ಮುಚ್ಚು ಎಂದು ಒಬ್ಬ ಮಹಿಳೆ ಗದರಿದರೆ, ನೀನೇಕೆ ಕಿರುಚುತ್ತಿದ್ದೀಯಾ, ನೀನು ಸುಮ್ಮನಾಗು ಎಂದು ಮತ್ತೊಬ್ಬ ಮಹಿಳೆ ಜೋರು ಧ್ವನಿಯಲ್ಲಿ ಹೇಳಿದ್ದಾರೆ. ಇಬ್ಬರೂ ಹೀಗೆ, ನೀನು ಸುಮ್ಮನಾಗು, ನೀನು ಸುಮ್ಮನಾಗು ಎಂದು ಕಿರುಚಾಡಿದ್ದು, ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗಿದೆ. ಬೇರೆಯವರು ಏನೆಂದುಕೊಳ್ಳುತ್ತಾರೋ ಎಂಬ ಅಳುಕಿಲ್ಲದೆ ಇಬ್ಬರೂ ವಾಕ್ಸಮರ ನಡೆಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version